Connect with us

ದೇಶ

ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್‌!

Published

on

ಸ್ಕಾಚ್‌ ವಿಸ್ಕಿ ಅಂದರೆ ಕುಡುಕರ ತಲೆ ಧಿಮ್‌ ಎನ್ನುತ್ತದೆ. ಆದರೆ, ಪ್ರಪಂಚದಲ್ಲಿ ಕೆಲವೊಂದು ಸ್ಕಾಚ್‌ ವಿಸ್ಕಿಗಳಿದ್ದು, ಅವುಗಳ ಹೆಸರನ್ನು ಉಚ್ಛಾರಣೆ ಮಾಡೋದೆ ಕಷ್ಟ. ಈ ಲೇಖನದಲ್ಲಿ ಪ್ರಪಂಚದ ಐದು ಸ್ಕಾಚ್‌ ವಿಸ್ಕಿಗಳು ಸುವಾಸನೆಯ ಕಾರಣಕ್ಕಾಗಿ ಮಾತ್ರವಲ್ಲ ತನ್ನ ಹೆಸರಿನಲ್ಲೂ ಹೊಸ ಸಾಹಸ ಮಾಡುತ್ತಿದೆ. ಇವುಗಳು ಸ್ಕಾಟ್ಲೆಂಡ್‌ನ ವಿಸ್ಕಿ ಪರಂಪರೆಯನ್ನು ಮಾತ್ರವಲ್ಲದೆ, ಅಲ್ಲಿನ ಶ್ರೀಮಂತ ಭಾಷಾ ಪರಂಪರೆಯನ್ನೂ ನೋಡಬಹುದಾಗಿದೆ.

Bruichladdich

ಬ್ರೂಚ್ಲಾಡಿಚ್ (Bruichladdich) ಅಂತಾ ನೀವು ಇದನ್ನು ಓದಬಹುದಾದರೂ ಇದರ ಉಚ್ಚಾರಣೆ ಬ್ರೂಕ್ಲಾಡೀ (bru-kla-dee). ಇಸ್ಲೇಯ ಲೊಚ್ ಇಂಡಾಲ್‌ನ ಪಶ್ಚಿಮ ತೀರದಲ್ಲಿ ರೆಮಿ ಕೊಯಿಂಟ್ರೂ-ಮಾಲೀಕತ್ವದ ಡಿಸ್ಟಿಲರಿಯ ಸ್ಕಾಚ್‌ ವಿಸ್ಕಿ ಇದು. 1881ರಲ್ಲಿ ಆರಂಭವಾದ ಈ ಡಿಸ್ಟಲರಿಯ ಬ್ರೂಕ್ಲಾಡೀ  ಸೌಮ್ಯವಾದ, ಹೂವಿನ ಮತ್ತು ಜೇನುತುಪ್ಪದ ವಿಸ್ಕಿಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ಬಾಟಲ್‌ನ ಬೆಲೆ 40 ಸಾವಿರ ರೂಪಾಯಿ. ಫೆಬ್ರವರಿ 2024 ರಲ್ಲಿ ಹೊಸ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಪ್ರಾರಂಭಿಸುವುದರೊಂದಿಗೆ ಬ್ರೂಕ್ಲಾಡೀ 21 ವರ್ಷದ ಹಳೆಯ ಬಾಟಲ್‌ಅನ್ನು ನವೀಕರಿಸಿದ್ದಾರೆ. ಬ್ರೂಕ್ಲಾಡೀ ಥರ್ಟಿ ಅನ್ನು ಸಹ ಅನಾವರಣಗೊಳಿಸಲಾಯಿತು.

Bunnahabhain

ಬುನ್ನಾಹ್‌ಬೈನ್‌ ಎಂದು ನಾವಿದನ್ನು ಓದಬಹುದಾದರೂ, ಇದರ ಉಚ್ಛಾರಣೆ, ಬುನಾಹವ್‌ಎನ್‌ (Bu-Nah-Hav-En). ಒಂದು ಬಾಟಲ್‌ನ ಬೆಲೆ 2.60 ಲಕ್ಷ ರೂಪಾಯಿ. ಇಸ್ಲೇ ಡಿಸ್ಟಿಲರಿ ದ್ವೀಪದ ಈಶಾನ್ಯ ಕರಾವಳಿಯಲ್ಲಿದೆ. ಬ್ರೂಕ್ಲಾಡೀನಂತೆ, ಇದನ್ನು 1881 ರಲ್ಲಿ ವಿಕ್ಟೋರಿಯನ್ ವಿಸ್ಕಿಯ ಕ್ರಾಂತಿಯ ಮಧ್ಯೆ ಸ್ಥಾಪಿಸಲಾಯಿತು. ಡಿಸ್ಟಿಲರಿಯು ಈ ಹಿಂದೆ ಪೀಟೆಡ್ ಸಿಂಗಲ್ ಮಾಲ್ಟ್‌ಗಳನ್ನು ಉತ್ಪಾದನೆ ಮಾಡುತ್ತಿತ್ತು. 1960 ರ ದಶಕದಿಂದ ಬುನಾಹವ್‌ಎನ್‌ ಪ್ರಧಾನವಾಗಿ ಶೆರ್ರಿ ಪೀಪಾಯಿಗಳಲ್ಲಿ ಏಜಡ್‌ ಪೀಟ್ ಮಾಡದ ವಿಸ್ಕಿಯನ್ನು ಉತ್ಪಾದಿಸುತ್ತಿದೆ. ಇಲ್ಲಿಯವರೆಗೂ ಕೇವಲ 594 ಬಾಟಲ್‌ಗಳನ್ನು ಮಾತ್ರವೇ ಮಾರಾಟ ಮಾಡಲಾಗಿದೆ.

Glen Garioch

ಗ್ಲೆನ್‌ ಗ್ಯಾರಿಯೋಚ್ ಎಂದು ನಾವು ಹೇಳಬಹುದಾದರೂ, ಇದರ ಸರಿಯಾದ ಉಚ್ಛಾರಣೆ ಗ್ಲೆನ್‌ ಗೀರೇ (Glen-Geery). ಡಿಸ್ಟಿಲರಿಯು ತನ್ನ ಹೆಸರನ್ನು ಗೀರೇಯ ಹತ್ತಿರದ ಕಣಿವೆಯಿಂದ ಪಡೆದುಕೊಂಡಿದೆ, ಇದು ಸ್ಕಾಟ್ಲೆಂಡ್‌ನ ಅತ್ಯುತ್ತಮ ಬಾರ್ಲಿ-ಬೆಳೆಯುವ ಪ್ರದೇಶಗಳಲ್ಲಿ ಒಂದಾಗಿದೆ. ಸ್ಕಾಟ್ಲೆಂಡ್‌ನ ಅನೇಕ ಡಿಸ್ಟಿಲರಿಗಳು ‘ಗ್ಲೆನ್’ ಪೂರ್ವಪ್ರತ್ಯಯವನ್ನು ಹೊಂದಿರುತ್ತವೆ. ಸ್ಕಾಟ್ಸ್‌ ಗೇಲಿಕ್‌ನಲ್ಲಿ ‘ಗ್ಲೆನ್’ ಎಂದರೆ ‘ಕಣಿವೆ’ ಎಂದರ್ಥವಾಗಿದೆ. ಸ್ಕಾಟಿಷ್ ಹೈಲ್ಯಾಂಡ್ಸ್‌ನ ಓಲ್ಡ್‌ಮೆಲ್ಡ್ರಮ್‌ನಲ್ಲಿರುವ ಗ್ಲೆನ್‌ ಗೀರೇ ಅನ್ನು 1797 ರಲ್ಲಿ ಥಾಮಸ್ ಸಿಂಪ್ಸನ್ ಸ್ಥಾಪಿಸಿದರು. ಸ್ಕಾಟ್ಲೆಂಡ್‌ನ ಅತ್ಯಂತ ಹಳೆಯ ಕಾರ್ಯಾಚರಣೆಯ ಡಿಸ್ಟಿಲರಿಗಳಲ್ಲಿ ಒಂದಾಗಿದೆ. ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 2.87 ಲಕ್ಷ ರೂಪಾಯಿ.

Auchentoshan

ಔಚೆಂಟೋಶನ್ ಎಂದು ನಾವಿದನ್ನು ಕರೆಯಬಹುದಾದರೂ ಇದರ ಉಚ್ಛಾರಣೆ ‘ಔಕುಂತೋಷ್‌ಉನ್‌'(Ock-Un-Tosh-Un). ಇದು ಲೋಲ್ಯಾಂಡ್ ಡಿಸ್ಟಿಲರಿಯಾಗಿದ್ದು, ಇದು ಗ್ಲ್ಯಾಸ್ಗೋದ ಉತ್ತರಕ್ಕೆ ಕ್ಲೈಡ್ ನದಿಯ ಮುಖಭಾಗದಲ್ಲಿದೆ. ‘ಉಚ್ಛಾರ ಮಾಡೋಕೆ ಕಷ್ಟ, ಕುಡಿಯಲು ಸುಲಭ..’ ಸಂತಾ ಸ್ವತಃ ಈ ಕಂಪನಿಯೇ ಹೇಳಿಕೊಳ್ಳುತ್ತದೆ.  ಡಿಸ್ಟಿಲರಿಯು ಸ್ಕಾಟಿಷ್ ಗೇಲಿಕ್ ನುಡಿಗಟ್ಟು ‘ಅಚಾದ್ ಆನ್ ಓಸಿನ್’ ಅಂದರೆ ಇಂಗ್ಲಿಷ್‌ನಲ್ಲಿ ‘ಸ್ಥಳದ ಮೂಲೆ’ಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.1817 ರಲ್ಲಿ ಜಾನ್ ಬುಲೋಚ್ ಸ್ಥಾಪಿಸಿದ ಔಕುಂತೋಷ್‌ಉನ್‌, ಸ್ಕಾಟ್ಲೆಂಡ್‌ನಲ್ಲಿ ಟ್ರಿಪಲ್ ಡಿಸ್ಟಿಲೇಷನ್ ಅನ್ನು ಪ್ರತ್ಯೇಕವಾಗಿ ಬಳಸುವ ಏಕೈಕ ವಿಸ್ಕಿ ಡಿಸ್ಟಿಲರಿ ಎಂದು ಪ್ರಸಿದ್ಧವಾಗಿದೆ. ಎಲ್ಲಾ ಉತ್ಪಾದನೆಯನ್ನು ಸಿಂಗಲ್‌ ಮಾಲ್ಟ್‌ಗಳಿಗೆ ಬಳಸಲಾಗುತ್ತದೆ. ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 55 ಸಾವಿರ ರೂಪಾಯಿ.

Caol Ila

ಕಾಲ್ ಇಲಾ ಎಂದು ನೀವಿದನ್ನೂ ಉಚ್ಛಾರ ಮಾಡಿದರೂ, ಇದರ ಸರಿಯಾದ ಉಚ್ಛಾರಣೆ ಕುಲ್ ಇಲಾಹ್ (Cull-Ee-Lah). ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 59 ಸಾವಿರ ರೂಪಾಯಿ. ಕುಲ್ ಇಲಾಹ್ ಎಂಬುದು ಸೌಂಡ್ ಆಫ್ ಇಸ್ಲೇಗೆ ಸ್ಕಾಟಿಷ್ ಗೇಲಿಕ್ ಹೆಸರಾಗಿದೆ. ಐಲ್ ಆಫ್ ಜುರಾದಿಂದ ಇಸ್ಲೇಯನ್ನು ಪ್ರತ್ಯೇಕಿಸುವ ನೀರಿನ ಭಾಗ ಇದು. ಈ ಡಿಸ್ಟಿಲರಿ  ಬುನಾಹವ್‌ಎನ್‌ ದಕ್ಷಿಣಕ್ಕೆ ಪೋರ್ಟ್ ಅಸ್ಕೈಗ್‌ನ ಉತ್ತರದಲ್ಲಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Badminton ಕೋರ್ಟ್‌ನಲ್ಲಿ ಮಹಾ ಕದನ; Make My Propertyz, MRCL, Hosa Suddi, ಗೌರೀಶ್, ಆಂಜನಪ್ಪ, ಹರೀಶ್, ಶಿವಕುಮಾರ್ ಕೈಜೋಡಿಕೆ!

Published

on

By

ಬೆಂಗಳೂರು: ಕ್ರೀಡಾಭಿಮಾನಿಗಳು ಹಾಗೂ ಬ್ಯಾಡ್ಮಿಂಟನ್ ಪ್ರೇಮಿಗಳಿಗಾಗಿ ಬೆಂಗಳೂರಿನಲ್ಲಿ ಆಗಸ್ಟ್ 29ರಂದು ‘MMP ಶಟಲ್ ಟೂರ್ನಮೆಂಟ್ 2026’ ನಡೆಯಲಿದೆ. ಕ್ರೀಡೆಯನ್ನು ಉತ್ತೇಜಿಸುವುದರ ಜೊತೆಗೆ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ.

ಮೇಕ್ ಮೈ ಪ್ರಾಪರ್ಟೀಸ್ (Make My Propertyz) ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ 16 ತಂಡಗಳ ಒಟ್ಟು 32 ಆಟಗಾರರು ಭಾಗವಹಿಸಲಿದ್ದಾರೆ. ಗೋಲ್ಡನ್ ಫೆದರ್ಸ್‌ನಲ್ಲಿ ನಾಲ್ಕು ಅಂಕಣಗಳಲ್ಲಿ 21 ಅಂಕಗಳ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ Make My Propertyz, ಕ್ರೀಡೆ ಮತ್ತು ಯುವಜನರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಟೂರ್ನಮೆಂಟ್‌ಗೆ ಬೆಂಬಲ ನೀಡಿದೆ. ಪ್ಲಾಟಿನಂ ಪ್ರಾಯೋಜಕರಾಗಿ MRCL Infrastructure Pvt Ltd ಕೈಜೋಡಿಸಿದೆ. ಮೋಹನ್ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಮಾಜಿ ಕಾರ್ಪೊರೇಟರ್ ಆರ್. ಆಂಜನಪ್ಪ ಅವರು ಗೋಲ್ಡ್ ಸ್ಪಾನ್ಸರ್ ಆಗಿ ಪಂದ್ಯಾವಳಿಗೆ ಬೆಂಬಲ ನೀಡಿದ್ದಾರೆ. ಸ್ಥಳೀಯವಾಗಿ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅವರು ಸಾರ್ವಜನಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಂ. ಹರೀಶ್ ಕುಮಾರ್ ಅವರು ಕೂಡ ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಮುಂಬರುವ GBA ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿರುವ ಹರೀಶ್, ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದೊಂದಿಗೆ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗುವ ಆಶಯ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಗೋಲ್ಡನ್ ಫೆದರ್ಸ್ ಮೂಲಕ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಪ್ರೋತ್ಸಾಹ

ಪಂದ್ಯಾವಳಿ ನಡೆಯಲಿರುವ ಗೋಲ್ಡನ್ ಫೆದರ್ಸ್ ಸಂಸ್ಥೆಯ ಸಂಸ್ಥಾಪಕ ಗೌರೀಶ್ ಮತ್ತು ಲೋಕೇಶ್ ಅವರು ತಮ್ಮ ಕ್ಲಬ್ ಮೂಲಕ ಬ್ಯಾಡ್ಮಿಂಟನ್ ಆಟಗಾರರನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಯುವ ಆಟಗಾರರಿಗೆ ತರಬೇತಿ, ಅಭ್ಯಾಸ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ವಿಶೇಷವಾಗಿ ನಾಗದೇವನಹಳ್ಳಿಯಲ್ಲಿ ಗೌರೀಶ್ ಅವರು ಸಮಾಜ ಸೇವಾ ಕಾರ್ಯಗಳಲ್ಲೂ ಸಕ್ರಿಯರಾಗಿದ್ದು, ಸ್ಥಳೀಯವಾಗಿ ವಿವಿಧ ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

Hosa Suddi ಮತ್ತು ಶಿವಕುಮಾರ್‌ರಿಂದ ಬೆಂಬಲ

ಕನ್ನಡ ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿರುವ Hosasuddi.in (Hosa Suddi) ಕೂಡ ಈ ಪಂದ್ಯಾವಳಿಗೆ ಸಿಲ್ವರ್ ಪ್ರಾಯೋಜಕರಾಗಿ ಬೆಂಬಲ ನೀಡುತ್ತಿದೆ. ಸ್ಥಳೀಯ ಕ್ರೀಡಾ ಪ್ರತಿಭೆಗಳು, ಯುವಜನರ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ Hosasuddi.in ನಿರಂತರವಾಗಿ ಬೆಂಬಲ ನೀಡುತ್ತಿದೆ.

ಇದೇ ವೇಳೆ ಶಿವಕುಮಾರ್ ಅವರು ಕೂಡ ಸಿಲ್ವರ್ ಸ್ಪಾನ್ಸರ್ ಆಗಿ ಪಂದ್ಯಾವಳಿಗೆ ಕೈಜೋಡಿಸಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿವಕುಮಾರ್ ಅವರು ಕ್ರೀಡೆ ಹಾಗೂ ಯುವಜನರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ.

ಒಟ್ಟಿನಲ್ಲಿ, ‘One Team, One Dream, One Champion’ ಹಾಗೂ ‘Smash Limits, Create Legends’ ಎಂಬ ಘೋಷವಾಕ್ಯಗಳೊಂದಿಗೆ ನಡೆಯಲಿರುವ MMP ಶಟಲ್ ಟೂರ್ನಮೆಂಟ್ 2026 ಕೇವಲ ಬ್ಯಾಡ್ಮಿಂಟನ್ ಪಂದ್ಯಾವಳಿಯಾಗಿರದೆ, ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವುದು, ಯುವಕರನ್ನು ಉತ್ತೇಜಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಬೆಂಬಲ ನೀಡುವ ವೇದಿಕೆಯಾಗಲಿದೆ.

Continue Reading

ಸಿನಿಮಾ

‘Toxic’ ವಿರುದ್ಧ ಮಾತನಾಡಿದವರಿಗೆ ಕಾನೂನು ನೋಟಿಸ್? ಚಿತ್ರತಂಡದ ನಡೆಗೆ ಕಾರಣವೇನು?

Published

on

By

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಕಿಯಾರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್ ಮಾತ್ರವಲ್ಲದೆ ಕಾನೂನು ವಿಚಾರದಿಂದಲೂ ಸುದ್ದಿಯಾಗಿದೆ. ಚಿತ್ರದ ಕುರಿತು ಸುಳ್ಳು, ಮಾನಹಾನಿಕರ ಅಥವಾ ನಿಂದನಾತ್ಮಕ ವಿಷಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳದಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.

ಯೂಟ್ಯೂಬರ್ ಸೂರಜ್ ಕುಮಾರ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ತಮಗೆ ಬಂದಿರುವ ಕಾನೂನು ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ ಈ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಪರವಾಗಿ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.

ನೋಟಿಸ್‌ನಲ್ಲಿ, ‘ಟಾಕ್ಸಿಕ್’ ಸಿನಿಮಾಗೆ ಸಂಬಂಧಿಸಿದಂತೆ ಡಿಜಿಟಲ್ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪಿಟಿಐ ವರದಿ ಪ್ರಕಾರ, ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆಗಸ್ಟ್ 22ರಂದು ವಿವಿಧ ಪ್ರತಿವಾದಿಗಳ ವಿರುದ್ಧ ಎಕ್ಸ್-ಪಾರ್ಟಿ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚಿತ್ರದ ಕುರಿತು ಸುಳ್ಳು ಅಥವಾ ಮಾನಹಾನಿಕರ ವಿಷಯಗಳ ಪ್ರಕಟಣೆ ಮತ್ತು ಪ್ರಸಾರವನ್ನು ತಡೆಯುವಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ವರದಿಯಾಗಿದೆ. ಚಿತ್ರದ ಕುರಿತು ವಿಮರ್ಶೆಗಳು ಮತ್ತು ಸಾಮಾಜಿಕ ಮಾಧ್ಯಮ ಚರ್ಚೆಗಳು ಮುಂದುವರಿದಿರುವ ಬೆನ್ನಲ್ಲೇ ಈ ಕಾನೂನು ಬೆಳವಣಿಗೆ ಗಮನ ಸೆಳೆದಿದೆ.

Continue Reading

ರಾಜ್ಯ

B.Nagendra ರಾಜೀನಾಮೆ ಫಿಕ್ಸ್ ಆಯ್ತಾ? ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್‌ನ ‘ಡ್ಯಾಮೇಜ್ ಕಂಟ್ರೋಲ್’

Published

on

By

ಬೆಂಗಳೂರು: ಕರ್ನಾಟಕದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಇದೀಗ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವ B.Nagendra ಅವರ ರಾಜೀನಾಮೆಗೆ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಿರುವ ನಡುವೆಯೇ, ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ನಾಗೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ವ್ಯಕ್ತಪಡಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಆದರೆ, ನಾಗೇಂದ್ರ ಅವರ ಕಚೇರಿ ಈ ವರದಿಗಳನ್ನು ತಳ್ಳಿಹಾಕಿದ್ದು, ರಾಜೀನಾಮೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈ ನಡುವೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ವಿರುದ್ಧ ತನಿಖೆ ಮುಂದುವರಿಸಲು ಸಿಬಿಐ ಕರ್ನಾಟಕ ರಾಜ್ಯಪಾಲರಿಂದ ಅನುಮತಿ ಕೋರಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಸುಮಾರು 89 ಕೋಟಿ ರೂ. ಅಕ್ರಮಗಳ ಆರೋಪ ಕೇಳಿಬಂದಿದ್ದು, ನಾಗೇಂದ್ರ ವಿರುದ್ಧ ಪ್ರತಿಪಕ್ಷಗಳು ರಾಜಕೀಯವಾಗಿ ಒತ್ತಡ ಹೆಚ್ಚಿಸಿವೆ.

ಆಗಸ್ಟ್ 24ರಂದು ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ವಿಚಾರವಾಗಿ ನಡೆದ ಪ್ರತಿಭಟನೆ ಮತ್ತು ವಿಧಾನಮಂಡಲದ ಗದ್ದಲದಿಂದ ರಾಜ್ಯ ಸರ್ಕಾರದ ಮೇಲಿನ ರಾಜಕೀಯ ಒತ್ತಡ ಮತ್ತಷ್ಟು ಹೆಚ್ಚಾಗಿದೆ.

ನಾಗೇಂದ್ರ ಅವರು ಈ ಹಿಂದೆ ಕೂಡ ವಾಲ್ಮೀಕಿ ನಿಗಮದ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ 2026ರ ಆಗಸ್ಟ್‌ನಲ್ಲಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮತ್ತು ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅವರ ಸಚಿವ ಸ್ಥಾನ ಮತ್ತೊಮ್ಮೆ ರಾಜಕೀಯ ಚರ್ಚೆಯ ಕೇಂದ್ರವಾಗಿದೆ.

ಹೀಗಾಗಿ ನಾಗೇಂದ್ರ ಅವರ ರಾಜೀನಾಮೆ ಕುರಿತು ಅಂತಿಮ ನಿರ್ಧಾರ ಯಾವಾಗ ಹೊರಬೀಳಲಿದೆ ಎಂಬುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್‌ನ ಮುಂದಿನ ನಿರ್ಧಾರ ಮತ್ತು ನಾಗೇಂದ್ರ ಅವರ ಅಧಿಕೃತ ನಿಲುವಿನ ಬಳಿಕವಷ್ಟೇ ಈ ಬೆಳವಣಿಗೆಗೆ ಸ್ಪಷ್ಟತೆ ಸಿಗಲಿದೆ.

Continue Reading

Trending