Connect with us

ಕ್ರೀಡೆ

18 ವರ್ಷ ಇಬ್ಬರು ವರ್ಜಿನ್ ಗಳು : ಐಪಿಎಲ್ ಫೈನಲ್ ಬಗ್ಗೆ ಕಾಂಡೋಮ್ ಕಂಪನಿ ವಿಭಿನ್ನ ಪೋಸ್ಟ್!

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಐಪಿಎಲ್ 2025 ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ, ಇದರ ಮಧ್ಯೆ ಕಾಂಡೋಮ್ ಕಂಪನಿ ಡ್ಯೂರೆಕ್ಸ್ ಇಂಡಿಯಾದವರು ಒಂದು ಬೋಲ್ಡ್ ಪೋಸ್ಟ್ ಮಾಡಿದ್ದಾರೆ,
ಕ್ರಿಕೆಟ್ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಹಂಚಿಕೊಮಂಡಿರೋ ಪೋಸ್ಟರ್ ನಲ್ಲಿ ಎರಡು ಸಿಂಹಗಳು ಎದುರುಬದುರಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತ ಪಂಜಾಬ್ ಕಿಂಗ್ಸ್ ನ ಸಿಂಹಗಳನ್ನು ಪ್ರತಿನಿಧಿಸುತ್ತದೆ,
18 ವರ್ಷ ಇಬ್ಬರು ವರ್ಜಿನ್ ಗಳು ಇಂದು ರಾತ್ರಿ ಯಾರಿಗೆ ಅದೃಷ್ಟ ಸಿಗುತ್ತದೆ? ಎಂದು ಮಧ್ಯದಲ್ಲಿ ಒಂದು ಸಾಲು ಬರೆಯಲಾಗಿದೆ, ಕಾಂಡೋಮ್ ಬ್ರ್ಯಾಂಡ್ ನ ಬೋಲ್ಡ್ ಪೋಸ್ಟ್ ಸಖತ್ ವೈರಲ್ ಆಗಿದೆ,
2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಆರ್‍ಸಿಬಿ ಮತ್ತು ಪಂಜಾಬ್ ಎರಡೂ ತಂಡಗಳು ಕಪ್ ಗೆದ್ದಿಲ್ಲ, ಅದ್ದರಿಂದ 18 ವರ್ಷ ಇಬ್ಬರು ವರ್ಜಿನ್ ಗಳು, ಇಂದು ರಾತ್ರಿ ಯಾರಿಗೆ ಅದೃಷ್ಟ ಸಿಗುತ್ತದೆ? ಎಂದು ಡ್ಯೂರೆಕ್ಸ್ ಬರೆದಿದೆ,

ತರಹೇವಾರಿ ಕಾಮೆಂಟ್ ಗಳು
ಟ್ರೋಫಿಯನ್ನು ಯಾರು ಎತ್ತಿದರೂ ಒಂದಂತೂ ಸತ್ಯ ಡ್ಯೂರೆಕ್ಸ್ ಈಗಾಗಲೇ ಇಂಟರ್ನೆಟನ್ನೇ ಗೆದ್ದಿದೆ,

ಕ್ರೀಡೆ

Ind vs Pak: ICC Men’s T20 World Cupನಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗ

ಕೊಲಂಬೊ: ಭಾರತ ವಿರುದ್ಧದ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ನಾಟಕವಾಡಿದ್ದ ಪಾಕಿಸ್ತಾನ ತಂಡಕ್ಕೆ ಮೈದಾನದಲ್ಲೇ ತಕ್ಕ ಉತ್ತರ ಸಿಕ್ಕಿದೆ. R. Premadasa Stadiumನಲ್ಲಿ ನಡೆದ ಟಿ20 ವಿಶ್ವಕಪ್‌ನ 27ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 61 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಆರಂಭದಲ್ಲೇ ಆಕ್ರಮಣಕಾರಿ ಆಟ ತೋರಿದ Ishan Kishan ಪಾಕಿಸ್ತಾನ ಬೌಲರ್‌ಗಳ ಮೇಲೆ ಮಿಂಚಿನ ದಾಳಿ ನಡೆಸಿದರು. ಮಧ್ಯಮ ಕ್ರಮದಲ್ಲಿ ನಾಯಕ Suryakumar Yadav ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ನೆರವಾದರು.

ಪಾಕ್ ಬ್ಯಾಟಿಂಗ್ ಕುಸಿತ

176 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಭಾರತೀಯ ಬೌಲರ್‌ಗಳ ಕಟ್ಟು ನಿಟ್ಟಿನ ದಾಳಿಗೆ ಪಾಕ್ ಬ್ಯಾಟರ್‌ಗಳು ಒಂದರ ಹಿಂದೆ ಒಂದರಂತೆ ಔಟ್ ಆಗಿದರು. ಅಂತಿಮವಾಗಿ ಪಾಕಿಸ್ತಾನ 114 ರನ್‌ಗಳಿಗೆ ಆಲೌಟ್ ಆಯಿತು.

ಬೌಲಿಂಗ್ ದಾಳಿಯಲ್ಲಿ ಬುಮ್ರಾ ಮಿಂಚು

ಭಾರತದ ಪರ Jasprit Bumrah, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಪಾಕಿಸ್ತಾನದ ಬೆನ್ನೆಲುಬು ಮುರಿದರು. ಸ್ಪಿನ್ ಹಾಗೂ ಪೇಸ್ ಸಮನ್ವಯ ದಾಳಿಯಿಂದ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು.

ಸೂಪರ್ 8ಕ್ಕೆ ಟೀಮ್ ಇಂಡಿಯಾ

ಈ ಭರ್ಜರಿ ಗೆಲುವಿನೊಂದಿಗೆ ಭಾರತ ಸೂಪರ್ 8 ಹಂತಕ್ಕೆ ಮುನ್ನಡೆದಿದೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮತ್ತೊಮ್ಮೆ ಪ್ರಾಬಲ್ಯ ತೋರಿದ ಟೀಮ್ ಇಂಡಿಯಾ, ಪ್ರಶಸ್ತಿ ಕನಸನ್ನು ಮತ್ತಷ್ಟು ಬಲಪಡಿಸಿದೆ.

Continue Reading

ಕ್ರೀಡೆ

Ind vs Pak Match: ಟಾಸ್ ಸೋತ ಭಾರತ, ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ

ಕೊಲಂಬೊ, ಫೆಬ್ರವರಿ 15: ಟಿ20 ವಿಶ್ವಕಪ್‌ನ 27ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾರೀ ಕುತೂಹಲದ ನಡುವೆ ಮುಖಾಮುಖಿಯಾಗಿವೆ. R. Premadasa Stadium ನಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಸೋತಿದ್ದು, ಪಾಕಿಸ್ತಾನ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ತಂಡದಲ್ಲಿ ಎರಡು ಬದಲಾವಣೆ

ಈ ಮಹತ್ವದ ಪಂದ್ಯಕ್ಕಾಗಿ ಭಾರತ ತಂಡ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಅಭಿಷೇಕ್ ಶರ್ಮಾ ಮತ್ತೆ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದ್ದಾರೆ. ಅರ್ಷದೀಪ್ ಸಿಂಗ್ ಬದಲು ಕುಲದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಕೊಲಂಬೊ ಮೈದಾನ ಸ್ಪಿನ್‌ಗೆ ಸಹಕಾರಿಯಾಗಿರುವ ಕಾರಣ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಪಾಕಿಸ್ತಾನ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ನೋ ಹ್ಯಾಂಡ್ ಶೇಕ್ ವಿವಾದ

ಪಂದ್ಯಕ್ಕೂ ಮೊದಲು ಹ್ಯಾಂಡ್‌ಶೇಕ್ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟಾಸ್ ಬಳಿಕ ಭಾರತದ ನಾಯಕ Suryakumar Yadav ಹ್ಯಾಂಡ್‌ಶೇಕ್ ಮಾಡದೇ ದೂರ ನಡೆದಿರುವುದು ಗಮನ ಸೆಳೆದಿದೆ. ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೆಡ್ ಟು ಹೆಡ್ ದಾಖಲೆ

ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಇದುವರೆಗೆ ನಡೆದ ಎಂಟು ಪಂದ್ಯಗಳಲ್ಲಿ ಭಾರತ ಏಳು ಬಾರಿ ಗೆಲುವು ಕಂಡಿದೆ. ಪಾಕಿಸ್ತಾನದ ಏಕೈಕ ಗೆಲುವು 2021ರ ಟೂರ್ನಿಯಲ್ಲಿ ದಾಖಲಾಗಿದೆ. ಒಟ್ಟಾರೆ ಟಿ20 ಅಂತರರಾಷ್ಟ್ರೀಯ ದಾಖಲೆಯಲ್ಲೂ ಭಾರತವೇ ಮೇಲುಗೈ ಹೊಂದಿದ್ದು, 16 ಪಂದ್ಯಗಳಲ್ಲಿ 12ರಲ್ಲಿ ಜಯ ಸಾಧಿಸಿದೆ.

ಕೊಲಂಬೊದಲ್ಲಿ ಭಾರತದ ದಾಖಲೆ

2009ರಿಂದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ 15 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಶ್ರೀಲಂಕಾವನ್ನು ಹೊರತುಪಡಿಸಿ ಆಸ್ಟ್ರೇಲಿಯಾ ಮಾತ್ರ ಇಲ್ಲಿ ಭಾರತವನ್ನು ಸೋಲಿಸಿದೆ. ಈ ಹಿನ್ನೆಲೆ ಇಂದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದೆ.


ಭಾರತ ಪ್ಲೇಯಿಂಗ್ XI:

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನ ಪ್ಲೇಯಿಂಗ್ XI:

ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಅಜಮ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಉಸ್ಮಾನ್ ಖಾನ್ (ವಿ.ಕೀ), ಶಾಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

Continue Reading

ಕ್ರೀಡೆ

RAHUL DRAVID : ತಂದೆಯನ್ನು ನೆನೆದು ಕಣ್ಣೀರಿಟ್ಟ ದ್ರಾವಿಡ್

ಬೆಂಗಳೂರು: ಭಾರತದ ಬ್ಯಾಟಿಂಗ್ ದಿಗ್ಗಜ Rahul Dravid ಹಾಗೂ ಸ್ಪಿನ್ ಮಾಂತ್ರಿಕ Anil Kumble ಅವರಿಗೆ ಗೌರವ ಸೂಚಕವಾಗಿ ಬೆಂಗಳೂರಿನ ಐತಿಹಾಸಿಕ M. Chinnaswamy Stadium ನಲ್ಲಿ ಸ್ಟ್ಯಾಂಡ್‌ಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ವೇದಿಕೆಯಾಗಿ 50 ವರ್ಷ ಪೂರೈಸಿದ ಈ ಮೈದಾನದಲ್ಲಿ Karnataka State Cricket Association (KSCA) ಈ ಗೌರವವನ್ನು ಘೋಷಿಸಿದೆ.

ಕೆಎಸ್‌ಸಿಎ ಅಧ್ಯಕ್ಷ Venkatesh Prasad ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರು ದಿಗ್ಗಜರ ಸಾಧನೆಯನ್ನು ಸ್ಮರಿಸಲಾಯಿತು.

“ಇದು ನನ್ನ ಎರಡನೇ ಮನೆ” – ದ್ರಾವಿಡ್ ಭಾವುಕ ಮಾತು

ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, “ಚಿನ್ನಸ್ವಾಮಿ ಮೈದಾನ ನನ್ನಿಗೆ ಎರಡನೇ ಮನೆ. ನಮ್ಮ ಮನೆಗಿಂತಲೂ ಇಲ್ಲಿ ಹೆಚ್ಚು ಸಮಯ ಕಳೆದಿದ್ದೇವೆ. ಸಂತೋಷವೂ ಇದೆ, ನಿರಾಸೆಯೂ ಇದೆ; ಆದರೆ ನನ್ನನ್ನು ನಾನು ಆಗಲು ಕಾರಣವಾದ ಸ್ಥಳ ಇದು,” ಎಂದು ಹೇಳಿದರು.

ತಮ್ಮ ತಂದೆ ಶರದ್ ದ್ರಾವಿಡ್ ಅವರನ್ನು ನೆನೆದು ಭಾವುಕರಾದ ಅವರು, “ಕ್ರಿಕೆಟ್ ಮೇಲಿನ ಪ್ರೀತಿ ನನಗೆ ತಂದೆ ನೀಡಿದರು. ಬಾಲ್ಯದಲ್ಲಿ ಟೆಸ್ಟ್ ಪಂದ್ಯಗಳಷ್ಟೇ ಅಲ್ಲ, ರಣಜಿ ಪಂದ್ಯಗಳಿಗೂ ನನ್ನನ್ನು ಇಲ್ಲಿ ಕರೆತರುತ್ತಿದ್ದರು. ಇಂದು ನನ್ನ ಹೆಸರಿನಲ್ಲಿ ಸ್ಟ್ಯಾಂಡ್ ಇರೋದನ್ನು ನೋಡಿ ಅವರು ಹೆಮ್ಮೆಪಡುತ್ತಿದ್ದರು,” ಎಂದರು. ಶರದ್ ದ್ರಾವಿಡ್ 2013ರಲ್ಲಿ ನಿಧನರಾದರು.

ಕುಂಬ್ಳೆಗೆ ವಿಶೇಷ ಕ್ಷಣ

ಅನಿಲ್ ಕುಂಬ್ಳೆ, “ಒಂಬತ್ತು ವರ್ಷದ ಬಾಲಕನಾಗಿ ಇಲ್ಲಿ ಪಂದ್ಯ ನೋಡುತ್ತಿದ್ದೆ. ಇಂದು ಪೆವಿಲಿಯನ್ ಮೇಲಿನ ನನ್ನ ಹೆಸರು ನೋಡುವುದು ಭಾವನಾತ್ಮಕ ಕ್ಷಣ,” ಎಂದರು. ಬಿಸಿಸಿಐ ರೂಪಿಸಿದ ವ್ಯವಸ್ಥೆಯಿಂದ ದೇಶದ ಮೂಲೆಮೂಲೆಗಳಿಂದ ಪ್ರತಿಭೆಗಳು ಹೊರಹೊಮ್ಮಲು ಅವಕಾಶ ಸಿಕ್ಕಿದೆ ಎಂದೂ ಹೇಳಿದರು.

ದಿಗ್ಗಜರ ಸಾಧನೆ

ಅನಿಲ್ ಕುಂಬ್ಳೆ ಟೆಸ್ಟ್‌ಗಳಲ್ಲಿ 619 ಮತ್ತು ಏಕದಿನಗಳಲ್ಲಿ 337 ವಿಕೆಟ್‌ಗಳೊಂದಿಗೆ ಒಟ್ಟು 953 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ರಾಹುಲ್ ದ್ರಾವಿಡ್ 504 ಪಂದ್ಯಗಳಲ್ಲಿ 24,064 ರನ್‌ಗಳನ್ನು ಗಳಿಸಿ 48 ಶತಕ ಹಾಗೂ 145 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇಬ್ಬರೂ ಭಾರತೀಯ ತಂಡವನ್ನು ನಾಯಕರಾಗಿ ಮುನ್ನಡೆಸಿದವರು.

Continue Reading

Trending