ಕೆಂಗೇರಿಯಲ್ಲಿ ಸಂಕ್ರಾಂತಿ ಸಂಭ್ರಮ | Hosa Suddi

ಬೆಂಗಳೂರು

ಕೆಂಗೇರಿಯಲ್ಲಿ ಸಂಕ್ರಾಂತಿ ಸಂಭ್ರಮ

Published

on

ಕೆಂಗೇರಿ: ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಮಕರ ಸಂಕ್ರಮಣದ ಸಡಗರ ಕೆಂಗೇರಿ ಉಪನಗರದ ಬಂಡೇಮಠದಲ್ಲಿ ಮನೆ ಮಾಡಿತ್ತು, ಉತ್ತರ ಕರ್ನಾಟಕ ಗೆಳೆಯರ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಜೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಯಶವಂತಪುರ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶ್ರೀ ಚರಮೂರ್ತಿ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಶಾಸಕರಾದ ಎಸ್ ಟಿ ಸೋಮಶೇಖರ್ ಅವರು ಮಾತನಾಡುತ್ತ ಪರಸ್ಪರ ಎಳ್ಳುಬೆಲ್ಲ ವಿತರಣೆ, ದೇವಸ್ಧಾನಗಳಲ್ಲಿ ವಿಶೇಷ ಪೂಜೆ, ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಗಳ ಮೂಲಕ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ, ಉತ್ತರ ಕರ್ನಾಟಕ ಚಾರಿಟೆಬಲ್ ಟ್ರಸ್ಟ್ ಅವರು ಪ್ರತಿವರ್ಷ ಕೆಂಗೇರಿ ಉಪನಗರದಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಅಚರಿಸುವುದು ವಿಶೇಷ ಎಂದರು, ಕಾರ್ಯಕ್ರಮದಲ್ಲಿ ಶ್ರೀ ಚರಮೂರ್ತಿ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು, ಈ ಸಂಕ್ರಾಂತಿ ಸಂಜೆ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು, ಅಧ್ಯಕ್ಷ ಪ್ರಭಾಕರ್ ಲಾಡರ್, ಉಪಾಧ್ಯಕ್ಷ ರವಿಕಿರಣ್ ಮೇತ್ರಿ, ಹಾಗೂ ಟ್ರಸ್ಟ್ ಸದಸ್ಯರು ಉಪಸ್ಧಿತರಿದ್ದರು,

Trending

Exit mobile version