ಆರೋಗ್ಯ
ಬೆಳಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಂಡರೆ ಎಚ್ಚರ!
ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆಯು ಸಾಮಾನ್ಯವಾಗಿದೆ. ಕೆಲವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಇನ್ನೂ ಕೆಲವರು ಕಡಿಮೆ ರಕ್ತದೊತ್ತಡದ (ಲೋ ಬಿಪಿ) ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಜನರು ಕಡಿಮೆ ರಕ್ತದೊತ್ತಡವನ್ನು ಕಡಿಮೆ ಅಪಾಯಕಾರಿ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ, ಕಡಿಮೆ ರಕ್ತದೊತ್ತಡವು ಆರೋಗ್ಯಕ್ಕೆ ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು. ಬೆಳಗ್ಗೆ ಎದ್ದ ತಕ್ಷಣ ಕಾಣಿಸುವ ಈ ಐದು ಲಕ್ಷಣಗಳನ್ನು ಗಮನಿಸಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಕಡಿಮೆ ರಕ್ತದೊತ್ತಡದ 5 ಪ್ರಮುಖ ಲಕ್ಷಣಗಳು
- ತಲೆತಿರುಗುವಿಕೆ ಅಥವಾ ಮೂರ್ಛೆ: ಬೆಳಗ್ಗೆ ಎದ್ದ ತಕ್ಷಣ ತಲೆತಿರುಗುವಿಕೆ ಅನುಭವಿಸಿದರೆ, ಅದು ಕಡಿಮೆ ರಕ್ತದೊತ್ತಡದ ಸಂಕೇತವಾಗಿರಬಹುದು. ದಿನವಿಡೀ ಈ ಲಕ್ಷಣ ಕಂಡುಬಂದರೂ ನಿರ್ಲಕ್ಷಿಸದೆ, ತಕ್ಷಣ ವೈದ್ಯರ ಬಳಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಿ.
- ವಾಕರಿಕೆ: ಬೆಳಗ್ಗೆ ಎದ್ದಾಗ ವಾಕರಿಕೆಯ ಭಾವನೆ ಅಥವಾ ವಾಂತಿಯಾಗುವಂತೆ ಅನಿಸಿದರೆ, ಇದು ಕಡಿಮೆ ಬಿಪಿಯ ಎಚ್ಚರಿಕೆಯಾಗಿರಬಹುದು. ಈ ಲಕ್ಷಣವನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯರ ಸಲಹೆ ಪಡೆಯಿರಿ.
- ಆಯಾಸ: ಯಾವುದೇ ಕೆಲಸ ಮಾಡದಿದ್ದರೂ ಬೆಳಗ್ಗೆ ಎದ್ದಾಗ ದೇಹದಲ್ಲಿ ಆಯಾಸವಿದ್ದರೆ, ಇದನ್ನು ನಿರ್ಲಕ್ಷಿಸಬೇಡಿ. ಕಡಿಮೆ ರಕ್ತದೊತ್ತಡದಿಂದ ಈ ಲಕ್ಷಣ ಕಾಣಿಸಬಹುದು. ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
- ಮಸುಕಾದ ದೃಷ್ಟಿ: ಬೆಳಗ್ಗೆ ಎದ್ದ ತಕ್ಷಣ ದೃಷ್ಟಿ ಮಂದವಾಗಿದ್ದರೆ, ಇದು ಕಡಿಮೆ ಬಿಪಿಯ ಸೂಚನೆಯಾಗಿರಬಹುದು. ಈ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.
- ತಣ್ಣಗಾದ ಚರ್ಮ: ಎದ್ದಾಗ ಚರ್ಮ ತಣ್ಣಗಾಗಿದ್ದರೆ ಅಥವಾ ಜಿಗುಟಾಗಿದ್ದರೆ, ಇದು ಕಡಿಮೆ ರಕ್ತದೊತ್ತಡದ ಲಕ್ಷಣವಾಗಿರಬಹುದು. ದೇಹದಲ್ಲಿ ತಣ್ಣನೆಯ ಭಾವನೆ ಇದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳಿ.
- ಕಡಿಮೆ ರಕ್ತದೊತ್ತಡಕ್ಕೆ ಸರಳ ಪರಿಹಾರಗಳು
- ಕಡಿಮೆ ರಕ್ತದೊತ್ತಡದ ಲಕBUT, ಈ ಕೆಲವು ಸರಳ ಉಪಾಯಗಳು ತಾತ್ಕಾಲಿಕ ಪರಿಹಾರ ನೀಡಬಹುದು:
- ಉಪ್ಪು ನೀರು: ಕಡಿಮೆ ಬಿಪಿಯಿದ್ದರೆ ಒಂದು ಗ್ಲಾಸ್ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ. ಇದು ರಕ್ತದೊತ್ತಡವನ್ನು ತಕ್ಷಣ ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
- ಕಾಫಿ: ಕಾಫಿಯು ಕಡಿಮೆ ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಸರಿಪಡಿಸಬಹುದು. ಒಂದು ಕಪ್ ಕಾಫಿ ಕುಡಿಯುವುದರಿಂದ ಲಕ್ಷಣಗಳು ಕಡಿಮೆಯಾಗಬಹುದು.
- ಆರೋಗ್ಯವನ್ನು ಕಾಪಾಡಿಕೊಳ್ಳಿ
- ಕಡಿಮೆ ರಕ್ತದೊತ್ತಡವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೇಲಿನ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ, ಸಮತೋಲನ ಆಹಾರ ಸೇವಿಸಿ ಮತ್ತು ಒತ್ತಡವನ್ನು ತಪ್ಪಿಸಿ. ನಿಮ್ಮ ಆರೋಗ್ಯವೇ ಮೊದಲ ಆದ್ಯತೆ.
ಆರೋಗ್ಯ
LIFE STYLE ನಿಂತುಕೊಂಡು ನೀರು ಕುಡಿಯುವುದರಿಂದ ಏನಾಗುತ್ತದೆ?
ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ನಾವು ಅನೇಕ ಸಣ್ಣ ಅಭ್ಯಾಸಗಳನ್ನು ಗಮನಿಸದೆ ನಿರ್ಲಕ್ಷಿಸುತ್ತೇವೆ. ಅದರಲ್ಲಿ ಪ್ರಮುಖವಾದುದು ನಿಂತುಕೊಂಡು ನೀರು ಕುಡಿಯುವ ಅಭ್ಯಾಸ. ಕಚೇರಿಯಾಗಲಿ, ಮನೆಯಲ್ಲಾಗಲಿ ಅಥವಾ ಹೊರಗಡೆ ಇದ್ದಾಗಲೂ ಜನರು ನಿಂತೆಯೇ ನೀರು ಕುಡಿಯುತ್ತಾರೆ. ಆದರೆ ಈ ಸಣ್ಣ ಅಭ್ಯಾಸವೇ ಭವಿಷ್ಯದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಆಯುರ್ವೇದದ ಎಚ್ಚರಿಕೆ.
ನಾವು ಕುಳಿತುಕೊಂಡು ನೀರು ಕುಡಿದಾಗ ದೇಹವು ಅದನ್ನು ನಿಧಾನವಾಗಿ ಹೀರಿಕೊಳ್ಳಲು ಅವಕಾಶ ದೊರಕುತ್ತದೆ. ಇದರಿಂದ ನೀರು ದೇಹದ ಅಂಗಾಂಗಗಳಿಗೆ ಸಮರ್ಪಕವಾಗಿ ವಿತರಣೆ ಆಗುತ್ತದೆ. ಆದರೆ ನಿಂತುಕೊಂಡು ನೀರು ಕುಡಿಯುವಾಗ ನೀರು ವೇಗವಾಗಿ ಹೊಟ್ಟೆಗೆ ಸೇರುತ್ತದೆ. ಇದರಿಂದ ದೇಹವು ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದೆ, ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಆಯುರ್ವೇದದ ಪ್ರಕಾರ, ನಿಂತು ನೀರು ಕುಡಿಯುವುದರಿಂದ ದೇಹದ ನೀರಿನ ಸಮತೋಲನ ಹಾಳಾಗುತ್ತದೆ. ಪರಿಣಾಮವಾಗಿ ನೀರು ಕೀಲುಗಳು ಮತ್ತು ಮೊಣಕಾಲುಗಳ ಸುತ್ತ ಸಂಗ್ರಹವಾಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮೊಣಕಾಲು ನೋವು, ಕೀಲು ಬಿಗಿತ ಮತ್ತು ಸಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇನ್ನೂ, ನಿಂತು ನೀರು ಕುಡಿಯುವುದರಿಂದ ನೀರು ಸರಿಯಾಗಿ ಶೋಧನೆ ಆಗದೆ ನೇರವಾಗಿ ಮೂತ್ರಪಿಂಡಗಳಿಗೆ ತಲುಪುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.
ಜೀರ್ಣಕ್ರಿಯೆ ಹದಗೆಡುವುದರಿಂದ ಗ್ಯಾಸ್, ಆಮ್ಲೀಯತೆ, ಎದೆಯುರಿ, ಮಲಬದ್ಧತೆ ಹಾಗೂ ಹೊಟ್ಟೆ ಭಾರವಾದ ಅನುಭವ ಉಂಟಾಗುತ್ತದೆ. ದೇಹವು ನೀರನ್ನು ಸರಿಯಾಗಿ ಬಳಸಿಕೊಳ್ಳದಾಗ ಶಕ್ತಿ ಕುಂಠಿತವಾಗುತ್ತದೆ ಮತ್ತು ವ್ಯಕ್ತಿಗೆ ನಿರಂತರ ದಣಿವು ಹಾಗೂ ಆಲಸ್ಯ ಕಾಣಿಸಿಕೊಳ್ಳುತ್ತದೆ.
ಆರೋಗ್ಯವಾಗಿರಲು ಬಯಸಿದರೆ ಯಾವಾಗಲೂ ಆರಾಮವಾಗಿ ಕುಳಿತು, ನಿಧಾನವಾಗಿ ನೀರು ಕುಡಿಯಬೇಕು. ತುಂಬಾ ತಣ್ಣನೆಯ ನೀರನ್ನು ತಪ್ಪಿಸಿ, ಕೋಣೆಯ ಉಷ್ಣಾಂಶದ ನೀರನ್ನು ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
Blog
ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ ಯುವಕ ಬಲಿ
ಶಿವಮೊಗ್ಗ, ಜನವರಿ 29: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಸಿ ತೋಟ ಗ್ರಾಮದಲ್ಲಿ ಮಂಗನ ಕಾಯಿಲೆ (KFD – Kyasanur Forest Disease) ಸೋಂಕಿಗೆ ಮತ್ತೊಂದು ಬಲಿ ಬಿದ್ದಿದೆ. 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ಸಸಿ ತೋಟ ನಿವಾಸಿ ಕಿಶೋರ್ ಎಂದು ಗುರುತಿಸಲಾಗಿದೆ. ಜನವರಿ 20ರಿಂದ ಕಿಶೋರ್ ಅವರಿಗೆ ತೀವ್ರ ಜ್ವರ, ತಲೆನೋವು, ದೇಹದ ನೋವು ಸೇರಿದಂತೆ ಮಂಗನ ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಜ್ವರ ತಗ್ಗದೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ರೋಗಲಕ್ಷಣಗಳು ಉಲ್ಬಣಗೊಂಡ ಹಿನ್ನೆಲೆ ಜನವರಿ 25ರಂದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ, ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಕಿಶೋರ್ ಚಿಕಿತ್ಸೆಗೇ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ತೀರ್ಥಹಳ್ಳಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮಂಗನ ಕಾಯಿಲೆ ಟಿಕ್ (Tick) ಮೂಲಕ ಹರಡುವ ಸೋಂಕಾಗಿರುವುದರಿಂದ ಅರಣ್ಯ ಪ್ರದೇಶಕ್ಕೆ ತೆರಳುವವರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅರಣ್ಯ ಅಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಮತ್ತು ಅರಣ್ಯಕ್ಕೆ ಹೋಗುವ ಕೂಲಿ ಕಾರ್ಮಿಕರು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಜ್ವರ, ತಲೆನೋವು, ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಆರೋಗ್ಯ
EGG HEALTH BENIFITS : ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಏನು ಲಾಭ?
ಆರೋಗ್ಯ ಡೆಸ್ಕ್: ಮೊಟ್ಟೆ (Egg) ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಲಭ್ಯವಿರುವ ಆಹಾರಗಳಲ್ಲಿ ಒಂದಾಗಿದೆ. ಆದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಎಂಬ ಗೊಂದಲ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಅತಿಯಾದ ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ್ದರಿಂದ ಸರಿಯಾದ ಪ್ರಮಾಣ ತಿಳಿದುಕೊಳ್ಳುವುದು ಬಹಳ ಮುಖ್ಯ.
ಹಾರ್ವರ್ಡ್ ಹಾಗೂ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಗಳೊಂದಿಗೆ ಕಾರ್ಯನಿರ್ವಹಿಸುವ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಮೊಟ್ಟೆಗಳು ಸಂಪೂರ್ಣ ಪ್ರೋಟೀನ್ ಅನ್ನು ಹೊಂದಿದ್ದು, ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿವೆ. ಇದರಿಂದ ಸ್ನಾಯುಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಜಿಮ್ಗೆ ಹೋಗುವವರಿಗೆ ಇದು ಅತ್ಯುತ್ತಮ ಮತ್ತು ಕಡಿಮೆ ವೆಚ್ಚದ ಆಹಾರವಾಗಿದೆ.
ಡಾ. ಸೇಥಿ ಅವರು ಹಸಿ ಮೊಟ್ಟೆ ಸೇವನೆ ತಪ್ಪಿಸಬೇಕು ಎಂದು ಎಚ್ಚರಿಸಿದ್ದಾರೆ. ಹಸಿ ಮೊಟ್ಟೆಗಳಿಂದ ಸಾಲ್ಮೊನೆಲ್ಲಾ ಸೋಂಕಿನ ಅಪಾಯವಿದ್ದು, ಬೇಯಿಸಿದ ಮೊಟ್ಟೆಗಳಲ್ಲಿ ಇರುವ ಪ್ರೋಟೀನ್ ದೇಹಕ್ಕೆ ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಮೊಟ್ಟೆಗಳು ವಿಟಮಿನ್ ಎ, ಡಿ, ಇ, ಬಿ12 ಹಾಗೂ ಕಬ್ಬಿಣ, ಸೆಲೆನಿಯಮ್, ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣುಗಳ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ವಯಸ್ಸಿನ ಪರಿಣಾಮದಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಸಾಮಾನ್ಯವಾಗಿ, ಪ್ರತಿದಿನ 1 ರಿಂದ 2 ಮೊಟ್ಟೆಗಳನ್ನು ಸೇವಿಸುವುದು ಹೆಚ್ಚಿನ ಜನರಿಗೆ ಸುರಕ್ಷಿತ ಎಂದು ಡಾ. ಸೌರಭ್ ಸೇಥಿ ಹೇಳಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವಿಸಿದರೆ ತೂಕ ನಿಯಂತ್ರಣ, ಹೃದಯ ಆರೋಗ್ಯ ಮತ್ತು ಒಟ್ಟಾರೆ ದೈಹಿಕ ಕ್ಷೇಮಕ್ಕೆ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
-
ಚುನಾವಣೆ19 hours agoGBA ವಾರ್ಡ್ಗಳಲ್ಲಿ ಬೂತ್ ಹಂಚಿಕೆ ಗೊಂದಲ: ತಿದ್ದುಪಡಿಸದಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ – ಸಿ.ಎಂ. ಸತ್ಯನಾರಾಯಣ ಎಚ್ಚರಿಕೆ
-
ದೇಶ24 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ23 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ಕ್ರೀಡೆ22 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ20 hours agoBENGALURU : ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ
-
ದೇಶ20 hours agoMAHA SHIV RATHRI 2026: ಪಂಚಮುಖಿ ಶಿವನ ಪೂಜೆಯ ಮಹತ್ವ ಮತ್ತು ಆಧ್ಯಾತ್ಮಿಕ ರಹಸ್ಯ
-
ದೇಶ22 hours agokarnataka ಅಧಿಕಾರದಿಂದ ಬಂಧನದವರೆಗೆ: ಜೈಲು ಸೇರಿದ್ದ ಕರ್ನಾಟಕದ ಪ್ರಮುಖ ಜನಪ್ರತಿನಿಧಿಗಳ ಸಂಪೂರ್ಣ ಪಟ್ಟಿ
-
ದೇಶ22 hours agoಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್
