ರಾಜಕೀಯ
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷಿö್ಮÃ ಯೋಜನೆಗೆ ಮೈಸೂರಿನಲ್ಲಿ ಆಗಸ್ಟ್ ೩೦ರಂದು ಚಾಲನೆ ದೊರೆಯಲಿದ್ದು ಬಳಿಕ ಮನೆಯ ಯಜಮಾನಿ ಖಾತೆಗೆ ೨,೦೦೦ ಜಮೆಯಾಗಲಿದೆ, ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ, ಮಹಿಳೆಯರನ್ನು ಸ್ವಾಲಂಬಿಗಳನ್ನಾಗಿ ಮಾಡಲು ರೂಪಿಸಿರುವ ಗೃಹಲಕ್ಷಿö್ಮ ಯೋಜೆನೆಗೆ ಸುಮಾರು ೧.೧೦ ಕೋಟಿ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ,
ಫಲಾನುಭವಿಗಳಾಗಿ ಆಯ್ಕೆಯಾದವರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಈಗ ಸುಲಭವಾಗಿ ಪರಿಶೀಲಿಸಬಹುದಯ.
ಆಹಾರ ಮತ್ತು ನಾಗರಿಕ ಇಲಾಖೆಯಿಂದ ಗೃಹಲಕ್ಷಿö್ಮÃ ಯೋಜನೆಗೆ ನೋಂದಾಯಿಸಿಕೊAಡ ಅರ್ಹ ಫಲಾಣುಭವಿಗಳ ಪಟ್ಟಿಯನ್ನು https://ahara.kar.nic.in/webforms/show-village_list.aspx
ಈ ಲಿಂಕ್ನಲ್ಲಿ ಪ್ರಕಟಿಸಲಾಗಿದೆ, ಇದರಲ್ಲಿ ಕೇಳಿರುವ ಮಾಹಿತಿಯನ್ನು ಹಾಕಿದರೆ ಯೋಜನೆಗೆ ಅರ್ಜಿ ಸಲ್ಲಿಸಿದವರ ಪೂರ್ಣ ವಿವರ ಸಿಗುತ್ತದೆ, ಇದರಲ್ಲಿ ಜಿಲ್ಲೆ, ತಾಲೂಕು, ಗ್ರಾಮ, ಊರು ವಿವರಗಳನ್ನು ಕೇಳಿದ್ದು ಅದನ್ನು ತುಂಬಿದರೆ ಅರ್ಜಿ ಸಲ್ಲಿಸಿರುವವರ ಪೂರ್ಣ ವಿವರ ಸಿಗುತ್ತದೆ,
ನಿಮ್ಮ ಹೆಸರು ಇದ್ದರೆ ಆಗಸ್ಟ್ ೩೦ ರಂದು ಗೃಹಲಕ್ಷಿö್ಮÃ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆಯಾಗಲಿದೆ, ಹೆಸರು ಇಲ್ಲದೇ ಇದ್ದರೆ ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಸೆಂಟರ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಆ.೩೦ರಂದು ಮೈಸೂರಿನಲ್ಲಿ ಗೃಹಲಕ್ಷಿö್ಮà ಯೋಜನೆಗೆ ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟಿçÃಯ ನಾಯಕರಾದ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ, ಈ ಕಾರ್ಯಕ್ರಮವನ್ನು ೧೦.೪೦೦ ಜಾಗಗಳಲ್ಲಿ ೬ ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳಲ್ಲಿ ಮೂರು ಪಂಚಾಯಿತಿ ಒಳಗೊಂಡು ಒಂದು ಕಡೆ, ವಾರ್ಡ್ಗಳಲ್ಲಿ ಒಂದು ಕಡೆ, ಬೆಂಗಳೂರಿನ ೧೯೮ ವಾರ್ಡ್ ಗಳಲ್ಲಿ ಏಕಕಾಲಕ್ಕೆ ಪ್ರಸಾರ ಮಾಡಲಾಗುತ್ತದೆ, ಜೂಮ್ ಆನ್ ಲೈನ್ ವೇದಿಕೆಯಲ್ಲೂ ನೇರ ಪ್ರಸಾರ ಮಾಡಲಾಗುತ್ತದೆ,