ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..! | Hosa Suddi

ಅಪರಾಧ

ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..!

Published

on

ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪದ ಮೇಲೆ ನಟ ದರ್ಶನ್ ಅಂಡ್​ ಗ್ಯಾಂಗ್ ಜೈಲುವಾಸ ಅನುಭವಿಸುತ್ತಿತ್ತು. ಆದರೆ ಜೈಲು ಸೇರಿರೋ ದರ್ಶನ್​ ರಾಜ್ಯಾತಿಥ್ಯದ ವೈರಲ್‌ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕೇಸ್​ಗೆ ಸಂಬಂಧಪಟ್ಟಂತೆ ಕೋರ್ಟ್​ ನಿರ್ದೇಶನದಂತೆ ನಟ ದರ್ಶನ್​ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ಸಾಧ್ಯತೆ ಇದೆ. ದರ್ಶನ್​ ಬಳ್ಳಾರಿ ಶಿಫ್ಟ್​ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನ ಸಿಬ್ಬಂದಿ ಮತ್ತು ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ.

ಈ ಮಧ್ಯೆ ನಟ ದರ್ಶನ್ ಜೈಲು ಸಿಬ್ಬಂದಿ ಜೊತೆ ಅಳಲು ತೋಡಿಕೊಂಡಿದ್ದಾರಂತೆ. ಇದೆಲ್ಲಾ ಬೇಕಿತ್ತಾ ನಂಗೆ ಎಂದು ದುಖಃ ವ್ಯಕ್ತಪಡಿಸಿದ್ದಾರಂತೆ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋಗಲು ನಟ ಹಿಂದೇಟು ಹಾಕುತ್ತಿದ್ದಾರಂತೆ. ಕಾರಣ ಇದಕ್ಕೂ ಮುನ್ನ ನಟ ದರ್ಶನ್​ ಈ ಜೈಲಿಗೆ ಭೇಟಿ ನೀಡಿದ್ದರು. ಆದರೆ ಕೈದಿಯಾಗಿ ಅಲ್ಲ ನಟನಾಗಿ ಹೋಗಿದ್ದರು. 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್​​ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಟ ದರ್ಶನ್ ಫೈಟಿಂಗ್ ಸೀನ್​ ಮಾಡಿದ್ದರು. ಹೀಗಾಗಿ ದರ್ಶನ್​ ಬಳ್ಳಾರಿ ಜೈಲಿಗೆ 7 ವರ್ಷದ ಹಿಂದೆ ಬಂದಿದ್ದರು.

ಹೀಗಾಗಿ ಈ ಚಿತ್ರೀಕರಣ ಸಂದರ್ಭದಲ್ಲಿ ಅಲ್ಲಿನ ಬಂಧಿಗಳ ಜೊತೆ ಸಹಜ ಮಾತುಕತೆ ನಡೆಸಿದ್ದರು. ಈ ವೇಳೆ ಬಳ್ಳಾರಿ ಜೈಲಿನ ಕಷ್ಟಗಳು ಅಲ್ಲಿನ ವಾತಾವರಣ, ಕಷ್ಟದ ಬಗ್ಗೆ ಕೈದಿಗಳು ಹೇಳಿಕೊಂಡಿದ್ದರು. ಹೀಗಾಗಿ ಸಹಜವಾಗಿಯೇ ದರ್ಶನ್ ಆತಂಕಗೊಂಡಿದ್ದಾರೆ ಎನ್ನಲಾಗಿದೆ.

Trending

Exit mobile version