ಬೆಂಗಳೂರು
ಬಸನಗೌಡ ಪಾಟೀಲ್ ಯತ್ನಾಳರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು: ಸಿಎಂ ಇಬ್ರಾಹಿಂ ವಾಗ್ದಾಳಿ
ಹುಬ್ಬಳ್ಳಿ: “ರಾಜ್ಯ ರಾಜಕಾರಣ ಹೊಲಸೆದ್ದು ಹೋಗಿದೆ. ಬಿಜೆಪಿಯವರು ಇಷ್ಟು ದಿನ ರಾಮನ ಹೆಸರಿನಲ್ಲಿ ವೋಟ್ ಕೇಳಿದ್ರು. ಇದೀಗ ಸಾಬರ ಹೆಸರಲ್ಲಿ ವೋಟ್ ಕೇಳುತ್ತಿದ್ದಾರೆ. ಅವರಿಗೆ ಎಷ್ಟು ಗತಿಗೇಡು ಬಂದಿದೆ” ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, “ಯತ್ನಾಳ್ ಹಿಂದೂ ಸಮಾವೇಶ ಅಂತಾರೆ. ವಿಜಯೇಂದ್ರ, ಯಡಿಯೂರಪ್ಪ ಹಿಂದೂ ಅಲ್ವಾ? ವಕ್ಫ್ ವಿಚಾರವಾಗಿ ನಾನು ರಾಜ್ಯ ಸರ್ಕಾರಕ್ಕೆ ಒಂದು ಪೇಪರ್ ಅಲ್ಲಿ ಜಾಹೀರಾತು ಕೊಡಲು ಹೇಳುತ್ತೇನೆ. ಯಾರ ಹೆಸರಲ್ಲಿ ಪಹಣಿ ಇದೆಯೋ, ಅವನೇ ಭೂ ಒಡೆಯ. ಇದಕ್ಕೆ ಯಾಕೆ ಚಳವಳಿ ಬೇಕು? ಇವರಿಗೆ ವಿಷಯ ಇಲ್ಲ, ಹೀಗಾಗಿ ಇದನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಹಿಂದುತ್ವದ ಮೇಲೆ ವೋಟ್ ಬರಲ್ಲ. ಹಾಗಾಗಿ ಹಿಂದುತ್ವ ಸಾಕಾಗಿ ಹೋಗಿದೆ” ಎಂದರು.
ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: “ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಬಸವಣ್ಣನ ಬಗ್ಗೆ ಮಾತಾಡುತ್ತಾರೆ. ಎಲ್ಲಿ ಅವರೂ ಕೂಡಲಸಂಗಮ ನದಿಗೆ ಹಾರ್ತಾರೋ ಏನೋ” ಎಂದು ಯತ್ನಾಳ್ ವಿರುದ್ಧ ವ್ಯಂಗ್ಯವಾಡಿದರು.
“ಯತ್ನಾಳ್ ಮೊದಲು ಸಾಣೇಹಳ್ಳಿಗೆ ಹೋಗಿ ರಾಗಿ ಮುದ್ದೆ ತಿಂದು ಬಸವ ತತ್ವ ಕಲಿಯಲಿ. ವಕ್ಫ್ ಎಂದರೇನು? ವಕ್ಫ್ ಕಾಯ್ದೆ ಮಾಡಿದ್ದು ಕಾಂಗ್ರೆಸ್ ಅಲ್ಲ. ಅದನ್ನು ಮಾಡಿದ್ದು ಬ್ರಿಟಿಷರು. ಯಾವ ಆಸ್ತಿಯನ್ನು ವಕ್ಫ್ ಎಂದು ಹೇಳಲು ಆಗಲ್ಲ. ಅದಕ್ಕೆ ಅದರದೇ ಆದ ನಿಯಮ ಇದೆ. ಆ ಹುಚ್ಚ ಮಂತ್ರಿ ಅದಾಲತ್ ಮಾಡಿ, ರಸ್ತೆಯಲ್ಲಿರೋ ಕಸವನ್ನು ಮೈಮೇಲೆ ಹಾಕಿಕೊಂಡ” ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ಗೆ ಕುಟುಕಿದರು.
ನಿಮ್ಮಿಬ್ಬರ ಜಗಳದಲ್ಲಿ ಸಾಬರನ್ನು ಏಕೆ ಎಳೆದು ತರುತ್ತೀರಿ – ಇಬ್ರಾಹಿಂ: “ಇವರು ಎಲ್ಲೆಲ್ಲಿ ದಾರಿ ತಪ್ಪಿಸಿದ್ದಾರೋ, ನಾವು ಅದನ್ನು ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಯತ್ನಾಳ್ ಅವರೇ ನಿಮ್ಮ ವಿಜಯೇಂದ್ರ ಜಗಳದಲ್ಲಿ ಸಾಬರನ್ನು ಯಾಕೆ ತರ್ತೀರಿ. ವಿಜಯೇಂದ್ರ ಹಾಗೂ ಯತ್ನಾಳ್ ಗಲಾಟೆಯನ್ನು ಕಂಟ್ರೋಲ್ ಮಾಡಲು ಹೈಕಮಾಂಡ್ಗೆ ಆಗುತ್ತಿಲ್ಲ. ನೋಟಿಸ್ ಕೊಟ್ಟರೂ ಏನೂ ಆಗಲ್ಲ. ಯತ್ನಾಳ್ ಅವರನ್ನು ಪಕ್ಷದಿಂದ ಬಿಟ್ಟರೆ ಏನು ನಷ್ಟ ಆಗುತ್ತೆ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನು ಬಿಟ್ಟರೆ ನಷ್ಟ ಆಗುತ್ತೆ ಎನ್ನುವುದನ್ನು ಈಗಾಗಲೇ ತೋರಿಸಿದ್ದಾರೆ” ಎಂದರು.
“ವಕ್ಫ್ ಕಾಯ್ದೆಯ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಧಿಕಾರ ಕೊಡಬೇಕು ಅಂತಾರೆ. ಜಿಲ್ಲಾಧಿಕಾರಿಗೆ ಅಲ್ಲ, ಹೈಕೋರ್ಟ್ ನ್ಯಾಯಾಧೀಶರಿಗೆ ಅಧಿಕಾರ ಕೊಡಿ. ಹಿಂದೂ ಸಮಾವೇಶ ಯಾಕೆ, ಮಹಾದಾಯಿ ವಿಚಾರವಾಗಿ ಸಭೆ ಮಾಡಿ” ಎಂದರು.
’ಆ ಪ್ರತಾಪ್ ಸಿಂಹಗೆ ಕಾಯ್ದೆಯೇ ಗೊತ್ತಿಲ್ಲ‘: “ಆ ಪ್ರತಾಪ್ ಸಿಂಹಗೆ ಕಾಯ್ದೆಯೇ ಗೊತ್ತಿಲ್ಲ. ಹೈಕಮಾಂಡ್ ಹಾಗೂ ಮೋದಿ, ಅಮಿತ್ ಶಾ ಅವರನ್ನು ಒಲಿಸಲು ವಕ್ಫ್ ಹೋರಾಟ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಹೋಗಿ ದಾಂಧಲೆ ಮಾಡಿದ್ರು. ಬಿಜೆಪಿಯವರನ್ನು ಎಲ್ಲ ಸಮಾಜದ ಜನ ತಿರಸ್ಕಾರ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಅಡ್ರೆಸ್ ಇಲ್ಲದಂತೆ ಕಳುಹಿಸಿದ್ದಾರೆ. ನಾನು ಇದ್ದ ಕಾರಣಕ್ಕೆ ಕುಮಾರಸ್ವಾಮಿ ಗೆದ್ದಿದ್ದರು. ಮುಸ್ಲಿಂ ವೋಟ್ನಿಂದ ನಾವು 19 ಸೀಟ್ ಗೆದ್ದಿದ್ದು. ಬಿಜೆಪಿ ಜೊತೆ ಹೋಗಿರೋದಕ್ಕೆ ನಾವು ಬೇರೆಯಾಗಿದ್ದು. ಇದೀಗ ಬಿಜೆಪಿಯವರ ಜೊತೆ ಲವ್ ಮ್ಯಾರೇಜ್ ಆಗಿದ್ದಾರೆ. ನೊಡೋಣ ಎಷ್ಟು ದಿನ ಇರುತ್ತೆ ಅಂತ. ನಾವು ತೃತೀಯ ರಂಗ ಹುಟ್ಟುಹಾಕುತ್ತೇವೆ. ಒಂದು ಸಂಘ ಕಟ್ಟಲು ತೀರ್ಮಾನ ಮಾಡಿದ್ದೇವೆ” ಎಂದರು.
“ಸಿದ್ದರಾಮಯ್ಯ ಅವರ ಸ್ವಾಭಿಮಾನದ ಸಮಾವೇಶದ ಬಗ್ಗೆ ನಾನು ಮಾತಾಡಲ್ಲ. ಸಿದ್ದರಾಮಯ್ಯ ಶಕ್ತಿ ಸಿದ್ದರಾಮಯ್ಯಗೆ ಇದೆ. ಡಿ.ಕೆ.ಶಿವಕುಮಾರ್ ಶಕ್ತಿ ಅವರಿಗೆ ಇದೆ. ಸಿಎಂ ಅವರನ್ನು ಇಳಿಸುವ ಪ್ರಯತ್ನದ ಬಗ್ಗೆ ಗೊತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಫ್ರಸ್ಟ್ರೇಟ್ ಆಗಿದ್ದಾರೆ. ಹಾಗೆ ಆಗಬೇಡಿ. ಅವರೇ ಎಲ್ಲಿ ನದಿಗೆ ಹಾರ್ತಾರೋ ಎನ್ನುವ ಅನುಮಾನ ಇದೆ. ಹೀಗಾಗಿ ಬಸವ ತತ್ವ ಓದಿ ನಿಮಗೆ ಜ್ಞಾನೋದಯ ಆಗತ್ತದೆ. ಮೋಹನ್ ಭಾಗವತ್ ಮೊದಲು ಮದುವೆಯಾಗಲಿ” ಎಂದು ಹೇಳಿದರು.
ಮುಸ್ಲಿಂರಿಗೆ ಮತದಾನದ ಹಕ್ಕು ಇಲ್ಲ ಎಂದ ಸ್ವಾಮೀಜಿ ಮೇಲೆ ಕೇಸ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿ, “ಅವರ ಮೇಲೆ ಎಫ್ಐಆರ್ ಹಾಕಬೇಡಿ. ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಹಿರಿಯರಿದ್ದಾರೆ. ಕೂಡಲೇ ಅವರ ಮೇಲೆ ಹಾಕಿರುವ ಕೇಸ್ ವಾಪಸ್ ತೆಗೆದುಕೊಳ್ಳಿ, ಇದು ನನ್ನ ಪ್ರಾರ್ಥನೆ” ಎಂದರು.
ಚುನಾವಣೆ
GBA ವಾರ್ಡ್‌ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್‌ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
ಬೆಂಗಳೂರು (ಫೆಬ್ರವರಿ 13, 2026): ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಆರ್.ಎಸ್. ದೀಪಕ್ ಕುಮಾರ್ ಅವರು ಹೊಸದಾಗಿ ರಚಿಸಲಾದ Greater Bengaluru Authority (GBA) ವಾರ್ಡ್‌ಗಳಲ್ಲಿನ ಬೂತ್ ಹಂಚಿಕೆ ಮತ್ತು ಮತದಾರರ ಪಟ್ಟಿಯಲ್ಲಿರುವ ಗಂಭೀರ ಲೋಪಗಳ ಕುರಿತು Karnataka State Election Commission ಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ GBA ಟಿಕೆಟ್ ಆಕಾಂಕ್ಷಿ ಸಿ.ಎಂ. ಸತ್ಯನಾರಾಯಣ (CMC) ಅವರು hosasuddi.in ಜೊತೆಗೆ ಮಾತನಾಡಿ, “ಈ ತಪ್ಪುಗಳನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಬೇಕಾಗುತ್ತದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಈ ವಿಷಯದಲ್ಲಿ ಜವಾಬ್ದಾರಿಯಾಗಿ ಕೆಲಸ ಮಾಡಬೇಕು. ಆದರೆ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ವಿಷಾದನೀಯ. GBA ಅಧಿಕಾರಿಗಳು ಕೂಡಲೇ ಇದನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರಮುಖ ದೂರುಗಳು
ದೂರುದಲ್ಲಿ ಮೂರು ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಲೋಪಗಳನ್ನು ಎತ್ತಿ ತೋರಿಸಲಾಗಿದೆ:
- ವೆಬ್‌ಸೈಟ್‌ನಲ್ಲಿ ಮಾಹಿತಿ ಕೊರತೆ: ಹಲವಾರು ಬೂತ್‌ಗಳ ವಿವರಗಳು ಅಧಿಕೃತ GBA ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.
- ವಾರ್ಡ್‌ಗಳ ಅದಲು-ಬದಲು: ಒಂದು ವಾರ್ಡ್‌ಗೆ ಸೇರಬೇಕಾದ ಬೂತ್‌ಗಳನ್ನು ಮತ್ತೊಂದು ವಾರ್ಡ್‌ಗೆ ಸೇರಿಸಲಾಗಿದೆ.
- ಮತದಾರರ ಗೊಂದಲ: ಒಂದೇ ಪ್ರದೇಶದ ಮತದಾರರನ್ನು ಎರಡು ಬೇರೆ ವಾರ್ಡ್‌ಗಳಿಗೆ ಹಂಚಿರುವುದರಿಂದ ಮತದಾರರ ಪಟ್ಟಿಯಲ್ಲಿ ಅವ್ಯವಸ್ಥೆ.
ವಾರ್ಡ್‌ವಾರು ಕಂಡುಬಂದಿರುವ ಲೋಪಗಳು
ಶಿವನಪಾಳ್ಯ (19):
ಬೂತ್ ಸಂಖ್ಯೆ 25ರಿಂದ 31ರವರೆಗೆ ಕೆಂಗೇರಿ (21) ಅಥವಾ ಕೆಂಗೇರಿ ಕೋಟೆ (20) ವಾರ್ಡ್‌ಗೆ ಸೇರಬೇಕಿದೆ. ಬೂತ್ 19 ಮತ್ತು 31 ವೆಬ್‌ಸೈಟ್‌ನಲ್ಲಿ ಕಾಣುತ್ತಿಲ್ಲ.
ಉಲ್ಲಾಳ (16):
ಬೂತ್ ಸಂಖ್ಯೆ 1, 2, 3 ಮತ್ತು 6 ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.
ನಾಡಪ್ರಭು ಕೆಂಪೇಗೌಡ ನಗರ (13):
ಹಳೆಯ ಬೂತ್ 52ರ ಮತದಾರರು ಈಗ ವಾರ್ಡ್ 12ರಲ್ಲಿ ಸೇರಿದ್ದಾರೆ. ಬೂತ್ 37 ವೆಬ್‌ಸೈಟ್‌ನಲ್ಲಿ ನಾಪತ್ತೆಯಾಗಿದೆ. ಬೂತ್ 37-40 ಮತ್ತು 24-25 ಎರಡು ವಾರ್ಡ್‌ಗಳ ನಡುವೆ ಹಂಚಿಹೋಗಿವೆ.
ಬ್ಯಾಡರಹಳ್ಳಿ (15):
ಬೂತ್ ಸಂಖ್ಯೆ 23 ಮತ್ತು 24 ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.
ಕೆಂಗೇರಿ (21) ಮತ್ತು ಕೆಂಗೇರಿ ಕೋಟೆ (20):
ಶ್ರೀನಿವಾಸಪುರ, ಗಣಕಲ್ಲು ಮತ್ತು ಓಂಕಾರ ಆಶ್ರಮ ಬೂತ್‌ಗಳನ್ನು ಎರಡು ವಾರ್ಡ್‌ಗಳಿಗೆ ವಿಂಗಡಿಸಲಾಗಿದೆ. ಇವುಗಳನ್ನು ಒಂದೇ ವಾರ್ಡ್‌ಗೆ ಸೇರಿಸಲು ಮನವಿ.
ಕೆಂಗಲ್ ಹನುಮಂತಯ್ಯ ವೆಸ್ಟ್ (18):
ಬೆಥೆಸ್ಡಾ ಇಂಟರ್ನ್ಯಾಷನಲ್ ಸ್ಕೂಲ್‌ನ ಬೂತ್ ಸಂಖ್ಯೆ 5ರ ವಿವರ ವೆಬ್‌ಸೈಟ್‌ನಲ್ಲಿ ಕಾಣುತ್ತಿಲ್ಲ.
ತಕ್ಷಣದ ಕ್ರಮಕ್ಕೆ ಆಗ್ರಹ
“ಮತದಾರರ ಪಟ್ಟಿಯಲ್ಲಿ ಮತದಾರರು ಸಂಘಟಿತ ರೀತಿಯಲ್ಲಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ದಯವಿಟ್ಟು ಮೇಲಿನ ತಪ್ಪುಗಳನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಆರ್.ಎಸ್. ದೀಪಕ್ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಪ್ರತಿಯನ್ನು ಯಶವಂತಪುರ ಕ್ಷೇತ್ರದ ಚುನಾವಣಾಧಿಕಾರಿಗೂ (R.O.) ರವಾನಿಸಲಾಗಿದೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ದೂರು ಮಹತ್ವ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ಪ್ರತಿಕ್ರಿಯೆ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.
ದೇಶ
BMTC ಸಿಹಿ ಸುದ್ದಿ: ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣ
ಬೆಂಗಳೂರು: ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ Bangalore Metropolitan Transport Corporation (BMTC) ಮಹತ್ವದ ಘೋಷಣೆ ಮಾಡಿದೆ. 2025-26ನೇ ಸಾಲಿನ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ಉಚಿತವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು.
ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ (Hall Ticket) ತೋರಿಸಿದರೆ ಸಾಕು – ಯಾವುದೇ ಪ್ರಯಾಣ ದರ ಪಾವತಿಸಬೇಕಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಫೆಬ್ರವರಿ 28, 2026 ರಿಂದ ಮಾರ್ಚ್ 17, 2026ರವರೆಗೆ ನಡೆಯಲಿರುವ ಪರೀಕ್ಷೆಗಳ ಅವಧಿಯಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ.
ಉಚಿತ ಪ್ರಯಾಣದ ನಿಯಮಗಳು
▪ ಪ್ರವೇಶ ಪತ್ರ ಕಡ್ಡಾಯ: ಬಸ್‌ನಲ್ಲಿ ಪ್ರಯಾಣಿಸುವಾಗ ನಿರ್ವಾಹಕರಿಗೆ ಹಾಲ್ ಟಿಕೆಟ್ ತೋರಿಸಬೇಕು. ಅದೇ ಬಸ್ ಪಾಸ್ ಆಗಿ ಪರಿಗಣಿಸಲಾಗುತ್ತದೆ.
▪ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯ: ಈ ಸೌಲಭ್ಯವು ಬಿಎಂಟಿಸಿಯ ಸಾಮಾನ್ಯ (Ordinary) ಬಸ್‌ಗಳಿಗೆ ಮಾತ್ರ. ವಜ್ರ, ಎಸಿ ಅಥವಾ ಇತರೆ ಪ್ರೀಮಿಯಂ ಬಸ್‌ಗಳಿಗೆ ಅನ್ವಯಿಸುವುದಿಲ್ಲ.
▪ ಮನೆ–ಪರೀಕ್ಷಾ ಕೇಂದ್ರ ವ್ಯಾಪ್ತಿ: ವಿದ್ಯಾರ್ಥಿಯ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಹಾಗೂ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಾಗ ಮಾತ್ರ ರಿಯಾಯಿತಿ ಸಿಗಲಿದೆ.
ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಕ್ರಮಗಳು
- ಹೆಚ್ಚುವರಿ ಟ್ರಿಪ್‌ಗಳು: ಪರೀಕ್ಷಾ ಕೇಂದ್ರಗಳಿರುವ ಮಾರ್ಗಗಳಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸೂಚನೆ.
- ಕೋರಿಕೆ ನಿಲುಗಡೆ (Request Stop): ಪರೀಕ್ಷಾ ಕೇಂದ್ರದ ಸಮೀಪ ಅಧಿಕೃತ ನಿಲುಗಡೆ ಇಲ್ಲದಿದ್ದರೂ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಬಸ್ ನಿಲ್ಲಿಸಲು ಚಾಲಕರಿಗೆ ನಿರ್ದೇಶನ.
- ಟ್ರಿಪ್ ರದ್ದು ಇಲ್ಲ: ಪರೀಕ್ಷಾ ದಿನಗಳಲ್ಲಿ ಯಾವುದೇ ಬಸ್ ಟ್ರಿಪ್‌ಗಳನ್ನು ರದ್ದು ಮಾಡದೆ ಕಡ್ಡಾಯ ಕಾರ್ಯಾಚರಣೆ ನಡೆಸುವಂತೆ ಸೂಚನೆ.
ವಿದ್ಯಾರ್ಥಿಗಳಿಗೆ ದೊಡ್ಡ ನೆರವು
ಬಿಎಂಟಿಸಿಯ ಈ ನಿರ್ಧಾರವು ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆರ್ಥಿಕ ಭಾರ ಕಡಿಮೆ ಮಾಡುವುದರ ಜೊತೆಗೆ, ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ನೆರವಾಗಲಿದೆ.
ದೇಶ
ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಅನುಮತಿ ನಿರೀಕ್ಷೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಡಿಸಿಎಂ D. K. Shivakumar ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ (ICDS) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಸಹಕಾರ ಸಿಗುವ ಭರವಸೆ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಸಿದ್ಧತೆ
Mekedatu ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಯೋಜನೆ ಪರವಾಗಿದೆ. ಕೇಂದ್ರ ಅನುಮತಿ ದೊರೆತ ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ – ರೈತರಿಗೆ ಪರಿಹಾರ
Krishna River ಮೇಲ್ದಂಡೆ ಯೋಜನೆ ವಿಚಾರದಲ್ಲಿ 2013ರ ಕಾಯ್ದೆಯಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಅಣೆಕಟ್ಟು ಸುರಕ್ಷತೆ ರಾಷ್ಟ್ರದ ಆದ್ಯತೆ
ಅಣೆಕಟ್ಟುಗಳು ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕವಾಗಿದ್ದು, ಭಾರತದಲ್ಲಿ ಸುಮಾರು 6,500 ಅಣೆಕಟ್ಟುಗಳಿವೆ. ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 232 ಅಣೆಕಟ್ಟುಗಳಿದ್ದು, ಅವುಗಳಲ್ಲಿ ಬಹುಪಾಲು 25 ವರ್ಷಕ್ಕಿಂತ ಹಳೆಯದಾಗಿದೆ.
ಕೇಂದ್ರ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಜಾರಿಗೊಳಿಸಿರುವ Dam Rehabilitation and Improvement Project (DRIP) ಯೋಜನೆಯಡಿ ರಾಜ್ಯದಲ್ಲಿ 58 ಅಣೆಕಟ್ಟುಗಳ ದುರಸ್ತಿಗೆ ಸುಮಾರು 1,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಮನವಿ
ಅಣೆಕಟ್ಟುಗಳ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
“ಜಲವೇ ಸಂಪತ್ತು, ಜಲವೇ ಇಂಧನ, ಜಲವೇ ಜೀವನ” ಎಂದು ಹೇಳಿದ ಅವರು, ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಬದ್ಧತೆ ವ್ಯಕ್ತಪಡಿಸಿದರು.
-
ಚುನಾವಣೆ14 hours agoGBA ವಾರ್ಡ್‌ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್‌ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ19 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ19 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ದೇಶ21 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ದೇಶ20 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ಕ್ರೀಡೆ18 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ16 hours agoBENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
-
ದೇಶ17 hours agoಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್
