ಮತ್ತೆ ಲಾಕ್‍ಡೌನ್ ಅವಶ್ಯಕತೆ? ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು? |

ಆರೋಗ್ಯ

ಮತ್ತೆ ಲಾಕ್‍ಡೌನ್ ಅವಶ್ಯಕತೆ? ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

Published

on

ಬೆಂಗಳೂರು: ಹೆಚ್‍ಎಂಪಿವಿ ಸೋಂಕಿಗೆ ತುತ್ತಾಗಿದ್ದ ಇಬ್ಬರೂ ಮಕ್ಕಳು ಗುಣಮುಖರಾಗಿದ್ದು ಎಲ್ಲರೂ ಮಾಸ್ಕ್ ಹಾಕಬೇಕು, ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದರು,
ರಾಜಧಾನಿಯಲ್ಲಿ ಹೆಚ್‍ಎಂಪಿ ಸೋಂಕು ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು 8 ತಿಂಗಳ ಮಗುವನ್ನು ನಾಳೆ ಡಿಸ್ಚಾರ್ಜ್ ಮಾಡಲಾಗುತ್ತದೆ, ಇನ್ನು ಈ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಈ ವೈರಸ್‍ನಿಂದ ಜೀವಕ್ಕೆ ಅಪಾಯವಿಲ್ಲ ಎಂದರು
ಚೀನಾದಲ್ಲಿ ಉದ್ಭವಿಸಿರುವ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ, ಈ ವೈರಸ್ ಹಾನಿಕಾರಕ ಎಂದು ಹೇಳಲು ಸಾಧ್ಯವಿಲ್ಲ, ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದೃಢಪಟ್ಟಿರುವ ಸಂಗತಿ ಸಾಮಾನ್ಯವಾಗಿ ಭಯ ಹುಟ್ಟಿಸಿದೆ, ಅದರೆ ಇದು ಮೊದಲ ಪ್ರಕರಣ ಅಲ್ಲ, ಈ ವೈರಸ್ ಬೇರೆ ಬೇರೆ ಸಮಸ್ಯೆಗಳು ಸೇರಿಕೊಂಡು ಬರುತ್ತದೆ ಎಂದು ವಿವರಿಸಿದರು,,

Trending

Exit mobile version