ನೀರು ಬಳಕೆಯ ಮೇಲೆ ಹಸಿರು ಸೆಸ್- ಶೀಘ್ರದಲ್ಲೇ ಏರಲಿದೆ ನೀರಿನ ಬಿಲ್! | Hosa Suddi

ಬೆಂಗಳೂರು

ನೀರು ಬಳಕೆಯ ಮೇಲೆ ಹಸಿರು ಸೆಸ್- ಶೀಘ್ರದಲ್ಲೇ ಏರಲಿದೆ ನೀರಿನ ಬಿಲ್!

Published

on

ಬೆಂಗಳೂರು: ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುವ ನದಿಗಳಿಂದ ಕುಡಿಯುವ ನೀರು ಪಡೆಯುತ್ತಿರುವ ನಗರ ಹಾಗೂ ಪಟ್ಟಣಗಳಲ್ಲಿ ಹಸಿರು ಸೆಸ್ ವಿಧಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಿದ್ದಪಡಿಸಲು ಮುಂದಾಗಿದೆ,
ಸ್ಧಳೀಯ ಜಲ ಮಂಡಳಿಯಿಂದ ನೀರಿನ ಸಂಪರ್ಕ ಪಡೆದವರಿಗೆ ನೀರಿನ ಬಿಲ್‍ನಲ್ಲಿ ಹಸಿರು ಸೆಸ್ ವಿಧಿಸುವ ಪ್ರಸ್ತಾವನೆ ಸಿದ್ದಪಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ,
ಪಶ್ಚಿಮಘಟ್ಟ ಅರಣ್ಯ ಪ್ರದೇಶದಿಂದಲೇ ತುಂಗಾ-ಭದ್ರಾ, ಕಾವೇರಿ, ಕೃಷ್ಣಾ, ಮಲಪ್ರಭ, ಘಟಪ್ರಭ, ಹೇಮಾವತಿ ಸೇರಿದಂತೆ 15 ಕ್ಕೂ ಹೆಚ್ಚಿನ ನದಿಗಳು ಉಗಮವಾಗುತ್ತವೆ, ಈ ನದಿಗಳ ನೀರನ್ನು ಬೆಂಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಮಂಗಳೂರು,ಚಿಕ್ಕಮಂಗಳೂರು, ಬೆಳಗಾಮಿ, ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ನಗರ ಮತ್ತು ಪಟ್ಟಣಗಳಿಗೆ ಉದ್ದೇಶಕ್ಕಾಗಿ ಪೂರೈಸಲಾಗುತ್ತಿದೆ,
ಅರಣ್ಯ ಇಲಾಖೆ ಪ್ರಸ್ತಾವನೆಗೆ ಹಲವು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ, ಈ ಹಣವನ್ನು ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟದ ಅರಣ್ಯ ಅಭಿವೃದ್ಧಿ ವೃಕ್ಷ ಸಂವರ್ಧನೆ ಮತ್ತಿತರ ಉದ್ದೇಶಕ್ಕೆ ಬಳಸುವುದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರ ಚಿಂತನೆಯಾಗಿದೆ,

Trending

Exit mobile version