Connect with us

ಕ್ರೀಡೆ

ಟೀಂ ಇಂಡಿಯಾದಲ್ಲಿ ಒಳಜಗಳ..!? ರೋಹಿತ್‌ ಶರ್ಮಾ-ಶಮಿ ನಡುವೆ ಮಾತಿನ ಚಕಮಕಿ.. ದಿಗ್ಗಜರ ಕಿತ್ತಾಟಕ್ಕೆ ಕಾರಣವೇನು?

Published

on

Rohit Sharma and Mohammed Shami: ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಮತ್ತೆ ಯಾವಾಗ ಆಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆಮಾಡಿದೆ. ಕಳೆದ ಕೆಲವು ತಿಂಗಳಿಂದ ಗಾಯದಿಂದ ಬಳಲುತ್ತಿರುವ ಶಮಿ ತಂಡಕ್ಕೆ ಮರುಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳು ಬಂದಿದ್ದವು. ಶಮಿ ನ್ಯೂಜಿಲೆಂಡ್ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿಯೂ ಆಡಿರಲಿಲ್ಲ. ಆ ನಂತರ ರಣಜಿಯಲ್ಲಿ ಬಂಗಾಳ ತಂಡದ ಪರವಾಗಿ ಆಡಿದರು.

ಪಾದದ ಗಾಯದಿಂದಾಗಿ ಶಮಿ ಈ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಗೊತ್ತೇ ಇದೆ. ಇದರಿಂದಾಗಿ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಶಮಿ ಆಡಿದ್ದರು. ಆ ಬಳಿಕ ಕಳೆದ ತಿಂಗಳಷ್ಟೇ ಮತ್ತೆ ಬೌಲಿಂಗ್ ಆರಂಭಿಸಿದ್ದರು. ರಣಜಿ ಟ್ರೋಫಿಯಲ್ಲಿ ಅವರು ಮಧ್ಯಪ್ರದೇಶ ವಿರುದ್ಧ 7 ವಿಕೆಟ್ ಪಡೆದರು. ಅದರ ಬೆನ್ನಲ್ಲೇ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ಗಳ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, “ಶಮಿಗಾಗಿ ಯಾವಗಲೂ ಟೀಂ ಇಂಡಿಯಾದ ಬಾಗಿಲು ತೆರೆದೇ ಇರುತ್ತದೆ. ಅವರ ಮೇಲೆ ಕೊಂಚ ನಿಗಾ ಇಟ್ಟಿದ್ದೇವೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವಾಗ ಕೂಡ ಅವರ ಮೊಣಕಾಲುಗಳಲ್ಲಿ ಸ್ವಲ್ಪ ಊತ ಇತ್ತು” ಎಂದಿದ್ದರು.

ಇದೇ ಕಾರಣದಿಂದ ಟೆಸ್ಟ್‌ ಆಡಲು ಸಾಧ್ಯವಾಗಿರಲಿಲ್ಲ. ಅವರು ತುಂಬಾ ಜಾಗರೂಕತೆ ಅನುಸರಿಸಬೇಕೆಂದು ನಾವು ಇಚ್ಛಿಸುತ್ತೇವೆ. ಇಲ್ಲಿಗೆ ಬಂದು ಗಾಯವನ್ನು ದೊಡ್ಡದಾಗಿ ಮಾಡೋದು ನಮಗೆ ಇಷ್ಟವಿಲ್ಲ. ಶಮಿ 100 ಪ್ರತಿಶತ ಚೇತರಿಸಿಕೊಳ್ಳಲು ನಾವು ಕಾಯುತ್ತಿದ್ದೇವೆ. ಗಾಯಗೊಂಡು ಹಿಂತಿರುಗುತ್ತಿರುವ ಅವರನ್ನು ಇಲ್ಲಿಗೆ ಕರೆತಂದು ಹೆಚ್ಚಿನ ಕೆಲಸದ ಹೊರೆ ನೀಡಿ ಒತ್ತಡಕ್ಕೆ ಒಳಪಡಿಸುವುದು ನಮಗೆ ಇಷ್ಟವಿಲ್ಲ. ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ. ಭಾರತ ತಂಡದ ಪ್ರದರ್ಶನವನ್ನೂ ಅವರು ನೋಡಿಕೊಳ್ಳುತ್ತಾರೆ. ಸಂಪೂರ್ಣ ಚೇತರಿಸಿಕೊಂಡ ನಂತರ ಯಾವಾಗ ಬೇಕಾದರೂ ಬಂದು ಆಡಬಹುದು” ಎಂದು ರೋಹಿತ್ ಹೇಳಿದ್ದಾರೆ.

ಆದರೆ, ರೋಹಿತ್ ಮತ್ತು ಶಮಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶಮಿ ಮೊಣಕಾಲು ಊದಿಕೊಂಡಿದ್ದನ್ನು ಬಹಿರಂಗಪಡಿಸಿದ್ದರು. ನ್ಯೂಜಿಲೆಂಡ್ ಸರಣಿ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ಶಮಿ ಈ ಸರಣಿಗೆ ಅಥವಾ ಆಸ್ಟ್ರೇಲಿಯಾ ಸರಣಿಗೆ ಸಂಪೂರ್ಣ ಫಿಟ್ ಆಗುತ್ತಾರಾ ಎಂದು ಹೇಳಲು ಸಾಧ್ಯವಿಲ್ಲ.ಇದು ತುಂಬಾ ಕಷ್ಟದ ವಿಷಯ. ಶಮಿ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಅವನ ಮೊಣಕಾಲಿನಲ್ಲಿ ಊತವಿದೆ ಚೇತರಿಸಿಕೊಳ್ಳುತ್ತಿದ್ದಾನೆ.” ಎಂದಿದ್ದರು.

ಆದರೆ ಆ ಸಮಯದಲ್ಲಿ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರು ಮತ್ತು ಆಡಲು ಸಿದ್ಧರಾಗಿದ್ದರು ಎಂದು ಶಮಿ ರೋಹಿತ್‌ಗೆ ಹೇಳಿದ್ದರಂತೆ. ಆದರೆ ಇದನ್ನು ರೋಹಿತ್ ಗಮನಿಸದೆ, ಶಮಿಗೆ ಸಮಸ್ಯೆಯಿದೆ ಎಂಬುದು ತಿಳಿದುಬಂದಿಲ್ಲ.

ಆಸ್ಟ್ರೇಲಿಯಾ ಸರಣಿಯಲ್ಲಿ ಶಮಿ ಆಡುತ್ತಾರಾ?
ವರದಿಯ ಪ್ರಕಾರ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶಮಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಶಮಿ ಆಸ್ಟ್ರೇಲಿಯಕ್ಕೆ ಹೋಗುವ ಸಾಧ್ಯತೆಯಿದ್ದರೂ, ಅವರು ಪ್ರಸ್ತುತ SMAT ನಲ್ಲಿ ಬಂಗಾಳದ ಪರವಾಗಿ ಆಡುತ್ತಿದ್ದಾರೆ. ಬಿಸಿಸಿಐ ಅವರಿಗೆ ಇನ್ನೂ ಅನುಮತಿ ನೀಡಿಲ್ಲ. ಎಲ್ಲರೂ ಎನ್‌ಸಿಎಯಿಂದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಶಮಿ ಆಸ್ಟ್ರೇಲಿಯಕ್ಕೆ ಬಂದರೂ 3ನೇ ಟೆಸ್ಟ್ ನಲ್ಲಿ ಆಡಲು ಅವಕಾಶವಿಲ್ಲ. ಬದಲಾಗಿ 4 ಮತ್ತು 5ನೇ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆಯಬಹುದು.

ಕ್ರೀಡೆ

ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!

Published

on

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.

ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.

ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Continue Reading

ಅಪರಾಧ

ಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!

Published

on

ಬೆಂಗಳೂರು, ಏಪ್ರಿಲ್ 04: ನಗರದಲ್ಲಿ IPL 2026 ಟಿಕೆಟ್ ಕ್ರೇಜ್ ಜೋರಾಗಿರುವ ನಡುವೆ ಆನ್‌ಲೈನ್ ಮೋಸದ ಪ್ರಕರಣವೂ ಬೆಳಕಿಗೆ ಬಂದಿದೆ. ಅನಧಿಕೃತ ಪ್ಲಾಟ್‌ಫಾರ್ಮ್ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದ ಟೆಕ್ಕಿ ಒಬ್ಬರು ₹1.46 ಲಕ್ಷ ಕಳೆದುಕೊಂಡಿರುವ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

Bengaluruನ ಬಿ. ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ, Instagramನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದಾರೆ. ಆತ ತನ್ನನ್ನು M. Chinnaswamy Stadium ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡು ನಂಬಿಕೆ ಮೂಡಿಸಿದ್ದಾನೆ.

ಮೊದಲಿಗೆ ಎರಡು ಟಿಕೆಟ್‌ಗಳಿಗೆ ₹3,700 ಕೇಳಿದ ಆರೋಪಿಯು, ಬಳಿಕ ಭದ್ರತಾ ಠೇವಣಿ, ಐಡಿ ಕಾರ್ಡ್ ಮತ್ತು ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದಾನೆ.

ಆತನ ಮಾತು ನಂಬಿದ ಟೆಕ್ಕಿ, ತನ್ನ ಹಾಗೂ ತಾಯಿಯ ಖಾತೆಯಿಂದ ಯುಪಿಐ ಮೂಲಕ ಒಟ್ಟು ₹1.46 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ಆರೋಪಿಯು ಟಿಕೆಟ್ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾನೆ.

ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಐಪಿಎಲ್ ಟಿಕೆಟ್ ಖರೀದಿಸುವಾಗ ಅಧಿಕೃತ ವೆಬ್‌ಸೈಟ್ ಅಥವಾ ಮಾನ್ಯ ಮಾರಾಟಗಾರರ ಮೂಲಕವೇ ಖರೀದಿಸಲು ಸಲಹೆ ನೀಡಿದ್ದಾರೆ. ಅನಧಿಕೃತ ಲಿಂಕ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹಾರ ಮಾಡುವುದರಿಂದ ಇಂತಹ ಮೋಸಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

Continue Reading

ಕ್ರೀಡೆ

“ಆ ಮಾತುಗಳು ನನ್ನದಲ್ಲ”: ಯುವಿ ಸ್ಪಷ್ಟನೆ, ಧೋನಿ-ಕಪಿಲ್‌ಗೆ ಕ್ಷಮೆ

Published

on

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ Yuvraj Singh ಅವರು ವಿಶ್ವಕಪ್ ವಿಜೇತ ನಾಯಕರುಗಳಾದ Mahendra Singh Dhoni ಮತ್ತು Kapil Dev ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯುವರಾಜ್, ತಮ್ಮ ತಂದೆ Yograj Singh ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕ್ಷಮೆಯಾಚನೆ ಮಾಡಿದ್ದಾರೆ. “ನನ್ನ ತಂದೆಯ ಮಾತುಗಳಿಗಾಗಿ ನಾನು ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಆ ಮಾತುಗಳು ನನ್ನವು ಅಲ್ಲ ಎಂಬುದು ನಿಮಗೆ ತಿಳಿದಿದೆ. ನೀವು ಇಬ್ಬರೂ ಭಾರತಕ್ಕೆ ನೀಡಿದ ಕೊಡುಗೆ ಅಪಾರ” ಎಂದು ಯುವರಾಜ್ ಹೇಳಿದ್ದಾರೆ.

ಈ ಹಿಂದೆ ಯೋಗರಾಜ್ ಸಿಂಗ್ ಹಲವಾರು ಬಾರಿ ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ವಿಶೇಷವಾಗಿ, ಯುವರಾಜ್ ಅವರ ವೃತ್ತಿಜೀವನದ ಸಂಕಷ್ಟದ ಸಂದರ್ಭದಲ್ಲಿ ಕೆಲವು ಆಟಗಾರರು ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದ್ದರು. 2011ರ ವಿಶ್ವಕಪ್ ವೇಳೆ ತಂಡದ ಆಯ್ಕೆ ವಿಚಾರದಲ್ಲಿ ಧೋನಿ ವಿರುದ್ಧವೂ ಯೋಗರಾಜ್ ಟೀಕಿಸಿದ್ದರು.

ಇದೇ ವೇಳೆ, 1983ರ ವಿಶ್ವಕಪ್ ಸಮಯದಲ್ಲಿ ಕಪಿಲ್ ದೇವ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲಾ ಹೇಳಿಕೆಗಳಿಂದ ಕ್ರಿಕೆಟ್ ವಲಯದಲ್ಲಿ ವಿವಾದ ಉಂಟಾಗಿತ್ತು.

ಈಗ ಯುವರಾಜ್ ಸಿಂಗ್ ಸ್ವತಃ ಮುಂದಾಗಿ ಕ್ಷಮೆ ಕೇಳಿರುವುದು ವಿವಾದಕ್ಕೆ ತೆರೆ ಬೀಳುವ ಸೂಚನೆ ನೀಡಿದೆ. ಕ್ರೀಡಾ ವಲಯದಲ್ಲಿ ಪರಸ್ಪರ ಗೌರವ ಮುಖ್ಯ ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

Continue Reading

Trending