Connect with us

ದೇಶ

FASTag ಬ್ಯಾಲೆನ್ಸ್‌ ಇಲ್ಲದೇ ಇದ್ರೆ ದುಪ್ಪಟ್ಟು ದಂಡ: ಇಂದಿನಿಂದ ಏನೇನು ಬದಲಾವಣೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Published

on

ನವದೆಹಲಿ: ಟೋಲ್‌ (Toll) ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್‌ಟ್ಯಾಗ್‌ (FASTag) ಸಕ್ರಿಯವಾಗಿದೆಯೋ ಇಲ್ವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.

ಹೌದು. ಕಡಿಮೆ ಬ್ಯಾಲೆನ್ಸ್‌, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಥವಾ ಕಪ್ಟುಪಟ್ಟಿಗೆ (Black List) ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ ದಂಡ ವಿಧಿಸುವ ಈ ಹೊಸ ನಿಯಮ ಇಂದಿನಿಂದ(ಫೆ.17) ಜಾರಿಗೆ ಬಂದಿದೆ.

ರಾಷ್ಟ್ರೀಯ ಪಾವತಿ ನಿಗಮ (NPCI) ಟೋಲ್ ಸಂಗ್ರಹಕ್ಕಾಗಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ಬಳಕೆದಾರರು ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ನಿಯಮ ಏನು ಬದಲಾವಣೆ?
1. ವಾಹನ ಟೋಲ್‌ ದಾಟುವ 60 ನಿಮಿಷ ಮೊದಲು ಮತ್ತು ಟೋಲ್‌ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್‌ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು.
2. ಕಡಿಮೆ ಬ್ಯಾಲೆನ್ಸ್ ಅಥವಾ ತಾಂತ್ರಿಕ ಸಮಸ್ಯೆಗಳಿಂದಾಗಿ ಕಪ್ಪುಪಟ್ಟಿಗೆ ಸೇರಿಸಿದ್ದರೆ ಬಳಕೆದಾರರು ತಮ್ಮ ಖಾತೆಯನ್ನು ರೀಚಾರ್ಜ್ ಮಾಡಲು 70 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
3. ಟೋಲ್‌ನಲ್ಲೇ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್‌ ಆಪರೇಟರ್‌ ಅವರನ್ನೇ ಹೊಣೆ ಮಾಡಲಾಗುತ್ತದೆ.

ಪಾವತಿಗಳನ್ನು ಯಾವಾಗ ತಿರಸ್ಕರಿಸಲಾಗುತ್ತದೆ?
ವಾಹನ ಟೋಲ್‌ ದಾಟುವ 60 ನಿಮಿಷ ಮೊದಲು ಮತ್ತು ಟೋಲ್‌ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್‌ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಆ ಫಾಸ್ಟ್‌ಟ್ಯಾಗ್‌ ವಹಿವಾಟು ನಿರಾಕರಿಸಲಾಗುತ್ತದೆ. ಸಕ್ರಿಯ ಆಗಿರದೇ ಇದ್ದರೆ ಟೋಲ್‌ ಸಿಸ್ಟಮ್‌ನಲ್ಲಿ ‘ಎರರ್‌ ಕೋಡ್‌ 176’ ಎಂದು ತೋರಿಸಲಾಗುತ್ತದೆ ಮತ್ತು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಕಪ್ಪುಪಟ್ಟಿಗೆ ಸೇರಿಸಿದ ಫಾಸ್ಟ್ಯಾಗ್‌ನೊಂದಿಗೆ ಟೋಲ್ ಪ್ರವೇಶಿಸಿದರೆ ವಾಹನ ಮಾಲೀಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.

FASTag ಕಪ್ಪುಪಟ್ಟಿಗೆ ಹೇಗೆ ಹೋಗುತ್ತೆ?
– ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು.
– ಟೋಲ್ ತೆರಿಗೆ ಪಾವತಿಸದಿರುವುದು.
– ಪಾವತಿ ವೈಫಲ್ಯಗಳು.
– ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ವಿವರಗಳನ್ನು ಸರಿಯಾಗಿ ನವೀಕರಣ ಮಾಡದೇ ಇರುವುದು.
– ವಾಹನದ ಚಾಸಿಸ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯಲ್ಲಿನ ವ್ಯತ್ಯಾಸ.

ಹಣ ಇಲ್ಲದೇ ಇದ್ದರೂ ಪ್ರವೇಶ:
ಒಂದು ವೇಳೆ ಫಾಸ್ಟ್‌ಟ್ಯಾಗ್‌ ಖಾತೆಯಲ್ಲಿ ಅಗತ್ಯ ಹಣ ಇಲ್ಲದೇ ಇದ್ದರೂ ಟೋಲ್‌ಗೇಟ್‌ನಲ್ಲಿ ಪ್ರವೇಶ ನೀಡಲಾಗುತ್ತದೆ. ಟೋಲ್‌ ಪ್ರವೇಶವಾದ ಕೂಡಲೇ ‘ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ, ಅದನ್ನು ಕೂಡಲೇ ಭರ್ತಿ ಮಾಡಿ’ ಎಂಬ ಮೆಸೇಜ್‌ ಮೊಬೈಲ್‌ಗೆ ಬರುತ್ತದೆ. ಮಸೇಜ್‌ ಬಂದ ಬಂದ 10 ನಿಮಿಷದ ಒಳಗಡೆ ಅಗತ್ಯ ಹಣ ಹಾಕಿಕೊಂಡರೆ ಯಾವುದೇ ದಂಡ ಇರುವುದಿಲ್ಲ. ಇಲ್ಲದೇ ಇದ್ದಲ್ಲಿ ಟೋಲ್‌ ಶುಲ್ಕದ ಎರಡು ಪಟ್ಟು ಹಣ ಕಟ್ಟಬೇಕಾಗುತ್ತದೆ. ನೆಗೆಟಿವ್‌ ಬ್ಯಾಲೆನ್ಸ್‌ ಇದ್ದಲ್ಲಿ ಟೋಲ್ ಶುಲ್ಕವನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸಲಾಗುತ್ತದೆ.

15 ದಿನದ ಬಳಿಕ ದೂರು:
ಹೆಚ್ಚುವರಿ ಹಣ ಕಡಿತ ಅಥವಾ ತಪ್ಪು ಶುಲ್ಕಕ್ಕೆ ಸಂಬಂಧಿಸಿ ಸವಾರರು 15 ದಿನಗಳ ಕೂಲಿಂಗ್‌ ಅವಧಿಯ ನಂತರ ಬ್ಯಾಂಕ್‌ಗಳಲ್ಲಿ ದೂರು ಸಲ್ಲಿಸಬಹುದಾಗಿದೆ.

FASTag ಬಳಕೆದಾರರಿಗೆ ಪ್ರಮುಖ ಸಲಹೆಗಳು
– FASTag ವ್ಯಾಲೆಟ್‌ನಲ್ಲಿ ಸಾಕಷ್ಟು ಹಣ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ, ಕನಿಷ್ಠ 100 ರೂ. ಬ್ಯಾಲೆನ್ಸ್ ಅನ್ನು ಖಚಿತಪಡಿಸಿಕೊಳ್ಳಿ.
– ಬ್ಯಾಂಕಿನಿಂದ ಬರುವ SMS ಎಚ್ಚರಿಕೆಗಳು ಮತ್ತು ಮೆಸೇಜ್‌ಗಳನ್ನು ಗಮನಿಸಿ.
– MyFASTag ಅಪ್ಲಿಕೇಶನ್ ಮೂಲಕ FASTag ಬ್ಯಾಲೆನ್ಸ್ ಮತ್ತು ಸ್ಥಿತಿಯನ್ನು ಪರಿಶೀಲಿಸಿ.
– ವಾಹನದ ವಿಂಡ್‌ಶೀಲ್ಡ್‌ನಲ್ಲಿ FASTag ಸ್ಟಿಕ್ಕರ್ ಅನ್ನು ಸರಿಯಾಗಿ ಅಂಟಿಸಿ.
– ಸಮಸ್ಯೆಗಳನ್ನು ತಡೆಗಟ್ಟಲು ಪ್ರತಿ ವಾಹನಕ್ಕೆ ಒಂದೇ FASTag ಮಾತ್ರ ಬಳಸಿ.

ದೇಶ

ಮಮತಾ ಬ್ಯಾನರ್ಜಿ ಮತ್ತೆ ಸಿಎಂ ಆಗ್ತಾರಾ? ಸಮೀಕ್ಷೆ ಹೇಳೋದು ಏನು?

Published

on

By

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ದಿನೇ ದಿನೇ ಜೋರಾಗುತ್ತಿದ್ದು, ಪೂರ್ವ ಸಮೀಕ್ಷೆಗಳು ರಾಜಕೀಯ ಹೋರಾಟ ತೀವ್ರವಾಗಿರುವುದನ್ನು ಸೂಚಿಸುತ್ತಿವೆ. ಏಪ್ರಿಲ್ 23 ಮತ್ತು 29 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಹೊರಬಿದ್ದ ಅಭಿಪ್ರಾಯ ಸಮೀಕ್ಷೆಗಳು ಕುತೂಹಲ ಹೆಚ್ಚಿಸಿವೆ.

ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, ಆಡಳಿತಾರೂಢ All India Trinamool Congress (ಟಿಎಂಸಿ) 140 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮತ್ತೊಂದೆಡೆ Bharatiya Janata Party (ಬಿಜೆಪಿ) 130 ರಿಂದ 150 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇತರ ಪಕ್ಷಗಳು 8 ರಿಂದ 16 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.

ಮತಶೇಕಡಾವಾರಿಯಾಗಿ ನೋಡಿದರೆ, ಟಿಎಂಸಿ ಶೇ.43 ಮತ್ತು ಬಿಜೆಪಿ ಶೇ.41 ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಉತ್ತರ ಬಂಗಾಳದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಹುದು ಎಂದು ಹೇಳಲಾಗಿದ್ದು, ದಕ್ಷಿಣ ಬಂಗಾಳದಲ್ಲಿ ಟಿಎಂಸಿ ಬಲಿಷ್ಠವಾಗಿದೆ.

ಇನ್ನೊಂದೆಡೆ, ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯ ಪ್ರಕಾರ, Mamata Banerjee ನೇತೃತ್ವದ ಟಿಎಂಸಿ ಸ್ಪಷ್ಟ ಬಹುಮತದೊಂದಿಗೆ 155–165 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ 110–115 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಅಂದಾಜಿಸಲಾಗಿದೆ.

294 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದ್ದು, ಈ ಸಂಖ್ಯೆಯನ್ನು ಟಿಎಂಸಿ ಸುಲಭವಾಗಿ ದಾಟುವ ಸಾಧ್ಯತೆ ಇದೆ. ಆದರೆ ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಠಿಣ ಪೈಪೋಟಿ ಕಾಣಿಸಬಹುದು.

ಒಟ್ಟಾರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರೀ ಟಕ್ಕರ್ ನಿರೀಕ್ಷೆಯಿದ್ದು, ಅಂತಿಮ ಫಲಿತಾಂಶ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಸಾಧ್ಯತೆ ಇದೆ.

Continue Reading

ದೇಶ

ಪಾಕ್‌ನಲ್ಲಿ ಎಮರ್ಜೆನ್ಸಿ ಸ್ಥಿತಿ: ರಾತ್ರಿ 8ಕ್ಕೆ ಮಾರುಕಟ್ಟೆ ಬಂದ್!

Published

on

By

ಕರಾಚಿ: ಮಧ್ಯಪ್ರಾಚ್ಯದ ಉದ್ವಿಗ್ನತೆಯ ಪರಿಣಾಮವಾಗಿ ಪಾಕಿಸ್ತಾನ ಗಂಭೀರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈಗಾಗಲೇ ಹಿಟ್ಟು, ನೀರು ಮತ್ತು ವಿದ್ಯುತ್ ಕೊರತೆಯಿಂದ ಬಳಲುತ್ತಿರುವ Pakistan ಇದೀಗ ತೈಲ ಕೊರತೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ಇಂಧನ ಬಿಕ್ಕಟ್ಟನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಏಪ್ರಿಲ್ 7ರಿಂದ ರಾತ್ರಿ 8 ಗಂಟೆಯೊಳಗೆ ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮುಚ್ಚುವಂತೆ ಆದೇಶಿಸಿದೆ. ಗ್ಯಾಸ್ ಮತ್ತು ತೈಲ ಬಳಕೆಯನ್ನು ಕಡಿತಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದರ ಮಧ್ಯೆ ಪೆಟ್ರೋಲ್ ಬೆಲೆಗಳು ಭಾರೀ ಏರಿಕೆ ಕಂಡಿದ್ದು, ಲೀಟರ್‌ಗೆ ₹458ರವರೆಗೆ ಏರಿಕೆಯಾಗಿತ್ತು. ಜನರ ಆಕ್ರೋಶದ ನಂತರ ಅದು ₹378ಕ್ಕೆ ಇಳಿದರೂ, ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿಲ್ಲ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ.

ಈ ಬಿಕ್ಕಟ್ಟಿಗೆ Iran–United States ನಡುವಿನ ಉದ್ವಿಗ್ನತೆ ಹಾಗೂ Strait of Hormuz ನಲ್ಲಿ ಉಂಟಾದ ಅಡಚಣೆ ಪ್ರಮುಖ ಕಾರಣ ಎಂದು ಪಾಕ್ ಸರ್ಕಾರ ಹೇಳಿಕೊಂಡಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪರಿಸ್ಥಿತಿ ಹದಗೆಟ್ಟಿದೆ.

ಆಹಾರ ಪದಾರ್ಥಗಳಾದ ಹಿಟ್ಟು, ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆಯ ಬೆಲೆಗಳೂ ಗಗನಕ್ಕೇರಿದ್ದು, ಜನಜೀವನ ಕಷ್ಟಕರವಾಗಿದೆ. ಜೊತೆಗೆ, ಸಾಲದ ಹೊರೆ ಹೆಚ್ಚುತ್ತಿದ್ದು, International Monetary Fund ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿ ಒತ್ತಡವೂ ಹೆಚ್ಚಾಗಿದೆ.

ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ಕಾಲದಂತೆ ನಿರ್ಬಂಧಗಳನ್ನು ಜಾರಿಗೆ ತರಲು ಪಾಕ್ ಸರ್ಕಾರ ಮುಂದಾಗಿದೆ. ಒಟ್ಟಿನಲ್ಲಿ, ಪಾಕಿಸ್ತಾನದ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ದೇಶವನ್ನು ಗಂಭೀರ ಸಂಕಷ್ಟದ ದಿಕ್ಕಿನಲ್ಲಿ ತಳ್ಳುತ್ತಿದೆ.

Continue Reading

ದೇಶ

“ಮೋದಿ ಸರ್ಕಾರ ವೈಫಲ್ಯ” – ಕಾಂಗ್ರೆಸ್ ಜಂಟಿ ಆರೋಪ

Published

on

By

ಬೆಂಗಳೂರು/ನವದೆಹಲಿ: ಎಲ್‌ಪಿಜಿ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ Siddaramaiah, ಉಪಮುಖ್ಯಮಂತ್ರಿ D. K. Shivakumar ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ Randeep Singh Surjewala ಜಂಟಿಯಾಗಿ ಪ್ರಧಾನಿ Narendra Modi ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿ ಕಿಡಿಕಾರಿದ್ದಾರೆ.

ಜಂಟಿ ಹೇಳಿಕೆಯಲ್ಲಿ, ಎಲ್‌ಪಿಜಿ ಕೊರತೆ, ಆಟೋ ಗ್ಯಾಸ್ ಅಭಾವ ಹಾಗೂ ತೈಲ ಬೆಲೆ ಏರಿಕೆಯಿಂದಾಗಿ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನೋಪಾಯ ಕುಸಿದಿದೆ ಎಂದು ಆರೋಪಿಸಲಾಗಿದೆ. “ಇದು ಕೇವಲ ನೀತಿ ವೈಫಲ್ಯವಲ್ಲ, ಕೇಂದ್ರ ಸರ್ಕಾರದ ಆಡಳಿತಾತ್ಮಕ ಅಸಮರ್ಥತೆ ಮತ್ತು ಉದಾಸೀನತೆಗೆ ಸಾಕ್ಷಿ” ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 2026ರಲ್ಲಿ ಲೀಟರ್‌ಗೆ ₹58–61 ಇದ್ದ ಆಟೋ ಗ್ಯಾಸ್ ಬೆಲೆ ಈಗ ₹105–120ಕ್ಕೆ ಏರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕೆಲ ಖಾಸಗಿ ಬಂಕ್‌ಗಳಲ್ಲಿ ₹135ರವರೆಗೂ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ನಗರದಲ್ಲಿ ಸುಮಾರು 80% ಗ್ಯಾಸ್ ಕೇಂದ್ರಗಳು ಕಾರ್ಯನಿರ್ವಹಣೆ ನಿಲ್ಲಿಸಿರುವುದರಿಂದ ಪೂರೈಕೆ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹200 ಏರಿಕೆಯಾಗಿದ್ದು ₹2,000 ಮೀರಿದೆ. ಇದರಿಂದ ಸಣ್ಣ ಹೋಟೆಲ್‌ಗಳು, ವ್ಯಾಪಾರಿಗಳು ಮತ್ತು ಗಿಗ್ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಳಸಂತೆಯ ಹಾವಳಿ ಹೆಚ್ಚುತ್ತಿರುವುದನ್ನೂ ಕಾಂಗ್ರೆಸ್ ಉಲ್ಲೇಖಿಸಿದೆ.

“ಪ್ರತಿ ಖಾಲಿ ಸಿಲಿಂಡರ್ ಒಂದು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ ಕಾಂಗ್ರೆಸ್, ಉಪಚುನಾವಣೆಗೂ ಮುನ್ನ ಬಿಜೆಪಿ ಉತ್ತರ ನೀಡಬೇಕು ಎಂದು ಪ್ರಶ್ನಿಸಿದೆ.

Continue Reading

Trending