ಬೆಂಗಳೂರಿನ ನಿವಾಸಿಗಳೇ ಎಚ್ಚರ- ಚಪ್ಪಲಿ ಸ್ಟ್ಯಾಂಡ್ ಮನೆಯ ಹೊರಗೆ ಇದ್ರೆ ದಂಡ ಫಿಕ್ಸ್.! |

ಬೆಂಗಳೂರು

ಬೆಂಗಳೂರಿನ ನಿವಾಸಿಗಳೇ ಎಚ್ಚರ- ಚಪ್ಪಲಿ ಸ್ಟ್ಯಾಂಡ್ ಮನೆಯ ಹೊರಗೆ ಇದ್ರೆ ದಂಡ ಫಿಕ್ಸ್.!

Published

on

ಬೆಂಗಳೂರು: ಮೇ ತಿಂಗಳಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಶೂ ರ್ಯಾಕ್ ಅನ್ನು ಎಂಟು ತಿಂಗಳ ಕಾಲ ಸಾಮಾನ್ಯ ಪ್ರದೇಶದಲ್ಲಿ ಇರಿಸಿದ್ದಕ್ಕಾಗಿ ಹೌಸಿಂಗ್ ಸೊಸೈಟಿಯು 24,000 ರೂ ದಂಡ ವಿಧಿಸಿತ್ತು, ಇದೀಗ ಇದರ ಬೆನ್ನಲ್ಲೇ ಜೆಪಿ ನಗರದಲ್ಲಿ ಚಪ್ಪಲಿ ಹೊರಗಿಟ್ಟಿದ್ದಕ್ಕೆ ದಂಡ ವಿಧಿಸಲಾಗಿದೆ,
ನಗರದ ಕನಕಪುರ ರಸ್ತೆಯ ಅಪಾರ್ಟ್‍ಮೆಂಟ್ ನ ನಿವಾಸಿಯೊಬ್ಬರಿಗೆ ಶೂ ಅನ್ನು ಮನೆಯ ಹೊರಗೆ ಇರಿಸಿದ್ದಕ್ಕೆ ನೂರು ರೂಪಾಯಿ ದಂಡ ವಿಧಿಸಲಾಗಿದೆ, ಇದೀಗ ಅಪಾರ್ಟ್ ಮೆಂಟ್ ಗಳ ಈ ಕಾನೂನನ್ನು ನಿವಾಸಿಗಳು ಖಂಡಿಸಿದ್ದು, ಹೌಸಿಂಗ್ ಸೊಸೈಟಿಯೊಂದಿಗೆ ಗಲಾಟೆಯಡುವ ಪರಿಸ್ಧಿತಿಗೆ ಬಂದಿದೆ.
ಅನೇಕ ಅಪಾರ್ಟ್‍ಮೆಂಟ್ ಗಳಲ್ಲಿ ವಿಶೇಷವಾಗಿ ……. ಸಾಂಕ್ರಾಮಿಕ ರೋಗದ ನಂತರ ಶೂ ರ್ಯಾಕ್ ಗಳನ್ನು ಹೊರೆಗೆ ಇಡುವುದರಿಂದ ಮನೆಯಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ, ಅದರೆ ಮನೆಯ ಬಾಗಿಲ ಮುಂದೆ ಚಪ್ಪಲಿ ಇಟ್ಟರೆ ಮನೆಯಲ್ಲಿ ನೆಗಟಿವ್ ವೈಬ್ ಜೊತೆ ಸಂಸ್ಕøತಿ ಹಾಳಾಗುತ್ತದೆ ಎಂಬ ನಂಬಿಕೆಯ ಹಿನ್ನಲೆ ಅಪಾರ್ಟ್ ಮೆಂಟ್ ನಲ್ಲಿ ಹೌಸಿಂಗ್ ಸೊಸೈಟಿಗಳು ನಿವಾಸಿಗಳಿಗೆ ದಂಡದ ಬರೆ ಎಳೆಯುತ್ತಿದ್ದಾರೆ,

Trending

Exit mobile version