ಬೆಲೆಯೇರಿಕೆಯೊಂದಿಗೆ ಹೆಚ್ಚುವರಿ ಹಾಲಿಗೂ ಕತ್ತರಿ-ಗ್ರಾಹಕರ ಹಣವೂ ಹಾಳು, ತಲೆಯೂ ಬೋಳೂ! | Hosa Suddi

ರಾಜ್ಯ

ಬೆಲೆಯೇರಿಕೆಯೊಂದಿಗೆ ಹೆಚ್ಚುವರಿ ಹಾಲಿಗೂ ಕತ್ತರಿ-ಗ್ರಾಹಕರ ಹಣವೂ ಹಾಳು, ತಲೆಯೂ ಬೋಳೂ!

Published

on

ಬೆಂಗಳೂರು: ಹಾಲಿನ ದರ ಏರಿಕೆ ಭೀತಿ ನಡುವೆ ಕೆಎಂಎಫ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ, ಇಷ್ಟು ದಿನ ಪ್ರತಿ ಲೀಟರ್ ಹಾಗೂ ಅರ್ಧ ಲೀಟರ್ ಹಾಲಿನಲ್ಲಿ ಬರುತ್ತಿದ್ದ ಹೆಚ್ಚುವರಿ ಹಾಲನ್ನು ಕೂಡಾ ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ,
ಹೌದು ಇತ್ತೀಚೆಗಷ್ಟೇ ಸರ್ಕಾರ ಹಾಲಿನ ದರ ಏರಿಕೆಯ ಸುಳಿವು ನೀಡಿತ್ತು, ಕಳೆದ ಕೆಲ ತಿಂಗಳುಗಳಿಂದ ಕೆಎಂಎಫ್ ಹೆಚ್ಚು ಹಾಲಿನ ಉತ್ಪಾದನೆ ಹಿನ್ನೆಲೆ ಹಾಲಿನ ಪ್ಯಾಕೆಟ್‍ನಲ್ಲಿ ಹೆಚ್ಚುವರಿ ಹಾಲನ್ನು ನೀಡುತ್ತಿತ್ತು, ಇದೀಗ ಕೆಎಂಎಫ್ ಹಾಲಿನ ಪ್ಯಾಕೆಟ್‍ನಲ್ಲಿ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನು ಕಡಿತಗೊಳಿಸುವ ಚಿಂತನೆ ನಡೆಸಿದ್ದು ಮಾತ್ರವಲ್ಲದೇ ದರ ಏರಿಕೆ ಮಾಡಲು ಮುಂದಾಗಿದೆ,
ಸದ್ಯ ಬೇಸಿಗೆ ಕಾರಣ ಹಿಂದ ಉತ್ಪಾದನೆ ಆಗುತ್ತಿದ್ದಷ್ಟೇ ಪ್ರಮಾಣದಲ್ಲಿ ಈಗ ಹಾಲು ಉತ್ಪಾದನೆ ಕಷ್ಟವಾಗಲಿದ್ದು, ಸುಮಾರು 10% ರಿಂದ 15% ನಷ್ಟು ಹಾಲಿನ ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಇದೆ, ಇದರಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲನ್ನು ಕಡಿತ ಮಾಡುವ ಸಾಧ್ಯತೆ ಇದೆ, ಅದರೆ ಹಾಲು ಕಡಿತ ಆದರೂ ಹೆಚ್ಚುವರಿ ಹಾಲಿಗೆ ಪಡೆಯುತ್ತಿದ್ದ ಹೆಚ್ಚುವರಿ ಹಣ ಕೂಡಾ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ,

Trending

Exit mobile version