Connect with us

ಬೆಂಗಳೂರು

ಅಧಿಕ ವೆಚ್ಚದ ಕಾರಣ-ಮೆಟ್ರೋ ಕೆಂಪು ಮಾರ್ಗಕ್ಕೆ ಸಿಗದ ಕೇಂದ್ರದ ಅನುಮತಿ

ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆಗೆ ಬಳಲಿ ಬೆಂಡಾದ ಸವಾರರಿಗೆ ಮೆಟ್ರೋ ಸಂಚಾರ ನಿಜಕ್ಕೂ ಸಂಜೀವಿನಿ ಇದ್ದಂತೆ, ಆದ್ರೆ, ಇದೀಗ ಮೆಟ್ರೋ ಕೆಂಪು ಮಾರ್ಗದ ನಿರೀಕ್ಷೆಯಲ್ಲಿದ್ದ ಜನರಿಗೆ ಕೇಂದ್ರ ಶಾಕ್ ಕೊಟ್ಟಿದೆ,
ನಮ್ಮ ಮೆಟ್ರೋದ ಸರ್ಜಾಪುರ ಹೆಬ್ಬಾಳ ಮಾರ್ಗಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆರು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ, ಈ ಮಧ್ಯೆ ಯೋಜನೆಯ ಅಂದಾಜು ವೆಚ್ಚ ಏಕೆ ಅಧಿಕವಾಗಿದೆ ಎಂಬ ಬಗ್ಗೆ ವಿವರ ನೀಡುವಂತೆ ……. ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ,
ಕೆಂಪು ಮಾರ್ಗದ ಮಾರ್ಗದಲ್ಲಿ ಒಟ್ಟು 17 ನಿಲ್ದಾಣ, ಸುರಂಗ ಮಾರ್ಗದಲ್ಲಿ 11 ನಿಲ್ದಾಣಗಳು ಇರಲಿವೆ, 28,405 ಕೋಟಿ ಅಂದಾಜು ವೆಚ್ಚ ಅಂದರೆ ಪ್ರತಿ ಕಿಲೋ ಮೀಟರ್ ಗೆ 776.3 ಕೋಟಿ ಎಂದು ವಿಸ್ತ್ರತ ಯೋಜನಾ ವರದಿಯಲ್ಲಿ ತಿಳಿಸಲಾಗಿತ್ತು,
ಕೇಂದ್ರ ಸರ್ಕಾರದಿಂದ ಆರು ತಿಂಗಳ ಒಳಗೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿ ,,,,,, ಅಧಿಕಾರಿಗಳು ಇದ್ದಾರೆ, ಯೋಜನಾ ವೆಚ್ಚ ನಿಗದಿತ ಮಾನದಂಡಕ್ಕಿಂತ ಹೆಚ್ಚಾಗಿರೋ ಕಾರಣ ವಿವರಣೆ ನೀಡುವಂತೆ ಕೇಂದ್ರ ಸೂಚನೆ ನೀಡಿದೆ ,

ಬೆಂಗಳೂರು

ಚಿನ್ನಸ್ವಾಮಿ ಸ್ಟೇಡಿಯಂ ಸೇನೆ ಜಾಗ, ವಶಕ್ಕೆ ಪಡೆಯಿರಿ! ಪ್ರಧಾನಿಗೆ ಪತ್ರ ಬರೆಯಲು ಮುಂದಾದ ಸಂಘಟನೆ!

ಬೆಂಗಳೂರು: ಆರ್‍ಸಿಬಿ ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಘಟನೆಯಲ್ಲಿ 11 ಜನರ ಸಾವಿನ ದುರಂತ ಇಡೀ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ, ಇನ್ನೊಂದೆಡೆ ಪ್ರತಿಪ್ಕಷಗಳು ಮಾತ್ರವಲ್ಲ ಹೈಕೋರ್ಟ್ ಸಹ ಘಟನೆ ಟೀಕಿಸಿ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ,
ರಾಜ್ಯಕ್ಕೆ ಈ ಘಟನೆ ಕಪ್ಪು ಚುಕ್ಕೆಯಾಗಿರುವ ಬೆನ್ನಲ್ಲೇ ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಸ್ಧಳಾಂತರದ ಬಗ್ಗೆ ಚರ್ಚೆಗಳೂ ಆರಂಭವಾಗಿದೆ, ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಧಳಾಂತರಿಸುವ ಬಗ್ಗೆ ಸರ್ಕಾರ ಗಮನಹರಿಸಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಈ ವಿಷಯ ಸರ್ಕಾರ ಪರಿಶೀಲಿಸಲಿದೆ, ಯಾವ ಸರ್ಕಾರದ ಅವಧಿಯಲ್ಲಿಯೂ ಇಂತಹ ಅಹಿತಕರ ಘಟನೆ ನಡೆಯಬಾರದು, ವೈಯಕ್ತಿಕವಾಗಿ ಈ ಘಟನೆ ಸರ್ಕಾರಕ್ಕೆ ನೋವು ತಂದಿದೆ ಎನ್ನುತಲೇ ಸ್ಧಳಾಂತರದ ಸುಳಿವು ನೀಡಿದ್ದರು,
ಇದೀಗ ಮಹತ್ವದ ಬೆಳವಣಿಗೆ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂ ಸ್ಧಳಾಂತರಿಸುವಂತೆ ಕೋರಿ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದೆ, ಕ್ರೀಡಾಂಗಣವಿರುವ ಜಾಗ ಭಾರತೀಯ ಸೇನೆಗೆ ಸೇರಿದ್ದು, ಈ ಸ್ಧಳ ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿಸಿದ್ದೇವೆ ಎಂದು ಸಂಘಟನೆ ತಿಳಿಸಿದೆ, ಈ ಕುರಿತು ಮಾತನಾಡಿರುವ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂ ಸೇನೆಗೆ ಸೇರಿದ ಜಾಗ, 18.50 ಎಕರೆ ಈ ಜಾಗವಾಗಿದೆ, ಇದು ಆರ್ಮಿಗೆ ಸೇರಿದ್ದು, ನಗರದಿಂದ ಇದನ್ನು ಸ್ಧಳಾಂತರಿಸಲಿ, ಸ್ಟೇಡಿಯಂ ನಿಂದಲೇ ಟ್ರಾಫಿಕ್ ಸಮಸ್ಯೆಯೂ ಆಗುತ್ತಿದೆ, ಹೀಗಾಗಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ,

Continue Reading

ಬೆಂಗಳೂರು

ಆರೋಗ್ಯ ಇಲಾಖೆಯಿಂದ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಚಿಕಿತ್ಸೆ!

ಕರ್ನಾಟಕ ಆರೋಗ್ಯ ಇಲಾಖೆಯು ಬಡವರಿಗೆ, ಕ್ಯಾನ್ಸರ್ ಪೀಡಿತರಿಗೆ, ವಯೋವೃದ್ಧರಿಗೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮನೆ ಬಾಗಿಲಿಗೆ ಉಚಿತ ಒಪಿಡಿ (OPD) ಸೇವೆ ಒದಗಿಸಲು ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ಚಿಕಿತ್ಸೆ ಆರಂಭವಾಗಿದೆ. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಸಮಾಜದ ದುರ್ಬಲ ವರ್ಗಕ್ಕೆ ಗುಣಮಟ್ಟದ ಚಿಕಿತ್ಸೆಯನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ವಿಶೇಷತೆಗಳೇನು?

ರಾಜ್ಯದಲ್ಲಿ ಮೊದಲ ಬಾರಿಗೆ, ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಮತ್ತು ಇತರ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರೋಗ್ಯ ಇಲಾಖೆಯು ಮನೆಗೆ ತೆರಳಿ ಉಚಿತ ಒಪಿಡಿ ಸೇವೆ ಒದಗಿಸಲಿದೆ. ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಈ ಯೋಜನೆಯನ್ನು ಪೈಲಟ್ ಯೋಜನೆಯಾಗಿ ಆರಂಭಿಸಲಾಗಿದೆ. ಈ ಸೇವೆಯಿಂದ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡದೆಯೇ ತಮ್ಮ ಮನೆಯ ಬಳಿಯೇ ಚಿಕಿತ್ಸೆ ಪಡೆಯಬಹುದು.

ಗಂಭೀರ ರೋಗಿಗಳಿಗೆ ಆಸ್ಪತ್ರೆಗೆ ತೆರಳುವುದು ಕಷ್ಟಕರವಾಗಿರುತ್ತದೆ. ಆಸ್ಪತ್ರೆಯಲ್ಲಿ ಕಾಯುವ ಸಾಲುಗಳು, ದೀರ್ಘ ಕಾಯುವಿಕೆ, ಮತ್ತು ಆರ್ಥಿಕ ಒತ್ತಡದಿಂದ ಬಳಲುವವರಿಗೆ ಈ ಯೋಜನೆಯು ತುರ್ತು ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಮೊಬೈಲ್ ಆಸ್ಪತ್ರೆಗಳ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನೇರವಾಗಿ ರೋಗಿಗಳ ಮನೆಗೆ ತೆರಳಿ ಚಿಕಿತ್ಸೆ ನೀಡಲಿದ್ದಾರೆ.

ಪ್ರಸ್ತುತ, ಸಿವಿ ರಾಮನ್ ನಗರದಿಂದ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಇತರ ಪ್ರದೇಶಗಳಿಗೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದು ಸಿವಿ ರಾಮನ್ ನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ತಿಳಿಸಿದ್ದಾರೆ.

ಈ ಯೋಜನೆಯಿಂದ ಬಡವರಿಗೆ, ವಯೋವೃದ್ಧರಿಗೆ, ಮತ್ತು ಗಂಭೀರ ರೋಗಿಗಳಿಗೆ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಒಬ್ಬ ರೋಗಿಯ ತಾಯಿ ಆಶಾದೇವಿ, “ಈ ಸೇವೆಯಿಂದ ಬಡವರಿಗೆ ತುಂಬಾ ಉಪಯೋಗವಾಗಲಿದೆ. ಸರ್ಕಾರ ಈ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಬೇಕು,” ಎಂದು ಒತ್ತಾಯಿಸಿದ್ದಾರೆ.

ಯೋಜನೆಯ ಪ್ರಯೋಜನಗಳು:
  • ಉಚಿತ ಚಿಕಿತ್ಸೆ: ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಇತ್ಯಾದಿ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ.
  • ಮನೆ ಬಾಗಿಲಿಗೆ ಸೇವೆ: ಆಸ್ಪತ್ರೆಗೆ ತೆರಳುವ ತೊಂದರೆ ತಪ್ಪಿಸಲು ಮೊಬೈಲ್ ಆಸ್ಪತ್ರೆ ಮಾದರಿ.
  • ದುರ್ಬಲ ವರ್ಗಕ್ಕೆ ಒತ್ತು: ಬಡವರು, ವಯೋವೃದ್ಧರು, ಮತ್ತು ಗಂಭೀರ ರೋಗಿಗಳಿಗೆ ಆದ್ಯತೆ.
  • ತುರ್ತು ಚಿಕಿತ್ಸೆ: ಆಸ್ಪತ್ರೆಯ ಕಾಯುವಿಕೆಯಿಂದ ರೋಗಿಗಳಿಗೆ ಮುಕ್ತಿ.
Continue Reading

ದೇಶ

ದೆಹಲಿ ತಲುಪಿದ DCM ಡಿಕೆ.ಶಿವಕುಮಾರ್: ಹೈಕಮಾಂಡ್ ಭೇಟಿ, ಊಹಾಪೋಹ ಶುರು..!

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದ್ದು, ಭಾನುವಾರ ಸಂಜೆಯೇ ದೆಹಲಿ ತಲುಪಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ಊಹಾಪೋಹಗಳು ಶುರುವಾಗಿವೆ.

ಡಿಕೆ.ಶಿವಕುಮಾರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಜೂ.13ರಂದು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.

ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರ ವರಿಷ್ಠರ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇಂದು ಬೆಳಗ್ಗೆ 11ಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊದಿಗೆ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಆಡಳಿತ ಹಾಗೂ ಘನ ತ್ಯಾಜ್ಯ ನಿರ್ವಹಣೆ ಕುರಿತು ಡಿ.ಕೆ.ಶಿವಕುಮಾರ್‌ ಸಭೆ ನಡೆಸಲಿದ್ದಾರೆ.ಬಳಿಕ ಜಲಶಕ್ತಿ ಸಚಿವರು, ಇಂಧನ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇದರ ನಡುವೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸೇರಿ ಇತ್ತೀಚಿನ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದರ ಬೆನ್ನಲ್ಲೇ ಜೂ.12ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೂ.13 ರಂದು ಹಣಕಾಸು ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ದೆಹಲಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ದೆಹಲಿ ಭೇಟಿ ಸಂಪೂರ್ಣವಾಗಿ ತಾಂತ್ರಿಕವಾಗಿದೆ ಎಂದು ಹೇಳಿದರು.

ಹೈದರಾಬಾದ್, ಚೆನ್ನೈ ಮತ್ತು ಈಗ ದೆಹಲಿಯಲ್ಲಿ ಈಗಾಗಲೇ ಜಾರಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ತಂತ್ರಜ್ಞಾನಗಳನ್ನು ಪರಿಶೀಲಿಸಲು ನಿರ್ಧರಿಸಿದ್ದೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ನಾನು ಹಾಗೂ ಬೆಂಗಳೂರು ಪಾಲಿಕೆಯಿಂದ ಸುಮಾರು 15 ಸದಸ್ಯರ ತಂಡ ದೆಹಲಿಗೆ ಆಗಮಿಸಿದ್ದೇವೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆ ರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕಸದಿಂದ ಇಂಧನ, ಅನಿಲ ಉತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ದೆಹಲಿಯಲ್ಲಿನ ತಂತ್ರಜ್ಞಾನ ಅಳವಡಿಕೆ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಅದನ್ನು ವೀಕ್ಷಣೆ ಮಾಡುತ್ತೇವೆ. ದೆಹಲಿಯಲ್ಲಿ ನಗರ ಯೋಜನಾ ಪ್ರಾಧಿಕಾರದಲ್ಲಿ ರಸ್ತೆ ವಿಚಾರವಾಗಿ ಪ್ರತ್ಯೇಕ ನೀತಿ ಹೊಂದಿದ್ದು, ಇದನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಹೈಕಮಾಂಡ್ ನಾಯಕರ ಭೇಟಿ ಸಧ್ಯಕ್ಕೆ ಇಲ್ಲ. ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. ಜೂನ್.10 ರಂದು ಎತ್ತಿನಹೊಳೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಹೀಗಾಗಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗುತ್ತೇವೆ ಎಂದರು

Continue Reading

Trending