ಮಾನ…ಮತ..ಅಧಿಕಾರ ಎಲ್ಲಾ ಹೋಯ್ತು ಸೋತುಹೋದ ಪ್ರಜ್ವಲ್! | Hosa Suddi

ಚುನಾವಣೆ

ಮಾನ…ಮತ..ಅಧಿಕಾರ ಎಲ್ಲಾ ಹೋಯ್ತು ಸೋತುಹೋದ ಪ್ರಜ್ವಲ್!

Published

on

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ, ಈ ಮೂಲಕ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾಗಿರುವ ಹಾಲಿ ಸಂಸದ ಪ್ರಜ್ವಲ್‍ಗೆ ಮತ್ತೊಂದು ಆಘಾತವಾಗಿದೆ,
ಪ್ರಜ್ವಲ್ ವಿರುದ್ಧ 42261 ಮತಗಳ ಅಂತರದಿಂದ ಶ್ರೇಯಸ್ ಗೆಲುವು ದಾಖಲಿಸಿದ್ದಾರೆ, ಶ್ರೇಯಸ್ 632090 ಮತಗಳನ್ನು ಪಡೆದರೆ, ಪ್ರಜ್ವಲ್ 589829 ಮತಗಳನ್ನು ಪಡೆದಿದ್ದಾರೆ,
ಹಾಸನ ಲೋಕಸಭಾ ಕ್ಷೇತ್ರ ಮೊಮ್ಮಕ್ಕಳ ಕದನಕ್ಕೂ ಸಾಕ್ಷಿಯಾಗಿತ್ತು, 1999ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಸೋಲಿಸಿದ್ದ ಮಾಜಿ ಸಂಸದ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಈಗ ಗೆಲವು ಸಾಧಿಸಿದ್ದಾರೆ,

Trending

Exit mobile version