ಬೆಂಗಳೂರು
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಯಶವಂತಪುರ ಕ್ಷೇತ್ರಕ್ಕೆ 75 ಕೋಟಿ ಅನುದಾನ ಮಂಜೂರಾಗಿದೆ ಎಂದು ಮಾಜಿ ಸಚಿವ, ಯಶವಂತಪುರ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ. ಯಶವಂತಪುರ ಅಭಿವೃದ್ಧಿಕಾರ್ಯಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಿ ಕೆ ಶಿವಕುಮಾರ್ ಅವರ ಪರಿಕಲ್ಪನೆಯ ಬ್ರಾಂಡ್ ಬೆಂಗಳೂರು ಯೋಜನೆಯ ಆಡಿಯಲ್ಲಿ ನನ್ನ ಕ್ಷೇತ್ರದ 8 ಬಿಬಿಎಂಪಿ ವಾರ್ಡ್ ರಸ್ತೆ ಅಭಿವೃದ್ದಿಗಾಗಿ ಅನುದಾನ ಬಿಡುಗಡೆ ಮಾಡಿರುವುದು ಸಂತಸದ ವಿಷಯ ಎಂದರು.
ಕೆಲ ವಾರ್ಡ್‍ಗಳಲ್ಲಿ ರಸ್ತೆಯ ಪರಿಸ್ಧಿತಿಯು ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ನಮ್ಮ ನಾಯಕರು ರಸ್ತೆಯಿಂದ ಅಗುತ್ತಿರುವ ತೊಂದರೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ಈ ಕಾರಣದಿಂದ ನಾನು ಸಮಸ್ಯೆಗಳನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಇಂದು ಅವರು ಅನುದಾನ ಬಿಡುಗಡೆ ಮಾಡಿರುವುದಕ್ಕೆ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಈ ಅನುದಾನದಿಂದ 8 ವಾರ್ಡ್ ಗಳಲ್ಲಿ ಇರುವ ರಸ್ತೆಯ ಸಮಸ್ಯೆಗಳು ಬಗೆಹರಿಯುವುದು ಎಂದು ನಾನು ಭಾವಿಸುತ್ತೇನೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
Chandru
July 28, 2025 at 1:28 pm
Super
Anuradha
July 28, 2025 at 3:23 pm
Thank you for your response please do read hosasuddi.in news continuorsly and support our team