ಆರೋಗ್ಯ

ವಾರಾಂತ್ಯ ಮಾತ್ರ Exercise ಮಾಡ್ತೀರಾ? ಹೃದಯದ ಆರೋಗ್ಯದ ಬಗ್ಗೆ ಈ ವಿಷಯ ತಿಳಿಯಿರಿ

Published

on

ಬೆಂಗಳೂರು: ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಕೆಲಸ, ಮನೆ ಹಾಗೂ ಇತರ ಜವಾಬ್ದಾರಿಗಳ ನಡುವೆ ವ್ಯಾಯಾಮಕ್ಕೆ ಸಮಯ ಮೀಸಲಿಡುವುದು ಹಲವರಿಗೆ ಕಷ್ಟವಾಗುತ್ತಿದೆ. ಕೆಲವರು ವಾರದ ದಿನಗಳಲ್ಲಿ Exercise ಮಾಡದೆ, ಶನಿವಾರ ಮತ್ತು ಭಾನುವಾರ ಹೆಚ್ಚು ಸಮಯ Exercise ಮಾಡುವ ಮೂಲಕ ಅದನ್ನು ಸರಿದೂಗಿಸಲು ಪ್ರಯತ್ನಿಸುತ್ತಾರೆ. ಆದರೆ ವಾರಾಂತ್ಯದಲ್ಲಿ ಮಾತ್ರ ಹೆಚ್ಚಿನ ವ್ಯಾಯಾಮ ಮಾಡುವುದು ಹೃದಯದ ಆರೋಗ್ಯಕ್ಕೆ ಸೂಕ್ತವೇ ಎಂಬ ಪ್ರಶ್ನೆ ಅನೇಕರಲ್ಲಿದೆ.

ವಾರದಲ್ಲಿ ಪ್ರತಿದಿನ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೂ, ವಾರಾಂತ್ಯದಲ್ಲಿ ದೈಹಿಕ ಚಟುವಟಿಕೆ ನಡೆಸುವುದು ಸಂಪೂರ್ಣವಾಗಿ ವ್ಯಾಯಾಮ ಮಾಡದೇ ಇರುವುದಕ್ಕಿಂತ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಆದರೆ ಇದರರ್ಥ ವಾರದ ಉಳಿದ ದಿನಗಳಲ್ಲಿ ದೀರ್ಘಕಾಲ ಕುಳಿತುಕೊಂಡೇ ಇರಬೇಕು ಎಂದಲ್ಲ.

ದೀರ್ಘ ಸಮಯ ದೈಹಿಕ ಚಟುವಟಿಕೆ ಇಲ್ಲದೆ ಕುಳಿತುಕೊಂಡ ಬಳಿಕ ಏಕಾಏಕಿ ಹೆಚ್ಚು ತೀವ್ರತೆಯ ವ್ಯಾಯಾಮ ಆರಂಭಿಸಿದರೆ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ನೋವು ಅಥವಾ ಗಾಯದ ಅಪಾಯ ಹೆಚ್ಚಾಗಬಹುದು. ಕೆಲವರಲ್ಲಿ ಹೃದಯದ ಮೇಲೆಯೂ ಹೆಚ್ಚುವರಿ ಒತ್ತಡ ಉಂಟಾಗುವ ಸಾಧ್ಯತೆಯಿದೆ.

ಹೀಗಾಗಿ ವಾರಾಂತ್ಯದಲ್ಲಿ ಮಾತ್ರ ಹೆಚ್ಚು ಸಮಯ ವ್ಯಾಯಾಮ ಮಾಡುವ ಬದಲು, ವಾರದ ದಿನಗಳಲ್ಲೂ ಸಾಧ್ಯವಾದಷ್ಟು ದೈಹಿಕ ಚಟುವಟಿಕೆಯನ್ನು ಮುಂದುವರಿಸುವುದು ಮುಖ್ಯವಾಗಿದೆ. ಬೆಂಗಳೂರಿನ Dr Ravi Charan ಅವರ ಪ್ರಕಾರ, ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ನಡೆಯುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ವ್ಯಾಯಾಮ ಆರಂಭಿಸುವವರು ತಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಧಾನವಾಗಿ ಚಟುವಟಿಕೆಯ ಪ್ರಮಾಣವನ್ನು ಹೆಚ್ಚಿಸುವುದು ಸೂಕ್ತ. ವಿಶೇಷವಾಗಿ ಹೃದಯ ಸಂಬಂಧಿ ಸಮಸ್ಯೆಗಳಿರುವವರು ಅಥವಾ ದೀರ್ಘಕಾಲದಿಂದ ವ್ಯಾಯಾಮ ಮಾಡದವರು ತೀವ್ರ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ.

Trending

Exit mobile version