ನಾಸ್ತಿಕನಾಗಿರೋದು ಅಪರಾಧವಲ್ಲ” – RGV ಬಿಗ್ ಸ್ಟೇಟ್‌ಮೆಂಟ್ | Hosa Suddi

ದೇಶ

ನಾಸ್ತಿಕನಾಗಿರೋದು ಅಪರಾಧವಲ್ಲ” – RGV ಬಿಗ್ ಸ್ಟೇಟ್‌ಮೆಂಟ್

Published

on

ತೆಲಂಗಾಣ: ಚಿತ್ರರಂಗದಲ್ಲಿ ವಿವಾದಗಳು (ಕಾಂಟ್ರವರ್ಸಿ) ಸಾಮಾನ್ಯ. ನಟ–ನಟಿಯರಿಂದ ಮಾತ್ರವಲ್ಲ, ಹಲವಾರು ಬಾರಿ ನಿರ್ದೇಶಕರು ಮತ್ತು ನಿರ್ಮಾಪಕರು ನೀಡುವ ಹೇಳಿಕೆಗಳೂ ದೊಡ್ಡ ಗೊಂದಲಕ್ಕೆ ಕಾರಣವಾಗುತ್ತವೆ. ಇತ್ತೀಚೆಗೆ, ಯಶಸ್ವಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ವಾರಣಾಸಿ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಾರಾಣಸಿ ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಮೌಳಿ ಅವರು,
“ನಾನು ದೇವರನ್ನು ನಂಬುವುದಿಲ್ಲ, ಅದರಲ್ಲೂ ಹನುಮಂತನ ಮೇಲೆ ನನಗೆ ಕೋಪ ಬಂದಿದೆ”
ಎಂದು ಹೇಳಿದ್ದರು. ಈ ಹೇಳಿಕೆ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದು, ಹಲವು ಪ್ರತಿಭಟನೆಗಳು ನಡೆದಿವೆ. ಕೆಲವರು ರಾಜಮೌಳಿ ವಿರುದ್ಧ ಕೇಸ್ ಸಹ ದಾಖಲಿಸಿದ್ದಾರೆ ಎನ್ನಲಾಗಿದೆ.

ಈಗ, ಈ ವಿವಾದದಲ್ಲಿ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ರಾಜಮೌಳಿಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವರ್ಮಾ ತಮ್ಮ ಟ್ವೀಟ್‌ನಲ್ಲಿ ಬರೆದಿರುವಂತೆ:
“ಭಾರತದಲ್ಲಿ ನಾಸ್ತಿಕನಾಗಿ ಇರುವುದು ಅಪರಾಧ ಅಲ್ಲ. ರಾಜಮೌಳಿ ಅವರಿಗೆ ದೇವರನ್ನು ನಂಬಲ್ಲ ಎಂದು ಹೇಳುವ ಹಕ್ಕು ಸಂವಿಧಾನ ನೀಡಿದೆ. ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದಿದ್ದಾರೆ.

ಮುಂದುವರಿದು ಅವರು,
“ರಾಜಮೌಳಿ ದೇವರನ್ನು ನಂಬದಿದ್ದರೂ, ದೇವರು ಅವರಿಗೆ 100 ಪಟ್ಟು ಹೆಚ್ಚು ಸಂಪತ್ತು ಮತ್ತು ಅಭಿಮಾನಿಗಳನ್ನು ನೀಡಿದ್ದಾರೆ. ಅನೇಕ ಭಕ್ತರು ನೂರು ಜನ್ಮ ಪಡೆದರೂ ಇದನ್ನು ಪಡೆಯಲು ಸಾಧ್ಯವಿಲ್ಲ”
ಎಂದೂ ಹೇಳಿದ್ದಾರೆ.

ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವರ್ಮಾ,
“ದೇವರನ್ನು ನಂಬದವನು ದೇವರನ್ನು ಕುರಿತ ಸಿನಿಮಾ ಹೇಗೆ ಮಾಡುತ್ತಾನೆ?” ಎನ್ನುವ ಪ್ರಶ್ನೆಗೆ ಉತ್ತರವಾಗಿ:
“ಗ್ಯಾಂಗ್ಸ್ಟರ್ ಸಿನಿಮಾ ಮಾಡಲು ನಿರ್ದೇಶಕ ಗ್ಯಾಂಗ್ಸ್ಟರ್ ಆಗ್ಬೇಕು ಅಂತಿಲ್ಲ. ಹಾರರ್ ಸಿನಿಮಾ ಮಾಡಲು ಡೆವಿಲ್ ಆಗ್ಬೇಕಿಲ್ಲ. ಹಾಗಾಗಿ ರಾಜಮೌಳಿ ಹೇಳಿಕೆಯಲ್ಲೇ ಯಾವುದೇ ತಪ್ಪಿಲ್ಲ”
ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಮೌಳಿ ನೀಡಿದ ಹೇಳಿಕೆ ಮುಂದುವರೆದ ವಿವಾದಕ್ಕೆ ಕಾರಣವಾಗಿದ್ದು,
ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಚರ್ಚೆ ತಾರಕಕ್ಕೇರಿದೆ.

Trending

Exit mobile version