ಬಿಜೆಪಿಯ ತಪ್ಪು ನೀತಿಗಳಿಂದ ಉಗ್ರರ ಉಪಟಳ ಹೆಚ್ಚಳ ರಾಹುಲ್ ಗಾಂಧಿ |

ದೇಶ

ಬಿಜೆಪಿಯ ತಪ್ಪು ನೀತಿಗಳಿಂದ ಉಗ್ರರ ಉಪಟಳ ಹೆಚ್ಚಳ ರಾಹುಲ್ ಗಾಂಧಿ

Published

on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮತ್ತೊಂದು ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ನಮ್ಮ ಯೋಧರು ಪ್ರಾಣ ಕೆಳದುಕೊಂಡಿದ್ದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ದುಃಖತಪ್ತ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಿಪಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ,
ಈ ನಿರಂತರ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಧಿತಿ ಹೇಗಿದೆ, ಎಂಬುದನ್ನು ತೋರಿಸುತ್ತಿದೆ, ಬಿಜೆಪಿಯ ತಪ್ಪು ನೀತಿಗಳೇ ಇಂಥದ್ದಕ್ಕೆಲ್ಲ ಹೊಣೆಯಾಗಿದೆ, ಇದರಿಂದ ದೇಶಭಕ್ತ ಯೋಧರು ಬಲಿಯಾಗುವ ಜೊತೆಗೆ ಅವರ ಕುಟುಂಬಗಳು ತೀವ್ರ ದುಃಖಕ್ಕೆ ಒಳಗಾಗಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ಪದೇ ಪದೇ ಭದ್ರತ ಲೋಪಗಳಿಗೆ ಅವಕಾಶವಾಗದಂತೆ ಕ್ರಮ ಕೈಗೊಂಡು ತಪ್ಪಿತಸ್ಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಈ ಮೂಲಕ ದೇಶಭಕ್ತ ಯೋಧರ ಸಾವಿಗೆ ಕಡಿವಾಣ ಹಾಕಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ,

Trending

Exit mobile version