ಅಪರಾಧ
ದೆಹಲಿಯ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ – ಸಿಗ್ಮಾ ಗ್ಯಾಂಗ್ ಸಂಪೂರ್ಣವಾಗಿ ನೆಲಸಮ!
ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಿಹಾರದ ಪ್ರಸಿದ್ಧ ಸಿಗ್ಮಾ ಗ್ಯಾಂಗ್‌ನ ನಾಲ್ವರು ದರೋಡೆಕೋರರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಈ ಗ್ಯಾಂಗ್ ಹಲವು ವರ್ಷಗಳಿಂದ ಬಿಹಾರದಲ್ಲಿ ಸುಲಿಗೆ, ಕೊಲೆ ಮತ್ತು ಅಪರಾಧಗಳಲ್ಲಿ ತೊಡಗಿಕೊಂಡಿತ್ತು.
ಗುರುವಾರ ಮುಂಜಾನೆ ಸುಮಾರು 2:20ಕ್ಕೆ ದೆಹಲಿ ಮತ್ತು ಬಿಹಾರ ಪೊಲೀಸರ ಸಂಯುಕ್ತ ತಂಡ ರೋಹಿಣಿಯ ಡಾ. ಅಂಬೇಡ್ಕರ್ ಚೌಕ್‌ನಿಂದ ಪನ್ಸಾಲಿ ಚೌಕ್‌ವರೆಗಿನ ಬಹದ್ದೂರ್ ಷಾ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಗ್ಯಾಂಗ್ ಸದಸ್ಯರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಕಾರಣ, ಪೊಲೀಸರು ತಕ್ಷಣ ಪ್ರತಿದಾಳಿ ನಡೆಸಿದರು.
ಗುಂಡಿನ ಚಕಮಕಿಯಲ್ಲಿ ನಾಲ್ವರು ದರೋಡೆಕೋರರು — ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೊ (25), ಮನೀಶ್ ಪಾಠಕ್ (33) ಮತ್ತು ಅಮನ್ ಠಾಕೂರ್ (21) — ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಇವರಲ್ಲಿ ರಂಜನ್ ಪಾಠಕ್ ಸಿಗ್ಮಾ ಗ್ಯಾಂಗ್‌ನ ಮುಖ್ಯಸ್ಥನಾಗಿದ್ದು, ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು.
ರಂಜನ್ ಪಾಠಕ್ ಮೇಲೆ ಐದು ಕೊಲೆ ಪ್ರಕರಣಗಳು ಮತ್ತು ಎಂಟು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆಗೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಗ್ಯಾಂಗ್ ಸಂಚು ರೂಪಿಸುತ್ತಿದ್ದ ಮಾಹಿತಿ ದೊರೆತಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಿಗ್ಮಾ ಗ್ಯಾಂಗ್ ಕಳೆದ ಏಳು ವರ್ಷಗಳಿಂದ ಸಕ್ರಿಯವಾಗಿದ್ದು, ಬಿಹಾರದಲ್ಲಿ ತೀವ್ರ ನಿಗಾದಿಂದ ತಪ್ಪಿಸಿಕೊಳ್ಳಲು ದೆಹಲಿಯಲ್ಲಿ ತಲೆಮರೆಸಿಕೊಂಡಿತ್ತು. ಈಗ ಪೊಲೀಸರು ಗ್ಯಾಂಗ್‌ನ ಇತರೆ ಸದಸ್ಯರ ಹುಡುಕಾಟ ಮತ್ತು ಸಂಪರ್ಕ ಜಾಲದ ತನಿಖೆ ಮುಂದುವರೆಸಿದ್ದಾರೆ.
ಅಪರಾಧ
ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮುಂದೂಡಲು Darshan ಪರ ವಕೀಲರ ಅರ್ಜಿ
ಬೆಂಗಳೂರು: ನಟ ದರ್ಶನ್ (Darshan) ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಮಾಫಿ ಸಾಕ್ಷಿ (Approver) ಆಗಿ ಹೇಳಿಕೆ ನೀಡುವ ಪ್ರಕ್ರಿಯೆಯನ್ನು ಕನಿಷ್ಠ ಒಂದು ವಾರ ಮುಂದೂಡಬೇಕು ಎಂದು ದರ್ಶನ್ ಪರ ಕಾನೂನು ತಂಡವು ಸೆಷನ್ಸ್ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದೆ.
ಪ್ರದೋಷ್ ಅವರ ಹೇಳಿಕೆ ದಾಖಲು ಪ್ರಕ್ರಿಯೆ ಸೆಪ್ಟೆಂಬರ್ 28ರಂದು ನಡೆಯಬೇಕಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ದರ್ಶನ್ ವಿರೋಧ
ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ದರ್ಶನ್ ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮತ್ತೊಬ್ಬ ಆರೋಪಿಯು ಮಾಫಿ ಸಾಕ್ಷಿಯಾಗುವುದನ್ನು ತಡೆಯುವ ಕಾನೂನಾತ್ಮಕ ಹಕ್ಕು ದರ್ಶನ್‌ಗೆ ಇಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಹೇಳಿಕೆ ದಾಖಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನಾತ್ಮಕ ಅಥವಾ ತಾಂತ್ರಿಕ ಲೋಪ ಕಂಡುಬಂದರೆ, ಅದನ್ನು ಸೂಕ್ತ ಹಂತದಲ್ಲಿ ಪ್ರಶ್ನಿಸಬಹುದು ಎಂದು ನ್ಯಾಯಾಲಯ ತಿಳಿಸಿತ್ತು.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಿದ್ಧತೆ
ಹೈಕೋರ್ಟ್ ಆದೇಶದ ಬಳಿಕ ಸೆಷನ್ಸ್ ನ್ಯಾಯಾಲಯವು ಪ್ರದೋಷ್ ಅವರ ಹೇಳಿಕೆ ದಾಖಲಿಸಲು ಸೆಪ್ಟೆಂಬರ್ 28ರ ದಿನಾಂಕ ನಿಗದಿಪಡಿಸಿತ್ತು. ಇದೀಗ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅಗತ್ಯ ಸಿದ್ಧತೆಗಾಗಿ ಸಮಯಾವಕಾಶ ಕೋರಿದ್ದಾರೆ.
ಪ್ರದೋಷ್ ನೀಡಲಿರುವ ಹೇಳಿಕೆ ಪ್ರಕರಣದ ತನಿಖೆ ಮತ್ತು ಮುಂದಿನ ವಿಚಾರಣೆಯಲ್ಲಿ ಪ್ರಮುಖವಾಗಬಹುದು. ಆದರೆ, ಅವರ ಹೇಳಿಕೆಯಲ್ಲಿ ಯಾವ ಅಂಶಗಳು ಇರಲಿವೆ ಎಂಬುದು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಾಗುವವರೆಗೆ ಸ್ಪಷ್ಟವಾಗುವುದಿಲ್ಲ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಮುಂದುವರಿದ ಕಾನೂನು ಹೋರಾಟ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ವಿಚಾರಣೆ ಮುಂದುವರಿದಿದ್ದು, ಮಾಫಿ ಸಾಕ್ಷಿಯಾಗಲು ಮುಂದಾಗಿರುವ ಪ್ರದೋಷ್ ಅವರ ಹೇಳಿಕೆ ದಾಖಲಾತಿಯ ಸುತ್ತ ಕಾನೂನು ಪ್ರಕ್ರಿಯೆ ಮಹತ್ವ ಪಡೆದುಕೊಂಡಿದೆ. ದರ್ಶನ್ ಪರ ವಕೀಲರು ಈ ಪ್ರಕ್ರಿಯೆಯನ್ನು ಮುಂದೂಡಲು ಸಲ್ಲಿಸಿರುವ ಅರ್ಜಿಯ ಕುರಿತು ನ್ಯಾಯಾಲಯದ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.
ಅಪರಾಧ
Udupi Bus Fire: ಪೆಟ್ರೋಲ್ ಪಂಪ್ ಸಮೀಪ ಬಸ್ ಹೊತ್ತಿ ಉರಿ, ಬೆಂಕಿ ಅವಘಡದ ಕಾರಣ ನಿಗೂಢ
ಉಡುಪಿ: Udupi ನಗರದ ಅಲೆವೂರು-ದೆಂದೂರುಕಟ್ಟೆ ಬಳಿ ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಿದ್ದ ಬಸ್‌ಗೆ ಶುಕ್ರವಾರ ಮುಂಜಾನೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದಾರೆ. ಬಸ್‌ನ ಸಮೀಪವೇ ಮತ್ತೆರಡು ಬಸ್‌ಗಳು ಹಾಗೂ ಟೆಂಪೋ ನಿಲ್ಲಿಸಲಾಗಿತ್ತು. ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಇತರ ವಾಹನಗಳಿಗೆ ಅಥವಾ ಪಂಪ್‌ಗೆ ವ್ಯಾಪಿಸಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದರಿಂದ ಸಂಭವನೀಯ ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಿಂದ ಬಸ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವುದಾಗಿ ತಿಳಿದುಬಂದಿದೆ.
ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ
ಪೆಟ್ರೋಲ್ ಪಂಪ್ ಮಾಲೀಕರು ಹಾಗೂ ಬಸ್ ಮಾಲೀಕರು ಒಬ್ಬರೇ ಎಂದು ತಿಳಿದುಬಂದಿದೆ. ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ
ದೇಶ
Greater Noida Bus Fire: ಚಲಿಸುತ್ತಿದ್ದ ಬಸ್‌ಗೆ ಬೆಂಕಿ, 9 ಪ್ರಯಾಣಿಕರು ಸಾವು
ನೋಯ್ಡಾ: ಉತ್ತರ ಪ್ರದೇಶದ Greater Noida ದಲ್ಲಿ ಭೀಕರ ಬಸ್ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ಸ್ಲೀಪರ್ ಪ್ರವಾಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಯಮುನಾ ಎಕ್ಸ್‌ಪ್ರೆಸ್‌ವೇಯ ಜೆವರ್ ಪ್ರದೇಶದಲ್ಲಿ ಸೆಪ್ಟೆಂಬರ್ 23ರ ತಡರಾತ್ರಿ ನಡೆದಿದೆ.
ವರದಿಗಳ ಪ್ರಕಾರ, ಬಸ್ ದೆಹಲಿಯ ಕಾಶ್ಮೀರಿ ಗೇಟ್‌ನಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿತ್ತು. ಬಸ್‌ನಲ್ಲಿ ಸುಮಾರು 30ರಿಂದ 35 ಮಂದಿ ಪ್ರಯಾಣಿಸುತ್ತಿದ್ದರು. ಜೆವರ್ ಸಮೀಪದ ದಯಾನತ್‌ಪುರ ಗ್ರಾಮದ ಬಳಿ ರಾತ್ರಿ ಸುಮಾರು 11.30ರ ವೇಳೆಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ಬಳಿಕ ಬಸ್‌ನೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಕೆಲವರು ಕಿಟಕಿಗಳ ಮೂಲಕ ಹೊರಗೆ ಹಾರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬೆಂಕಿ ವೇಗವಾಗಿ ಹರಡಿದ್ದರಿಂದ ಕೆಲವು ಪ್ರಯಾಣಿಕರು ಬಸ್‌ನೊಳಗೆ ಸಿಲುಕಿಕೊಂಡರು. ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಕೆಲವು ಪ್ರಾಥಮಿಕ ವರದಿಗಳಲ್ಲಿ ಶಾರ್ಟ್ ಸರ್ಕ್ಯೂಟ್ ಸಾಧ್ಯತೆಯ ಬಗ್ಗೆ ಉಲ್ಲೇಖವಿದ್ದರೂ, ಪೊಲೀಸರು ಬಸ್, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರ ಘೋಷಿಸಿರುವುದಾಗಿ ವರದಿಯಾಗಿದೆ.
-
ಬೆಂಗಳೂರು24 ಗಂಟೆಗಳು agoಪೌರಕಾರ್ಮಿಕರ ಸಮವಸ್ತ್ರ ಧರಿಸಿದ CM D K Shiv Kumar: ಭತ್ಯೆ ಹೆಚ್ಚಳ ಘೋಷಣೆ
-
ಸಿನಿಮಾ23 ಗಂಟೆಗಳು ago‘The Paradise’ ಬಗ್ಗೆ ನಾನಿ ಮುಕ್ತ ಮಾತು; ಟ್ರೋಲ್ಗಳನ್ನೂ ಸ್ವೀಕರಿಸಿದ ನ್ಯಾಚುರಲ್ ಸ್ಟಾರ್
-
ರಾಜ್ಯ7 ಗಂಟೆಗಳು agoBidadi Township : “ಸರ್ಕಾರಕ್ಕೆ ಕಣ್ಣೂ ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ”: ರೈತರ ಪರ ನಿಖಿಲ್ ಗುಡುಗು
-
ರಾಜ್ಯ6 ಗಂಟೆಗಳು agoMysuru Dasara ಜಂಬೂಸವಾರಿಗೆ ವಿದೇಶಿ ರಾಯಭಾರಿಗಳಿಗೆ ಆಹ್ವಾನ; ಜಾಗತಿಕ ಪ್ರಚಾರಕ್ಕೆ ಸರ್ಕಾರದ ಹೊಸ ಹೆಜ್ಜೆ
-
ರಾಜ್ಯ6 ಗಂಟೆಗಳು agoಶಾಸಕರ ಮದುವೆ ಹೇಳಿಕೆ ವಿವಾದ; CM ಡಿಕೆ ಶಿವಕುಮಾರ್ ವಿರುದ್ಧ M T Krishnappa ವಾಗ್ದಾಳಿ
-
ರಾಜ್ಯ7 ಗಂಟೆಗಳು agoBengaluru ರಿಗೆ ಬಂದ ಶಾಸಕರು ಎರಡೆರಡು ಮದುವೆ”: CM ಡಿಕೆ ಶಿವಕುಮಾರ್ ಹೇಳಿಕೆ; ಹೆಸರು ಬಹಿರಂಗಕ್ಕೆ ಬಿಜೆಪಿ ಆಗ್ರಹ
-
ದೇಶ7 ಗಂಟೆಗಳು agoIndia–Pakisthan ಕದನ ವಿರಾಮದ ಕ್ರೆಡಿಟ್ ಯಾರಿಗೆ? UNGAಯಲ್ಲಿ ಮತ್ತೆ ಮುನ್ನೆಲೆಗೆ ಬಂದ ವಿವಾದ
-
ಕ್ರೀಡೆ1 ಗಂಟೆ agoIndia-ಪನಾಮಾ ಪಂದ್ಯ ಡ್ರಾ; ಬಲಿಷ್ಠ ಎದುರಾಳಿಯ ವಿರುದ್ಧ ಭಾರತದಿಂದ ಗಮನಾರ್ಹ ಆಟ
