ಒಕ್ಕಲಿಗ ಸಮುದಾಯದ ಉಪಜಾತಿ ದಾಖಲಾತಿ – ಮಠದಲ್ಲಿ ಜಾಗೃತಿ ಸಭೆ | Hosa Suddi

ಬೆಂಗಳೂರು

ಒಕ್ಕಲಿಗ ಸಮುದಾಯದ ಉಪಜಾತಿ ದಾಖಲಾತಿ – ಮಠದಲ್ಲಿ ಜಾಗೃತಿ ಸಭೆ

Published

on

ಬೆಂಗಳೂರು: ಜಾತಿಗಣತಿ (Caste Census) ವೇಳೆ ಒಕ್ಕಲಿಗ ಸಮುದಾಯದ ಉಪಜಾತಿಗಳನ್ನು ಮೊದಲು ದಾಖಲಿಸಲು ಒಕ್ಕಲಿಗರ ಜಾಗೃತಿ ಸಭೆ ನಡೆಯುತ್ತಿದೆ. ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು, ಶಾಸಕರು, ಸಂಸದರು ಹಾಗೂ ಮಠಾಧೀಶರು ಭಾಗವಹಿಸಿದ್ದಾರೆ.

ಸಭೆಯಲ್ಲಿ ಉಪಜಾತಿಗಳ ಹೆಸರು ಜಾತಿ ಸಮೀಕ್ಷೆಯಲ್ಲಿ ಹೇಗೆ ದಾಖಲೆ ಮಾಡಬೇಕು ಎಂಬ ವಿಷಯದಲ್ಲಿ ಚರ್ಚೆ ನಡೆಯುತ್ತಿದೆ. ಒಕ್ಕಲಿಗ ಸಮುದಾಯದ ಇತರ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸಮುದಾಯದ ಅಧಿಕೃತ ನಿಲುವು ತೀರ್ಮಾನಿಸುವ ನಿರೀಕ್ಷೆಯಿದೆ.

ಸಭೆಗೆ ಮೊದಲು, ಮಾಜಿ ಮುಖ್ಯಮಂತ್ರಿಗಳು ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ವಾಮೀಜಿಗಳನ್ನು ಭೇಟಿ ಮಾಡಿ, ವೇದಿಕೆಗೆ ಸೇರಿದರೂ ಮಾತನಾಡಲೇ ಇಲ್ಲ. ಸಮುದಾಯದ ಉನ್ನತ ನಾಯಕರು, ಶಾಸಕರು ಹಾಗೂ ಸಂಘದ ಅಧ್ಯಕ್ಷರು ಕೂಡ ಭಾಗಿಯಾಗಿದ್ದು, ಉಪಜಾತಿಗಳ ದಾಖಲಾತಿ ಕುರಿತು ಸಮುದಾಯದ ಒಕ್ಕೂಟವನ್ನು ತೋರಿಸಿದ್ದಾರೆ.

ಸಭೆ ನಂತರ ನಿರ್ಮಲಾನಂದ ಸ್ವಾಮಿಗಳು ಸುದ್ದಿಗೋಷ್ಠಿ ನಡೆಸಿ ಸಮುದಾಯದ ಅಧಿಕೃತ ನಿಲುವನ್ನು ಪ್ರಕಟಿಸಲಿದ್ದಾರೆ.

Trending

Exit mobile version