isro
ಡಾಕಿಂಗ್ ಸಾಹಸಕ್ಕೆ ಇಸ್ರೋ ರೆಡಿ – ಏನಿದು ಪ್ರಯೋಗ? ಇಷ್ಟೊಂದು ಮಹತ್ವ ಯಾಕೆ?
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಇಂದು (ಡಿ.30) ಮಹತ್ವದ ದಿನ. ಸೋಮವಾರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಲಿದೆ.
ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್ (Docking) ಮತ್ತು ಅನ್‌ಡಾಕಿಂಗ್ (Undocking) ಪ್ರಯೋಗ ಯಶಸ್ವಿಯಾದಲ್ಲಿ ಸ್ಪೇಡೆಕ್ಸ್‌ನಲ್ಲಿ ಯಶ ಕಂಡ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದೆ.
ಈ ಪ್ರಯೋಗದ ಭಾಗವಾಗಿ ಎಸ್‌ಡಿಎಕ್ಸ್01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್ ಇಂದು ರಾತ್ರಿ 9:58ಕ್ಕೆ ಉಡಾವಣೆಯಾಗಲಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್ ಪ್ರಯೋಗ ನಡೆಯಲಿದೆ.
ಏನಿದು ಪ್ರಯೋಗ?
ಈ ಎರಡೂ ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಲಿದೆ. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇಡಲಾಗಿದೆ.
ಯಾಕೆ ಇಷ್ಟೊಂದು ಮಹತ್ವ?
ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್, ಅನ್‌ಡಾಕಿಂಗ್ ತಂತ್ರಜ್ಞಾನ ತಿಳಿದಿರಬೇಕು.
chandrayan 3
ಇಸ್ರೋ ವಿಜ್ಞಾನಿ ತೌಜಮ್ ರಘು ಸಿಂಗ್ ಎಂಬುವರು ಕೆಲಸದೊತ್ತಡದಿಂದ ಸುಮಾರು ೨ ವರ್ಷ ತಮ್ಮ ಮನೆಗೇ ಭೇಟಿ ನೀಡಿಲ್ಲ : ಚಂದ್ರಯಾನ ೩
ಬೆಂಗಳೂರು: ಚಂದ್ರಯಾನ ೩ರ ಯಶಸ್ಸಿನ ಹಿಂದೆ ಹಲವರ ಪರಿಶ್ರಮವಿದೆ, ಚಂದ್ರಯಾನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಸ್ರೋ ವಿಜ್ಞಾನಿ ತೌಜಮ್ ರಘು ಸಿಂಗ್ ಎಂಬುವರು ಕೆಲಸದೊತ್ತಡದಿಂದ ಸುಮಾರು ೨ ವರ್ಷ ತಮ್ಮ ಮನೆಗೇ ಭೇಟಿ ನೀಡಿಲ್ಲ, ಚಂದ್ರಯಾನ ೩ ಯಶಸ್ವಿಯಾಗಬೇಕೆಂದು ಮನೆಗೆ ಹೋಗದೇ ಕೆಲಸದಲ್ಲಿ ಮುಳುಗಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ, ಚಂದ್ರಯಾನ ೩ ಯಶಸ್ವಿಯಾದ ಬಳಿಕ ಇವರು ಮಾತನಾಡಿ ನಾನು ಮನೆಯನ್ನು ಮಿಸ್ ಮಾಡಿಕೊಂಡೆ, ನನ್ನ ಪೋಷಕರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದೆ, ಕೆಲಸದ ಕಾರಣ ೨ ವರ್ಷ ಮನೆಗೆ ಹೋಗಿಲ್ಲ ಎಂದು ಅವರು ಹೇಳಿದ್ದಾರೆ, ನಾವು ಈಗ ಗಗನಯಾನ ಮೇಲೆ ಗಮನವನ್ನು ಇಟ್ಟಿದ್ದೇವೆ,
-
ದೇಶ19 ಗಂಟೆಗಳು agoKerala : ಸಿಜೆಐ ಸೂರ್ಯಕಾಂತ್ ರಾಜೀನಾಮೆಗೆ ಕೇರಳ ಕಾಂಗ್ರೆಸ್ ಆಗ್ರಹ: ವಿವಾದಾತ್ಮಕ ಪೋಸ್ಟ್ ಡಿಲೀಟ್, ಬಿಜೆಪಿ ಆಕ್ರೋಶ
-
ದೇಶ13 ಗಂಟೆಗಳು agoEPFO ಹೊಸ ಸೌಲಭ್ಯ 2026: UPI ಮೂಲಕ PF ಹಣ ವಿತ್ಡ್ರಾ
-
ದೇಶ18 ಗಂಟೆಗಳು agoDelhi: ದೆಹಲಿ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್: ಇಂಡಿಯಾ ಒಕ್ಕೂಟದ ಮೆರವಣಿಗೆಯಲ್ಲಿ ಏನಾಯಿತು?
-
ಬೆಂಗಳೂರು19 ಗಂಟೆಗಳು agoBengaluru Potholes : ಬೆಂಗಳೂರು ರಸ್ತೆ ಗುಂಡಿ ದುರಸ್ತಿಗೆ ಬ್ಲಿಂಕಿಟ್ ಮಾದರಿ: GBA ಹೊಸ ಚಿಂತನೆ
-
ರಾಜ್ಯ19 ಗಂಟೆಗಳು agoKarnataka: ಕ್ರಿಶ್ಚಿಯನ್ ಸಮುದಾಯಕ್ಕೆ ಗುಡ್ನ್ಯೂಸ್: ಸಾಲ, ಸಹಾಯಧನ ಅರ್ಜಿ ಅವಧಿ ವಿಸ್ತರಣೆ
-
ರಾಜ್ಯ19 ಗಂಟೆಗಳು agoKarnataka: ಕರ್ನಾಟಕ ಸರ್ಕಾರಿ ನೌಕರರಿಗೆ ಸೂಚನೆ: HRMS-2.0 e-SR ಕಡ್ಡಾಯ
-
ದೇಶ18 ಗಂಟೆಗಳು agoRahul Gandhi : ರಾಹುಲ್ ಗಾಂಧಿ ಅರ್ಜಿಯಲ್ಲಿ 14 ಲೋಪ: ₹220 ಕೋರ್ಟ್ ಶುಲ್ಕ ಕೊರತೆ!
-
ದೇಶ18 ಗಂಟೆಗಳು agoKarnataka ದಲ್ಲಿ 29 ಸಾವಿರ Form 7 ಅರ್ಜಿಗಳ ಮಾಹಿತಿ ಲಭ್ಯವಿಲ್ಲ: ಏನಿದು ವಿವಾದ?
