HSR–BTM–ಸಿಲ್ಕ್ ಬೋರ್ಡ್ ಮಾರ್ಗದ ಟ್ರಾಫಿಕ್ ಸಮಸ್ಯೆಗೆ ಪರಿಹಾರ: BMRCL ನಿಂದ ದೊಡ್ಡ ಘೋಷಣೆ | Hosa Suddi

ದೇಶ

HSR–BTM–ಸಿಲ್ಕ್ ಬೋರ್ಡ್ ಮಾರ್ಗದ ಟ್ರಾಫಿಕ್ ಸಮಸ್ಯೆಗೆ ಪರಿಹಾರ: BMRCL ನಿಂದ ದೊಡ್ಡ ಘೋಷಣೆ

Published

on

ಬೆಂಗಳೂರು: ಸಿಲ್ಕ್ ಬೋರ್ಡ್–BTM–HSR ಲೇಔಟ್ ಮಾರ್ಗದಲ್ಲಿ ಹಲವು ವರ್ಷಗಳಿಂದ ಸವಾರರನ್ನು ಕಂಗಾಲಾಗಿಸುತ್ತಿದ್ದ ಭಾರೀ ಟ್ರಾಫಿಕ್ ಸಮಸ್ಯೆಗೆ ಈಗ ಕೊನೆಯಾಗಿ ಪರಿಹಾರದ ಕಿರಣ ಕಂಡುಬಂದಿದೆ. ಬಹುನೀರೀಕ್ಷಿತ ಡಬ್ಬಲ್ ಡೆಕ್ಕರ್ ಫ್ಲೈಓವರ್ ಎರಡೂ ಬದಿಯ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ಜನವರಿ ಅಂತ್ಯದೊಳಗೆ ಸಂಪೂರ್ಣ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ (BMRCL) ತಯಾರಿ ನಡೆಸುತ್ತಿದೆ.

ಕಳೆದ ವರ್ಷ ರಾಗಿಗುಡ್ಡ–HSR ಲೇಔಟ್ ಮಾರ್ಗದ ಒಂದು ಬದಿ ಓಪನ್ ಮಾಡಲಾಗುತ್ತಿದ್ದರೂ, ಇನ್ನೊಂದು ಬದಿ ಕಾಮಗಾರಿ ಬಾಕಿ ಉಳಿದ ಕಾರಣ ಟ್ರಾಫಿಕ್ ಒತ್ತಡ ಸಂಪೂರ್ಣವಾಗಿ ಕಡಿಮೆಯಾಗಿರಲಿಲ್ಲ. ಈಗ ಸುಮಾರು 80% ಸಿವಿಲ್ ವರ್ಕ್ ಮುಗಿದಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದ ಬಳಿ ಬೇಕಾದ ವಯಾಡಕ್ಟ್ ಕೂರಿಸುವ ಕೆಲಸಕ್ಕೆ ವೇಗ ನೀಡಲಾಗಿದೆ.

ಜನವರಿ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣ, ಅಂತ್ಯದೊಳಗೆ ಟೆಸ್ಟಿಂಗ್–ಸೇಫ್ಟಿ ಪರಿಶೀಲನೆ ಮುಗಿಸಿ ಮಾರ್ಗವನ್ನು ಸಂಪೂರ್ಣ ಸಂಚಾರಕ್ಕಾಗಿ ಲಭ್ಯವಾಗಿಸಲು ಯೋಜನೆ ಮುಂದಿದೆ. ಇದರಿಂದ ಸಿಲ್ಕ್ ಬೋರ್ಡ್, BTM ಜಂಕ್ಷನ್ ಮತ್ತು HSR ಮಾರ್ಗದ ನಿತ್ಯ ಟ್ರಾಫಿಕ್ ಜಂಜಾಟದಲ್ಲಿ ಓಡಾಡುತ್ತಿದ್ದ ಸಾವಿರಾರು ಸವಾರರಿಗೆ ನಿಜವಾದ ಸುಧಿ ಸಿಗಲಿದೆ.

ಯೋಜನೆಯಂತೆ ಎಲ್ಲ ಪರೀಕ್ಷೆಗಳು ಪೂರ್ಣಗೊಂಡರೆ, ಜನವರಿ ಅಂತ್ಯದಿಂದ ಡಬ್ಬಲ್ ಡೆಕ್ಕರ್ ಫ್ಲೈಓವರ್ ಸಂಪೂರ್ಣ ಸಂಚಾರಕ್ಕೆ ತೆರೆಯಲಾಗಲಿದೆ.

Trending

Exit mobile version