ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..! | Hosa Suddi

ಅಪರಾಧ

ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

Published

on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಸಾಮಾನ್ಯ ಕೈದಿಗಳಂತೆ ದಿನ ಕಳೆಯುತ್ತಿರುವ ದರ್ಶನ್ ಊಟ, ತಿಂಡಿ ಹಾಗೂ ನಿದ್ರೆಯನ್ನು ಸರಿಯಾಗಿ ಮಾಡದೇ ಚಿಂತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಜೈಲಲ್ಲಿ ದರ್ಶನ್​​ಗೆ ಅತಿಥ್ಯ ನೀಡಲು ರೌಡಿಗಳ ಪಡೆ ನಾ ಮುಂದು ತಾ ಮುಂದು ಎಂದು ಬಂದಿದೆ ಅಂತಾ ಹೇಳಲಾಗುತ್ತಿದೆ. ದರ್ಶನ್​ಗೆ ಅತಿಥ್ಯ ನೀಡಲು ಮುಂದಾಗಿರುವ ರೌಡಿಗಳು ಯಾರು ಅನ್ನೋದು ಕೂಡ ಇಂಟ್ರೆಸ್ಟಿಂಗ್ ಆಗಿದೆ.

ಕುಖ್ಯಾತ ವಿಲ್ಸನ್ ಗಾರ್ಡನ್ ನಾಗ ಹಾಗೂ ಸೈಕಲ್ ರವಿ ಕಡೆಯಿಂದ ದರ್ಶನ್ ನೋಡಿಕೊಳ್ಳಲು ಪೈಪೋಟಿ ಬಿದ್ದಿದ್ಯಂತೆ. ಪರಪ್ಪನ ಆಗ್ರಹಾರ ಜೈಲಲ್ಲೇ ವಿಲ್ಸನ್ ಗಾರ್ಡನ್ ನಾಗ ಇದ್ದಾನೆ. ಆದರೆ ಸೈಕಲ್ ರವಿ ಜೈಲಲ್ಲಿ ಇಲ್ಲ. ಆದರೂ ದರ್ಶನ್ ಜೈಲಲ್ಲಿ ನೋಡಿಕೊಳ್ಳಲು ರವಿ ಹುಡುಗರು ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕಾಗಿ ರವಿಯ ಬಂಟನೊಬ್ಬ ಹಳೆ ಕೇಸಲ್ಲಿ ಜೈಲು ಸೇರೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

2011ರಲ್ಲಿ ದರ್ಶನ್​​ ಜೈಲಲ್ಲಿದ್ದಾಗ ಸೈಕಲ್ ರವಿ ಅತಿಥ್ಯ ನೀಡಿದ್ದ ಎನ್ನಲಾಗಿದೆ. ಈಗಲೂ ತಾನೇ ನೀಡುತ್ತೇವೆ ಎಂದು ಸೈಕಲ್ ಗ್ಯಾಂಗ್ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ ವಿಲ್ಸನ್ ಗಾರ್ಡನ್ ನಾಗ ಜೈಲಲ್ಲೇ ಇದ್ದು ಅವರು ಕೂಡ ದರ್ಶನ್​​ಗೆ ಅತಿಥ್ಯ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Trending

Exit mobile version