Connect with us

ಬಿಬಿಎಂಪಿ

ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ʻಬಿಬಿಎಂಪಿʼ (BBMP) ಹೆಸರು ಇತಿಹಾಸ ಪುಟ ಸೇರಲಿದ್ದು, ನಾಳೆಯಿಂದ (ಮೇ 15) ಗ್ರೇಟರ್‌ ಬೆಂಗಳೂರು ಆಡಳಿತ ಜಾರಿಯಾಗಲಿದೆ. ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆಯು ʻಗ್ರೇಟರ್ ಬೆಂಗಳೂರು ಪ್ರಾಧಿಕಾರʼ (Greater Bengaluru Authority) ಆಗಿ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಇದರೊಂದಿಗೆ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (Bengaluru Administrative Act) ಸುಗಮ ಆಡಳಿತ ತರುವ ದೃಷ್ಟಿಯಿಂದ ಗರಿಷ್ಠ 7 ಪಾಲಿಕೆ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕಾಯ್ದೆಗೆ ನಿಯಮಾವಳಿ ರೂಪಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಜಿಬಿಎ ಮುಖ್ಯ ಆಯುಕ್ತರು ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಜೊತೆಗೆ ಹೊಸ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ.

ಕಾಯ್ದೆ ಹಾದಿ ಹೇಗೆ?
ವಿಧಾನ ಮಂಡಲದಲ್ಲಿ ಮಾರ್ಚ್ 13ರಂದು ಅಂಗೀಕಾರವಾಗಿದ್ದ ʻಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024ʼಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮಾರ್ಚ್ 17ರಂದು ಕಳುಹಿಸಲಾಗಿತ್ತು. ಮಸೂದೆಯು ಸಂವಿಧಾನದ 74ನೇʼ ತಿದ್ದುಪಡಿಗೆ ವಿರುದ್ಧವಾಗಿದೆ ಮತ್ತು ದೆಹಲಿ ಮಹಾನಗರ ಪಾಲಿಕೆಯ ವಿಭಜನೆ ಸಂದರ್ಭದಲ್ಲಿ ಆದಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆʼ ಎಂದು ಬೆಂಗಳೂರು ಟೌನ್ ಹಾಲ್ ಸಂಘಟನೆ ಹಾಗೂ ಬಿಜೆಪಿ ನಾಯಕರ ನಿಯೋಗಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಮಸೂದೆಯನ್ನು ತಡೆ ಹಿಡಿಯುವಂತೆಯೂ ಒತ್ತಾಯಿಸಿದ್ದವು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ʻಎರಡೂ ಮನವಿಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಮಸೂದೆಯು ಕಾನೂನಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಎರಡೂ ಮನವಿ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯವಿದೆ’ ಎಂದು ಮಾರ್ಚ್ 25ರಂದು ಮಸೂದೆಯನ್ನು ಹಿಂದಿರುಗಿಸಿದ್ದರು. ಅದಕ್ಕೆ ಅಗತ್ಯ ಸ್ಪಷನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಏಪ್ರಿಲ್ 24ರಂದು ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಅಂದು ಸಂಜೆಯೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024’ ಅನ್ನು ಅಧಿಸೂಚಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.

ಮೇ 15ರಿಂದ:
ಸದ್ಯ ಬಿಬಿಎಂಪಿಯ 225 ವಾರ್ಡ್‌ಗಳು ಜೆಬಿಎ ವ್ಯಾಪ್ತಿಯಲ್ಲಿರಲಿದೆ. ನಂತರ ಬಿಬಿಎಂಪಿ ವ್ಯಾಪ್ತಿ ಮಾತ್ರ ʻಗ್ರೇಟರ್ ಬೆಂಗಳೂರು ಪ್ರದೇಶʼ ಎಂದಾಗಲಿದ್ದರೂ ನಂತರದ ದಿನಗಳಲ್ಲಿ ವ್ಯಾಪ್ತಿ ಹಿಗ್ಗಲಿದೆ. ತಲಾ ಸುಮಾರು 125 ವಾರ್ಡ್‌ಗಳ ಮೂರು ನಗರ ಪಾಲಿಕೆಗಳನ್ನು ರಚಿಸುವ ಯೋಜನೆ ಇದ್ದು ಅದಕ್ಕೆ ತಕ್ಕಂತೆ ʻಗ್ರೇಟ‌ರ್ ಬೆಂಗಳೂರು ಪ್ರದೇಶʼದ ಗಡಿಯನ್ನು ಗುರುತಿಸಲಾಗುತ್ತದೆ. ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ ಅತ್ತಿಬೆಲೆ ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ʻಗ್ರೇಟರ್ ಬೆಂಗಳೂರು ಪ್ರದೇಶʼಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆಯಲ್ಲೇ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು ʻಬೆಂಗಳೂರುʼ ಎಂದೇ ಆರಂಭವಾಗಬೇಕಿದೆ. ʻಬೆಂಗಳೂರು ಕೇಂದ್ರ ನಗರ ಪಾಲಿಕೆʼ ʻಬೆಂಗಳೂರು ಉತ್ತರ ನಗರ ಪಾಲಿಕೆʼ ʻಬೆಂಗಳೂರು ದಕ್ಷಿಣ ನಗರ ಪಾಲಿಕೆʼ… ಹೀಗೆ ಹೆಸರಿಸಲಾಗುತ್ತದೆ. ʻಗ್ರೇಟರ್ ಬೆಂಗಳೂರು ಪ್ರದೇಶʼ ವ್ಯಾಪ್ತಿಯನ್ನು ಹಿಗ್ಗಿಸಿದ ಮೇಲೆ ಅದರನ್ವಯ ಮೂರು ಅಥವಾ ಐದು ನಗರಪಾಲಿಕೆಗಳನ್ನು ರಚಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ಚುನಾವಣೆ

ಪೆರಂಬೂರ್ ಕಣಕ್ಕೆ ನಟ ವಿಜಯ್ ಎಂಟ್ರಿ: ತಮಿಳುನಾಡು ರಾಜಕೀಯದಲ್ಲಿ ಸಂಚಲನ

Published

on

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ನಟ Vijay ನೇತೃತ್ವದ Tamilaga Vettri Kazhagam (TVK) ಪಕ್ಷದ ರಾಜಕೀಯ ಪ್ರವೇಶ ರಾಜ್ಯ ರಾಜಕೀಯ ಸಮೀಕರಣಗಳಲ್ಲಿ ಭಾರೀ ಬದಲಾವಣೆ ತಂದಿದೆ. ವಿಶೇಷವಾಗಿ, ವಿಜಯ್ ಅವರು ಪೆರಂಬೂರ್ ವಿಧಾನಸಭಾ ಕ್ಷೇತ್ರವನ್ನು ತಮ್ಮ ಚೊಚ್ಚಲ ಚುನಾವಣಾ ಕಣವಾಗಿ ಆರಿಸಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

Perambur ಕ್ಷೇತ್ರವು ಸಾಂಪ್ರದಾಯಿಕವಾಗಿ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದರೂ, ಈ ಬಾರಿ ವಿಜಯ್ ಪ್ರವೇಶದಿಂದಾಗಿ ಹೈ-ಪ್ರೊಫೈಲ್ ಕಣವಾಗಿ ಪರಿಣಮಿಸಿದೆ. Dravida Munnetra Kazhagam (DMK) ಮತ್ತು All India Anna Dravida Munnetra Kazhagam (AIADMK) ಪಕ್ಷಗಳಿಗೆ ಇದು ಹೊಸ ಸವಾಲಾಗಿ ಪರಿಣಮಿಸಿದೆ.

ಈ ಕ್ಷೇತ್ರದಲ್ಲಿ ಡಿಎಂಕೆ ಒಂಬತ್ತು ಬಾರಿ ಗೆಲುವು ಸಾಧಿಸಿದ್ದು, ಸತ್ಯವಾಣಿ ಮುತ್ತು ಮತ್ತು ಪರಿಥಿ ಇಲಂವಝುತಿ ಅವರಂತಹ ನಾಯಕರಿಂದ ರಾಜಕೀಯ ಇತಿಹಾಸ ರೂಪುಗೊಂಡಿದೆ. 2016ರಲ್ಲಿ ಎಐಎಡಿಎಂಕೆ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರೂ, 2019ರ ಉಪಚುನಾವಣೆ ಮತ್ತು 2021ರ ಚುನಾವಣೆಯಲ್ಲಿ ಡಿಎಂಕೆ ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತ್ತು.

ಸುಮಾರು 2.22 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪೆರಂಬೂರ್ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ. ಯುವಕರು ಮತ್ತು ಕಾರ್ಮಿಕ ವರ್ಗದ ಪ್ರಭಾವ ಹೆಚ್ಚಿರುವ ಈ ಪ್ರದೇಶದಲ್ಲಿ ಉದ್ಯೋಗ, ಹಣದುಬ್ಬರ ನಿಯಂತ್ರಣ, ವಸತಿ ಮತ್ತು ಮೂಲಸೌಕರ್ಯ ಪ್ರಮುಖ ಚುನಾವಣಾ ವಿಷಯಗಳಾಗಿವೆ.

ವಿಜಯ್ ಅವರ ಯುವಜನಪ್ರಿಯತೆ ಈ ಬಾರಿ ದ್ರಾವಿಡ ಪಕ್ಷಗಳ ದೀರ್ಘಕಾಲದ ಹಿಡಿತವನ್ನು ಸವಾಲು ಮಾಡಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪೆರಂಬೂರ್ ಕಣ ಇದೀಗ ಸಾಮಾನ್ಯ ಚುನಾವಣೆ ಮಾತ್ರವಲ್ಲ, ಹೊಸ ರಾಜಕೀಯ ಶಕ್ತಿಯ ಪರೀಕ್ಷೆಯಾಗಿ ಪರಿಣಮಿಸಿದೆ.

Continue Reading

ದೇಶ

ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ: ಮಧುಮೇಹ, ರಕ್ತದೊತ್ತಡ ಪ್ರಕರಣ ಹೆಚ್ಚಳ

Published

on

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿರುವುದು ಆರೋಗ್ಯ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಸ್ವಚ್ಛತಾ ಯೋಧರೆಂದು ಗುರುತಿಸಲಾದ ಪೌರಕಾರ್ಮಿಕರ ಆರೋಗ್ಯದ ಜವಾಬ್ದಾರಿಯನ್ನು ಪಾಲಿಕೆ ವಹಿಸಿಕೊಂಡಿದ್ದು, ನಿಯಮಿತ ಆರೋಗ್ಯ ತಪಾಸಣೆಗಳನ್ನು ನಡೆಸುತ್ತಿದೆ.

ದಕ್ಷಿಣ ಕಾರ್ಪೋರೇಷನ್ ವ್ಯಾಪ್ತಿಯ 25 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 49 ನಮ್ಮ ಕ್ಲಿನಿಕ್‌ಗಳಲ್ಲಿ ಬುಧವಾರ ಸಮೂಹ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


1,934 ಮಂದಿಗೆ ಆರೋಗ್ಯ ತಪಾಸಣೆ

ಒಟ್ಟು 1,934 ಪೌರಕಾರ್ಮಿಕರು ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 605 ಪುರುಷರು ಮತ್ತು 1,348 ಮಹಿಳೆಯರು ಸೇರಿದ್ದಾರೆ. ತಪಾಸಣಾ ಕಾರ್ಯಕ್ಕಾಗಿ 56 ವೈದ್ಯಾಧಿಕಾರಿಗಳು ಮತ್ತು 168 ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.


ತಪಾಸಣೆಯಲ್ಲಿ ಪತ್ತೆಯಾದ ಕಾಯಿಲೆಗಳು

ಆರೋಗ್ಯ ತಪಾಸಣೆಯಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಗಳ ವಿವರ ಹೀಗಿದೆ:

  • ಮಧುಮೇಹ: 256 ಪ್ರಕರಣ
  • ಅಧಿಕ ರಕ್ತದೊತ್ತಡ: 254 ಪ್ರಕರಣ
  • ರಕ್ತಹೀನತೆ: 67 ಪ್ರಕರಣ
  • ದಂತ ಸಮಸ್ಯೆ: 57 ಪ್ರಕರಣ
  • ಜ್ವರ: 43 ಪ್ರಕರಣ
  • ಕಣ್ಣಿನ ಸಮಸ್ಯೆ: 39 ಪ್ರಕರಣ
  • ಶ್ರವಣ ಸಮಸ್ಯೆ: 16 ಪ್ರಕರಣ
  • ಹೃದಯ ಸಮಸ್ಯೆ: 4 ಪ್ರಕರಣ
  • ಜನರಲ್ ಓಪಿಡಿ: 1,198
  • ಪೌರಕಾರ್ಮಿಕರ ಆರೋಗ್ಯದ ಮೇಲೆ ವಿಶೇಷ ಗಮನ
  • ಪೌರಕಾರ್ಮಿಕರು ನಗರ ಸ್ವಚ್ಛತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆ, ಅವರ ಆರೋಗ್ಯ ರಕ್ಷಣೆಗಾಗಿ ಪಾಲಿಕೆ ನಿರಂತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಸೌಲಭ್ಯ ಒದಗಿಸುತ್ತಿದೆ. ಮಧುಮೇಹ ಮತ್ತು ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗುತ್ತಿದೆ.

Continue Reading

ಬಿಬಿಎಂಪಿ

ಬಿಬಿಎಂಪಿ ಘನತ್ಯಾಜ್ಯ ಆಟೋ ಟಿಪ್ಪರ್‌ಗಳಿಗೆ ನೂತನ ಸಮಯ: ಈಗಿನಿಂದ ಬೆಳಿಗ್ಗೆ 5:30ಕ್ಕೆ ಸ್ಕ್ಯಾನಿಂಗ್ ಆರಂಭ

Published

on

ಬೆಂಗಳೂರು: ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಧಾರ ಕೈಗೊಂಡಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್‌ ವಾಹನಗಳ ಮಸ್ಟರಿಂಗ್ (ಹಾಜರಾತಿ ಸ್ಕ್ಯಾನಿಂಗ್) ಸಮಯವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಈ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.

ಈ ಮೊದಲು ಬೆಳಿಗ್ಗೆ 6:00 ರಿಂದ 7:30 ರವರೆಗೆ ನಡೆಯುತ್ತಿದ್ದ ಮಸ್ಟರಿಂಗ್ ಸಮಯವನ್ನು ಈಗ ಬೆಳಿಗ್ಗೆ 5:30 ರಿಂದ 6:30 ರವರೆಗೆ ಮುಂಚಿತಗೊಳಿಸಲಾಗಿದೆ.


🧹 ಬದಲಾವಣೆ ಉದ್ದೇಶ ಏನು?

  • ನಿವಾಸಿಗಳು ತಮ್ಮ ತ್ಯಾಜ್ಯವನ್ನು ಕೆಲಸಕ್ಕೆ ಹೊರಡುವ ಮೊದಲು ನೀಡಲು ಅನುಕೂಲ.
  • ಜನರ ದೈನಂದಿನ ಕಾರ್ಯವೈಖರಿಯೊಂದಿಗೆ ತ್ಯಾಜ್ಯ ಸಂಗ್ರಹಣೆ ಜೋಡಣೆ.
  • ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಕಪ್ಪು ಚುಕ್ಕಿ (Black Spot) ರೂಪುಗೊಳ್ಳುವಿಕೆ ತಡೆಯುವುದು.

🤝 ಸಾರ್ವಜನಿಕರ ಸಹಕಾರಕ್ಕೆ ಕರೆ:

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಈ ಹೊಸ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಗರದ ನಾಗರಿಕರಿಂದ ಸಹಕಾರ ಕೋರಿದ್ದಾರೆ.

Continue Reading

Trending