ಕ್ರೀಡೆ
ಟೀಂ ಇಂಡಿಯಾದಲ್ಲಿ ಒಳಜಗಳ..!? ರೋಹಿತ್ ಶರ್ಮಾ-ಶಮಿ ನಡುವೆ ಮಾತಿನ ಚಕಮಕಿ.. ದಿಗ್ಗಜರ ಕಿತ್ತಾಟಕ್ಕೆ ಕಾರಣವೇನು?
Rohit Sharma and Mohammed Shami: ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಮತ್ತೆ ಯಾವಾಗ ಆಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆಮಾಡಿದೆ. ಕಳೆದ ಕೆಲವು ತಿಂಗಳಿಂದ ಗಾಯದಿಂದ ಬಳಲುತ್ತಿರುವ ಶಮಿ ತಂಡಕ್ಕೆ ಮರುಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳು ಬಂದಿದ್ದವು. ಶಮಿ ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿಯೂ ಆಡಿರಲಿಲ್ಲ. ಆ ನಂತರ ರಣಜಿಯಲ್ಲಿ ಬಂಗಾಳ ತಂಡದ ಪರವಾಗಿ ಆಡಿದರು.
ಪಾದದ ಗಾಯದಿಂದಾಗಿ ಶಮಿ ಈ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತೇ ಇದೆ. ಇದರಿಂದಾಗಿ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಶಮಿ ಆಡಿದ್ದರು. ಆ ಬಳಿಕ ಕಳೆದ ತಿಂಗಳಷ್ಟೇ ಮತ್ತೆ ಬೌಲಿಂಗ್ ಆರಂಭಿಸಿದ್ದರು. ರಣಜಿ ಟ್ರೋಫಿಯಲ್ಲಿ ಅವರು ಮಧ್ಯಪ್ರದೇಶ ವಿರುದ್ಧ 7 ವಿಕೆಟ್ ಪಡೆದರು. ಅದರ ಬೆನ್ನಲ್ಲೇ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, “ಶಮಿಗಾಗಿ ಯಾವಗಲೂ ಟೀಂ ಇಂಡಿಯಾದ ಬಾಗಿಲು ತೆರೆದೇ ಇರುತ್ತದೆ. ಅವರ ಮೇಲೆ ಕೊಂಚ ನಿಗಾ ಇಟ್ಟಿದ್ದೇವೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವಾಗ ಕೂಡ ಅವರ ಮೊಣಕಾಲುಗಳಲ್ಲಿ ಸ್ವಲ್ಪ ಊತ ಇತ್ತು” ಎಂದಿದ್ದರು.
ಇದೇ ಕಾರಣದಿಂದ ಟೆಸ್ಟ್ ಆಡಲು ಸಾಧ್ಯವಾಗಿರಲಿಲ್ಲ. ಅವರು ತುಂಬಾ ಜಾಗರೂಕತೆ ಅನುಸರಿಸಬೇಕೆಂದು ನಾವು ಇಚ್ಛಿಸುತ್ತೇವೆ. ಇಲ್ಲಿಗೆ ಬಂದು ಗಾಯವನ್ನು ದೊಡ್ಡದಾಗಿ ಮಾಡೋದು ನಮಗೆ ಇಷ್ಟವಿಲ್ಲ. ಶಮಿ 100 ಪ್ರತಿಶತ ಚೇತರಿಸಿಕೊಳ್ಳಲು ನಾವು ಕಾಯುತ್ತಿದ್ದೇವೆ. ಗಾಯಗೊಂಡು ಹಿಂತಿರುಗುತ್ತಿರುವ ಅವರನ್ನು ಇಲ್ಲಿಗೆ ಕರೆತಂದು ಹೆಚ್ಚಿನ ಕೆಲಸದ ಹೊರೆ ನೀಡಿ ಒತ್ತಡಕ್ಕೆ ಒಳಪಡಿಸುವುದು ನಮಗೆ ಇಷ್ಟವಿಲ್ಲ. ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ. ಭಾರತ ತಂಡದ ಪ್ರದರ್ಶನವನ್ನೂ ಅವರು ನೋಡಿಕೊಳ್ಳುತ್ತಾರೆ. ಸಂಪೂರ್ಣ ಚೇತರಿಸಿಕೊಂಡ ನಂತರ ಯಾವಾಗ ಬೇಕಾದರೂ ಬಂದು ಆಡಬಹುದು” ಎಂದು ರೋಹಿತ್ ಹೇಳಿದ್ದಾರೆ.
ಆದರೆ, ರೋಹಿತ್ ಮತ್ತು ಶಮಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶಮಿ ಮೊಣಕಾಲು ಊದಿಕೊಂಡಿದ್ದನ್ನು ಬಹಿರಂಗಪಡಿಸಿದ್ದರು. ನ್ಯೂಜಿಲೆಂಡ್ ಸರಣಿ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ಶಮಿ ಈ ಸರಣಿಗೆ ಅಥವಾ ಆಸ್ಟ್ರೇಲಿಯಾ ಸರಣಿಗೆ ಸಂಪೂರ್ಣ ಫಿಟ್ ಆಗುತ್ತಾರಾ ಎಂದು ಹೇಳಲು ಸಾಧ್ಯವಿಲ್ಲ.ಇದು ತುಂಬಾ ಕಷ್ಟದ ವಿಷಯ. ಶಮಿ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಅವನ ಮೊಣಕಾಲಿನಲ್ಲಿ ಊತವಿದೆ ಚೇತರಿಸಿಕೊಳ್ಳುತ್ತಿದ್ದಾನೆ.” ಎಂದಿದ್ದರು.
ಆದರೆ ಆ ಸಮಯದಲ್ಲಿ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರು ಮತ್ತು ಆಡಲು ಸಿದ್ಧರಾಗಿದ್ದರು ಎಂದು ಶಮಿ ರೋಹಿತ್‌ಗೆ ಹೇಳಿದ್ದರಂತೆ. ಆದರೆ ಇದನ್ನು ರೋಹಿತ್ ಗಮನಿಸದೆ, ಶಮಿಗೆ ಸಮಸ್ಯೆಯಿದೆ ಎಂಬುದು ತಿಳಿದುಬಂದಿಲ್ಲ.
ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಆಡುತ್ತಾರಾ?
ವರದಿಯ ಪ್ರಕಾರ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶಮಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಶಮಿ ಆಸ್ಟ್ರೇಲಿಯಕ್ಕೆ ಹೋಗುವ ಸಾಧ್ಯತೆಯಿದ್ದರೂ, ಅವರು ಪ್ರಸ್ತುತ SMAT ನಲ್ಲಿ ಬಂಗಾಳದ ಪರವಾಗಿ ಆಡುತ್ತಿದ್ದಾರೆ. ಬಿಸಿಸಿಐ ಅವರಿಗೆ ಇನ್ನೂ ಅನುಮತಿ ನೀಡಿಲ್ಲ. ಎಲ್ಲರೂ ಎನ್‌ಸಿಎಯಿಂದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಶಮಿ ಆಸ್ಟ್ರೇಲಿಯಕ್ಕೆ ಬಂದರೂ 3ನೇ ಟೆಸ್ಟ್ ನಲ್ಲಿ ಆಡಲು ಅವಕಾಶವಿಲ್ಲ. ಬದಲಾಗಿ 4 ಮತ್ತು 5ನೇ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆಯಬಹುದು.
ಕ್ರೀಡೆ
FIBA U18 Asia Cup 2026: ಡಾ. ಕೆ. ಗೋವಿಂದರಾಜ್ ಅವರಿಂದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ಪ್ರದಾನ, ಚೀನಾಗೆ 89-79 ಸೋಲು
ಅಹಮದಾಬಾದ್: 2026ರ ಎಫ್‌ಐಬಿಎ ಅಂಡರ್-18 ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಚೀನಾವನ್ನು 89-79 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆಗಸ್ಟ್ 23ರಂದು ಅಹಮದಾಬಾದ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಉಭಯ ತಂಡಗಳು ಅತ್ಯುತ್ತಮ ಪೈಪೋಟಿ ನೀಡಿದವು.
ಪಂದ್ಯದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಕೆ. ಗೋವಿಂದರಾಜ್, ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ, ವಿಜೇತ ಆಸ್ಟ್ರೇಲಿಯಾ ಅಂಡರ್-18 ಪುರುಷರ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು. ಅವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವು ಟೂರ್ನಿಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿತ್ತು.
ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಚೀನಾ ತಂಡವೂ ತೀವ್ರ ಪೈಪೋಟಿ ನೀಡಿದರೂ, ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ತನ್ನ ಮುನ್ನಡೆಯನ್ನು ಕಾಯ್ದುಕೊಂಡು 89-79 ಅಂತರದಲ್ಲಿ ಗೆಲುವು ಸಾಧಿಸಿತು.
ಆಸ್ಟ್ರೇಲಿಯಾ ಪರ ಯಾಹ್ಯಾ ಬಸಾರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಟೂರ್ನಿಯ ಅತ್ಯುತ್ತಮ ಆಟಗಾರ ಎಂವಿಪಿ ಪ್ರಶಸ್ತಿಗೆ ಭಾಜನರಾದರು. ಅವರ ಪರಿಣಾಮಕಾರಿ ಆಟ ಆಸ್ಟ್ರೇಲಿಯಾ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಫೈನಲ್ ಪಂದ್ಯವನ್ನು ವೀಕ್ಷಿಸಿದ ಡಾ. ಕೆ. ಗೋವಿಂದರಾಜ್ ಅವರು ಫಿಬಾ ಏಷ್ಯಾ ಪರವಾಗಿ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಗುಜರಾತ್ ಸರ್ಕಾರದ ಕೃಷಿ ಸಚಿವ ಜಿತು ವಘಾಣಿ ಅವರಿಗೆ ಧನ್ಯವಾದ ಸಲ್ಲಿಸಿದರು. ಅಹಮದಾಬಾದ್‌ನಲ್ಲಿ ನಡೆದ ಈ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಟೂರ್ನಿ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಿ ಪರಿಣಮಿಸಿತು.
ಆಸ್ಟ್ರೇಲಿಯಾ ಹಾಗೂ ಚೀನಾ ತಂಡಗಳ ಆಟಗಾರರು ಫೈನಲ್‌ನಲ್ಲಿ ತೋರಿದ ಸ್ಪರ್ಧಾತ್ಮಕ ಮನೋಭಾವವು ಏಷ್ಯಾದ ಬಾಸ್ಕೆಟ್‌ಬಾಲ್‌ನ ಭವಿಷ್ಯದ ಬೆಳವಣಿಗೆಗೆ ಉತ್ತಮ ಸಂಕೇತವಾಗಿದೆ.
ಕ್ರೀಡೆ
BrYdon Carse: ನೈಟ್‌ಕ್ಲಬ್ ಹೊರಗೆ ಇಂಗ್ಲೆಂಡ್ ಸ್ಟಾರ್ ಬೌಲರ್‌ಗೆ ಕೈಕೋಳ; ECB ತನಿಖೆ ಆರಂಭ!
ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಬ್ರೈಡನ್ ಕಾರ್ಸ್ (Brydon Carse) ವಿವಾದಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಡರ್ಬಿಯ ನೈಟ್‌ಕ್ಲಬ್‌ವೊಂದರ ಹೊರಗೆ ಪೊಲೀಸರು ಅವರನ್ನು ಕೈಕೋಳ ಹಾಕಿ ಕರೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ಆರಂಭಿಸಿದೆ.
ಆಗಸ್ಟ್ 27ರಂದು ಲಾರ್ಡ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಸ್ತುತ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಕಾರ್ಸ್ ಅವರನ್ನು ಇಂಗ್ಲೆಂಡ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಮೊದಲ ಟೆಸ್ಟ್‌ನ ಆಡುವ ಹನ್ನೊಂದರಲ್ಲಿ ಅವರಿಗೆ ಅವಕಾಶ ನೀಡಲಾಗಿರಲಿಲ್ಲ.
ಮೊದಲ ಟೆಸ್ಟ್ ಬಳಿಕ ಕಾರ್ಸ್ ಅವರಿಗೆ ಡರ್ಹಾಮ್ ಪರ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡುವ ಅವಕಾಶ ನೀಡಲಾಗಿತ್ತು. ಡರ್ಹಾಮ್ ತಂಡವು ಡರ್ಬಿಶೈರ್ ವಿರುದ್ಧದ ಪಂದ್ಯವನ್ನು ಕೇವಲ ಮೂರು ದಿನಗಳಲ್ಲಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಕಾರ್ಸ್ 26 ರನ್ ಗಳಿಸುವುದರ ಜೊತೆಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದರು.
ಪಂದ್ಯದ ಬಳಿಕ ನೈಟ್‌ಕ್ಲಬ್‌ಗೆ ತೆರಳಿದ್ದ ಕಾರ್ಸ್
ಡರ್ಬಿಶೈರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಬ್ರೈಡನ್ ಕಾರ್ಸ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಡರ್ಬಿಯ ನೈಟ್‌ಕ್ಲಬ್‌ಗೆ ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ನೈಟ್‌ಕ್ಲಬ್‌ನ ಹೊರಗೆ ಅವರನ್ನು ಪೊಲೀಸರು ಕೈಕೋಳ ಹಾಕಿ ಕರೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವಿಡಿಯೋ ವೈರಲ್ ಆದ ಬಳಿಕ ಪ್ರಕರಣದ ಕುರಿತು ಕ್ರಿಕೆಟ್ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಘಟನೆಗೆ ಸಂಬಂಧಿಸಿದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಕಾರ್ಸ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.
ECB ತನಿಖೆ ಆರಂಭ
ವಿವಾದದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಕರಣದ ಕುರಿತು ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆ ಇಂಗ್ಲೆಂಡ್ ತಂಡಕ್ಕೆ ಮುಜುಗರ ತಂದಿದೆ.
ಕಾರ್ಸ್ ಅವರು ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆಯೇ ಅಥವಾ ಘಟನೆಯ ತನಿಖೆಯ ಹಿನ್ನೆಲೆಯಲ್ಲಿ ಅವರ ಆಯ್ಕೆಯ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಈ ಕುರಿತು ECBಯ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಕ್ರೀಡೆ
ಗೋವಾ ತಂಡ ಬಿಡ್ತಾರಾ Arjun Tendulkar? ಊಹಾಪೋಹಗಳಿಗೆ ತೆರೆ; ದೇಶಿ ಕ್ರಿಕೆಟ್ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ
ನವದೆಹಲಿ: ಕ್ರಿಕೆಟ್ ದಿಗ್ಗಜ Sachin Tendulkar ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರ ದೇಶಿ ಕ್ರಿಕೆಟ್ ಭವಿಷ್ಯದ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ. 26 ವರ್ಷದ ಎಡಗೈ ವೇಗದ ಬೌಲರ್ ಮುಂದಿನ ದೇಶಿ ಕ್ರಿಕೆಟ್ ಋತುವಿನಲ್ಲೂ ಗೋವಾ ತಂಡದ ಪರವೇ ಆಡಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಗೋವಾ ಕ್ರಿಕೆಟ್ ಅಸೋಸಿಯೇಷನ್ ಮೂಲಗಳು ಈ ಬಗ್ಗೆ ಸ್ಪಷ್ಟಪಡಿಸಿವೆ ಎಂದು ವರದಿಯಾಗಿದೆ.
ಇತ್ತೀಚೆಗೆ ಗೋವಾ ತಂಡದ ಒಮಾನ್ ಪ್ರವಾಸಕ್ಕೆ ಅರ್ಜುನ್ ತೆಂಡೂಲ್ಕರ್ ಆಯ್ಕೆಯಾಗಿರಲಿಲ್ಲ. ಇದರಿಂದ ಅವರು ಮುಂದಿನ ಋತುವಿನಲ್ಲಿ ಗೋವಾ ತಂಡವನ್ನು ತೊರೆಯಲಿದ್ದಾರೆಯೇ ಎಂಬ ಪ್ರಶ್ನೆಗಳು ಮತ್ತು ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ, ಅರ್ಜುನ್ ಗೋವಾ ತಂಡದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ.
2022-23ರಿಂದ ಗೋವಾ ಪರ ಆಡುತ್ತಿರುವ ಅರ್ಜುನ್
ಅರ್ಜುನ್ ತೆಂಡೂಲ್ಕರ್ 2022-23ರ ದೇಶಿ ಕ್ರಿಕೆಟ್ ಋತುವಿಗೂ ಮುನ್ನ ಮುಂಬೈನಿಂದ ಗೋವಾ ತಂಡಕ್ಕೆ ವರ್ಗಾವಣೆಯಾಗಿದ್ದರು. ಅಂದಿನಿಂದ ಗೋವಾ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿರುವ ಅವರು ತಂಡದ ಪರ 50 ಫಸ್ಟ್‌ಕ್ಲಾಸ್ ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವ ಅರ್ಜುನ್, ರಣಜಿ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ ಶತಕ ಬಾರಿಸಿ ಗಮನ ಸೆಳೆದಿದ್ದರು. ಎಲ್ಲಾ ಮಾದರಿಯ ದೇಶಿ ಕ್ರಿಕೆಟ್‌ನಲ್ಲಿ ಗೋವಾ ತಂಡದ ಸೆಟಪ್‌ನ ಪ್ರಮುಖ ಸದಸ್ಯರಾಗಿದ್ದಾರೆ.
IPL 2026ರಲ್ಲಿ LSG ಪರ ಮೊದಲ ಪಂದ್ಯ
ಇತ್ತೀಚಿನ IPL 2026ರಲ್ಲಿ Lucknow Super Giants ಪರ ಆಡಿದ್ದ ಅರ್ಜುನ್, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ IPL ಋತುವಿನ ಮೊದಲ ಅವಕಾಶ ಪಡೆದಿದ್ದರು. ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಪಡೆದ ಅವರು, ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಯಾರ್ಕರ್ ಮೂಲಕ ಔಟ್ ಮಾಡಿ ಗಮನ ಸೆಳೆದಿದ್ದರು.
ಆ ಪಂದ್ಯದಲ್ಲಿ Rishabh Pant ನಾಯಕತ್ವದಲ್ಲಿ ಆಡಿದ ಅರ್ಜುನ್, ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಅವಕಾಶವನ್ನು ಪಡೆದಿದ್ದರು. ಆದರೆ ಕ್ಯಾಚ್ ಕೈಚೆಲ್ಲಲ್ಪಟ್ಟ ಕಾರಣ ಅವಕಾಶ ತಪ್ಪಿತ್ತು. ಆದರೂ ನಂತರ ಒತ್ತಡದ ನಡುವೆಯೂ ಸಮಾಧಾನಕರ ಪ್ರದರ್ಶನ ನೀಡಿ ತಮ್ಮ ಮೊದಲ IPL 2026 ವಿಕೆಟ್ ದಾಖಲಿಸಿದರು.
ಮಗನಿಗೆ ಸಚಿನ್ ಭಾವನಾತ್ಮಕ ಸಂದೇಶ
ಅರ್ಜುನ್ ಅವರ ಪ್ರದರ್ಶನದ ಬಳಿಕ ತಂದೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುವುದು, ಸದ್ದಿಲ್ಲದೆ ಕಠಿಣ ಪರಿಶ್ರಮ ಪಡುವುದು ಹಾಗೂ ಸಕಾರಾತ್ಮಕವಾಗಿರುವುದಕ್ಕಾಗಿ ಮಗನನ್ನು ಅವರು ಶ್ಲಾಘಿಸಿದ್ದರು. “ಕ್ರಿಕೆಟ್ ಕೌಶಲ್ಯದಷ್ಟೇ ತಾಳ್ಮೆಯನ್ನೂ ಪರೀಕ್ಷಿಸುತ್ತದೆ” ಎಂಬ ಸಂದೇಶದ ಮೂಲಕ ಅರ್ಜುನ್ ಅವರ ಮನೋಭಾವವನ್ನು ಪ್ರಶಂಸಿಸಿದ್ದರು.
ಒಟ್ಟಿನಲ್ಲಿ, ಗೋವಾ ತಂಡವನ್ನು ತೊರೆಯುವ ಬಗ್ಗೆ ಹರಿದಾಡಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಅರ್ಜುನ್ ತೆಂಡೂಲ್ಕರ್ ಮುಂದಿನ ದೇಶಿ ಋತುವಿನಲ್ಲೂ ಗೋವಾ ಪರ ತಮ್ಮ ಪ್ರದರ್ಶನ ಮುಂದುವರಿಸಲಿದ್ದಾರೆ ಎಂಬ ವರದಿ ಹೊರಬಿದ್ದಿದೆ.
-
ಬೆಂಗಳೂರು13 ಗಂಟೆಗಳು agoKannada Sahitya Parishat ನ ಗೌರವ ದತ್ತಿ ಪ್ರಶಸ್ತಿ ಪ್ರಕಟ: 2025, 2026ನೇ ಸಾಲಿನ ಪುರಸ್ಕೃತರು ಇವರೇ!
-
ಬೆಂಗಳೂರು19 ಗಂಟೆಗಳು agoB Nagendra ವಿರುದ್ಧ ಬಿಜೆಪಿ-ಜೆಡಿಎಸ್ ದೂರು: ರಾಜ್ಯಪಾಲರಿಗೆ ಮನವಿ ಸಲ್ಲಿಕೆ
-
ದೇಶ17 ಗಂಟೆಗಳು agoIran ಮೇಲೆ America ದ ಹೊಸ ನಿರ್ಬಂಧ! ಭಾರತದ ಅಕ್ಕಿ, ಚಹಾ, ಔಷಧ ರಫ್ತಿಗೆ ಎದುರಾಯ್ತಾ ದೊಡ್ಡ ಹೊಡೆತ?
-
ದೇಶ17 ಗಂಟೆಗಳು agoChina Robot Revolution ರೋಬೋಟ್ ಗಳಿಗೆ ತರಬೇತಿ, ಯುವಕರಿಗೆ ಹೊಸ ಪಾಠ! ಚೀನಾ ಭವಿಷ್ಯದ ಉದ್ಯೋಗಕ್ಕಾಗಿ ಮಾಡುತ್ತಿರುವುದೇನು?
-
ಬೆಂಗಳೂರು19 ಗಂಟೆಗಳು agoUrvashi ಚಿತ್ರಮಂದಿರ ನೆಲಸಮಕ್ಕೆ ದಿಢೀರ್ ಬ್ರೇಕ್! Karnataka High Court ಆದೇಶದ ಹಿಂದಿರುವ ಕಾರಣವೇನು?
-
ಬೆಂಗಳೂರು18 ಗಂಟೆಗಳು agoSignal ನಲ್ಲಿ ನಿಂತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಕಾರು ಡಿಕ್ಕಿ! 50 ಅಡಿ ದೂರಕ್ಕೆ ಹಾರಿ ಯುವಕ ಸಾವು
-
ದೇಶ19 ಗಂಟೆಗಳು agoCentre Government ವಿರುದ್ಧ ಮತ್ತೆ ಸಿಡಿದೆದ್ದ CJP! ಸೆ.5ರಂದು ನಡೆಯಲಿದೆ ಬೃಹತ್ ಪ್ರತಿಭಟನಾ ಮೆರವಣಿಗೆ
-
ರಾಜಕೀಯ19 ಗಂಟೆಗಳು agoBJP ತೊರೆದ ಬೆನ್ನಲ್ಲೇ ನಟ ದೇವನ್ಗೆ ವಿಜಯ್ ಪಕ್ಷದಿಂದ ಕರೆ! ಕೇರಳದ ಅಧ್ಯಕ್ಷ ಹುದ್ದೆಯ ಆಫರ್
