ಚುನಾವಣೆ
Tamil Nadu Election News 2026 : “ವೋಟು ಕೊಡಬೇಡಿ” ಎಂದ ನಟಿಗೆ ಮುಖಭಂಗ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ವಿಜಯ್ ಎರಡರಲ್ಲಿಯೂ ಗೆಲುವು ಸಾಧಿಸಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಮಧ್ಯೆ, ಚುನಾವಣಾ ಪ್ರಚಾರದ ವೇಳೆ ವಿಜಯ್ ವಿರುದ್ಧ ಮಾತನಾಡಿ “ಟಿವಿಕೆಗೆ ಮತ ಹಾಕಬೇಡಿ” ಎಂದು ಅಪಪ್ರಚಾರ ನಡೆಸಿದ್ದ ನಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆ ನಟಿ ಇನ್ನಾರು ಅಲ್ಲ, ಮಾರಿಯಾ ಜೂಲಿಯಾನ.
ಚುನಾವಣೆ ವೇಳೆ ಬಿಗ್ ಬಾಸ್ ಖ್ಯಾತಿಯ ಮಾರಿಯಾ ಜೂಲಿಯಾನ, ಬೀದಿ ಬೀದಿಗಳಲ್ಲಿ ಬ್ಯಾನರ್ ಹಾಗೂ ಪೋಸ್ಟರ್ ಹಿಡಿದು ಟಿವಿಕೆ ವಿರುದ್ಧ ಪ್ರಚಾರ ಮಾಡಿದ್ದರು. ಅಲ್ಲದೆ, ಚೆನ್ನೈನ ಮರೀನಾ ಬೀಚ್ ಬಳಿ ಧರಣಿ ನಡೆಸಿ, ವಿಜಯ್ ಪಕ್ಷಕ್ಕೆ ಮತ ಹಾಕಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದರು.
ಮಹಿಳೆಯರಿಗೆ ಟಿವಿಕೆ ಪಕ್ಷದಲ್ಲಿ ಸುರಕ್ಷತೆ ಇಲ್ಲ ಎಂದು ಆರೋಪಿಸಿದ್ದ ಅವರು, ಕೆಲ ಸಂದರ್ಭಗಳಲ್ಲಿ ಡಿಎಂಕೆ ಪರ ಪ್ರಚಾರ ಮಾಡಿದ ದೃಶ್ಯಗಳೂ ವೈರಲ್ ಆಗಿದ್ದವು. ಈ ನಡೆ ವಿಜಯ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಟಿವಿಕೆ ಭರ್ಜರಿ ಗೆಲುವು ಸಾಧಿಸಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು “ಈಗ ಆಕೆ ಎಲ್ಲಿ?” ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ. ವಿಜಯ್ ಅಭಿಮಾನಿಗಳು ಹಳೆಯ ವಿಡಿಯೋಗಳನ್ನು ಹಂಚಿಕೊಂಡು ವ್ಯಂಗ್ಯ ಮಾಡುತ್ತಿರುವುದು ಗಮನಾರ್ಹ.
ಒಟ್ಟಾರೆ, ಚುನಾವಣಾ ಸಮಯದ ಈ ಘಟನೆ ಈಗ ಮತ್ತೆ ವೈರಲ್ ಆಗಿದ್ದು, ರಾಜಕೀಯ ಹಾಗೂ ಸಿನಿರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.