ದೇಶ

ಡಿಕೆಶಿಯನ್ನು ಭೇಟಿಯಾದ ನೆದಲ್ರ್ಯಾಂಡ್ ಪ್ರಧಾನಿ

ಬೆಂಗಳೂರು: ವಿಧಾನಸೌಧಕ್ಕೆ ನೆದಲ್ರ್ಯಾಂಡ್ ಪ್ರಧಾನಿ ಭೇಟಿ ನೀಡಿದ್ದು ಡಿಸಿಎಂ ಡಿಕೆ ಶಿವಕುಮಾರ್ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ. ಪಾಟೀಲ್ ಅವರು ಹೂಗುಚ್ಚು ನೀಡಿ ಸ್ವಾಗತಿಸಿದ್ದಾರೆ,
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೆದಲ್ರ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರೂ ಸಭೆ ನಡೆಸಿದರು, ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ಕರ್ನಾಟಕ ನೆದರ್‍ಲ್ಯಾಂಡ್ಸ್‍ನೊಂದಿಗೆ ಅತ್ಯಂತ ಬಲವಾದ ಸಂಬಂಧವನ್ನು ಹೊಂದಿದೆ ಮತ್ತು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾವು ಉತ್ಸುಕರಾಗಿದ್ದೇವೆ ಎಂದರು,
ಭಾರತದಲ್ಲಿರುವ 9% ಡಚ್ ಹೂಡಿಕೆಗಳು ಕರ್ನಾಟಕದಲ್ಲೇ ಇವೇ, ರಾಜ್ಯದಲ್ಲಿ ವಿದೇಶಿ ಹೂಡಿಕೆದಾರರಲ್ಲಿ ಡಚ್ಚರ ವ್ಯವಹಾರಗಳು ಮುಂಚೂಣಿಯಲ್ಲಿದೆ, ರಾಜ್ಯ ಸರ್ಕಾರ ಹೂಡಿಕೆದಾರರನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ, ರಾಜ್ಯದಲ್ಲಿ ಇಂದು 200 ಕ್ಕೂ ಹೆಚ್ಚು ಡಚ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

Trending

Exit mobile version