ಬೆಂಗಳೂರು
ಹಿಂದಿಯಲ್ಲಿ ಮಾತಾಡು ಎಂದು ಗಾಂಜಾಲಿ ತೋರಿದ್ದ ವ್ಯಕ್ತಿ ಕ್ಷಮೆಯಾಚನೆ!
ಬೆಂಗಳೂರು: ಕನ್ನಡದಲ್ಲಿ ಮಾತಾಡಿದಕ್ಕೆ ಆಟೋ ಚಾಲಕನೊಂದಿಗೆ ಜಗಳವಾಡಿದ್ದೂ ಅಲ್ಲದೇ ಹಿಂದಿಯಲ್ಲಿ ಮಾತಾಡು ಎಂದು ತಾಕೀತು ಮಾಡಿದ್ದ ವ್ಯಕ್ತಿಯೊಬ್ಬ ಕೊನೆಗೆ ಕನ್ನಡಿಗರ ಕ್ಷಮೆ ಕೇಳಿದ್ದಾನೆ, ಸೋಷಿಯಲ್ ಮೀಡಿಯಾದಲ್ಲಿ ಈತನ ವಿಡಿಯೋ ವೈರಲ್ ಆಗಿತ್ತು, ಬಳಿಕ ಈತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಈ ಬೆನ್ನಲ್ಲೇ ಕನ್ನಡದಲ್ಲಿಯೇ ಮಾತನಾಡಿರುವ ಅನ್ಯರಾಜ್ಯದ ವ್ಯಕ್ತಿ ಕನ್ನಡಿಗರ ಕ್ಷಮೆ ಕೋರಿದ್ದಾನೆ,
ನನ್ನ ಮಾತುಗಳಿಂದ ಹಾಗೂ ವರ್ತನೆಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮಿಸಿ ಎಂದು ವ್ಯಕ್ತಿ ಕೇಳಿಕೊಂಡಿದ್ದಾನೆ
ದೇಶ
Karnataka State Road Transport Corporation ಲಗೇಜು ದರ 15% ಹೆಚ್ಚಳ: ಫೆ.16ರಿಂದ ಜಾರಿ
ಬೆಂಗಳೂರು: ಕೆಎಸ್ಆರ್ಟಿಸಿ ತನ್ನ ಬಸ್ಗಳಲ್ಲಿನ ಲಗೇಜು ಸಾಗಣೆ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರಗಳು ಫೆಬ್ರವರಿ 16 (ಸೋಮವಾರ)ರಿಂದ ಜಾರಿಯಾಗಲಿವೆ ಎಂದು ನಿಗಮ ತಿಳಿಸಿದೆ.
30 ಕೆಜಿ ವರೆಗೆ ಉಚಿತ
ಪ್ರಯಾಣಿಕರಿಗೆ 30 ಕೆಜಿ ವರೆಗೆ ಲಗೇಜು ಉಚಿತವಾಗಿರುತ್ತದೆ. ಅದಕ್ಕೂ ಮೇಲಿನ ತೂಕಕ್ಕೆ ಮಾತ್ರ ನಿಗದಿತ ದರ ಅನ್ವಯವಾಗುತ್ತದೆ. ಬಸ್ ಮಾರ್ಗದ ಸ್ಟೇಜ್ಗಳ ಆಧಾರದಲ್ಲಿ ಲಗೇಜು ದರವನ್ನು ನಿಗದಿಪಡಿಸಲಾಗಿದೆ.
ವೆಚ್ಚ ಹೆಚ್ಚಳದ ಹಿನ್ನೆಲೆ
ಡೀಸೆಲ್, ಸಿಬ್ಬಂದಿ ವೇತನ ಹಾಗೂ ಇತರೆ ನಿರ್ವಹಣಾ ವೆಚ್ಚಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಲಗೇಜು ದರ ಪರಿಷ್ಕರಣೆ ಮಾಡಲಾಗಿದೆ. ಕಳೆದ ವರ್ಷ ಬಸ್ ಪ್ರಯಾಣ ದರದಲ್ಲಿ 15% ಏರಿಕೆ ಮಾಡಲಾಗಿದ್ದರೂ ಲಗೇಜು ದರವನ್ನು ಹೆಚ್ಚಿಸಲಾಗಿರಲಿಲ್ಲ. ಇದೀಗ ಅದನ್ನೂ ಸಮಾನ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಸ್ಟೇಜ್ ಆಧಾರಿತ ಪರಿಷ್ಕೃತ ಲಗೇಜು ದರ (ರೂ.)
1–5: 6.00
6–10: 12.00
11–15: 20.00
16–20: 25.00
21–25: 28.00
26–30: 32.00
31–35: 37.00
36–40: 42.00
41–45: 45.00
46–50: 50.00
51–55: 54.00
56–60: 59.00
61–65: 62.00
66–70: 67.00
71–75: 72.00
76–80: 76.00
81–85: 79.00
86–90: 84.00
91–95: 89.00
96–100: 93.00
101–105: 97.00
106–110: 101.00
111–115: 106.00
116–120: 110.00
121–125: 114.00
126–130: 119.00
131–135: 123.00
136–140: 128.00
141–145: 130.00
146–150: 135.00
151–155: 140.00
156–160: 145.00
ಪ್ರಯಾಣಿಕರಿಗೆ ಸೂಚನೆ
ಪ್ರತಿ ಬಾರಿ ಪ್ರಯಾಣ ದರ ಏರಿಕೆಯಾಗುವಾಗ ಲಗೇಜು ದರವೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಯಾಣಕ್ಕೂ ಮೊದಲು ಹೊಸ ದರಗಳನ್ನು ಪರಿಶೀಲಿಸುವಂತೆ ನಿಗಮ ಮನವಿ ಮಾಡಿದೆ.
ಕ್ರೀಡೆ
RAHUL DRAVID : ತಂದೆಯನ್ನು ನೆನೆದು ಕಣ್ಣೀರಿಟ್ಟ ದ್ರಾವಿಡ್
ಬೆಂಗಳೂರು: ಭಾರತದ ಬ್ಯಾಟಿಂಗ್ ದಿಗ್ಗಜ Rahul Dravid ಹಾಗೂ ಸ್ಪಿನ್ ಮಾಂತ್ರಿಕ Anil Kumble ಅವರಿಗೆ ಗೌರವ ಸೂಚಕವಾಗಿ ಬೆಂಗಳೂರಿನ ಐತಿಹಾಸಿಕ M. Chinnaswamy Stadium ನಲ್ಲಿ ಸ್ಟ್ಯಾಂಡ್ಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ವೇದಿಕೆಯಾಗಿ 50 ವರ್ಷ ಪೂರೈಸಿದ ಈ ಮೈದಾನದಲ್ಲಿ Karnataka State Cricket Association (KSCA) ಈ ಗೌರವವನ್ನು ಘೋಷಿಸಿದೆ.
ಕೆಎಸ್ಸಿಎ ಅಧ್ಯಕ್ಷ Venkatesh Prasad ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರು ದಿಗ್ಗಜರ ಸಾಧನೆಯನ್ನು ಸ್ಮರಿಸಲಾಯಿತು.
“ಇದು ನನ್ನ ಎರಡನೇ ಮನೆ” – ದ್ರಾವಿಡ್ ಭಾವುಕ ಮಾತು
ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, “ಚಿನ್ನಸ್ವಾಮಿ ಮೈದಾನ ನನ್ನಿಗೆ ಎರಡನೇ ಮನೆ. ನಮ್ಮ ಮನೆಗಿಂತಲೂ ಇಲ್ಲಿ ಹೆಚ್ಚು ಸಮಯ ಕಳೆದಿದ್ದೇವೆ. ಸಂತೋಷವೂ ಇದೆ, ನಿರಾಸೆಯೂ ಇದೆ; ಆದರೆ ನನ್ನನ್ನು ನಾನು ಆಗಲು ಕಾರಣವಾದ ಸ್ಥಳ ಇದು,” ಎಂದು ಹೇಳಿದರು.
ತಮ್ಮ ತಂದೆ ಶರದ್ ದ್ರಾವಿಡ್ ಅವರನ್ನು ನೆನೆದು ಭಾವುಕರಾದ ಅವರು, “ಕ್ರಿಕೆಟ್ ಮೇಲಿನ ಪ್ರೀತಿ ನನಗೆ ತಂದೆ ನೀಡಿದರು. ಬಾಲ್ಯದಲ್ಲಿ ಟೆಸ್ಟ್ ಪಂದ್ಯಗಳಷ್ಟೇ ಅಲ್ಲ, ರಣಜಿ ಪಂದ್ಯಗಳಿಗೂ ನನ್ನನ್ನು ಇಲ್ಲಿ ಕರೆತರುತ್ತಿದ್ದರು. ಇಂದು ನನ್ನ ಹೆಸರಿನಲ್ಲಿ ಸ್ಟ್ಯಾಂಡ್ ಇರೋದನ್ನು ನೋಡಿ ಅವರು ಹೆಮ್ಮೆಪಡುತ್ತಿದ್ದರು,” ಎಂದರು. ಶರದ್ ದ್ರಾವಿಡ್ 2013ರಲ್ಲಿ ನಿಧನರಾದರು.
ಕುಂಬ್ಳೆಗೆ ವಿಶೇಷ ಕ್ಷಣ
ಅನಿಲ್ ಕುಂಬ್ಳೆ, “ಒಂಬತ್ತು ವರ್ಷದ ಬಾಲಕನಾಗಿ ಇಲ್ಲಿ ಪಂದ್ಯ ನೋಡುತ್ತಿದ್ದೆ. ಇಂದು ಪೆವಿಲಿಯನ್ ಮೇಲಿನ ನನ್ನ ಹೆಸರು ನೋಡುವುದು ಭಾವನಾತ್ಮಕ ಕ್ಷಣ,” ಎಂದರು. ಬಿಸಿಸಿಐ ರೂಪಿಸಿದ ವ್ಯವಸ್ಥೆಯಿಂದ ದೇಶದ ಮೂಲೆಮೂಲೆಗಳಿಂದ ಪ್ರತಿಭೆಗಳು ಹೊರಹೊಮ್ಮಲು ಅವಕಾಶ ಸಿಕ್ಕಿದೆ ಎಂದೂ ಹೇಳಿದರು.
ದಿಗ್ಗಜರ ಸಾಧನೆ
ಅನಿಲ್ ಕುಂಬ್ಳೆ ಟೆಸ್ಟ್ಗಳಲ್ಲಿ 619 ಮತ್ತು ಏಕದಿನಗಳಲ್ಲಿ 337 ವಿಕೆಟ್ಗಳೊಂದಿಗೆ ಒಟ್ಟು 953 ಅಂತರರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ. ರಾಹುಲ್ ದ್ರಾವಿಡ್ 504 ಪಂದ್ಯಗಳಲ್ಲಿ 24,064 ರನ್ಗಳನ್ನು ಗಳಿಸಿ 48 ಶತಕ ಹಾಗೂ 145 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಬ್ಬರೂ ಭಾರತೀಯ ತಂಡವನ್ನು ನಾಯಕರಾಗಿ ಮುನ್ನಡೆಸಿದವರು.
ಅಪರಾಧ
BENGALURU : ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ 7 ದಿನಗಳ ಸಿಐಡಿ ಕಸ್ಟಡಿ
ಬೆಂಗಳೂರು: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು 7 ದಿನಗಳ ಸಿಐಡಿ ಕಸ್ಟಡಿ ವಿಧಿಸಿದೆ. ಹೃದಯ ಸಂಬಂಧಿ ಸಮಸ್ಯೆ ಇದೆ ಎಂದು ಅವರು ತಿಳಿಸಿದ್ದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಪರೀಕ್ಷೆ ನಡೆಸಲಾಗಿತ್ತು.
ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಬೆಂಗಳೂರಿನ ಪ್ರಸಿದ್ಧ Sri Jayadeva Institute of Cardiovascular Sciences and Research ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಸಿಜಿ ಹಾಗೂ ಆಂಜಿಯೋಗ್ರಾಮ್ ಸೇರಿದಂತೆ ಅಗತ್ಯ ಪರೀಕ್ಷೆಗಳು ನಡೆದಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ.
ನ್ಯಾಯಾಲಯದ ಆದೇಶ
42ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಬೈರತಿ ಬಸವರಾಜ್ ಅವರನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಸಿಐಡಿ ಪರವಾಗಿ ಎಸ್ಪಿಪಿ ಅಶೋಕ್ ನಾಯ್ಕ್ ಮತ್ತು ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ ವಾದ ಮಂಡಿಸಿದರು. ವೈದ್ಯರ ವರದಿಯನ್ನು ಪರಿಗಣಿಸಿದ ನ್ಯಾಯಾಧೀಶರು ಫೆಬ್ರವರಿ 21ರವರೆಗೆ 7 ದಿನಗಳ ಸಿಐಡಿ ಕಸ್ಟಡಿಗೆ ಒಪ್ಪಿಗೆ ನೀಡಿದರು. ಸಿಐಡಿ ಪರವಾಗಿ 9 ದಿನಗಳ ಕಸ್ಟಡಿ ಮನವಿ ಮಾಡಲಾಗಿದ್ದರೂ, ಪ್ರತಿವಾದಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು.
ಬಂಧನದ ಹಿನ್ನೆಲೆ
ಫೆಬ್ರವರಿ 12ರಂದು ಅಹಮದಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ ಬೈರತಿ ಬಸವರಾಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಗ್ರಾಮ್ ಮಾಡಲಾಗಿತ್ತು.
ಇದೀಗ 7 ದಿನಗಳ ಸಿಐಡಿ ಕಸ್ಟಡಿಯಲ್ಲಿ ಪ್ರಕರಣದ ಕುರಿತಾಗಿ ಮಹತ್ವದ ವಿಚಾರಣೆ ನಡೆಯಲಿದ್ದು, ಮುಂದಿನ ಬೆಳವಣಿಗೆಗಳತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.
-
ದೇಶ21 hours agoBENGALURU : ಅವೆನ್ಯೂ ರಸ್ತೆಯ ಪುರಾತನ ದೇವಸ್ಥಾನ ಅಪಾಯದಲ್ಲಿ
-
ಅಪರಾಧ15 hours agoBREAKING : ಕೆಂಪುಕೋಟೆ ಕಾರು ಬಾಂಬ್ ಸ್ಫೋಟ ಪ್ರಕರಣ – ವೈದ್ಯರಿಂದ ಉಗ್ರ ಸಂಘಟನೆ ರಚನೆ ಬಯಲು
-
ಅಪರಾಧ15 hours agoBENGALURU : ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ 7 ದಿನಗಳ ಸಿಐಡಿ ಕಸ್ಟಡಿ
-
ದೇಶ21 hours agoಮಹಾಭಾರತದ ದ್ರೌಪದಿ ಕಥೆ ನೆನಪಿಸುವ ಸಂಪ್ರದಾಯ: ಹಿಮಾಲಯದ ಗ್ರಾಮಗಳಲ್ಲಿ ಇನ್ನೂ ‘ಬಹುಪತಿತ್ವ’
-
ದೇಶ15 hours agoಕೆಂಗೇರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ಕೇದಾರನಾಥ ಲಿಂಗ ಪ್ರಾಣ ಪ್ರತಿಷ್ಠಾಪನೆ
-
ದೇಶ21 hours agoMANTRALAYA : ಸುಬುಧೇಂದ್ರ ತೀರ್ಥ ಸ್ವಾಮಿಗಳಿಂದ ವಿಶೇಷ ಪೂಜೆ
-
ದೇಶ14 hours agoಸುಂಕ ಸಂಕಷ್ಟದ ಬಳಿಕ ಭಾರತ–ಅಮೆರಿಕಾ ಸಂಬಂಧಗಳಲ್ಲಿ ಹೊಸ ಹಂತ
-
ಕ್ರೀಡೆ9 hours agoInd vs Pak: ICC Men’s T20 World Cupನಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗ
