Connect with us

ದೇಶ

ಸದನದಲ್ಲಿ ನಮಗೆ ಮಾತನಾಡುವ ಅವಕಾಶವಿಲ್ಲ.. ಇದು ಹೊಸ ಭಾರತ-ರಾಹುಲ್ ಗಾಂಧಿ

Published

on

ನವದೆಹಲಿ: ಮಹಾಕುಂಭದ ಕುರಿತು ಲೋಕಸಭೆಯಲ್ಲಿ ದೊಡ್ಡ ಚರ್ಚೆಯ ನಡೆದಿದ್ದು ಪ್ರಧಾನಿ ಮೋದಿಯ ಭಾಷಣದ ಕುರಿತು ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಮಹಾಕುಂಭದ ಕುರಿತು ಇಂದು ಲೋಸಭೆಯಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ಪ್ರಧಾನಿ ಮೋದಿಯವರು ಮಹಾಕುಂಭಮೇಳವು ಭಾರತದ ಇತಿಹಾಸದಲ್ಲೇ ಒಂದು ಮಹತ್ವದ ತಿರುವು, ದೇಶದ ಬೃಹತ್ ಸ್ವರೂಪವನ್ನು ಇಡೀ ಜಗತ್ತು ವೀಕ್ಷಿಸಿದೆ, ಅಲ್ಲದೇ ಎಲ್ಲರ ಪ್ರಯತ್ನ ಸಾಕಾರಗೊಳಿಸಿದೆ ಎಂದಿದ್ದಾರೆ,
ಆದರೆ ಇದೀಗ ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಕುಂಭ ನಮ್ಮ ಇತಿಹಾಸ ಮತ್ತು ಸಂಸ್ಕøತಿ, ಪ್ರಧಾನಿ ಹೇಳಿದ್ದನ್ನು ನಾವು ಬೆಂಬಲಿಸುತ್ತೇವೆ, ಕುಂಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ಶ್ರದ್ಧಾಂಜಲಿ ನೀಡಲಿಲ್ಲ ಎಂಬುದು ನಮ್ಮ ಬಂದೇ ದೂರು ಎಂದು ಹೇಳಿದರು,
ಕುಂಭಮೇಳಕ್ಕೆ ಹೋದ ಯುವಕರು ಪ್ರಧಾನಿಯವರಿಂದ ಉದ್ಯೋಗವನ್ನು ಬಯಸುತ್ತಿದ್ದಾರೆ, ಅಲ್ಲದೇ ಪ್ರಧಾನಿಯವರು ಆ ಬಗ್ಗೆ ಕೂಡ ಮಾತನಾಡಬೇಕಿತ್ತು, ಈ ಬಗ್ಗೆ ಪ್ರಜಾಪ್ರಭುತ್ವ ವ್ಯವಸ್ಧೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು, ಅದರೆ ಅವರು ನೀಡಿಲ್ಲ, ಇದು ಹೊಸ ಭಾರತ ಎಂದು ಟೀಕಿಸಿದ್ದಾರೆ,

ದೇಶ

ವೀರಕುಮಾರರ ತಪಸ್ಸು, ಭಕ್ತಿಯ ತೇಜಸ್ಸು: ಕೆಂಗೇರಿ ಕರಗದ ವೈಶಿಷ್ಟ್ಯ

Published

on

By

ಬೆಂಗಳೂರು: ನಗರದ ಕೆಂಗೇರಿಯಲ್ಲಿ ಕ್ಷತ್ರಿಯ (ತಿಗಳ ಕ್ಷತ್ರಿಯ) ಸಮುದಾಯದವರಿಂದ ಆಚರಿಸಲ್ಪಡುವ ದ್ರೌಪದಿ ಅಮ್ಮನವರ ಭವ್ಯ ಕರಗ ಶಕ್ತಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಸಂಪ್ರದಾಯಿಕ ಹಬ್ಬದಲ್ಲಿ ಭಕ್ತಿ, ಶಕ್ತಿ ಮತ್ತು ಸಂಸ್ಕೃತಿಯ ಸಮ್ಮಿಳನ ಕಂಡುಬರುತ್ತದೆ.

ಈ ಮಹೋತ್ಸವದ ಅಂಗವಾಗಿ ಹಸಿ ಕರಗವನ್ನು ಮುನ್ನಡೆಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಮುದಾಯದವರು Draupadi Amman ಅವರನ್ನು ಕುಲದೇವತೆಯಾಗಿ ಆರಾಧಿಸುತ್ತಾರೆ. ಕರಗ ಪೂಜೆಯಲ್ಲಿ ಕುಲಪುರೋಹಿತರು, ವೀರಕುಮಾರರು ಮತ್ತು ಭಕ್ತರು ಭಾಗವಹಿಸಿ ವಿಶೇಷ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಹಬ್ಬದ ವಿಶೇಷವೆಂದರೆ ವೀರಕುಮಾರರು ಕೈಯಲ್ಲಿ ಖಡ್ಗಗಳನ್ನು ಹಿಡಿದು ಭಕ್ತಿಯ ಸಂಕೇತವಾಗಿ ತಮ್ಮ ಎದೆಗೆ ತಾವೇ ಪ್ರಹಾರ ಮಾಡಿಕೊಳ್ಳುವುದು. ಗಾಯವಾದಲ್ಲಿ ಔಷಧಿಯ ಬದಲು ಅರಿಶಿನವನ್ನು ಬಳಸಿ ದೇವಿಯ ಮೇಲಿನ ಭಕ್ತಿಯನ್ನು ತೋರಿಸುತ್ತಾರೆ.

ರಾತ್ರಿ ಸುಮಾರು ಮೂರು ಗಂಟೆಗೆ ಹೂವಿನ ಕರಗ ಸಿದ್ಧವಾಗುತ್ತಿದ್ದು, ಕೆಂಪು ವಸ್ತ್ರ ಮತ್ತು ಮಂಗಳ ದ್ರವ್ಯಗಳಿಂದ ಅಲಂಕರಿಸಲಾಗುತ್ತದೆ. ಪೂಜಾರಿ ಮಲ್ಲಿಗೆ ಹೂಗಳಿಂದ ಸಿಂಗರಿಸಿಕೊಂಡು ಕರಗವನ್ನು ಹೊತ್ತು ಭಕ್ತಿಭಾವದಿಂದ ನರ್ತನ ಮಾಡುತ್ತಾ ಸಾಗುತ್ತಾರೆ.

ಈ ಕರಗವು ಕೆಂಗೇರಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ, ನಂತರ ದೇವಸ್ಥಾನಕ್ಕೆ ಮರಳಿ ಪೂಜೆ ಸ್ವೀಕರಿಸುವ ಮೂಲಕ ಮಹೋತ್ಸವ ಮುಕ್ತಾಯಗೊಳ್ಳುತ್ತದೆ.

ಈ ಸಂದರ್ಭದಲ್ಲಿ ಸಮುದಾಯದ ಅನೇಕ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಉತ್ಸವಕ್ಕೆ ಭಕ್ತಿ ಭಾವ ತುಂಬಿದರು.

Continue Reading

ದೇಶ

ಹೊರ್ಮುಜ್ ಜಲಸಂಧಿ ತೆರೆಯಲ್ಲ: ಇರಾನ್ ಕಠಿಣ ನಿಲುವು

Published

on

By

ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆ, Iran ಹೊರ್ಮುಜ್ ಜಲಸಂಧಿಯನ್ನು ತಾತ್ಕಾಲಿಕ ಯುದ್ಧ ವಿರಾಮಕ್ಕಾಗಿ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಿರಿಯ ಇರಾನಿ ಅಧಿಕಾರಿಯೊಬ್ಬರು ಈ ಕುರಿತು ಹೇಳಿಕೆ ನೀಡಿದ್ದು, ಅಮೆರಿಕದ ನಿಲುವಿನ ಮೇಲೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಅಮೆರಿಕ ಆಡಳಿತ ಶಾಶ್ವತ ಯುದ್ಧ ವಿರಾಮಕ್ಕೆ ಸಿದ್ಧತೆಯಿಲ್ಲ ಎಂದು ಆರೋಪಿಸಲಾಗಿದೆ. ಇದೇ ವೇಳೆ, Pakistan ಕಳುಹಿಸಿದ ಯುದ್ಧ ವಿರಾಮ ಪ್ರಸ್ತಾವವನ್ನು ತಹ್ರಾನ್ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಅಮೆರಿಕದ ಮಾಜಿ ಅಧ್ಯಕ್ಷ Donald Trump ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪದಗಳಲ್ಲಿ ಎಚ್ಚರಿಕೆ ನೀಡಿದ್ದು, ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ಗೆ ಒತ್ತಾಯಿಸಿದ್ದರು. ಅವರು “ಇಲ್ಲವಾದರೆ ನರಕದಲ್ಲಿ ಬದುಕಬೇಕಾಗುತ್ತದೆ” ಎಂದು ಎಚ್ಚರಿಸಿದ್ದು, ಪರಿಸ್ಥಿತಿಗೆ ಮತ್ತಷ್ಟು ತೀವ್ರತೆ ತಂದಿದೆ.

ಇನ್ನೊಂದು ಹೇಳಿಕೆಯಲ್ಲಿ ಟ್ರಂಪ್, ಶಕ್ತಿಸೌಕರ್ಯಗಳ ಮೇಲೆ ದಾಳಿ ನಡೆಸುವ ಸೂಚನೆಯನ್ನೂ ನೀಡಿದ್ದಾರೆ. “ಮಂಗಳವಾರ ಪವರ್ ಪ್ಲಾಂಟ್ ಡೇ ಆಗಲಿದೆ” ಎಂದು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.

ಇದಕ್ಕೂ ನಡುವೆ, ಇರಾನ್ ತನ್ನ ವಾಯುಪ್ರದೇಶದಲ್ಲಿ ಅಮೆರಿಕದ ವಿಮಾನವೊಂದನ್ನು ಹೊಡೆದುರುಳಿಸಿದ ಬಳಿಕ ಇಬ್ಬರು ಪೈಲಟ್‌ಗಳನ್ನು ರಕ್ಷಿಸಿದ ಸೇನಾ ಕಾರ್ಯಾಚರಣೆ ನಡೆದಿರುವುದಾಗಿ ಅಮೆರಿಕ ತಿಳಿಸಿದೆ.

ಈ ಎಲ್ಲಾ ಬೆಳವಣಿಗೆಗಳು ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಯುದ್ಧ ಭೀತಿ ಹೆಚ್ಚುತ್ತಿದೆ.

Continue Reading

ಚುನಾವಣೆ

Davangere By Election 2026 : 25 ಅಭ್ಯರ್ಥಿಗಳ ಕಣ: ಮುಸ್ಲಿಂ ಅಭ್ಯರ್ಥಿಗಳೇ ಗೇಮ್‌ಚೇಂಜರ್?

Published

on

By

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತಿಮ ಹಂತ ತಲುಪಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಶಾಸಕ Shamanur Shivashankarappa ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಸವಾಲು ಗಟ್ಟಿಯಾಗಿದೆ.

2008ರ ಕ್ಷೇತ್ರ ಮರುವಿಂಗಡಣೆಯ ನಂತರದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ, ಶಾಮನೂರು ಶಿವಶಂಕರಪ್ಪ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿರುವುದನ್ನು ಕಾಂಗ್ರೆಸ್ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ.

ಒಟ್ಟು 2,31,132 ಮತದಾರರಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ. ಸುಮಾರು 70 ಸಾವಿರ ಮತಗಳು ಯಾರಿಗೆ ಸಿಗುತ್ತವೆ ಎಂಬುದೇ ಗೆಲುವಿನ ಲೆಕ್ಕಾಚಾರವನ್ನು ನಿರ್ಧರಿಸಲಿದೆ.

ಕಾಂಗ್ರೆಸ್ ಪರವಾಗಿ Mallikarjun Shamanur ಕಣಕ್ಕಿಳಿದಿದ್ದು, ಕುಟುಂಬ ರಾಜಕಾರಣದ ಆರೋಪ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಚಿವ S. S. Mallikarjun ಮತ್ತು ಸಂಸದೆ Dr. Prabha Mallikarjun ಅವರ ಕುಟುಂಬದ ಮತ್ತೊಬ್ಬರನ್ನು ಅಭ್ಯರ್ಥಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದೆಡೆ, ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ 13 ಮುಸ್ಲಿಂ ಅಭ್ಯರ್ಥಿಗಳಿರುವುದು ಚುನಾವಣೆಗೆ ಹೊಸ ತಿರುವು ನೀಡಿದೆ. Social Democratic Party of India ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಸೇರಿದಂತೆ ಹಲವರು ಸಕ್ರಿಯ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಶಿಬಿರ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದರೆ, ಕಾಂಗ್ರೆಸ್ ಒಳಗಿನ ಗೊಂದಲ ಇನ್ನೂ ಸಂಪೂರ್ಣವಾಗಿ ಶಮನವಾಗಿಲ್ಲ. ಈ ಹಿನ್ನೆಲೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ, ಗೆಲುವು ಈ ಬಾರಿ ಸುಲಭವಾಗಿಲ್ಲ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

Continue Reading

Trending