ಬೆಂಗಳೂರು
ಜೆಡಿಎಸ್ ಜತೆಗಿನ ಮೈತ್ರಿಗೆ ನನ್ನ ವಿರೋಧ ಅಧಿಕೃತವಾದ ಬಳಿಕ ನನ್ನ ನಿರ್ಧಾರ ಎಸ್ ಟಿ ಸೋಮಶೇಖರ್
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ ಎಂದು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು, ಮಾಧ್ಯಮದವರ ಜೊತೆ ಮಾತನಾಡಿದ ಅವರು ವೈಯಕ್ತಿಕವಾಗಿ ಮೃತ್ರಿ ಬಗ್ಗೆ ವಿರೋಧ ಇದೆ, ಅಧಿಕೃತವಾಗಿ ಘೋಷಣೆಯಾದ ಬಳಿಕ ನನ್ನ ಮುಂದಿನ ನಿರ್ಧಾರವನ್ನು ಮಾಡುತ್ತೇನೆ, 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ, ಕಾಂಗ್ರೆಸ್ ಜೆಡಿಎಸ್ ಜತೆ ಮೈತ್ರಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಕಾಂಗ್ರೆಸ್ ಜೆಡಿಎಸ್ ಮೊದಲಿನಿಂದಲೂ ವಿರೋಧ ಇದೆ, ಯಾವತ್ತೂ ಕೂಡ ನಮ್ಮ ಹಾಗೂ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ, ಮಾನಸಿಕ ಕಿರುಕಳವನ್ನು ಹತ್ತಿರದಿಂದ ನೋಡಿದ್ದೇನೆ ಎಂದರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು, ಅವರು ಇವರಿಗೆ ಮತ ಹಾಕಲಿಲ್ಲ, ಇವರು ಅವರಿಗೆ ಮತ ಹಾಕಲಿಲ್ಲ ಯಾರೂ ಕೂಡ ಈ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಿಲ್ಲ, ಅದರೆ ಎಲ್ಲರಿಗೂ ಅಸಮಾಧಾನ ಅಂತೂ ಇದೆ, ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ, ನಾನು 100% ಬಿಜೆಪಿಯಲ್ಲಿ ಇದ್ದೇನೆ, ಎಲ್ಲಿಯೂ ಹೋಗಿಲ್ಲ, ಅದರೆ ಮೈತ್ರಿ ಬಳಿಕ ಯೋಚನೆ ಮಾಡಬೇಕಿದೆ, 6 ಬಾರಿ ಜೆಡಿಎಸ್ ಜೊತೆ ಹೊಡೆದಾಡಿಕೊಂಡು ಬಂದಿದ್ದೇವೆ, ಜೆಡಿಎಸ್ ಜೊತೆ ಮೈತ್ರಿ ವಿಚಾರ ಯಾರಿಗೂ ಆಗಲ್ಲ ಅಂತ ಕಾಂಗ್ರೆಸ್ ಸೇರುತ್ತಿದ್ದಾರೆ, ಯಾರೋ ನಾಲ್ಕು ಜನ ಕುಳಿತು ಮಾತಡಿದರೆ ಆಗಲ್ಲ ಅಂತ ಜೆಡಿಎಸ್ ರಾಜ್ಯಾಧ್ಯಾಕ್ಷರೂ ಹೇಳಿದ್ದಾರೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನನ್ನ ಬಳಿ ಕೆಲವರು ಹೇಳಿದ್ದಾರೆ,
ಮೈತ್ರಿ ಬಗ್ಗೆ ಹೈಕಮಾಂಡ್ ಹೇಲಿದರೆ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನಗೆ ಪ್ರತಿಕ್ರಿಯ ನೀಡಿದ ಎಸ್ ಟಿ ಸೋಮಶೇಖರ್ ಹೈಕಮಾಂಡ್ ಅಂದರೆ ನಮಗೆ ಮಾಜಿ ಸಿ ಎಂ ಬಿ.ಎಸ್.ಯಡಿಯೂರಪ್ಪ ನಾನು ಹೇಳುವವರೆಗೂ ಏನು ಮಾಡಬೇಡಿ ಅಂತ ಅವರು ಹೇಳಿದ್ದಾರೆ, ಅದಕ್ಕೆ ನಾನೆಲ್ಲೂ ಒಂದು ತಿಂಗಳಿಂದ ಏನು ಮಾತನಾಡಿಲ್ಲ, ಅವರು ಏನೋ ಹೇಳಿದ್ದಾರೆ ಹಾಗಾಗಿ ಅಲ್ಲಿಯವರೆಗೂ ಮಾತನಾಡಲ್ಲ ಯಾವುದನ್ನೂ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು,