Connect with us

ಕ್ರೀಡೆ

ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿಬಿದ್ದ ಸ್ಟಾರ್​ ಬ್ಯಾಟರ್​​.. ಪಂತ್​ ವಿರುದ್ಧ ಕೇಳಿ ಬಂದ ಆರೋಪವೇನು?

Published

on

T20 ವಿಶ್ವಕಪ್​​ ಚಾಂಪಿಯನ್​​​​ ಮತ್ತು ಟೀಮ್​ ಇಂಡಿಯಾದ ಸ್ಟಾರ್​​ ವಿಕೆಟ್​ ಕೀಪರ್​ ಬ್ಯಾಟರ್​ ರಿಷಭ್​ ಪಂತ್​​​ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ವಯಸ್ಸಿನ ವಿಚಾರದಲ್ಲಿ ಪಂತ್​ ಬಿಸಿಸಿಐಗೆ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಸಿಸಿಐಗೆ ಮೋಸ ಮಾಡಿದ್ರಾ ಪಂತ್​​..?

ಹೌದು, ಬಿಸಿಸಿಐಗೆ ಪಂತ್​ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಬಿಸಿಸಿಐ ಮುಂದೆ ಪಂತ್​ ತನಗೆ ಕೇವಲ 26 ವರ್ಷ ಎಂದು ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಪಂತ್​ ನನಗಿಂತಲೂ 3 ವರ್ಷ ಸೀನಿಯರ್​​. ನನಗೆ 27 ವರ್ಷ, 30 ವರ್ಷ ಇರಬೇಕಾದ ಪಂತ್​ಗೆ 26 ವಯಸ್ಸು ಆಗಿರಲು ಹೇಗೆ ಸಾಧ್ಯ? ಎಂದು ನೆಟ್ಟಿಗರು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪಂತ್​ ಬಿಸಿಸಿಐಗೆ ಮೋಸ ಮಾಡಿದ್ದು, ಈ ವಿಚಾರ ತನಿಖೆ ಆಗಲೇಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.

ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ವಿದಾಯ ಹೇಳಿದ್ದಾರೆ. ರಾಹುಲ್​ ದ್ರಾವಿಡ್​ ನಿರ್ಗಮನದ ಬಳಿಕ ಗೌತಮ್​ ಗಂಭೀರ್​​ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿ ಅನೌನ್ಸ್​ ಆಗಿದ್ದಾರೆ.

ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಮುಗಿದಿದ್ದು, ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಗೆ ಪಂತ್​ ಆಯ್ಕೆ ಆಗೋದು ಡೌಟ್​​ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಪಂತ್​​​ ಟಿ20 ವಿಶ್ವಕಪ್​ನಲ್ಲಿ ನೀಡಿದ ಕಳಪೆ ಪ್ರದರ್ಶನ.

2024ರ ಟಿ20 ವಿಶ್ವಕಪ್​ನಲ್ಲಿ ಒಂದೆರಡು ಪಂದ್ಯ ಹೊರತುಪಡಿಸಿ ಪಂತ್​​ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಅಷ್ಟೇ ಅಲ್ಲ ಇದುವರೆಗೂ ಪಂತ್​ ಆಡಿರೋ 74 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 1158 ರನ್​ ಕಲೆ ಹಾಕಿದ್ದಾರೆ. ಆವರೇಜ್​​ ಕೇವಲ 22 ಇದ್ದು, ಸ್ಟ್ರೈಕ್​ ರೇಟ್​ ಕೂಡ 127 ಮಾತ್ರ ಇದೆ. ಹಾಗಾಗಿ ಪಂತ್​ ಜಾಗಕ್ಕೆ ಸಂಜು ಸ್ಯಾಮ್ಸನ್​ ಅವರನ್ನು ಗಂಭೀರ್​ ತಂದು ಕೂರಿಸೋ ಸಾಧ್ಯತೆ ಇದೆ. ಇದರ ಮಧ್ಯೆ ಪಂತ್​ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ.

ಕ್ರೀಡೆ

BCCI Election 2026: ಸೆಪ್ಟೆಂಬರ್ 18ಕ್ಕೆ ಬಿಸಿಸಿಐ ಚುನಾವಣೆ; AGMನಲ್ಲಿ ಮಹತ್ವದ ನಿರ್ಧಾರಗಳು!

Published

on

ಮುಂಬಯಿ, ಆ.26: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೆಪ್ಟೆಂಬರ್ 18ರಂದು ಮುಂಬೈನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಚುನಾವಣೆ ಹಾಗೂ ವಾರ್ಷಿಕ ಸಾಮಾನ್ಯ ಸಭೆ (AGM) ನಡೆಸಲು ಸಿದ್ಧವಾಗಿದೆ. ಸಭೆಯಲ್ಲಿ ಐಪಿಎಲ್ ಆಡಳಿತ ಮಂಡಳಿಗೆ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ.

ಬಿಸಿಸಿಐ ಸದಸ್ಯರಿಗೆ ಕಳುಹಿಸಿರುವ ಅಧಿಸೂಚನೆಯಲ್ಲಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರಿಸಬೇಕಾದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪ್ರತಿನಿಧಿಗಳ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.

ಸೆಪ್ಟೆಂಬರ್ 1ಕ್ಕೆ ಕರಡು ಮತದಾರರ ಪಟ್ಟಿ

ಚುನಾವಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸೆಪ್ಟೆಂಬರ್ 9 ಮತ್ತು 10ರಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ನಾಮಪತ್ರ ಸಲ್ಲಿಸಬಹುದು.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಲಾಗುತ್ತದೆ. ಬಳಿಕ ಸೆಪ್ಟೆಂಬರ್ 18ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶವನ್ನೂ ಪ್ರಕಟಿಸುವ ಸಾಧ್ಯತೆಯಿದೆ.

ಐಪಿಎಲ್ ಆಡಳಿತ ಮಂಡಳಿಗೆ ಇಬ್ಬರ ಆಯ್ಕೆ

ಮುಂಬರುವ ಬಿಸಿಸಿಐ ಸಭೆಯಲ್ಲಿ ಐಪಿಎಲ್ ಆಡಳಿತ ಮಂಡಳಿಗೆ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಪ್ರಮುಖ ವಿಚಾರವಾಗಿದೆ. ಇದರ ಜೊತೆಗೆ ಭಾರತೀಯ ಕ್ರಿಕೆಟಿಗರ ಸಂಘದಿಂದ ಒಬ್ಬ ಪ್ರತಿನಿಧಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸೇರಿಸಿಕೊಳ್ಳುವ ಪ್ರಸ್ತಾಪವೂ ಇದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ **(ICC)**ಯಲ್ಲಿ ಬಿಸಿಸಿಐ ಪ್ರತಿನಿಧಿಗಳ ನೇಮಕಾತಿಯೂ ಸಭೆಯ ಕಾರ್ಯಸೂಚಿಯಲ್ಲಿ ಸೇರಿದೆ.

ಅಂಡಮಾನ್ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆ?

ಈ ಬಾರಿಯ AGMನಲ್ಲಿ ಮತ್ತೊಂದು ಪ್ರಮುಖ ಪ್ರಸ್ತಾಪವೂ ಚರ್ಚೆಗೆ ಬರಲಿದೆ. ಅಂಡಮಾನ್ ಮತ್ತು ನಿಕೋಬಾರ್ ಕ್ರಿಕೆಟ್ ಅಸೋಸಿಯೇಷನ್‌ಗೆ ಸಹಾಯಕ ಸದಸ್ಯತ್ವ ನೀಡುವ ಕುರಿತು ಬಿಸಿಸಿಐ ಪರಿಗಣಿಸಲಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿರುವ ಈ ಸಂಸ್ಥೆ ಪ್ರಸ್ತುತ ಬಿಸಿಸಿಐ ಜೊತೆ ಅಧಿಕೃತವಾಗಿ ಸಂಯೋಜಿತವಾಗಿಲ್ಲ. ಸಹಾಯಕ ಸದಸ್ಯತ್ವ ದೊರೆತರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಹೊಸ ಅವಕಾಶಗಳು ತೆರೆದುಕೊಳ್ಳಬಹುದು.

ದ್ವೀಪಗಳಲ್ಲಿ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವು ದೇಶದ ಮುಖ್ಯ ಭೂಭಾಗದಿಂದ ದೂರದಲ್ಲಿದ್ದು, 800ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದೆ. ಇಲ್ಲಿ ಕ್ರಿಕೆಟ್‌ನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬಿಸಿಸಿಐ ಮುಂದಾಗುವ ಸಾಧ್ಯತೆಯಿದೆ.

ಸದಸ್ಯತ್ವದ ಪ್ರಸ್ತಾಪಕ್ಕೆ ಅನುಮೋದನೆ ದೊರೆತರೆ ದ್ವೀಪಗಳಲ್ಲಿ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ಪಂದ್ಯಗಳನ್ನು ಆಯೋಜಿಸುವುದು ಹಾಗೂ ಸ್ಥಳೀಯ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು.

ಆದರೆ ಅಂಡಮಾನ್ ಮತ್ತು ನಿಕೋಬಾರ್ ತಂಡಕ್ಕೆ ಭಾರತದ ದೇಶೀಯ ಕ್ರಿಕೆಟ್ ಸ್ಪರ್ಧೆಗಳಲ್ಲಿ ತಕ್ಷಣವೇ ಪ್ರವೇಶ ದೊರೆಯುವ ಸಾಧ್ಯತೆ ಕಡಿಮೆ. ಮೊದಲು ಸ್ಥಳೀಯ ಆಟಗಾರರು, ತರಬೇತಿ ವ್ಯವಸ್ಥೆ ಹಾಗೂ ಕ್ರಿಕೆಟ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ ಬಳಿಕ ದೇಶೀಯ ಕ್ರಿಕೆಟ್‌ಗಾಗಿ ತಂಡವನ್ನು ಪರಿಗಣಿಸುವ ಸಾಧ್ಯತೆಯಿದೆ.

ಹೀಗಾಗಿ ಸೆಪ್ಟೆಂಬರ್ 18ರ BCCI AGM ಮತ್ತು ಚುನಾವಣೆ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಹಲವು ಮಹತ್ವದ ನಿರ್ಧಾರಗಳಿಗೆ ವೇದಿಕೆಯಾಗುವ ನಿರೀಕ್ಷೆಯಿದೆ.

Continue Reading

ಕ್ರೀಡೆ

FIBA U18 Asia Cup 2026: ಡಾ. ಕೆ. ಗೋವಿಂದರಾಜ್ ಅವರಿಂದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ಪ್ರದಾನ, ಚೀನಾಗೆ 89-79 ಸೋಲು

Published

on

ಅಹಮದಾಬಾದ್: 2026ರ ಎಫ್‌ಐಬಿಎ ಅಂಡರ್-18 ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಚೀನಾವನ್ನು 89-79 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆಗಸ್ಟ್ 23ರಂದು ಅಹಮದಾಬಾದ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಉಭಯ ತಂಡಗಳು ಅತ್ಯುತ್ತಮ ಪೈಪೋಟಿ ನೀಡಿದವು.

ಪಂದ್ಯದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಕೆ. ಗೋವಿಂದರಾಜ್, ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ, ವಿಜೇತ ಆಸ್ಟ್ರೇಲಿಯಾ ಅಂಡರ್-18 ಪುರುಷರ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು. ಅವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವು ಟೂರ್ನಿಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿತ್ತು.

ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಚೀನಾ ತಂಡವೂ ತೀವ್ರ ಪೈಪೋಟಿ ನೀಡಿದರೂ, ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ತನ್ನ ಮುನ್ನಡೆಯನ್ನು ಕಾಯ್ದುಕೊಂಡು 89-79 ಅಂತರದಲ್ಲಿ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ಪರ ಯಾಹ್ಯಾ ಬಸಾರನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಟೂರ್ನಿಯ ಅತ್ಯುತ್ತಮ ಆಟಗಾರ ಎಂವಿಪಿ ಪ್ರಶಸ್ತಿಗೆ ಭಾಜನರಾದರು. ಅವರ ಪರಿಣಾಮಕಾರಿ ಆಟ ಆಸ್ಟ್ರೇಲಿಯಾ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಫೈನಲ್ ಪಂದ್ಯವನ್ನು ವೀಕ್ಷಿಸಿದ ಡಾ. ಕೆ. ಗೋವಿಂದರಾಜ್ ಅವರು ಫಿಬಾ ಏಷ್ಯಾ ಪರವಾಗಿ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಗುಜರಾತ್ ಸರ್ಕಾರದ ಕೃಷಿ ಸಚಿವ ಜಿತು ವಘಾಣಿ ಅವರಿಗೆ ಧನ್ಯವಾದ ಸಲ್ಲಿಸಿದರು. ಅಹಮದಾಬಾದ್‌ನಲ್ಲಿ ನಡೆದ ಈ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಟೂರ್ನಿ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಿ ಪರಿಣಮಿಸಿತು.

ಆಸ್ಟ್ರೇಲಿಯಾ ಹಾಗೂ ಚೀನಾ ತಂಡಗಳ ಆಟಗಾರರು ಫೈನಲ್‌ನಲ್ಲಿ ತೋರಿದ ಸ್ಪರ್ಧಾತ್ಮಕ ಮನೋಭಾವವು ಏಷ್ಯಾದ ಬಾಸ್ಕೆಟ್‌ಬಾಲ್‌ನ ಭವಿಷ್ಯದ ಬೆಳವಣಿಗೆಗೆ ಉತ್ತಮ ಸಂಕೇತವಾಗಿದೆ.

Continue Reading

ಕ್ರೀಡೆ

BrYdon Carse: ನೈಟ್‌ಕ್ಲಬ್‌ ಹೊರಗೆ ಇಂಗ್ಲೆಂಡ್ ಸ್ಟಾರ್ ಬೌಲರ್‌ಗೆ ಕೈಕೋಳ; ECB ತನಿಖೆ ಆರಂಭ!

Published

on

ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಬ್ರೈಡನ್ ಕಾರ್ಸ್ (Brydon Carse) ವಿವಾದಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಡರ್ಬಿಯ ನೈಟ್‌ಕ್ಲಬ್‌ವೊಂದರ ಹೊರಗೆ ಪೊಲೀಸರು ಅವರನ್ನು ಕೈಕೋಳ ಹಾಕಿ ಕರೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತನಿಖೆ ಆರಂಭಿಸಿದೆ.

ಆಗಸ್ಟ್ 27ರಂದು ಲಾರ್ಡ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಸ್ತುತ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಕಾರ್ಸ್ ಅವರನ್ನು ಇಂಗ್ಲೆಂಡ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಮೊದಲ ಟೆಸ್ಟ್‌ನ ಆಡುವ ಹನ್ನೊಂದರಲ್ಲಿ ಅವರಿಗೆ ಅವಕಾಶ ನೀಡಲಾಗಿರಲಿಲ್ಲ.

ಮೊದಲ ಟೆಸ್ಟ್ ಬಳಿಕ ಕಾರ್ಸ್ ಅವರಿಗೆ ಡರ್ಹಾಮ್ ಪರ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಆಡುವ ಅವಕಾಶ ನೀಡಲಾಗಿತ್ತು. ಡರ್ಹಾಮ್ ತಂಡವು ಡರ್ಬಿಶೈರ್ ವಿರುದ್ಧದ ಪಂದ್ಯವನ್ನು ಕೇವಲ ಮೂರು ದಿನಗಳಲ್ಲಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಕಾರ್ಸ್ 26 ರನ್ ಗಳಿಸುವುದರ ಜೊತೆಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದರು.

ಪಂದ್ಯದ ಬಳಿಕ ನೈಟ್‌ಕ್ಲಬ್‌ಗೆ ತೆರಳಿದ್ದ ಕಾರ್ಸ್

ಡರ್ಬಿಶೈರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಬ್ರೈಡನ್ ಕಾರ್ಸ್ ತಮ್ಮ ತಂಡದ ಸಹ ಆಟಗಾರರೊಂದಿಗೆ ಡರ್ಬಿಯ ನೈಟ್‌ಕ್ಲಬ್‌ಗೆ ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ನೈಟ್‌ಕ್ಲಬ್‌ನ ಹೊರಗೆ ಅವರನ್ನು ಪೊಲೀಸರು ಕೈಕೋಳ ಹಾಕಿ ಕರೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಿಡಿಯೋ ವೈರಲ್ ಆದ ಬಳಿಕ ಪ್ರಕರಣದ ಕುರಿತು ಕ್ರಿಕೆಟ್ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಘಟನೆಗೆ ಸಂಬಂಧಿಸಿದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಕಾರ್ಸ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂಬುದರ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.

ECB ತನಿಖೆ ಆರಂಭ

ವಿವಾದದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಕರಣದ ಕುರಿತು ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್‌ಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆ ಇಂಗ್ಲೆಂಡ್ ತಂಡಕ್ಕೆ ಮುಜುಗರ ತಂದಿದೆ.

ಕಾರ್ಸ್ ಅವರು ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆಯೇ ಅಥವಾ ಘಟನೆಯ ತನಿಖೆಯ ಹಿನ್ನೆಲೆಯಲ್ಲಿ ಅವರ ಆಯ್ಕೆಯ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಈ ಕುರಿತು ECBಯ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

Continue Reading

Trending