ದೇಶ
ಕೆವೈಸಿ ಸರಿಯಾಗದೆ ಬ್ಯಾಂಕ್ ಖಾತೆನಿಷ್ಕ್ರಿಯವಾದರೆಸಕ್ರಿಯಗೊಳಿಸೋದು ಹೇಗೆ
ಬ್ಯಾಂಕ್ ಅಕೌಂಟ್ ಕುರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಂದರ್ಭ ನಿಮಗೆ ಬಂದಿರಬಹುದು. ಏಕೆಂದರೆ ಆರ್‌ಬಿಐ ನಿರ್ದೇಶನದ ಅನುಸಾರ ಮರು ಕೆವೈಸಿ (KYC) ಮಾಡಬೇಕಿರುತ್ತದೆ. ರಿ-ಕೆವೈಸಿ ಆಗದಿದ್ದರೆ ಬ್ಯಾಂಕ್ ಖಾತೆಯನ್ನು ಬ್ಯಾಂಕ್ ನಿಷ್ಕ್ರಿಯಗೊಳಿಸಬಹುದು. ಅದು ಬ್ಯಾಂಕ್‌ಗಳಿಗೆ ಕಡ್ಡಾಯವೂ ಆಗಿದೆ. ಆದರೆ ಇದಕ್ಕೆ ಚಿಂತೆ ಮಾಡಬೇಕಿಲ್ಲ.
ಬ್ಯಾಂಕ್‌ಗಳು ನಿಯಮಿತವಾಗಿ ರಿ-ಕೆವೈಸಿ ಮಾಡುವುದಿದ್ದರೂ, ಯಾವ ಕೆಟಗರಿಯ ಗ್ರಾಹಕರು ಎಂಬುದನ್ನು ಅವಲಂಬಿಸಿ ಇರುತ್ತದೆ. ರೆಗ್ಯುಲೇಟೆಡ್ ಎಂಟಿಟೀಸ್ (Regulated entities) ರಿಸ್ಕ್ ಆಧರಿತ ನಿಯಮಿತ ರಿ-ಕೆವೈಸಿ ಪ್ರಕ್ರಿಯೆ ಮಾಡುತ್ತವೆ. ಹೈ -ರಿಸ್ಕ್ ಕೆಟಗರಿಯ ಗ್ರಾಹಕರಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಕಡಿಮೆ ರಿಸ್ಕ್ ಇರುವ ಗ್ರಾಹಕರಿಗೆ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುತ್ತದೆ. ಮಧ್ಯಮ ರಿಸ್ಕ್ ಇರುವ ಗ್ರಾಹಕರಿಗೆ ಪ್ರತಿ ಎಂಟು ವರ್ಷಕ್ಕೊಮ್ಮೆ ಕೆವೈಸಿ ನಡೆಯುತ್ತದೆ.
ನಿಮ್ಮ ಬ್ಯಾಂಕ್ ಇ-ಮೇಲ್ ಮೂಲಕ ನಿಮಗೆ ಕೆವೈಸಿ ಡಿಟೇಲ್ಸ್ ಪರಿಷ್ಕರಿಸುವಂತೆ ಕೋರಿದ್ದರೆ, ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ. ಡೆಡ್ ಲೈನ್ ಮಿಸ್ ಆದರೆ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಬಹುದು. ಒಂದು ವೇಳೆ ರಿ-ಕೆವೈಸಿ ವಿಫಲವಾಗಿ ಬ್ಯಾಂಕ್ ಅಕೌಂಟ್ ಸಸ್ಪೆಂಡ್ ಆಗಿದ್ದರೆ, ರಿ-ಆಕ್ಟಿವ್ ಮಾಡಬಹುದು. ಬ್ಯಾಂಕ್ ಖಾತೆಯನ್ನು ರಿ-ಆಕ್ಟಿವ್ ಮಾಡುವ ಪ್ರಕ್ರಿಯೆ ಪ್ರತಿಯೊಂದು ಬ್ಯಾಂಕಿಗೂ ಒಂದೇ ರೀತಿಯಲ್ಲಿರುತ್ತದೆ. ಹೀಗಿದ್ದರೂ ಮೆಕಾನಿಸಂ ಭಿನ್ನವಾಗಿರಬಹುದು (ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್ಸೆಮ್ಮೆಸ್, ಇ-ಮೇಲ್ ಇತ್ಯಾದಿ.
ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) ವೆಬ್ ಸೈಟ್ ಪ್ರಕಾರ, ಗ್ರಾಹಕರು ಮೂರು ವಿಧಾನಗಳಲ್ಲಿ ರಿ-ಕೆವೈಸಿ (Re-KYC) ಮಾಡಬಹುದು. ಹಾಗೂ ಬ್ಯಾಂಕ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.
ಬ್ಯಾಂಕ್ ಶಾಖೆಗೆ ಭೇಟಿ: ನಿಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ರಿ-ಕೆವೈಸಿ ಫಾರಮ್ ಭರ್ತಿಗೊಳಿಸಿ. ಕೆವೈಸಿ ದಾಖಲೆ ಸಲ್ಲಿಸಿ.
ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ತಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಳಸಿ (Mobile banking app) ಕೆವೈಸಿ ಪರಿಷ್ಕರಿಸಬಹುದು.
ಸೌತ್ ಇಂಡಿಯನ್ ಬ್ಯಾಂಕಿನ್ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ರಿ ಕೆವೈಸಿಯನ್ನು ಬ್ಯಾಂಕ್ ಕಚೇರಿಗೆ, ಶಾಖೆಗಳಿಗೆ ತೆರಳಿ ಮಾಡಬಹುದು ಎಂದು ಬ್ಯಕಿನ ಪ್ರಧಾನ ವ್ಯವಸ್ಥಾಪಕ ಶಿವರಾಮನ್ ತಿಳಿಸಿದ್ದಾರೆ. ಸಮೀಪದ ಎಸ್‌ಐಬಿ ಕಚೃಿಗೆ ತೆರಳಿ ಇತ್ತೀಚಿನ ಫೋಟೊ, ಪ್ಯಾನ್ ಇತ್ಯಾದಿ ದಾಖಲೆ ಸಲ್ಲಿಸಬಹುದು.
ವಿಡಿಯೊ ಕಾಲ್: ಆಧಾರ್, ಪ್ಯಾನ್ ಇರುವವರು ವಿಡಿಯೊ ರಿ-ಕೆವೈಸಿ ಮಾಡಬಹುದು.
ಇಮೇಲ್/ಪೋಸ್ಟ್/ ಕೊರಿಯರ್: ಇ-ಮೇಲ್, ಕೊರಿಯರ್, ಪೋಸ್ಟ್ ಇತ್ಯಾದಿ ಮೂಲಕವೂ ಸೆಲ್ಫ್ ಡಿಕ್ಲರೇಷನ್ ಮೂಲಕ ರಿ-ಕೆವೈಸಿ ಮಾಡಬಹುದು.*
ದೇಶ
“ಚಾಮರಾಜಪೇಟೆಗೆ ಬಂದ್ರೆ ಸುಮ್ಮನೆ ಇರ್ತಿನಾ?”: ಜಮೀರ್ ಟಾಂಗ್, ದಾವಣಗೆರೆ ರಾಜಕೀಯ ಕುತೂಹಲ
ದಾವಣಗೆರೆ ದಕ್ಷಿಣ ಉಪಚುನಾವಣೆ ರಾಜಕೀಯ ಕಣ ದಿನೇದಿನೇ ರಂಗೇರುತ್ತಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಗಮನದಿಂದ ಹೊಸ ತಿರುವು ಪಡೆದುಕೊಂಡಿದೆ. ಹಲವು ದಿನಗಳಿಂದ ಮುಂದುವರಿದಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಅವರು ಕೊನೆಗೂ ದಾವಣಗೆರೆಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ.
ಟಿಕೆಟ್ ಹಂಚಿಕೆ ವೇಳೆ ಉಂಟಾದ ಗಲಾಟೆ ಸಂದರ್ಭದಲ್ಲಿ ಎಸ್‌ಎಸ್ ಮಲ್ಲಿಕಾರ್ಜುನ್ ಅವರು “ಯಾರ್ರಿ ಜಮೀರ್ ದಾವಣಗೆರೆ ಬಗ್ಗೆ ಮಾತನಾಡಲು” ಎಂದು ಹೇಳಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಜಮೀರ್ ಅಸಮಾಧಾನಗೊಂಡಿದ್ದರು.
ಆದರೆ ಇದೀಗ ರಾಜಕೀಯ ವಾತಾವರಣ ಬದಲಾಗಿದ್ದು, ಜಮೀರ್ ಅವರನ್ನು ಸ್ವತಃ ಮಲ್ಲಿಕಾರ್ಜುನ್ ಅವರು ಸ್ವಾಗತಿಸಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್, “ನಾವಿಬ್ಬರೂ ಸ್ನೇಹಿತರು. ಯಾವುದೇ ಬೇಸರ ಇಲ್ಲ. ಸಿಟ್ಟಿನಲ್ಲಿ ಹೇಳಿದ ಮಾತು ಅಷ್ಟೇ,” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಅವರು ಪರೋಕ್ಷವಾಗಿ ಟಾಂಗ್ ಕೊಡುತ್ತಾ, “ನನ್ನ ಕ್ಷೇತ್ರ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನು ಸುಮ್ಮನೆ ಇರ್ತಿನಾ?” ಎಂದು ಪ್ರತಿಕ್ರಿಯೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್, “ಈಗ ಎಲ್ಲವೂ ಬಗೆಹರಿದಿದೆ. ನಾವು ಬಹಳ ವರ್ಷಗಳಿಂದ ಸ್ನೇಹಿತರು,” ಎಂದು ಹೇಳಿದರು.
ಈ ಬೆಳವಣಿಗೆ ದಾವಣಗೆರೆ ರಾಜಕೀಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಬಲ ಹೆಚ್ಚಿದಂತೆ ಕಾಣುತ್ತಿದೆ.
ದೇಶ
‘I Love My Daughter’ ಟೀ ಶರ್ಟ್‌ನಲ್ಲಿ ಸಂಭ್ರಮ: ವಿಚ್ಛೇದನಕ್ಕೆ ಹೊಸ ಅರ್ಥ ನೀಡಿದ ಕುಟುಂಬ
ಉತ್ತರ ಪ್ರದೇಶದ ಮೀರತ್‌ನಲ್ಲಿ ವಿಚ್ಛೇದನವನ್ನು ಸಂಭ್ರಮದಿಂದ ಆಚರಿಸಿದ ಅಪರೂಪದ ಘಟನೆ ಒಂದು ಸಮಾಜಕ್ಕೆ ಬಲವಾದ ಸಂದೇಶ ನೀಡುತ್ತಿದೆ. ನಿವೃತ್ತ ನ್ಯಾಯಾಧೀಶರಾದ ಜ್ಞಾನೇಂದ್ರ ಶರ್ಮಾ ತಮ್ಮ ಮಗಳು ಪ್ರಣೀತಾ ಶರ್ಮಾ ಅವರಿಗೆ ವಿಚ್ಛೇದನ ಸಿಕ್ಕ ನಂತರ, ಆಕೆಯನ್ನು ಮನೆಗೆ ಡೋಲು-ನಗಾರಿಗಳೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಕುಟುಂಬದವರು “I LOVE MY DAUGHTER” ಎಂದು ಮುದ್ರಿಸಿದ ಕಪ್ಪು ಟೀ ಶರ್ಟ್ ಧರಿಸಿ, ಸಿಹಿ ಹಂಚಿ, ಹೂಮಾಲೆ ಹಾಕಿ ಮಗಳ ಮರಳುವಿಕೆಯನ್ನು ಸಂಭ್ರಮಿಸಿದರು. ನ್ಯಾಯಾಲಯದಿಂದ ಮನೆವರೆಗೆ ಹಾಡು-ನೃತ್ಯಗಳೊಂದಿಗೆ ಮೆರವಣಿಗೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರಣೀತಾ ಶರ್ಮಾ ಅವರ ವಿವಾಹ 2018ರಲ್ಲಿ ಸೇನೆಯ ಮೇಜರ್ ಗೌರವ್ ಅಗ್ನಿಹೋತ್ರಿ ಅವರೊಂದಿಗೆ ನಡೆದಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಕಿರುಕುಳ ಆರಂಭವಾಗಿ, ಸುಮಾರು ಏಳು ವರ್ಷಗಳ ಕಾಲ ಮಾನಸಿಕ ಮತ್ತು ಭಾವನಾತ್ಮಕ ಹಿಂಸೆ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ.
“ಹೆಣ್ಣೆಂದರೆ ವಸ್ತುವಲ್ಲ. ಆಕೆ ಸಂತೋಷವಾಗಿರದ ಮನೆಯಲ್ಲೇ ಇರಲು ಒತ್ತಾಯಿಸುವುದು ತಪ್ಪು,” ಎಂದು ತಂದೆ ಜ್ಞಾನೇಂದ್ರ ಶರ್ಮಾ ಹೇಳಿದ್ದಾರೆ. ಯಾವುದೇ ರೀತಿಯ ಜೀವನಾಂಶ ಬೇಡವೆಂದು ಹೇಳಿ, ಮಗಳನ್ನು ಗೌರವದಿಂದ ಮನೆಗೆ ಕರೆತಂದಿದ್ದಾರೆ.
ಪ್ರಣೀತಾ ಶರ್ಮಾ ಕೂಡ ಮಹಿಳೆಯರಿಗೆ ಮಹತ್ವದ ಸಂದೇಶ ನೀಡಿದ್ದಾರೆ. “ಮೌನ ಮುರಿಯಿರಿ. ಕಿರುಕುಳವನ್ನು ಸಹಿಸಿಕೊಳ್ಳುವುದು ನಮ್ಮ ಮೇಲೆ ನಮ್ಮೇ ಮಾಡುವ ಅನ್ಯಾಯ. ಮದುವೆಗೂ ಮುನ್ನ ಆರ್ಥಿಕವಾಗಿ ಸ್ವತಂತ್ರರಾಗಿರಿ,” ಎಂದು ಸಲಹೆ ನೀಡಿದ್ದಾರೆ.
ಈ ಘಟನೆ ವಿಚ್ಛೇದನವನ್ನು ಕಳಂಕವಾಗಿ ನೋಡುವ ಮನೋಭಾವಕ್ಕೆ ಸವಾಲು ಹಾಕಿ, ಮಹಿಳಾ ಸಬಲೀಕರಣಕ್ಕೆ ಹೊಸ ದಾರಿಯನ್ನು ತೆರೆದಿದೆ.
ದೇಶ
K. Govindraj ಸೇರಿ ಗಣ್ಯರಿಗೆ ಗೌರವ ಡಾಕ್ಟರೇಟ್ – ಬಿಸಿಯು ಘಟಿಕೋತ್ಸವ ಸಂಭ್ರಮ
ಬೆಂಗಳೂರು: Bengaluru City University (ಬಿಸಿಯು) 5ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಕುಲಾಧಿಪತಿಗಳಾದ Thawar Chand Gehlot ಚಾಲನೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ Dr. Binay Kumar Das, Defence Research and Development Organisation (ಡಿಆರ್‌ಡಿಒ) ಮಹಾ ನಿರ್ದೇಶಕರು (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಸಿಸ್ಟಮ್ಸ್) ಭಾಗವಹಿಸಿದ್ದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಂಗೀತ ನಿರ್ದೇಶಕ Arjun Janya, ಕ್ರಿಕೆಟರ್ Venkatesh Prasad, ಶಿಕ್ಷಣ ತಜ್ಞ T. K. Narayanappa, ಎಂಎಲ್ಸಿ K. Govindaraj, ಶಿಕ್ಷಣ ಕ್ಷೇತ್ರದ Mohan Alva ಹಾಗೂ ಕೈಗಾರಿಕೋದ್ಯಮಿ Bava Mohammed Farooq ಅವರಿಗೆ ರಾಜ್ಯಪಾಲರು ಗೌರವಿಸಿದರು.
ಉಪ ಚುನಾವಣೆ ಪ್ರಚಾರದ ಹಿನ್ನೆಲೆ, ಉನ್ನತ ಶಿಕ್ಷಣ ಸಚಿವ Dr. C. N. Ashwath Narayan ಗೈರಾಗಿದ್ದರು.
ಘಟಿಕೋತ್ಸವದಲ್ಲಿ 73 ಪ್ರಥಮ ರ‍್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರದಾನವಾಗಿದ್ದು, 23 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ನೀಡಲಾಯಿತು.
ವಿಶೇಷವಾಗಿ, ಸ್ನೇಹಾ ಟಿ (ಎಂಎಸ್‌ಸಿ ರಸಾಯನಶಾಸ್ತ್ರ) 4 ಚಿನ್ನದ ಪದಕಗಳನ್ನು ಪಡೆದು ಸಾಧನೆ ಮಾಡಿದ್ದು, ಅಭಿಷೇಕ್ ಶ್ರೀರಾಮ್ (ಬಿಕಾಂ) 3 ಚಿನ್ನದ ಪದಕ, ದಿವ್ಯಶ್ರೀ ಎಸ್ (ಬಿಬಿಎ) 3 ಚಿನ್ನದ ಪದಕ ಪಡೆದು ಗಮನಸೆಳೆದಿದ್ದಾರೆ.
ಗೌರವ ಡಾಕ್ಟರೇಟ್ ಪಡೆದ ಬಳಿಕ Arjun Janya ಅವರು ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು.
