Connect with us

ದೇಶ

ದೇಶಿಯ ಮಾರುಕಟ್ಟೆಗೆ ಎಂಟ್ರಿಕೊಟ್ಟ ರೋಲ್ಸ್ ರಾಯ್ಸ್ ಘೋಸ್ಟ್​ 2​ – ಲುಕ್​ಗೆ ಫಿದಾ, ಬೆಲೆ ಕೇಳಿದರೆ ಶಾಕ್​ – ROLLS ROYCE GHOST

Published

on

Rolls-Royce Ghost Series: ರೋಲ್ಸ್ ರಾಯ್ಸ್ ಘೋಸ್ಟ್ ಸರಣಿ 2ರ ರಿಫ್ರೆಶ್ ಮಾಡೆಲ್ ಅನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರು ಬಿಡುಗಡೆಯಾದ ಕೇವಲ ಎರಡು ತಿಂಗಳ ನಂತರ, ಐಷಾರಾಮಿ ಸೆಡಾನ್‌ನ ಸಣ್ಣ ಮಾದರಿಯು ಸಹ ಭಾರತೀಯ ಮಾರುಕಟ್ಟೆಗೆ ಬಂದಿದೆ. ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್‌ಲಿಫ್ಟ್ ಸ್ಟ್ಯಾಂಡರ್ಡ್, ಎಕ್ಸ್‌ಟೆಂಡೆಡ್ ಮತ್ತು ಬ್ಲ್ಯಾಕ್ ಬ್ಯಾಡ್ಜ್ ಎಂಬ ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಂದಿದೆ.

ಇದರ ಬೆಲೆ ಎಷ್ಟು ಗೊತ್ತಾ?: ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್​ಲಿಫ್ಟ್​ನ ಸ್ಟ್ಯಾಂಡರ್ಡ್ ಮಾದರಿಯ ಬೆಲೆ 8.95 ಕೋಟಿ ರೂಪಾಯಿ. ಇದರ ವಿಸ್ತೃತ ರೂಪಾಂತರದ ಬೆಲೆ ರೂ 10.19 ಕೋಟಿ ಮತ್ತು ಬ್ಲ್ಯಾಕ್​ ಬ್ಯಾಡ್ಜ್ ರೂಪಾಂತರದ ಬೆಲೆ ರೂ 10.52 ಕೋಟಿ. ಈ ರೋಲ್ಸ್ ರಾಯ್ಸ್ ಕಾರಿನ ಫೇಸ್‌ಲಿಫ್ಟ್ ಮಾಡೆಲ್‌ಗಾಗಿ ವಾಹನ ತಯಾರಕರು ಬುಕ್ಕಿಂಗ್‌ಗಳನ್ನು ಪ್ರಾರಂಭಿಸಿದ್ದಾರೆ. ಕಂಪನಿಯು 2025 ರ ಮೊದಲ ನಾಲ್ಕು ತಿಂಗಳಲ್ಲಿ ಈ ಕಾರನ್ನು ಡೆಲಿವೆರಿ ಮಾಡಬಹುದಾಗಿದೆ.

ಘೋಸ್ಟ್ ಫೇಸ್‌ಲಿಫ್ಟ್‌ ವಿಶೇಷತೆಗಳು: ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್‌ಲಿಫ್ಟ್ ಬ್ಲಾಕ್ ವಿನ್ಯಾಸದೊಂದಿಗೆ ತರಲಾಗಿದೆ. ಇದೇ ರೀತಿಯ ವಿನ್ಯಾಸವು ಸರಣಿ 2 ಕಲ್ಲಿನನ್‌ನಲ್ಲಿಯೂ ಕಂಡು ಬರುತ್ತದೆ. ಮುಂಭಾಗದ ಬಂಪರ್ ಕೆಳಗೆ ಸಣ್ಣ ಗ್ರಿಲ್ ಅನ್ನು ಒದಗಿಸಲಾಗಿದೆ. ಅದರ ಸುತ್ತಲಿನ ಎಡ್ಜ್​ಗಳಲ್ಲಿ DRL ಗಳನ್ನು ಅಳವಡಿಸಲಾಗಿದೆ. ಈ ವಾಹನದ ಹಿಂಭಾಗದ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಟೈಲ್‌ಲೈಟ್‌ಗಳೊಂದಿಗೆ ಹೊಸ ಲುಕ್​ ನೀಡಲಾಗಿದೆ. ಈ ವಾಹನದಲ್ಲಿ ಎರಡು ರೀತಿಯ 22 ಇಂಚಿನ ಅಲಾಯ್​ ವ್ಹೀಲ್​ಗಳನ್ನು ಅಳವಡಿಸಲು ಅವಕಾಶವಿದೆ.

ಎಂಜಿನ್​ ಪವರ್​: ರೋಲ್ಸ್ ರಾಯ್ಸ್ ಘೋಸ್ಟ್ ಫೇಸ್‌ಲಿಫ್ಟ್‌ನ ಹೊಸ ಮಾದರಿಯಲ್ಲಿ ವಾಹನ ತಯಾರಕರು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹಿಂದಿನ ಮಾದರಿಯಂತೆ, ಈ ವಾಹನವು 6.75-ಲೀಟರ್, ಟ್ವಿನ್-ಟರ್ಬೊ V12 ಎಂಜಿನ್ ಅನ್ನು ಹೊಂದಿದೆ. ಇದು 8-ಸ್ಪೀಡ್ ಆಟೋಮೆಟಿಕ್​ ಗೇರ್‌ಬಾಕ್ಸ್‌ಗೆ ಸಹ ಜೋಡಿಸಲಾಗಿದೆ. ಘೋಸ್ಟ್ ಫೇಸ್‌ಲಿಫ್ಟ್‌ನ ಪ್ರಮಾಣಿತ ಮತ್ತು ವಿಸ್ತೃತ ಆವೃತ್ತಿಗಳಲ್ಲಿ ಸ್ಥಾಪಿಸಲಾದ ಎಂಜಿನ್ 563 hp ಪವರ್​ ಅನ್ನು ಒದಗಿಸುತ್ತದೆ ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯಲ್ಲಿ, ಅದೇ ಎಂಜಿನ್ 592 bhp ಪವರ್ ಮತ್ತು 900 Nm ಟಾರ್ಕ್ ಉತ್ಪಾದಿಸುತ್ತದೆ.

ದೇಶ

ಇರಾನ್ ಶಾಕ್: ಹೊಸ ಸರ್ವೋಚ್ಚ ನಾಯಕ ಗಂಭೀರ ಸ್ಥಿತಿ!

Published

on

By

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಇರಾನ್ ರಾಜಕೀಯ ವಲಯದಲ್ಲಿ ಸಂಚಲನಕಾರಿ ಮಾಹಿತಿ ಹೊರಬಂದಿದೆ. ಹೊಸದಾಗಿ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗಿರುವ Mojtaba Khamenei ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, Qom ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಡಳಿತಾತ್ಮಕ ನಿರ್ಧಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಗುಪ್ತಚರ ಮೂಲಗಳು ಸೂಚಿಸಿವೆ.

ಈ ದಾಳಿಯಲ್ಲೇ ಅವರ ತಂದೆ, ಇರಾನ್‌ನ ಹಿಂದಿನ ಸರ್ವೋಚ್ಚ ನಾಯಕ Ali Khamenei ಮೃತಪಟ್ಟಿರುವುದಾಗಿ ಹೇಳಲಾಗಿದೆ. ಶಿಯಾ ಧರ್ಮಗುರುಗಳ ಕೇಂದ್ರವಾಗಿರುವ ಕೋಮ್‌ನಲ್ಲಿ ಅವರ ಅಂತ್ಯಕ್ರಿಯೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

ಯುದ್ಧದ ಆರಂಭದಿಂದಲೇ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಪ್ರಕಟವಾಗಿರುವ ಹೇಳಿಕೆಗಳನ್ನು ರಾಜ್ಯ ಮಾಧ್ಯಮಗಳು ಓದುತ್ತಿದ್ದರೂ, ಅವರ ಧ್ವನಿ ದಾಖಲೆ ಇಲ್ಲದಿರುವುದು ಅವರ ಆರೋಗ್ಯದ ಬಗ್ಗೆ ಅನುಮಾನ ಮೂಡಿಸಿದೆ.

ಇದಲ್ಲದೆ, Iran ಸರ್ಕಾರ ಕೃತಕ ಬುದ್ಧಿಮತ್ತೆ ಬಳಸಿ ಬಿಡುಗಡೆ ಮಾಡಿದ ವಿಡಿಯೋವೂ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಖಮೇನಿ ಯುದ್ಧ ತಂತ್ರಗಳನ್ನು ಪರಿಶೀಲಿಸುತ್ತಿರುವಂತೆ ತೋರಿಸಲಾಗಿದೆ.

ಒಟ್ಟಿನಲ್ಲಿ, ಇರಾನ್‌ನಲ್ಲಿ ನಾಯಕತ್ವದ ಅನಿಶ್ಚಿತತೆ ಹಾಗೂ ಯುದ್ಧದ ಪರಿಣಾಮ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟಿಸಿದೆ.

Continue Reading

ದೇಶ

Bengaluru : ₹180ಗೆ ತೆಂಗಿನ ನೀರು? ಬೆಂಗಳೂರಲ್ಲಿ ಏನಾಗ್ತಿದೆ ನೋಡಿ!

Published

on

By

ಬೆಂಗಳೂರು: ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ನೈಸರ್ಗಿಕ ಪಾನೀಯವಾದ ತೆಂಗಿನ ನೀರಿಗೆ ಸಿಕ್ಕಿರುವ ಬೇಡಿಕೆ ಈಗ ಅಚ್ಚರಿಯ ಮಟ್ಟ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ತೆಂಗಿನ ನೀರನ್ನು ಲೀಟರ್‌ಗೆ ಮಾರಾಟ ಮಾಡಲಾಗುತ್ತಿದ್ದು, ಅದರ ಬೆಲೆ ಕೇಳಿದವರು ಬೆಚ್ಚಿಬಿದ್ದಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಒಂದು ಲೀಟರ್ ತೆಂಗಿನ ನೀರಿಗೆ ₹180 ವರೆಗೆ ದರ ನಿಗದಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಒಂದೇ ತೆಂಗಿನಕಾಯಿ ₹70ರಿಂದ ₹80ರೊಳಗೆ ಮಾರಾಟವಾಗುತ್ತಿದ್ದರೂ, ಬೇಡಿಕೆ ಹೆಚ್ಚಾದ ಕಾರಣ ವ್ಯಾಪಾರಿಗಳು ಹೊಸ ರೀತಿಯಲ್ಲಿ ಲೀಟರ್ ಲೆಕ್ಕದಲ್ಲಿ ಮಾರಾಟ ಆರಂಭಿಸಿದ್ದಾರೆ.

ಬೆಂಗಳೂರಿನ ನವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ “1 ಲೀಟರ್ ತೆಂಗಿನ ನೀರು – ₹180” ಎಂಬ ಬೋರ್ಡ್‌ಗಳು ಕಾಣಿಸಿಕೊಂಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೇಸಿಗೆ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಜನರು ಹೆಚ್ಚು ತಂಪು ಮತ್ತು ಆರೋಗ್ಯಕರ ಪಾನೀಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೆಂಗಿನ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ, ಪೂರೈಕೆ ಕಡಿಮೆ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಸಾಮಾನ್ಯ ಜನರು ಮಾತ್ರ ಈ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇಷ್ಟು ದುಬಾರಿ ದರದಲ್ಲಿ ತೆಂಗಿನ ನೀರು ಖರೀದಿಸಲು ಸಾಧ್ಯವೇ?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಬೇಡಿಕೆ ಹಾಗೂ ಪೂರೈಕೆ ನಡುವಿನ ಅಸಮತೋಲನದಿಂದ ಬೆಂಗಳೂರಿನಲ್ಲಿ ತೆಂಗಿನ ನೀರಿನ ಬೆಲೆ ಗಗನಕ್ಕೇರಿದೆ.

Continue Reading

ದೇಶ

12 ವರ್ಷದ ಗೊಂದಲಕ್ಕೆ ತೆರೆ: ಅಮರಾವತಿ ರಾಜಧಾನಿ ಘೋಷಣೆ

Published

on

By

ಅಮರಾವತಿ: ಆಂಧ್ರ ಪ್ರದೇಶದ ರಾಜಧಾನಿ ಕುರಿತಾಗಿ ಹನ್ನೆರಡು ವರ್ಷಗಳ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದ ಏಕೈಕ ರಾಜಧಾನಿಯಾಗಿ Amaravati ನಗರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ನಿರ್ಧಾರದಿಂದ ದೀರ್ಘಕಾಲದ ರಾಜಕೀಯ ಚರ್ಚೆಗಳಿಗೆ ಅಂತ್ಯ ಕಂಡಿದೆ.

2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಗಿ Telangana ಹುಟ್ಟಿಕೊಂಡ ನಂತರ, Hyderabad ಅನ್ನು ತಾತ್ಕಾಲಿಕ ಜಂಟಿ ರಾಜಧಾನಿಯಾಗಿ ಘೋಷಿಸಲಾಗಿತ್ತು. ಆ ಅವಧಿ ಮುಗಿದರೂ ಹೊಸ ರಾಜಧಾನಿ ಕುರಿತು ಸ್ಪಷ್ಟತೆ ಬರದೇ ಹನ್ನೆರಡು ವರ್ಷಗಳ ಕಾಲ ಗೊಂದಲ ಮುಂದುವರಿದಿತ್ತು.

ಹಿಂದಿನ ಮುಖ್ಯಮಂತ್ರಿ Y. S. Jagan Mohan Reddy ಮೂರು ರಾಜಧಾನಿಗಳ ಯೋಜನೆ (ಅಮರಾವತಿ – ಶಾಸನ, ಕರುನೂಲ್ – ನ್ಯಾಯಾಂಗ, ವಿಶಾಖಪಟ್ಟಣಂ – ಆಡಳಿತ) ಮುಂದಿಟ್ಟಿದ್ದು ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಯಿತು. ಈ ಪ್ರಸ್ತಾವನೆಗೆ ಕೇಂದ್ರದ ಅನುಮೋದನೆ ಸಿಗದೇ ಯೋಜನೆ ಮುಂದುವರಿಯಲಿಲ್ಲ.

ಇದಾದ ಬಳಿಕ 2024ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ N. Chandrababu Naidu ಅಮರಾವತಿಯನ್ನು ಏಕೈಕ ರಾಜಧಾನಿಯಾಗಿ ಘೋಷಿಸಿ, ಸಂಬಂಧಿಸಿದ ಕಾನೂನು ಕ್ರಮಗಳನ್ನು ಕೈಗೊಂಡರು. ಜೊತೆಗೆ, ಭವಿಷ್ಯದಲ್ಲಿ ರಾಜಧಾನಿ ಬದಲಾವಣೆಗೆ ಅವಕಾಶವಿಲ್ಲದಂತೆ ಸಂಸತ್ತಿನಲ್ಲಿ ತಿದ್ದುಪಡಿ ಕಾಯಿದೆ ಅಂಗೀಕರಿಸಲಾಗಿದೆ.

ಈ ಕ್ರಮದೊಂದಿಗೆ ಆಂಧ್ರ ಪ್ರದೇಶ ಪುನರ್‌ವಿಂಗಡಣೆ (ತಿದ್ದುಪಡಿ) ಕಾಯಿದೆ–2026 ಅಂಗೀಕಾರಗೊಂಡಿದ್ದು, ರಾಜ್ಯದ ರಾಜಧಾನಿ ಪ್ರಶ್ನೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ರಾಜಕೀಯ ಪಕ್ಷಗಳ ನಡುವಿನ ಹಗ್ಗಜಗ್ಗಾಟ ಮತ್ತು ವಿಭಿನ್ನ ಪ್ರಸ್ತಾವನೆಗಳೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದವು.

ಒಟ್ಟಿನಲ್ಲಿ, ಅಮರಾವತಿ ಈಗ ಆಂಧ್ರ ಪ್ರದೇಶದ ಕಾನೂನಾತ್ಮಕ ಹಾಗೂ ಶಾಶ್ವತ ರಾಜಧಾನಿಯಾಗಿ ಘೋಷಣೆಗೊಂಡಿದೆ.

Continue Reading

Trending