ಕುಮಾರಣ್ಣನೇ ಪ್ರಜ್ವಲ್ ಮೇಲೆ ಕೇಸ್ ಹಾಕಿಸಿದ್ದು-ಡಿಕೆಶಿ ಸ್ಫೋಟಕ ಹೇಳಿಕೆ | Hosa Suddi

ರಾಜಕೀಯ

ಕುಮಾರಣ್ಣನೇ ಪ್ರಜ್ವಲ್ ಮೇಲೆ ಕೇಸ್ ಹಾಕಿಸಿದ್ದು-ಡಿಕೆಶಿ ಸ್ಫೋಟಕ ಹೇಳಿಕೆ

Published

on

ಮೈಸೂರು: ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿಯು ರಾಜಕೀಯ ಭವಿಷ್ಯಕ್ಕಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣನ ಮೇಲೆ ಕೇಸ್ ಆಗುವಂತೆ ಮಾಡಿದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದರು,
ಸಿಎಂ ವಿರುದ್ಧ ಬಿಜೆಪಿ-ಜೆಡಿಎಸ್ ನಾಯಕರ ಮೈಸೂರು ಚಲೋ ಪಾದಯಾತ್ರೆ ವಿರುದ್ಧ ಇಂದು ಕಾಂಗ್ರೆಸ್ ಹಮ್ಮಿಕೊಂಡ ಜನಾಂದೋಲನಾ ಸಮಾವೇಶದಲ್ಲಿ ಅವರು ಮಾತನಾಡಿದರು,
ಪ್ರಜ್ವಲ್ ಪೆನ್ ಡ್ರೈವ್ ಕೇಸ್ ವಿಚಾರದಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಹಾಗೂ ನನ್ನ ಕೈವಾಡವಿದೆ ಅಂತಾ ಕುಮಾರಸ್ವಾಮಿ ಹೇಳ್ತಾರೆ, ಅವರ ಪಾದಯಾತ್ರೆಯಲ್ಲಿ ಪ್ರೀತಂಗೌಡ ವಿರುದ್ಧ ಜೆಡಿಎಸ್ ಬೆಂಬಲಿಗರು ಕಿರಿಕ್ ಮಾಡ್ತಾರೆ, ನನ್ನ ವಿರುದ್ಧ ಪೆನ್ ಡ್ರೈವ್ ವಿಚಾರ ಯಾಕೆ ಮಾಡ್ತೀರಿ ಕುಮಾರಣ್ಣ ಎಂದು ಪ್ರಶ್ನಿಸಿದರು, ತನ್ನ ಮಗನಿಗೆ ತೊಂದರೆ ಆಗದಿರಲಿ ಅಂತಾ ಇನ್ನೊಬ್ಬರ ಮಗನ ಮೇಲೆ ನೀವು ಮಾಡಿರುವ ಷಡ್ಯಂತ್ರ ಎಂದು ಡಿಕೆಶಿ ಅವರು ಪರೋಕ್ಷವಾಗಿ ಆರೋಪಿಸಿದರು,
ಕುಮಾರಸ್ವಾಮಿ ಅವರು ತಮ್ಮ ಕುಟುಂಬಕ್ಕೆ ತೊಂದರೆ ಅದರೆ ಯಾರನ್ನು ಬಿಡಲ್ಲ, ಇನ್ನು ನನ್ನ ಹಾಗೂ ಸಿಎಂ ಅವರನ್ನು ಬಿಡಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು, ಓರ್ವ ಹಿಂದುಳಿದ ನಾಯಕ ಸಿಎಂ ಆಗಿದ್ದು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಡಿಕೆಶಿ ಕಿಡಿಕಾರಿದರು..

Trending

Exit mobile version