ದೇಶ
ಭಾರತದ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿರುವ ಕ್ರಿಕೆಟಿಗ ಡೇವಿಡ್ ವಾರ್ನರ್-ಯಾವ ಸಿನಿಮಾ ಗೊತ್ತೇ?
ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರಿಗೂ ಚಿರಪರಿಚತರು, ಅಷ್ಟೇ ಅಲ್ಲದೆ ಭಾರತದ ದತ್ತು ಪುತ್ರ ಎಂದು ಪ್ರಸಿದ್ಧಿಯಾಗಿರುವ ಅವರು ಇದೀಗ ತೆಲುಗು ಸಿನಿಮಾದಲ್ಲಿ ನಟಿಸೋದಕ್ಕೆ ಫುಲ್ ತಯಾರಿ ನಡೆಸಿದ್ದಾರೆ,
ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಿರುವ ವಾರ್ನರ್ ಭಾರತದ ಕೆಲ ಸಿನಿಮಾ ಹಾಡಿಗೆ ರೀಲ್ಸ್ ಕೂಡ ಮಾಡಿ ಭಾರೀ ಫೇಮಸ್ ಆಗಿದ್ದರು, ಅಲ್ಲದೇ ಭಾರತದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ,
ಸೋಸಿಯಲ್ ಮೀಡಿಯಾದಲ್ಲಿ ಇಷ್ಟು ದಿನ ಸಿನಿಮಾ ಡೈಲಾಗ್, ಡಾನ್ಸ್ ರೀಲ್ಸ್ ಮೂಲಕ ಪ್ರಸಿದ್ದಿಯಾಗಿದ್ದ ವಾರ್ನರ್ ಇದೀಗ ಭಾರತೀಯ ಸಿನಿ ರಂಗಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದು, ಟಾಲಿವುಡ್ ನ ರಾಬಿನ್ ಹುಡ್ ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ವಾರ್ನರ್ ಕಾಣಿಸಿಕೊಳ್ಳಲಿದ್ದಾರೆ,
ಈ ಬಗ್ಗೆ ಸ್ವತಃ ಮೈತ್ರಿ ಮೂವೀ ಮೇಕರ್ಸ್ ನ ನಿರ್ಮಾಪಕ ರವೀ ಶಂಕರ್ ಅವರೇ ತಿಳಿಸಿದ್ದು, ಈ ವಿಚಾರ ಕೇಳಿ ಸಿನಿ ಪ್ರಿಯರು ಮಾತ್ರವಲ್ಲದೆ ಕ್ರಿಕೆಟ್ ಪ್ರಿಯರಿಗೂ ಕೂಡ ಸಖತ್ ಋಷಿಯಾಗಿದೆ, ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ,
ರಾಬಿನ್ ಹುಡ್ ಚಿತ್ರದಲ್ಲಿ ನಿತಿನ್ ಹಾಗೂ ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ, ವೆಂಕಿ ಕುಡುಮುಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ, ಮಾರ್ಚ್ 28 ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ,
ದೇಶ
ಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
ಮುಂಬೈನಲ್ಲಿ ನಡೆದ NMACC third anniversary ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ತಮ್ಮ ವೈಭವಶಾಲಿ ಸೀರೆ ಲುಕ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆಗೆ ಪ್ರತೀಕವಾಗಿರುವ ಅವರ ಶೈಲಿ ಫ್ಯಾಷನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ವಿಶೇಷ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಅವರೊಂದಿಗೆ ಆಗಮಿಸಿದ ನೀತಾ, ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹೊನ್ನಿನ ನೂಲುಗಳಿಂದ ನೇಯ್ದ ಈ ಸೀರೆಗೆ ಮರೂನ್ ಕೆಂಪು ಅಂಚು ಹೆಚ್ಚುವರಿ ಶೋಭೆ ನೀಡಿತು.
ಈ ಸೀರೆ ಕೈಮಗ್ಗದಲ್ಲಿ ಪರಿಣಿತ ಕಲಾವಿದ ಆರ್. ವರಧನ್ ಅವರ ಕೈಚಳಕದಿಂದ ಮೂಡಿಬಂದಿದ್ದು, ಇದನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದೆ. ಜರಿ ಕಸೂತಿ ಮತ್ತು ನಯವಾದ ಮೇಲ್ಮೈ ಈ ಸೀರೆಗೆ ವಿಶೇಷ ಮೌಲ್ಯ ನೀಡಿದೆ.
ಆಭರಣಗಳ ವಿಷಯದಲ್ಲಿ ನೀತಾ ಅಂಬಾನಿ ಬರ್ಮಾ ರೂಬಿ ಅಲಂಕೃತ ಚಿನ್ನದ ಮಾವಿನ ಸರ ಹಾಗೂ ಬಸ್ರಾ ಮುತ್ತಿನ ಕರ್ಣಾಭರಣ ಧರಿಸಿ ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ.
ಕಾರ್ಯಕ್ರಮದ ವೇಳೆ ಅವರು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿ, “ಸಂಖ್ಯೆ 3”ರ ಸಾಂಸ್ಕೃತಿಕ ಅರ್ಥವನ್ನು ತ್ರಿಮೂರ್ತಿ, ತ್ರಿದೇವಿ ಮತ್ತು ತ್ರಿವೇಣಿ ಸಂಗಮದ ಉದಾಹರಣೆಗಳ ಮೂಲಕ ವಿವರಿಸಿದರು.
ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತೀಯ ಹಸ್ತಕುಶಲತೆ ಮತ್ತು ಕಾಂಜೀವರಂ ಸೀರೆಗಳಿಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತವಾಗಿದೆ.
ದೇಶ
ಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್‌ನಲ್ಲಿ ತಮಿಳುನಾಡಿನ ಕುವರಿ
ಅಮೆರಿಕ ರಾಜಕೀಯದಲ್ಲಿ ಭಾರತೀಯರ ಪ್ರಭಾವ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ, ಈಗ ಮತ್ತೊಬ್ಬ ಭಾರತೀಯ ಮೂಲದ ಯುವತಿ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ. ರಿನಿ ಸಂಪತ್ ಅವರು ವಾಷಿಂಗ್ಟನ್ ಡಿಸಿಯ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪ್ರಸ್ತುತ ವಾಷಿಂಗ್ಟನ್ ಡಿಸಿನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ, ರಿನಿ ಸಂಪತ್ ಪ್ರಾಥಮಿಕ ಮತಪತ್ರದಲ್ಲಿ ಕಾಣಿಸಿಕೊಂಡ ಮೊದಲ ದಕ್ಷಿಣ ಏಷ್ಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿದ್ದಾರೆ.
ತಮಿಳುನಾಡಿನ ಮೂಲದ 31 ವರ್ಷದ ರಿನಿ, ಏಳನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಹೋಗಿ, ಕಳೆದ ದಶಕಕ್ಕೂ ಹೆಚ್ಚು ಕಾಲ ಡಿಸಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಸರ್ಕಾರಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಅವರು, ತಮ್ಮ ಪ್ರಚಾರವನ್ನು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರೀಕರಿಸಿದ್ದಾರೆ.
“ಮೊದಲಿಗೆ ನಾನು ರಾಜಕಾರಣಿಯಲ್ಲ. ಯಾವುದೇ ಒಂದು ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ನಮ್ಮ ನಗರದ ಮೂಲಭೂತ ಸೇವೆಗಳನ್ನು ಸುಧಾರಿಸುವುದು ನನ್ನ ಗುರಿ,” ಎಂದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
ಡಿಸಿಯ ಮೇಯರ್ ಆಗಿ ಆಯ್ಕೆಯಾದರೆ, ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಸರಿಪಡಿಸುವುದು, ಪೊಟೊಮ್ಯಾಕ್ ನದಿಗೆ ಕೊಳಚೆನೀರು ಸೇರುವುದನ್ನು ತಡೆಯುವುದು ಹಾಗೂ ಜೀವನ ವೆಚ್ಚವನ್ನು ಕಡಿಮೆ ಮಾಡುವುದನ್ನು ಮೊದಲ ಆದ್ಯತೆಯಾಗಿ ಇಡುವುದಾಗಿ ಹೇಳಿದ್ದಾರೆ.
ರಿನಿ ಸಂಪತ್ ಸ್ಪರ್ಧೆ, ಅಮೆರಿಕ ರಾಜಕೀಯದಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸೂಚನೆಯಾಗಿದೆ.
ದೇಶ
Indian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!
ಭಾರತದಲ್ಲಿ ಮದುವೆ ಎಂದರೆ ಸಂಭ್ರಮ, ಸಂಪ್ರದಾಯ ಮತ್ತು ಅದ್ಧೂರಿತನದ ಮಿಶ್ರಣ. ಇತ್ತೀಚಿನ ದಿನಗಳಲ್ಲಿ ನವ ಜೋಡಿಗಳು ತಮ್ಮ ವಿವಾಹವನ್ನು ವಿಭಿನ್ನವಾಗಿ ಆಚರಿಸಲು ಹೊಸ ಹೊಸ ಆಲೋಚನೆಗಳನ್ನು ಪ್ರಯತ್ನಿಸುತ್ತಿದ್ದಾರೆ. ಇದೀಗ ಅಂತಹದೇ ಒಂದು ವಿಶಿಷ್ಟ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮಾರ್ವಾಡಿ ಕುಟುಂಬವೊಂದು Indian Railways ಸೇವೆಯನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡು ಮದುವೆ ಸಂಭ್ರಮವನ್ನು ಆಚರಿಸಿದೆ. ಸಾಮಾನ್ಯವಾಗಿ ಮದುವೆಗಾಗಿ ಬಸ್ ಅಥವಾ ಖಾಸಗಿ ವಾಹನಗಳನ್ನು ಬಳಸುವ ಬದಲು, ಈ ಕುಟುಂಬವು ರೈಲ್ವೆಯ Full Tariff Rate ಯೋಜನೆಯಡಿ ಇಡೀ ಕೋಚ್‌ನ್ನು ಕಾಯ್ದಿರಿಸಿದೆ.
ವೈರಲ್ ವಿಡಿಯೋದಲ್ಲಿ ವಧು-ವರರ ಕುಟುಂಬ ರೈಲ್ವೆ ನಿಲ್ದಾಣದಲ್ಲಿ ಸೇರಿ ಮೊದಲಿಗೆ ಕೇಕ್ ಕತ್ತರಿಸಿ ಸಂಭ್ರಮ ಆರಂಭಿಸುತ್ತದೆ. ಬಳಿಕ ರೈಲನ್ನು ತಳಿರು ತೋರಣ ಮತ್ತು ಹೂಗಳಿಂದ ಅಲಂಕರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ರೈಲಿನೊಳಗೆ ಮನೆಮಾತಿನಂತೆ ಆರಾಮದಾಯಕ ವ್ಯವಸ್ಥೆ ಮಾಡಿದ್ದು, ನೀರಿನ ಬಾಟಲಿ, ಬಾಳೆ ಎಲೆ, ಹೊಸ ಬಟ್ಟೆಗಳನ್ನು ಸಹ ಸಾಗಿಸಲಾಗಿದೆ.
ಹೆಣ್ಣು-ಗಂಡಿನ ಬಂಧುಗಳು ಸಾಲು ಸಾಲಾಗಿ ಕುಳಿತು ಸಂಭ್ರಮಿಸುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, “ಮಾರ್ವಾಡಿ ಮದುವೆ ಎಂದರೆ ಹೀಗಿರುತ್ತದೆ” ಎಂಬ ಶೀರ್ಷಿಕೆಯಲ್ಲಿ ಹಂಚಲಾಗಿದೆ.
ಈ ಹೊಸ ಐಡಿಯಾವನ್ನು ಹಲವರು ಶ್ಲಾಘಿಸಿದ್ದು, ಕಡಿಮೆ ವೆಚ್ಚದಲ್ಲಿ ಸುಲಭ ಪ್ರಯಾಣಕ್ಕೆ ಇದು ಉತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾರ್ವಜನಿಕ ಸಾರಿಗೆಯನ್ನು ಹೀಗೆ ಬಳಸುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.
-
ದೇಶ42 minutes ago“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
-
ದೇಶ37 minutes agoಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್ಗಳಿಗೆ ಶಾಕ್
-
ದೇಶ32 minutes agoIndian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!
-
ದೇಶ6 minutes agoಎನ್‌ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
-
ದೇಶ47 minutes ago‘I Love My Daughter’ ಟೀ ಶರ್ಟ್ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
-
ದೇಶ26 minutes agoಟ್ರಂಪ್ ದೇಶದಲ್ಲಿ ಭಾರತೀಯರ ಸದ್ದು: ಮೇಯರ್ ರೇಸ್‌ನಲ್ಲಿ ತಮಿಳುನಾಡಿನ ಕುವರಿ
