ರೋಹಿತ್ ಶರ್ಮಾ ಬಿಡುಗಡೆ ಮಾಡಿದ ಭಾರತದ ಹೊಸ ಟಿ20 ಜೆರ್ಸಿ – ಫೋಟೋ ವೈರಲ್ | Hosa Suddi

ಕ್ರೀಡೆ

ರೋಹಿತ್ ಶರ್ಮಾ ಬಿಡುಗಡೆ ಮಾಡಿದ ಭಾರತದ ಹೊಸ ಟಿ20 ಜೆರ್ಸಿ – ಫೋಟೋ ವೈರಲ್

Published

on

ರಾಯ್‌ಪುರ: ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2026ಗಾಗಿ ಟೀಮ್ ಇಂಡಿಯಾ ತನ್ನ ಹೊಸ ಟಿ20 ಜೆರ್ಸಿಯನ್ನು ಭವ್ಯವಾಗಿ ಅನಾವರಣಗೊಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಇನ್ನಿಂಗ್ಸ್ ವಿರಾಮದ ವೇಳೆ ಹೊಸ ಜೆರ್ಸಿಯನ್ನು ಮೈದಾನದಲ್ಲಿ ಪ್ರದರ್ಶಿಸಲಾಯಿತು.

ಟಿ20 ವಿಶ್ವಕಪ್ 2026 ರ ಬ್ರಾಂಡ್ ಅಂಬಾಸಿಡರ್ ಆಗಿರುವ ರೋಹಿತ್ ಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೆರ್ಸಿ ಅನಾವರಣಗೊಳಿಸಿದರು. ಅವರೊಂದಿಗೆ ತಿಲಕ್ ವರ್ಮಾ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಜೆರ್ಸಿ ಪ್ರಾಯೋಜಕರ ಪ್ರತಿನಿಧಿಗಳು ಹಾಜರಿದ್ದರು.

ಹೊಸ ಜೆರ್ಸಿಯು ನೀಲಿ ಬಣ್ಣದ ಜೊತೆಗೆ ಎರಡು ಬದಿಯಲ್ಲಿ ಕಿತ್ತಳೆ ಶೇಡ್, ಹಾಗೇ ಲಂಬಕಾರದ ನೀಲಿ ಗೆರೆಗಳ ವಿನ್ಯಾಸವನ್ನು ಹೊಂದಿದೆ. ಅನಾವರಣ ನಂತರ ರೋಹಿತ್ ಶರ್ಮಾ ಜೆರ್ಸಿಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿ, ಭಾರತ ಮತ್ತೊಮ್ಮೆ ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚೆಗೆ ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಟಿ20 ವಿಶ್ವಕಪ್ 2026 ಟೂರ್ನಿ ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ ಈ ಬಾರಿ ಐದು ವೇದಿಕೆಗಳಲ್ಲಿ ಪಂದ್ಯಗಳನ್ನು ಆಯೋಜಿಸಲಿದೆ: ಅಹಮದಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ. ಶ್ರೀಲಂಕಾದಲ್ಲಿ ಮೂರು ವೇದಿಕೆ ಪಂದ್ಯಗಳನ್ನು ಆತಿಥ್ಯ ವಹಿಸಲಿವೆ.

ಭಾರತದ ಲೀಗ್ ಪಂದ್ಯಗಳು
• ಫೆಬ್ರವರಿ 07: ಭಾರತ vs ಅಮೆರಿಕ – ಮುಂಬೈ (ಸಂಜೆ 7:00)
• ಫೆಬ್ರವರಿ 12: ಭಾರತ vs ನಮೀಬಿಯಾ – ದೆಹಲಿ (7:00)
• ಫೆಬ್ರವರಿ 15: ಭಾರತ vs ಪಾಕಿಸ್ತಾನ – ಕೊಲಂಬೊ ಪ್ರೇಮದಾಸ (7:00)
• ಫೆಬ್ರವರಿ 18: ಭಾರತ vs ನೆದರ್ಲ್ಯಾಂಡ್ಸ್ – ಅಹಮದಾಬಾದ್ (7:00)

ಟಿ20 ವಿಶ್ವಕಪ್ ಗುಂಪುಗಳ ಹಂಚಿಕೆ:
ಗುಂಪು A – ಭಾರತ, ಅಮೆರಿಕ, ನಮೀಬಿಯಾ, ನೆದರ್ಲ್ಯಾಂಡ್ಸ್, ಪಾಕಿಸ್ತಾನ
ಗುಂಪು B – ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಓಮನ್
ಗುಂಪು C – ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಇಟಲಿ, ನೇಪಾಳ
ಗುಂಪು D – ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಕೆನಡಾ, ಯುಎಇ

Trending

Exit mobile version