ನಿವೃತಿ ವದಂತಿ-ಊಹಾಪೋಹಗಳಿಗೆ ತೆರೆಯೆಳೆದ ರೋಹಿತ್ ಶರ್ಮಾ! |

ಕ್ರೀಡೆ

ನಿವೃತಿ ವದಂತಿ-ಊಹಾಪೋಹಗಳಿಗೆ ತೆರೆಯೆಳೆದ ರೋಹಿತ್ ಶರ್ಮಾ!

Published

on

ಆಸ್ಟ್ರೇಲಿಯಾ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು, ಆದರೀಗ ನಾನು ಟೆಸ್ಟ್ ಕ್ರಿಕೆಟ್‍ನಲ್ಲಿ ಮುಂದುವರೆಯಲಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ, ಹಿಟ್ ಮ್ಯಾನ್ ಹೇಳಿಕೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ,
ಮ್ಯಾಚ್ ವೇಳೆ ನೀಡಿದ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರೋಹಿತ್ ಶರ್ಮಾ ಈ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ, ನಾನು ಸಿಡ್ನಿ ಟೆಸ್ಟ್ ಪಂದ್ಯದಿಂದ ಮಾತ್ರ ಹೊರಗುಳಿದಿದ್ದೇನೆ, ನನ್ನ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿಲ್ಲ, ಈಗ ರನ್‍ಗಳು ಬರುತ್ತಿಲ್ಲ ನಿಜ, ಅದರೆ 5 ತಿಂಗಳು ಕಳೆದರೂ ಬರುವುದಿಲ್ಲ ಎಂಬುದನ್ನು ನಾನು ನಂಬಲ್ಲ, ನಾನಂತು ಕಠಿಣ ಅಭ್ಯಾಸ ಮಾಡುತ್ತೇನೆ ಈ ಮೂಲಕ ಫಾರ್ಮ್‍ಗೆ ಮರಳಿಲಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ ,
ಬಾರ್ಡ್‍ರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ, ಈ ಸರಣಿಯ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು 3,6,10,2 ಮತ್ತು 9 ರನ್ ಗಳ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ,
ಕಳಪೆ ಫಾರ್ಮ್ ಕಾರಣದಿಂದಾಗಿ ರೋಹಿತ್ ಶರ್ಮಾ ಅವರನ್ನು ಸಿಡ್ನಿ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ, ಅಲ್ಲದೆ ಈ ಸರಣಿಯೊಂದಿಗೆ ಹಿಟ್‍ಮ್ಯಾನ್ ಟೆಸ್ಟ್ ಕೆರಿಯರ್ ಕೂಡ ಕೊನೆಗೊಳ್ಳಲಿದೆ ಎಂದು ಎಲ್ಲೆಡೆ ಮಾತುಗಳು ಕೇಳಿಬಂದಿತ್ತು,

Trending

Exit mobile version