ಕ್ರೀಡೆ
ವಿವಾದಾತ್ಮಕ ಹೇಳಿಕೆ ನೀಡಿದ ಅಂಬಟಿ ರಾಯುಡು! – AMBATI RAYUDU
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿರುವ ‘ಆಪರೇಷನ್ ಸಿಂಧೂರ’ ಕುರಿತು ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ವಿವಾದಾತ್ಮಕ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಹಲ್ಗಾಮ್ನಲ್ಲಿ ನಡೆದಿದ್ದ ಉಗ್ರ ಕೃತ್ಯವನ್ನು ಖಂಡಿಸಿದ ಭಾರತ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಮಂಗಳವಾರ ತಡ ರಾತ್ರಿ ಪಾಕಿಸ್ತಾನದ ಮೇಲೆ 25 ನಿಮಿಷಗಳ ಕಾಲ ಕ್ಷಿಪಣಿ ದಾಳಿ ನಡೆಸಿ ಒಂಬತ್ತಕ್ಕೂ ಹೆಚ್ಚು ಉಗ್ರರ ಅಡುಗುತಾಣಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿ ಆಗಿದೆ. ಭಾರತೀಯ ಸೇನೆಯ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಇದರ ನಡುವೆಯೇ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಆಪರೇಷನ್ ಸಿಂಧೂರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎಕ್ಸ್ ವೇದಿಕೆಯಲ್ಲಿ “ನಾವು ಕಣ್ಣಿಗೆ ಕಣ್ಣು ಎಂಬ ನೀತಿಯನ್ನು ಅನುಸರಿದರೇ, ಇಡೀ ಜಗತ್ತೇ ಕುರುಡಾಗುತ್ತದೆ” ಎಂದಿದ್ದಾರೆ. ಪರೋಕ್ಷಾಗಿ ಮುಯ್ಯಿಗೆ ಮುಯ್ಯಿ ಅನ್ನುವ ಬದಲು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು ಎಂಬ ಸಂದೇಶವನ್ನು ಕೊಟ್ಟಂತಿದೆ.
ಇದರ ಬೆನ್ನಲ್ಲೇ ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಯುಡು ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ರಾಯುಡು ಹೇಗೆ ಇಂತಹ ಕಾಮೆಂಟ್‌ಗಳನ್ನು ಮಾಡಬಹುದು ಎಂದು ಅನೇಕ ನೆಟಿಜನ್‌ಗಳು ರಾಯುಡು ಅವರನ್ನು ಪ್ರಶ್ನಿಸುತ್ತಿದ್ದಾರೆ.
ಭಯೋತ್ಪಾದಕರ ದುಷ್ಕೃತ್ಯಗಳಿಗೆ ಪ್ರತಿದಾಳಿ ಅಗತ್ಯ ಎಂದು ಕೆಲವರು ಹೇಳಿದರೇ ಇನ್ನು ಕೆಲವರು ರಾಯುಡು ಅವರನ್ನು ಪಾಕಿಸ್ತಾನದ ಮೇಲೆ ಸಹಾನುಭೂತಿ ಹೊಂದಿರುವ ವ್ಯಕ್ತಿ ಎಂದು ಕೋಪ ಹೊರಹಾಕಿದ್ದಾರೆ. ಇಂತಹ ಸಮಯದಲ್ಲಿ ಸೇನೆಗೆ ಬೆಂಬಲವಾಗಿ ನಿಲ್ಲಬೇಕು ಅದು ಬಿಟ್ಟು ಶಾಂತಿ ಶ್ಲೋಕಗಳನ್ನು ಪಠಿಸುವುದು ಸರಿಯಲ್ಲ ಎಂದಿದ್ದಾರೆ.
ಈ ಟ್ವೀಟ್‌ಗೆ ನೆಟಿಜನ್‌ಗಳಿಂದ ತೀವ್ರ ಆಕ್ರೋಸ ವ್ಯಕ್ತವಾದ ಬೆನ್ನಲ್ಲೇ ಅಂಬಟಿ ರಾಯುಡು ಮತ್ತೆರಡು ಟ್ವೀಟ್ಗಳನ್ನು ಮಾಡಿ ಸಾರ್ವಜನಿಕರ ಕೋಪವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಎರಡು ಟ್ವೀಟ್‌ಗಳಲ್ಲಿ, ಮೊದಲನೆಯದಾಗಿ, “ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಭಾರತದ ಇತರ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಭದ್ರತೆಗಾಗಿ ನಾನು ಪ್ರಾರ್ಥಿಸುತ್ತೇನೆ. ದಾಳಿಗೊಳಗಾದ ಪ್ರತಿಯೊಬ್ಬರ ಕುಟುಂಬಕ್ಕೆ ಸುರಕ್ಷತೆ ಜೊತೆಗೆ ತ್ವರಿತ ಪರಿಹಾರ ಸಿಗಲಿ ಎಂದು ನಾನು ಭಾವಿಸುತ್ತೇನೆ. ಜೈ ಹಿಂದ್!” ಎಂದು ಬರೆದಿದ್ದಾರೆ.
ನಂತರ ಮತ್ತೊಂದು ಟ್ವೀಟ್‌ನಲ್ಲಿ, “ಇಂತಹ ಕ್ಷಣಗಳಲ್ಲಿ, ನಾವು ಭಯದಿಂದಲ್ಲ, ದೃಢನಿಶ್ಚಯದಿಂದ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಅಪ್ರತಿಮ ಧೈರ್ಯ, ಶಿಸ್ತು ಮತ್ತು ನಿಸ್ವಾರ್ಥತೆಯಿಂದ ದೇಶದ ಹೊರೆಯನ್ನು ಹೊತ್ತಿರುವ ನಮ್ಮ ಭಾರತೀಯ ಸೇನೆಗೆ ಧನ್ಯವಾದಗಳು ಎಂದು ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ರಾಯುಡು ಮಾಡಿದ ಈ ಸರಿಪಡಿಸುವ ಕಾಮೆಂಟ್‌ಗಳಿಗೂ ನೆಟಿಜನ್‌ಗಳ ಕೋಪವನ್ನು ತಣ್ಣಗಾಗಿಸಲು ಸಾಧ್ಯವಾಗಿಲ್ಲ.
ಕ್ರೀಡೆ
ಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!
ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣನಲ್ಲಿ ನಡೆಯುತ್ತಿರುವ Indian Premier League ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಆರ್ಸಿಬಿಗೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭದಲ್ಲಿ ವಿರಾಟ್ ಕೊಹ್ಲಿ (28) ಬೇಗ ಔಟ್ ಆದರೂ, ಫಿಲ್ ಸಾಲ್ಟ್ (46) ತಂಡಕ್ಕೆ ವೇಗ ನೀಡಿದರು.
ಆದರೆ, ನಂತರದ ಹಂತದಲ್ಲಿ ಆರ್ಸಿಬಿ ಬ್ಯಾಟಿಂಗ್ ಭರ್ಜರಿಯಾಗಿ ಸಿಡಿಯಿತು. ದೇವದತ್ತ ಪಡಿಕಲ್ (50) ಅರ್ಧಶತಕ ಸಿಡಿಸಿ ತಂಡಕ್ಕೆ ಬಲ ನೀಡಿದರೆ, ನಾಯಕ ರಜತ್ ಪಾಟೀದಾರ್ (48*) ವೇಗದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟಿಮ್ ಡೇವಿಡ್ (70*) ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳಿಂದ ಚೆನ್ನೈ ಬೌಲರ್ಗಳನ್ನು ಕಂಗೆಡಿಸಿದರು.
ಪವರ್ಪ್ಲೇಯಲ್ಲೇ ವಿಕೆಟ್ ಪಡೆಯಲು ವಿಫಲವಾದ ಸಿಎಸ್ಕೆ ಬೌಲರ್ಗಳು ಮತ್ತೆ ಅದೇ ತಪ್ಪನ್ನು ಮುಂದುವರೆಸಿದರು. ಪರಿಣಾಮವಾಗಿ, ಆರ್ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರೀ 250 ರನ್ ಗಳಿಸಿತು.
ಈ ಬೃಹತ್ ಗುರಿಯನ್ನು ಬೆನ್ನತ್ತುತ್ತಿರುವ ಸಿಎಸ್ಕೆ, ತನ್ನ ಮೊದಲ ಗೆಲುವು ದಾಖಲಿಸಬಹುದೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಆರ್ಸಿಬಿ ಬ್ಯಾಟಿಂಗ್ ವಿವರ:
- ವಿರಾಟ್ ಕೊಹ್ಲಿ – 28 (18)
- ಫಿಲ್ ಸಾಲ್ಟ್ – 46 (30)
- ದೇವದತ್ತ ಪಡಿಕಲ್ – 50 (29)
- ರಜತ್ ಪಾಟೀದಾರ್ – 48* (19)
- ಟಿಮ್ ಡೇವಿಡ್ – 70* (25)
ಕ್ರೀಡೆ
ಐಪಿಎಲ್ ಟಿಕೆಟ್ ದುರ್ಬಳಕೆ: ಶಾಸಕರ ಪಾಸ್ ಸ್ನೇಹಿತರ ಕೈಗೆ!
ಬೆಂಗಳೂರುದಲ್ಲಿ ಐಪಿಎಲ್ ಕ್ರೇಜ್ ಗರಿಷ್ಠ ಮಟ್ಟಕ್ಕೆ ಏರಿರುವ ನಡುವೆಯೇ, ಶಾಸಕರಿಗೆ ನೀಡಲಾದ ಉಚಿತ ಟಿಕೆಟ್ ಪಾಸ್‌ಗಳ ದುರ್ಬಳಕೆಯ ಆರೋಪ ದೊಡ್ಡ ವಿವಾದಕ್ಕೆ ಕಾರಣವಾಗಿದೆ. Indian Premier League ಪಂದ್ಯಗಳಿಗೆ ಸಂಬಂಧಿಸಿದ ಈ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೆಲವು ಶಾಸಕರು ತಮ್ಮ ಹಾಗೂ ಕುಟುಂಬ ಸದಸ್ಯರಿಗೆ ಉಚಿತ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ Karnataka State Cricket Association ವಿಶೇಷ ಅಕ್ರೆಡೆಷನ್ ಕಾರ್ಡ್ ಮಾದರಿಯ ಪಾಸ್‌ಗಳನ್ನು ವಿತರಿಸಿತ್ತು.
ಆದರೆ, ಈ ಪಾಸ್‌ಗಳು ಈಗ ಶಾಸಕರ ಕುಟುಂಬದವರಿಗಷ್ಟೇ ಸೀಮಿತವಾಗದೆ, ಅವರ ಮಕ್ಕಳ ಸ್ನೇಹಿತರ ಕೈಗೆ ಸೇರಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಪೊಲೀಸರು ತಪಾಸಣೆ ನಡೆಸಿದ ವೇಳೆ, ಶಾಸಕರ ಕುಟುಂಬದ ಹೆಸರಿನ ಪಾಸ್ ಹಿಡಿದು ಬಂದಿದ್ದ ಕೆಲ ಯುವಕರ ಮೇಲೆ ಅನುಮಾನ ಮೂಡಿದೆ.
ಪರಿಶೀಲನೆ ವೇಳೆ ಯುವಕರು ತಡಬಡಾಯಿಸಿದ್ದು, ಕೊನೆಯಲ್ಲಿ ತಾವು ಶಾಸಕರ ಮಗನ ಸ್ನೇಹಿತರು ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಈ ಘಟನೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಜನಪ್ರತಿನಿಧಿಗಳಿಗಾಗಿ ನೀಡಲಾದ ಸೌಲಭ್ಯವನ್ನು ಅನರ್ಹರು ಬಳಸುವುದು ಸರಿಯೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಸಾಮಾನ್ಯ ಜನರು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಉಚಿತ ಪಾಸ್‌ಗಳು ದುರ್ಬಳಕೆಯಾಗುತ್ತಿರುವುದು ಜನರಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ KSCA ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
ಕ್ರೀಡೆ
ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!
ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.
ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.
ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
-
ದೇಶ16 hours ago“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
-
ದೇಶ16 hours agoಕಾಗದ-ಇಂಕ್ ಬೆಲೆ ಏರಿಕೆ: ಪ್ರಿಂಟಿಂಗ್ ಪ್ರೆಸ್ಗಳಿಗೆ ಶಾಕ್
-
ದೇಶ14 hours agoಪೊಲೀಸ್ ವಾಹನವೇ ಪ್ರವೇಶಿಸದ ಗ್ರಾಮ: ಶಾಂತಿಯುತ ಬದುಕಿನ ಅದ್ಭುತ ಕಥೆ
-
ದೇಶ16 hours ago‘I Love My Daughter’ ಟೀ ಶರ್ಟ್ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
-
ಕ್ರೀಡೆ12 hours agoಚಿನ್ನಸ್ವಾಮಿಯಲ್ಲಿ ರನ್ ಮಳೆ: ಆರ್ಸಿಬಿ 250 ರನ್ ಸಿಡಿತ!
-
ದೇಶ15 hours agoIndian Railways: ರೈಲಲ್ಲೇ ಮದುವೆ ಸಂಭ್ರಮ: Indian Railwaysನಲ್ಲಿ ಹೊಸ ಟ್ರೆಂಡ್!
-
ದೇಶ15 hours agoಎನ್ಎಂಎಸಿಸಿ ವೇದಿಕೆಯಲ್ಲಿ ನೀತಾ ಅಂಬಾನಿ ಸೀರೆ ಸದ್ದು: ಐವರಿ-ಗೋಲ್ಡ್ ಲುಕ್ ವೈರಲ್
-
ದೇಶ12 hours ago“ನರಕದಲ್ಲಿ ಬದುಕಬೇಕಾಗುತ್ತದೆ”: ಇರಾನ್ಗೆ ಟ್ರಂಪ್ ಎಚ್ಚರಿಕೆ
