ದೇಶ

US–India Strategic Boost: ಜಾವೆಲಿನ್ ಕ್ಷಿಪಣಿ ಮಾರಾಟಕ್ಕೆ ಹಸಿರು ನಿಶಾನೆ

Published

on

ವಾಷಿಂಗ್ಟನ್: ಭಾರತಕ್ಕೆ 46 ಮಿಲಿಯನ್ ಡಾಲರ್ (ಸುಮಾರು ₹384 ಕೋಟಿ) ಮೌಲ್ಯದ ಜಾವೆಲಿನ್ ಕ್ಷಿಪಣಿ ಸಿಸ್ಟಮ್ ಮಾರಾಟಕ್ಕೆ ಅಮೆರಿಕ ಅಧಿಕೃತವಾಗಿ ಅನುಮೋದನೆ ನೀಡಿದೆ. ಅಮೆರಿಕಾ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ಈ ಮಾರಾಟಕ್ಕೆ ಅಗತ್ಯ ಪ್ರಮಾಣೀಕರಣಗಳನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ.

ಡಿಎಸ್‌ಸಿಎ ತಿಳಿಸಿದಂತೆ, ಈ ಒಪ್ಪಂದವು ಅಮೆರಿಕಾ–ಭಾರತ ಕಾರ್ಯತಂತ್ರದ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳಿಗೂ ಬೆಂಬಲ ನೀಡುತ್ತದೆ.

ಯೋಜಿತ ಮಾರಾಟ ಪ್ಯಾಕೇಜ್‌ನಲ್ಲಿನ 45.7 ಮಿಲಿಯನ್ ಡಾಲರ್ ಮೌಲ್ಯದ ಸಾಮಗ್ರಿಗಳಲ್ಲಿ 100 FGM-148 ಜಾವೆಲಿನ್ ರೌಂಡ್ಸ್, ಒಂದು FGM-148 ಕ್ಷಿಪಣಿ ಫ್ಲೈ-ಟು-ಬೈ, ಹಾಗೂ 25 ಜಾವೆಲಿನ್ ಲೈಟ್‌ವೇಟ್ ಕಮಾಂಡ್ ಲಾಂಚ್ ಯೂನಿಟ್‌ಗಳು (LwCLU) ಅಥವಾ ಜಾವೆಲಿನ್ ಬ್ಲಾಕ್-1 ಕಮಾಂಡ್ ಲಾಂಚ್ ಯೂನಿಟ್‌ಗಳು ಸೇರಿವೆ.

ಅಮೆರಿಕಾ ಹೇಳುವಂತೆ, ಈ ಒಪ್ಪಂದವು ಇಂಡೋ–ಪೆಸಿಫಿಕ್ ಹಾಗೂ ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತದ ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಮಾರಾಟವಾದ ಕ್ಷಿಪಣಿ ಸಿಸ್ಟಮ್‌ಗಳು ಭಾರತದ ಪ್ರಸ್ತುತ ಹಾಗೂ ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆ, ರಾಷ್ಟ್ರ ರಕ್ಷಣೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಈ ಸಾಧನಗಳನ್ನು ಬಳಸುವುದರಲ್ಲಿ ಭಾರತಕ್ಕೆ ಯಾವುದೇ ತಾಂತ್ರಿಕ ತೊಂದರೆ ಇರುವುದಿಲ್ಲ ಎಂದು ಡಿಎಸ್‌ಸಿಎ ಸ್ಪಷ್ಟಪಡಿಸಿದೆ.

Trending

Exit mobile version