Connect with us

ರಾಜಕೀಯ

ಹೋಮದ ಪೂರ್ಣಾಹುತಿ ಬಳಿಕ ಪ್ರಸಾದ ಕೊಡುವ ಪದ್ಧತಿ, ಪ್ರಸಾದ ಕೊಡುವ ಸಮಯ ಬಂದಿದೆ”: ಡಿ.ವಿ. ಸದಾನಂದ ಗೌಡ

Published

on

ಬೆಂಗಳೂರು: “ದೊಡ್ಡ ದೊಡ್ಡ ಹೋಮ ಮಾಡಿ ಪೂರ್ಣಾಹುತಿ ಮಾಡಿದ ನಂತರ ಪ್ರಸಾದ ಕೊಡುತ್ತಾರೆ. ಆ ಪ್ರಸಾದ ಕೊಡುವ ಸಮಯಕ್ಕೆ ಬಂದಿದ್ದೇವೆ” ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಒಂದು ಕಾಲ ಕೂಡಿ ಬಂದಿದೆ. ಆ ಪ್ರಸಾದ ಕೊಡುವ ಸಮಯಕ್ಕೆ ಬಂದಿದ್ದೇವೆ. ಎಲ್ಲಾ ಸಂಸದರು, ಯತ್ನಾಳ್ ಟೀಮ್ ದೆಹಲಿಯಲ್ಲಿ ಇದ್ದಾರೆ. ದೆಹಲಿಯಲ್ಲಿ ಜೋಶಿ ನೇತೃತ್ವದಲ್ಲಿ ಸಂಸದರ ಸಭೆ ಮಾಡಿದ್ದಾರೆ. ಯತ್ನಾಳ್ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಶಿಸ್ತು ಸಮಿತಿ ಅಧ್ಯಕ್ಷರ ಮುಂದೆ ಯತ್ನಾಳ್ ಉತ್ತರ ಕೊಡುತ್ತಾರೆ. ನಮ್ಮಲ್ಲಿನ ಜಗಳ ವಿರೋಧಿಗಳಿಗೆ ಅಸ್ತ್ರ ಆಗುತ್ತಿದೆ” ಎಂದರು.

“ತರುಣ್ ಚುಗ್ ನಿನ್ನೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ನನಗೆ ಯಾವುದೇ ಸಂಬಂಧ ಇಲ್ಲ, ನಾನು ಅದಕ್ಕಾಗಿ ಬಂದಿಲ್ಲ ಅಂದರು. ದೆಹಲಿಗೆ ಈಗಾಗಲೇ ಅಧ್ಯಕ್ಷರು ಹೋಗಿ ಬಂದಿದ್ದಾರೆ. ಆರ್‌. ಅಶೋಕ್ ಕೂಡಾ ದೆಹಲಿಗೆ ಹೋಗಿದ್ದಾರೆ. ಯತ್ನಾಳ್ ಟೀಮ್ ಕೂಡಾ ದೆಹಲಿಯಲ್ಲೇ ಇದೆ. ಇದಕ್ಕಿಂತ ಇನ್ನು ಏನು ರಿಪೋರ್ಟ್ ಬೇಕು? ಎಲ್ಲರ ಕಡೆಯಿಂದಲೂ ವರದಿಯನ್ನು ಹೈಕಮಾಂಡ್ ಸ್ವೀಕರಿಸಿದೆ‌. ಇನ್ನು ಎರಡು ಮೂರು ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬನ್ನಿ. ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ. ಇಲ್ಲಿ ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ” ಎಂದು ಕಿಡಿಕಾರಿದರು‌.

“ಚಮಚಾಗಿರಿ ಮಾಡುವುದರಿಂದ ಪಕ್ಷ ಸಂಘಟನೆ ಆಗಲ್ಲ. ದುಡ್ಡಿನ ಮೂಟೆ ಇಟ್ಟುಕೊಂಡು ಬಂದವರಿಂದ ಪಕ್ಷ ಸಂಘಟನೆ ಆಗಲ್ಲ. ಅತ್ಯಂತ ದೊಡ್ಡ ಶಿಸ್ತು ಉಲ್ಲಂಘನೆ ಸೋಮಶೇಖರ್ ಮತ್ತು ಹೆಬ್ಬಾರ್‌ ಅವರಿಂದ ಆಗಿದೆ. ತೇಪೆ ಹಾಕುವ ಕೆಲಸ ಈ ಬಾರಿ ಆಗಬಾರದು ಅಂತ ಹೈಕಮಾಂಡ್ ನಾಯಕರಿಗೆ ಹೇಳುತ್ತೇನೆ. ಅದು ಯಾರೇ ಆದರೂ ಕ್ರಮ ಆಗಬೇಕು. ಸ್ಥಳೀಯ ಚುನಾವಣೆ ಮೇಲೂ ಇದು ಪರಿಣಾಮ ಬೀರುತ್ತದೆ. ಯತ್ನಾಳ್ ಮಾಡಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಫೈಟ್ ಮಾಡಲು ಒಂದು ತಂಡ ರಚನೆ ಆಗುವುದು ಸರಿಯಲ್ಲ. ಅವರೆಲ್ಲಾ ದೆಹಲಿಗೆ ಹೋಗಿದ್ದರೆ ಮತ್ತಷ್ಟು ಗೌರವ ಬರುತ್ತಿತ್ತು. ತೊಡೆ ತಟ್ಟಿ ಯತ್ನಾಳ್ ಟೀಮ್ ಹೋಗುವುದು ಸರಿಯಲ್ಲ. ಬಲ ಪ್ರದರ್ಶನ ಮಾಡುವುದಾದರೆ ಹೈಕಮಾಂಡ್ ಬೇಕಾಗಿಲ್ಲ ಅಲ್ವಾ?” ಎಂದು ಪ್ರಶ್ನಿಸಿದರು.

“ನಾವು ಹೈಕಮಾಂಡ್‌ಗೆ ಹೋಗಿ ವರದಿ ಕೊಡುವ ಮೂಲಕ ನಮ್ಮ ಗೌರವ ಹೆಚ್ಚಿಸಿಕೊಳ್ಳಬೇಕು. ಇದು ಬಯಲಾಟ ಇದ್ದಂತೆ. ಇವತ್ತು ಒಂದು ತಂಡದ ಆಟ, ನಾಳೆ ಮತ್ತೊಂದು ತಂಡದ ಆಟ. ರಾಷ್ಟ್ರೀಯ ಪ್ರಮುಖರು ತೀರ್ಮಾನ ಮಾಡಬೇಕು. ತಪ್ಪು ಇದ್ದವರನ್ನು ಹೊರ ಹಾಕಬೇಕು, ಅಶಿಸ್ತನ್ನು ಸರಿ ಮಾಡಬೇಕು. ಪ್ರತ್ಯೇಕ ಹೋರಾಟ ಮಾಡುವುದನ್ನು ನಿಲ್ಲಿಸಬೇಕು. ಬದಲಾವಣೆಯಿಂದ ಎಲ್ಲಾ ಸರಿ ಮಾಡಬಹುದು ಎಂದು ಅನ್ನಿಸಿದರೆ, ಅದಾದರೂ ಮಾಡಿ. ಸದಸ್ಯತ್ವದಲ್ಲಿ ನಾವು ಎಷ್ಟರಮಟ್ಟಿಗೆ ಸ್ಥಾನದಲ್ಲಿ ಇದ್ದರೆ ಏನು? ಪಕ್ಷದ ಜಗಳ ಬೀದಿಗೆ ಬಂದಿದೆ. ಒಂದು ಟೀಮ್ ವಕ್ಫ್​ ವಿರುದ್ಧ ಹೋರಾಟ ಮಾಡಿ ಜನರ ಬಳಿ ಹೋದ ಮೇಲೆ ಮತ್ತೊಂದು ತಂಡ ಹೋದರೆ ಪ್ರಯೋಜನ ಆಗುವುದಿಲ್ಲ” ಎಂದು ತಿಳಿಸಿದರು.

“ಡಿಸೆಂಬರ್ 7 ರಂದು ತೀರ್ಮಾನ ಆಗಲು ಉಸ್ತುವಾರಿಗಳ ಕೈಯಲ್ಲಿ ಏನೂ ಇಲ್ಲ. ಏನೇ ಆದರೂ ಜೆ.ಪಿ. ನಡ್ಡಾ ತೀರ್ಮಾನ ಮಾಡಬೇಕು. ಉಸ್ತುವಾರಿಗಳು ವರದಿ ಪಡೆದು ಹೈಕಮಾಂಡ್​ಗೆ ಕೊಡಬೇಕು ಅಷ್ಟೇ. ಆರ್. ಅಶೋಕ್ ಅವರ ಜೊತೆ ಮಾತನಾಡಿದ್ದೆ. ದೆಹಲಿಗೆ ಹೋಗುತ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ನಾವೆಲ್ಲರೂ ಮಾತನಾಡುವುದು ಸರಿ ಇದೆ ಅಂತ ಅಶೋಕ್ ಹೇಳಿದ್ದಾರೆ. ಪರಿಹಾರ ಇದ್ದೇ ಇದೆ, ಎಲ್ಲರೂ ತಾಳ್ಮೆಯಿಂದ ಇರಬೇಕು” ಎಂದರು.

ದೇಶ

ಸಂಸತ್ ಸಂಕೀರ್ಣದಲ್ಲಿ ಅಪರೂಪದ ದೃಶ್ಯ: ಮೋದಿ-ರಾಹುಲ್ ಮಾತುಕತೆ ವಿಡಿಯೋ ಸದ್ದು

Published

on

By

ನವದೆಹಲಿ: ಪ್ರಧಾನಿ Narendra Modi ಮತ್ತು ಲೋಕಸಭೆಯ ವಿಪಕ್ಷ ನಾಯಕ Rahul Gandhi ನಡುವಿನ ಅಪರೂಪದ ಸೌಹಾರ್ದಯುತ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಮಾಜ ಸುಧಾರಕ Jyotirao Phule ಅವರ 200ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸಂಸತ್ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವಿವಿಧ ರಾಷ್ಟ್ರೀಯ ಪಕ್ಷಗಳ ನಾಯಕರು ಭಾಗವಹಿಸಿದ್ದ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಸ್ವಾಗತಿಸಿದರು.

ಈ ವೇಳೆ ಮೋದಿ ಮತ್ತು ರಾಹುಲ್ ಗಾಂಧಿ ಕೆಲ ಕ್ಷಣಗಳು ಮುಖಾಮುಖಿಯಾಗಿ ಮಾತುಕತೆ ನಡೆಸಿದರು. ಅವರ ನಡುವಿನ ಈ ಸ್ನೇಹಪೂರ್ಣ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದ್ದು, ರಾಜಕೀಯ ವೈಮನಸ್ಯದ ನಡುವೆಯೂ ಇಂತಹ ಕ್ಷಣಗಳು ಅಪರೂಪ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ Om Birla, ಕೇಂದ್ರ ಸಚಿವರಾದ J. P. Nadda ಮತ್ತು Arjun Ram Meghwal ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ನಾಯಕಿ Sonia Gandhi ಅವರ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಬಳಿ ವಿಚಾರಿಸಿದ್ದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವುದು ರಾಜಕೀಯದಾಚೆಯ ಮಾನವೀಯತೆಯನ್ನು ತೋರಿಸಿದೆ.

ಒಟ್ಟಿನಲ್ಲಿ, ರಾಜಕೀಯ ಪೈಪೋಟಿಯ ನಡುವೆಯೂ ನಾಯಕರು ಸೌಹಾರ್ದಯುತವಾಗಿ ಮಾತುಕತೆ ನಡೆಸಿದ ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ಜಮೀರ್ ವಿರುದ್ಧ ಮುಸ್ಲಿಂ ನಾಯಕರ ಅಸಮಾಧಾನ: ಕಾಂಗ್ರೆಸ್‌ಗೆ ಹೊಸ ತಲೆನೋವು

Published

on

By

ಬೆಂಗಳೂರು: ದಾವಣಗೆರೆ ಉಪಚುನಾವಣೆ ಮುಗಿದರೂ ಕಾಂಗ್ರೆಸ್ ಪಕ್ಷದ ಒಳಜಗಳ ಮಾತ್ರ ಇನ್ನೂ ಶಮನವಾಗಿಲ್ಲ. Indian National Congress ಒಳಗೆ ಬಂಡಾಯ, ಅಸಮಾಧಾನ ಮತ್ತಷ್ಟು ತೀವ್ರವಾಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ವಿಚಾರವಾಗಿ ಆರಂಭವಾದ ಅಸಮಾಧಾನ ಈಗ ಚುನಾವಣೆಯ ಬಳಿಕವೂ ಮುಂದುವರಿದಿದೆ.

ಸಚಿವ Zameer Ahmed Khan ವಿರುದ್ಧ ಸ್ವಪಕ್ಷದವರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದಿರುವುದು ಹಾಗೂ ಮುಸ್ಲಿಂ ನಾಯಕರನ್ನು ಮನವೊಲಿಸಲು ವಿಫಲವಾದ ಕಾರಣ, ಅವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರವಾಗಿ ಹೈಕಮಾಂಡ್‌ಗೆ ವರದಿ ಕೂಡ ಸಲ್ಲಿಕೆಯಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ, ಡಿಸಿಎಂ D. K. Shivakumar ಪ್ರತಿಕ್ರಿಯಿಸಿ, ಈ ಸಂಬಂಧ ವರದಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳು ಸಹಜವಾದರೂ, ಪಕ್ಷವು ಎಲ್ಲವನ್ನೂ ಗಮನಿಸುತ್ತಿದೆ ಎಂದಿದ್ದಾರೆ.

ಈ ನಡುವೆ ಸಂಪುಟ ಪುನಾರಚನೆ ವಿಚಾರವೂ ಕಾಂಗ್ರೆಸ್‌ನಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಸುಮಾರು 40ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಗೆ ತೆರಳಿ, Mallikarjun Kharge ಹಾಗೂ Rahul Gandhi ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಂಡಿಸಲು ತಯಾರಾಗಿದ್ದಾರೆ.

ಇದರ ಜೊತೆಗೆ, ಮುಖ್ಯಮಂತ್ರಿ Siddaramaiah ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ ದಾವಣಗೆರೆ ಉಪಚುನಾವಣೆ ಕಾಂಗ್ರೆಸ್‌ಗೆ ಒಳಜಗಳದ ಬಾಗಿಲು ತೆರೆದಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳ ಸಾಧ್ಯತೆ ಹೆಚ್ಚಾಗಿದೆ.

Continue Reading

ದೇಶ

“ಇದು ಅತ್ಯಂತ ಕೆಟ್ಟ ಸರ್ಕಾರ” – ಮಾಜಿ ಪ್ರಧಾನಿ H. D. Deve Gowda

Published

on

By

ಬೆಂಗಳೂರು: ಮುಖ್ಯಮಂತ್ರಿ Siddaramaiah ವಿರುದ್ಧ ಮಾಜಿ ಪ್ರಧಾನಿ H. D. Deve Gowda ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರವಾಗಿಲ್ಲ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಅದನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಅಹಿಂದ ನಾಯಕರೇ ಕುಮಾರಸ್ವಾಮಿ ಸರ್ಕಾರ ಕೆಡವಿದರು. ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಸಂಚು ನಡೆಸಿದರು. ಇದಕ್ಕೆ ಪ್ರತಿಯಾಗಿ ನಾನು ಸ್ವತಃ H. D. Kumaraswamy ಅವರಿಗೆ ಬಿಜೆಪಿ ಜೊತೆ ಮೈತ್ರಿಗೆ ಅನುಮತಿ ನೀಡಿದೆ ಎಂದು ಹೇಳಿದರು. ಕೇಂದ್ರದಲ್ಲಿ ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದರೂ, ರಾಜ್ಯ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಕುದುರೆಮುಖ ಕಂಪನಿ ಮತ್ತು ಹೆಚ್ಎಂಟಿ ವಿಚಾರದಲ್ಲಿ ಅನಗತ್ಯ ಅಡೆತಡೆ ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಪಕ್ಷದ ನಂಬಿಕೆ ದ್ರೋಹದಿಂದಲೇ ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಸೇರಬೇಕಾಯಿತು ಎಂದು ಕಿಡಿಕಾರಿದರು.

“ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ” ಎಂದು ದೇವೇಗೌಡರು ಗುಡುಗಿದರು. ಜನರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದು, ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಹೇಳಿದರು.

ಮಹಿಳಾ ಮೀಸಲಾತಿ ವಿಚಾರದಲ್ಲೂ ಜೆಡಿಎಸ್ ಪಾತ್ರವನ್ನು ಒತ್ತಿ ಹೇಳಿದ ಅವರು, ಈ ಯೋಜನೆಯನ್ನು ಮೊದಲು ಮುಂದಿಟ್ಟದ್ದು ನಾವು ಎಂದು ಹೇಳಿದರು. ನಂತರ ಪ್ರಧಾನಿ Narendra Modi ಅದನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿದ್ದು, ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ದೇವೇಗೌಡರು ಭವಿಷ್ಯ ನುಡಿದರು.

Continue Reading

Trending