Connect with us

ದೇಶ

ದರ್ಗಾದಲ್ಲಿ ಸೀತಾರಾಮ ಕಲ್ಯಾಣ!: ಮುಸ್ಲಿಂ ಬಾಂಧವರಿಂದ ವಿಶೇಷ ಪೂಜೆ – SITARAMA KALYANAM IN DARGAH

Published

on

ಭದ್ರಾದ್ರಿ ಕೊತಗುಡೆಂ (ತೆಲಂಗಾಣ) : ತೆಲಂಗಾಣದ ಪ್ರಸಿದ್ಧ ದರ್ಗಾವೊಂದರಲ್ಲಿ ಭಾನುವಾರ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು. ಭದ್ರಾದ್ರಿ ಕೊತಗುಡೆಂ​ ಜಿಲ್ಲೆಯ ಸತ್ಯನಾರಾಯಣಪುರಂ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಹಜರತ್ ಖಾಸಿಂ ದುಲ್ಹಾ ನಾಗುಲ್ ಮೀರಾ ದರ್ಗಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಈ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ – ಮುಸ್ಲಿಂ ಬಾಂಧವರು ಒಟ್ಟಾಗಿ ಭಾಗಿಯಾಗುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು. ಭಾನುವಾರ ಅಭಿಜಿತ್ ಲಗ್ನದಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವಕ್ಕೂ ಮುನ್ನ ಸರ್ವರಿಂದ ವೇದ ಮಂತ್ರಗಳ ಪಠಣ ನಡೆಯಿತು.

ಅನೇಕ ಹಿಂದೂ ಮತ್ತು ಮುಸ್ಲಿಂ ಬಾಂಧವರು ಭಾಗಿಯಾಗಿ ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಿದರು. ಲಕ್ಷ್ಮಿನಾರಾಯಣ ಅವರು ಸೀತಾರಾಮ ಕಲ್ಯಾಣೋತ್ಸವದ ನೇತೃತ್ವ ವಹಿಸಿಕೊಂಡಿದ್ದರು. ಧಾರ್ಮಿಕ ಸಾಮರಸ್ಯದ ಸಂಕೇತವಾದ ನಾಗುಲ್ ಮೀರಾ ದರ್ಗಾದಲ್ಲಿ ಪ್ರತಿ ವರ್ಷ ಜಾತಿ – ಧರ್ಮವನ್ನು ಭಗವಾನ್ ಶ್ರೀ ರಾಮನ ಜನ್ಮದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಕಳೆದ 40 ವರ್ಷಗಳಿಂದ ಇದೇ ರೀತಿ ಎರಡೂ ಸಮುದಾಯವರು ಸೇರಿಕೊಂಡು ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.

ಇನ್ನು ದರ್ಗಾದಲ್ಲಿ ಇಂದಿನಿಂದ ಶ್ರೀರಾಮ ಪಟ್ಟಾಭಿಷೇಕವನ್ನು ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ. ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿರುವ ನಾಗುಲ್ ಮೀರಾ ದರ್ಗಾದಲ್ಲಿ ನಡೆಯುವ ಉರುಸು ಉತ್ಸವವು ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಇದೀಗ ರಾಮನ ಕಲ್ಯಾಣಂ ಪಟಾಭಿಷೇಕದಲ್ಲಿ ಹಿಂದೂ – ಮುಸ್ಲಿಂ ಬಾಂಧವರು ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎನ್ನುತ್ತಾರೆ ಸ್ಥಳೀಯರು.

ವಾರಾಣಸಿಯಲ್ಲೂ ಮುಸ್ಲಿಂ ಮಹಿಳೆಯರಿಂದ ಶ್ರೀರಾಮನಿಗೆ ಮಹಾ ಆರತಿ: ರಾಮನವಮಿ ದಿನ ನಿಮಿತ್ತ ವಾರಾಣಸಿಯಲ್ಲೂ ಮುಸ್ಲಿಂ ಮಹಿಳೆಯರು ಶ್ರೀರಾಮನಿಗೆ ಮಹಾ ಆರತಿ ಎತ್ತಿ ಪೂಜೆ ಮಾಡುವ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಿದರು. ವಾರಾಣಸಿಯ ಮುಸ್ಲಿಂ ಮಹಿಳಾ ಪ್ರತಿಷ್ಠಾನ ಮತ್ತು ವಿಶಾಲ ಭಾರತ ಸಂಸ್ಥಾನದ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀರಾಮನ ಮಹಾ ಆರತಿ ಆಯೋಜಿಸಲಾಗಿತ್ತು. ಮುಸ್ಲಿಂ ಮಹಿಳೆಯರು ಶ್ರೀರಾಮನನಿಗೆ ಮಹಾ ಆರತಿ ಎತ್ತಿ ಸಾಮರಸ್ಯದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ, ಅಲಂಕಾರಿಕ ತಟ್ಟೆ, ಸುಂದರವಾದ ರಂಗೋಲಿ, ಉರ್ದು ಭಾಷೆಯಲ್ಲಿ ಬರೆದ ಶ್ರೀರಾಮನಾಮ ಮುಸ್ಲಿಂ ಮಹಿಳೆಯರ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದವು. ಕಳೆದ 19 ವರ್ಷಗಳಿಂದ ವಾರಾಣಸಿ ಮುಸ್ಲಿಂ ಮಹಿಳೆಯರು ರಾಮನವಮಿ ದಿನ ಶ್ರೀರಾಮನಿಗೆ ವಿಶೇಷ ಆರತಿ ಪೂಜೆ ಮಾಡುತ್ತಿರುವುದು ವಿಶೇಷ.

ಮೊಘಲರು ಸೇರಿದಂತೆ ಅನೇಕರು ಭಾರತದ ಮೇಲೆ ದಾಳಿ ಮಾಡಿದರು. ಇಲ್ಲಿನವರ ಧರ್ಮ ಬದಲಾಯಿಸಿದರು. ಅನಿವಾರ್ಯವಾಗಿ ಬದಲಾಗಬೇಕಾಯಿತು. ಆದರೆ, ಅವರ ಸಂಸ್ಕೃತಿಯನ್ನು ಅನುಸರಿಸುತ್ತಿಲ್ಲ. ಭಾರತದ ಸಂಸ್ಕೃತಿಯಲ್ಲಿ ರಾಮನೇ ಸರ್ವಶ್ರೇಷ್ಠ. ಆತನೇ ಆದರ್ಶ. ಆತನೇ ನಮ್ಮ ಪೂರ್ವಜ. ನಮ್ಮ ಪೂರ್ವಜ ಹಾಗೂ ಆ ಸಂಸ್ಕೃತಿಯನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ರಾಮನ ಭಕ್ತರಾಗಿದ್ದರು. ಈಗ ನಮ್ಮ ಮತ ಬದಲಾಗಿದೆ. ಆದರೆ, ನಾವೂ ಕೂಡ ರಾಮನ ಭಕ್ತರು” ಎಂದು ವಾರಾಣಸಿ ಮುಸ್ಲಿಂ ಮಹಿಳಾ ಫೌಂಡೇಶನ್ ಸದಸ್ಯೆ ನಝ್ನೀನ್ ಅನ್ಸಾರಿ ಎಂಬುವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶ

“ಮೌನ ಏಕೆ?” – ಮೋದಿ ಸರ್ಕಾರದ ವಿರುದ್ಧ ಟಿಎಂಸಿ ಆಕ್ರೋಶ

Published

on

By

Bengal election news

ನವದೆಹಲಿ: ಕೋಲ್ಕತ್ತಾಗೆ ಪಾಕಿಸ್ತಾನ ನೀಡಿರುವ ಬೆದರಿಕೆ ವಿಚಾರ ರಾಜಕೀಯವಾಗಿ ಮತ್ತಷ್ಟು ಕಾವು ಪಡೆದಿದೆ. ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ Abhishek Banerjee ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಲಿಗುರಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ರಕ್ಷಣಾ ಸಚಿವ Khawaja Asif ಕೊಲ್ಕತ್ತಾವನ್ನು ಗುರಿಯಾಗಿಸುವುದಾಗಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದರು. “ನೆರೆ ರಾಷ್ಟ್ರದಿಂದ ಇಂತಹ ಬೆದರಿಕೆ ಬಂದರೂ ಪ್ರಧಾನಿ Narendra Modi, ಗೃಹ ಸಚಿವ Amit Shah ಮತ್ತು ರಕ್ಷಣಾ ಸಚಿವ Rajnath Singh ಮೌನವಾಗಿರುವುದು ಅಚ್ಚರಿಯ ಸಂಗತಿ” ಎಂದು ಟೀಕಿಸಿದರು.

ಅಭಿಷೇಕ್ ಬ್ಯಾನರ್ಜಿ ತಮ್ಮ ಭಾಷಣದಲ್ಲಿ, “ನಮ್ಮ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದ ದಿನ ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಎಚ್ಚರಿಕೆಯ ಮಾತುಗಳನ್ನೂ ಆಡಿದರು. ಪಾಕಿಸ್ತಾನದ ಬೆದರಿಕೆಗೆ ಗಟ್ಟಿಯಾದ ಪ್ರತಿಕ್ರಿಯೆ ನೀಡದ ಕೇಂದ್ರ ಸರ್ಕಾರದ ನಡೆ ಪ್ರಶ್ನಾರ್ಹ ಎಂದು ಹೇಳಿದರು.

ಇನ್ನೂ ಮುಂದೆ, ಕೇಂದ್ರ ನಾಯಕರು ಪಶ್ಚಿಮ ಬಂಗಾಳಕ್ಕೆ ಬಂದು ಟಿಎಂಸಿ ವಿರುದ್ಧ ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದು, ನಮ್ಮನ್ನು ಬಾಂಗ್ಲಾದೇಶಿಗಳು ಅಥವಾ ಪಾಕಿಸ್ತಾನಿಗಳು ಎಂದು ಕರೆಯುತ್ತಿದ್ದಾರೆ. ಆದರೆ ನೇರ ಬೆದರಿಕೆ ಎದುರಾದಾಗ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಈ ಹೇಳಿಕೆಗಳು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಕಾವು ಹೆಚ್ಚಿಸಿದ್ದು, ಬಿಜೆಪಿ-ಟಿಎಂಸಿ ನಡುವೆ ವಾಗ್ವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Continue Reading

ದೇಶ

ಬೆಂಗಳೂರು ಹೃದಯ ಸ್ಪರ್ಶಿ ಕಥೆ: ಯುವತಿಗೆ ನೆರವಾದ ಅಪರಿಚಿತರು

Published

on

By

ಬೆಂಗಳೂರು: ಸಿಲಿಕಾನ್ ಸಿಟಿಯ ಕತ್ತಲ ರಾತ್ರಿಯಲ್ಲಿ ಯುವತಿಯೊಬ್ಬಳಿಗೆ ರಕ್ಷೆಯಾಗಿ ನಿಂತ ಸಾರಿಗೆ ಸಿಬ್ಬಂದಿ ಹಾಗೂ ಬೈಕ್ ಟ್ಯಾಕ್ಸಿ ಚಾಲಕನ ಮಾನವೀಯತೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಗದ್ದಲದ ನಡುವೆ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಐಶ್ವರ್ಯ ಎಂಬ ಯುವತಿ Bangalore Metropolitan Transport Corporation ಬಸ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಕಾಡುಗೋಡಿಗೆ ಬಂದಿಳಿದಿದ್ದರು. ಆ ಸಮಯದಲ್ಲಿ ಸುತ್ತಮುತ್ತ ಸಂಪೂರ್ಣ ಕತ್ತಲು ಆವರಿಸಿಕೊಂಡಿದ್ದು, ರಸ್ತೆಗಳಲ್ಲಿ ಜನರ ಓಡಾಟವೂ ಇರಲಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಸಿಲುಕಿದ ಯುವತಿ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದರೂ ಯಾವುದೇ ವಾಹನ ಲಭ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ಯುವತಿಯ ಸ್ಥಿತಿಯನ್ನು ಗಮನಿಸಿದ ಬಿಎಂಟಿಸಿ ಸಿಬ್ಬಂದಿ, ಆಕೆಯನ್ನು ಬಸ್ ಸ್ಟಾಪ್‌ನಲ್ಲಿ ಬಿಟ್ಟು ತೆರಳದೆ ಸುರಕ್ಷಿತ ವಾಹನ ಸಿಗುವವರೆಗೂ ಅಲ್ಲಿಯೇ ಉಳಿದುಕೊಂಡರು. ಅವರ ಈ ಕಾಳಜಿ ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ.

ಅದೇ ಸಮಯದಲ್ಲಿ ಆ ಮಾರ್ಗವಾಗಿ ಬಂದ Rapido ಚಾಲಕನೊಬ್ಬ ಯುವತಿಯ ನೆರವಿಗೆ ಧಾವಿಸಿದರು. ಬಿಎಂಟಿಸಿ ಸಿಬ್ಬಂದಿ ಚಾಲಕನ ವಿವರಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಯುವತಿಯನ್ನು ಅವರೊಂದಿಗೆ ಕಳುಹಿಸಿದರು. ವಿಶೇಷವೆಂದರೆ, ಆ ಚಾಲಕ ಯಾವುದೇ ಹಣ ಪಡೆಯದೆ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮಗೆ ನೆರವಾದ ಬಿಎಂಟಿಸಿ ಸಿಬ್ಬಂದಿ ಮತ್ತು ರ‍್ಯಾಪಿಡೋ ಚಾಲಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಈಗ ವೈರಲ್ ಆಗಿ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Continue Reading

ದೇಶ

ಇರಾನ್ ಶಾಕ್: ಹೊಸ ಸರ್ವೋಚ್ಚ ನಾಯಕ ಗಂಭೀರ ಸ್ಥಿತಿ!

Published

on

By

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಇರಾನ್ ರಾಜಕೀಯ ವಲಯದಲ್ಲಿ ಸಂಚಲನಕಾರಿ ಮಾಹಿತಿ ಹೊರಬಂದಿದೆ. ಹೊಸದಾಗಿ ಸರ್ವೋಚ್ಚ ನಾಯಕರಾಗಿ ಆಯ್ಕೆಯಾಗಿರುವ Mojtaba Khamenei ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, Qom ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಡಳಿತಾತ್ಮಕ ನಿರ್ಧಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಗುಪ್ತಚರ ಮೂಲಗಳು ಸೂಚಿಸಿವೆ.

ಈ ದಾಳಿಯಲ್ಲೇ ಅವರ ತಂದೆ, ಇರಾನ್‌ನ ಹಿಂದಿನ ಸರ್ವೋಚ್ಚ ನಾಯಕ Ali Khamenei ಮೃತಪಟ್ಟಿರುವುದಾಗಿ ಹೇಳಲಾಗಿದೆ. ಶಿಯಾ ಧರ್ಮಗುರುಗಳ ಕೇಂದ್ರವಾಗಿರುವ ಕೋಮ್‌ನಲ್ಲಿ ಅವರ ಅಂತ್ಯಕ್ರಿಯೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

ಯುದ್ಧದ ಆರಂಭದಿಂದಲೇ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಪ್ರಕಟವಾಗಿರುವ ಹೇಳಿಕೆಗಳನ್ನು ರಾಜ್ಯ ಮಾಧ್ಯಮಗಳು ಓದುತ್ತಿದ್ದರೂ, ಅವರ ಧ್ವನಿ ದಾಖಲೆ ಇಲ್ಲದಿರುವುದು ಅವರ ಆರೋಗ್ಯದ ಬಗ್ಗೆ ಅನುಮಾನ ಮೂಡಿಸಿದೆ.

ಇದಲ್ಲದೆ, Iran ಸರ್ಕಾರ ಕೃತಕ ಬುದ್ಧಿಮತ್ತೆ ಬಳಸಿ ಬಿಡುಗಡೆ ಮಾಡಿದ ವಿಡಿಯೋವೂ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಖಮೇನಿ ಯುದ್ಧ ತಂತ್ರಗಳನ್ನು ಪರಿಶೀಲಿಸುತ್ತಿರುವಂತೆ ತೋರಿಸಲಾಗಿದೆ.

ಒಟ್ಟಿನಲ್ಲಿ, ಇರಾನ್‌ನಲ್ಲಿ ನಾಯಕತ್ವದ ಅನಿಶ್ಚಿತತೆ ಹಾಗೂ ಯುದ್ಧದ ಪರಿಣಾಮ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟಿಸಿದೆ.

Continue Reading

Trending