Connect with us

ಆರೋಗ್ಯ

ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಬ್ಲಡ್ ಬ್ಯಾಂಕ್ ಗಳಲ್ಲಿ ಪ್ಲೇಟ್ಲೆಟ್ಸ್ಗೆ ಕೊರತೆ..

ಬೆಂಗಳೂರು ನಗರದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ಪ್ಲೇಟ್ಲೆಟ್ಸ್ ಕೊರತೆ ಉಂಟಾಗುತ್ತಿದೆ…
ಈ ವರೆಗೂ4971ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಬ್ಲಡ್ ಬ್ಯಾಂಕ್ ಗಳಿಂದ ಪ್ಲೇಟ್ಲೆಟ್ ಗಳಿಗಾಗಿ ಹೆಚ್ಚಿನ ಬೇಡಿಕೆ ಬರುತ್ತಿದ್ದು.ಬ್ಲಡ್ ಬ್ಯಾಂಕ್ ಗಳಲ್ಲಿ ಪ್ಲೇಟ್ಲೆಟ್ಸ್ ಕೊರತೆ ಕಾಡುತ್ತಿದೆ,ಅಗತ್ಯ ಪ್ರಮಾಣದ ಪ್ಲೇಟ್ಲೆಟ್ಸ್ ಹಾಗೂ ರಕ್ತ ಸಂಗ್ರಹಿಸಲು ನಗರದ ಎಲ್ಲಾ ಬ್ಲಡ್ ಬ್ಯಾಂಕುಗಳು ರಕ್ತದಾನ ಶಿಬಿರವನ್ನು ಆಯೋಜಿಸುತ್ತಿವೆ…
ದಿನೇ ದಿನೇ ನಿರಂತರವಾಗಿ ಪ್ಲೇಟ್ಲೆಟ್ಸ್ ಗಳಿಗಾಗಿ ಬೇಡಿಕೆ ಹೆಚ್ಚುತ್ತಾ ಇದೆ ತಜ್ಞರ ಪ್ರಕಾರ ಪ್ಲೇಟ್ಲೆಟ್ಸ್ ವರ್ಗಾವಣೆ ರಕ್ತಸ್ರಾವದ ಅಪಾಯವನ್ನು ಕಡಿಮೆ ಮಾಡಲು ಎಷ್ಟರಮಟ್ಟಿಗೆ ಸಹಾಯ ಆಗಲಿದೆ ಎಂಬುದು ಹೇಳಲು ಸಾಧ್ಯವಿಲ್ಲ ಆದರೆ ಸಂಪೂರ್ಣ ರಕ್ತ ಅಥವಾ ಆರ್ಬಿಸಿ ವರ್ಗಾವಣೆಯು ಹೆಚ್ಚು ಉತ್ತಮ ಪರ್ಯಾಯಗಳನ್ನು ನೀಡಬಹುದು ಎಂದು ವೈದ್ಯರು ತಿಳಿಸುತ್ತಾರೆ… ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಮಾತನಾಡಿ, ಡೆಂಗ್ಯೂ ಜ್ವರದ ಪ್ರಕರಣಗಳು ಜಾಸ್ತಿ ಆಗ್ತಾ ಇವೆ. ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ಒತ್ತು ನೀಡಬೇಕು ಎಂದಿದ್ದಾರೆ…
ಪ್ರತಿನಿತ್ಯ ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ಹಾಗೂ ರ್ಯಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳಿಗೆ ಬೇಡಿಕೆ ಬರುತ್ತಿದೆ ಒಂದೇ ಬಾರಿಗೆ ಇವೆರಡಕ್ಕೂ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ರಕ್ತಸ್ರಾವದಂತಹ ಪ್ರಕರಣಗಳು ಆದಾಗ ಪ್ಲೇಟ್ಲೆಟ್ಸ್ ಗಿಂತ ಇಡೀ ರಕ್ತ ಬದಲಾವಣೆ ಅಥವಾ ಆರ್ಬಿಸಿ ವರ್ಗಾವಣೆ ಹೆಚ್ಚು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ… ಆದರೆ ಈಗ ಕಂಡು ಬರುತ್ತಿರುವ ಡೆಂಗ್ಯೂ ಸೆರೊಟೈಪ್ ಹೆಚ್ಚು ಗಂಭೀರವಾಗಿರುವುದಿಲ್ಲ ಸಮುದಾಯಕ್ಕೆ ಅರಳದಂತೆ ಎಚ್ಚರಿಕೆ ವಹಿಸಬೇಕು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ… ಈ ಡೆಂಗ್ಯೂ ಪ್ರಕರಣಗಳು ಏಪ್ರಿಲ್ ನಿಂದ ಅಕ್ಟೋಬರ್ ನಲ್ಲಿ ಹೆಚ್ಚಾಗಿ ಹರಡುತ್ತಿದೆ ಹೀಗಾಗಿ ಡೆಂಗ್ಯೂ ಬಾರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ರೋಗ ಲಕ್ಷಣಗಳು
ತೀವ್ರ ಜ್ವರ ಬರುವುದು,ಮೈಕೈ ನೋವು,ಕೀಲುನೋವಿನ ಅನುಭವ,ಕಣ್ಣು ನೋವು ಕಾಣಿಸಿಕೊಳ್ಳುವುದು,ವಾಕರಿಕೆ ಮತ್ತು ವಾಂತಿ ಬರುವುದು,ಚರ್ಮದ ಮೇಲೆ ಅಲ್ಲಲ್ಲಿ ರಕ್ತ ಶ್ರಾವ,ಬಾಯಿಮೂಗು ಮತ್ತು ಹೊಸಡುಗಳಲ್ಲಿ ರಕ್ತಸ್ರಾವ ಉಂಟಾಗುವುದು.
ಮುಂಜಾಗ್ರತ ಕ್ರಮಗಳು
ನೀರಿನ ತೊಟ್ಟಿ,ಡ್ರಮ್,ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸುವುದು ಮಳೆ ನೀರು ಸಂಗ್ರಹವಾಗುವ ಟೈಯರ್ ತೆಂಗಿನ ಚೀಪ್ಪು ವಿಲೇವಾರಿ ಮಾಡುವುದು ಏರ್ ಕೂಲರ್ ಹೂವಿನಕೊಂಡ ಇತ್ಯಾದಿಗಳಲ್ಲಿ ನೀರನ್ನು ಪ್ರತಿ ವಾರ ಕಾಲಿ ಮಾಡಿ ಮಾಡಬೇಕು ಹಗಲಲ್ಲಿ ನಿದ್ದೆ ಮಾಡುವವರು ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರ್ದಾಕ ಬಳಸಬೇಕು..

ಆರೋಗ್ಯ

ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! ಹೃದಯವನ್ನು ಆರೋಗ್ಯವಾಗಿಡಿ..!

ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಅತ್ಯಗತ್ಯ. ಹೆಚ್ಚಿನ ಕೊಲೆಸ್ಟ್ರಾಲ್ ಹೃದಯ ಕಾಯಿಲೆ, ಸ್ಟ್ರೋಕ್, ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಔಷಧಿಗಳು ಮತ್ತು ಆಹಾರ ಕ್ರಮದ ಜೊತೆಗೆ, ಮನೆಯಲ್ಲಿಯೇ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಈ ಲೇಖನದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಕೆಲವು ಸರಳ ಮತ್ತು ಪರಿಣಾಮಕಾರಿ ಸಲಹೆಗಳನ್ನು ತಿಳಿಯಿರಿ.

ಕೊಲೆಸ್ಟ್ರಾಲ್ ಎಂಬುದು ರಕ್ತದಲ್ಲಿ ಕಂಡುಬರುವ ಕೊಬ್ಬಿನಂತಹ ವಸ್ತು. ಇದು ದೇಹದ ಕಾರ್ಯನಿರ್ವಹಣೆಗೆ ಅಗತ್ಯವಾದರೂ, ಅತಿಯಾದ ಕೊಲೆಸ್ಟ್ರಾಲ್ (ವಿಶೇಷವಾಗಿ LDL ಅಥವಾ “ಕೆಟ್ಟ” ಕೊಲೆಸ್ಟ್ರಾಲ್) ರಕ್ತನಾಳಗಳಲ್ಲಿ ಸಂಗ್ರಹವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. HDL ಅಥವಾ “ಒಳ್ಳೆಯ” ಕೊಲೆಸ್ಟ್ರಾಲ್ ದೇಹಕ್ಕೆ ಒಳಿತು ಮಾಡುತ್ತದೆ. ಆದ್ದರಿಂದ, LDL ಕಡಿಮೆ ಮಾಡುವುದು ಮತ್ತು HDL ಹೆಚ್ಚಿಸುವುದು ಮುಖ್ಯ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಮನೆಮದ್ದುಗಳು

ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವು ಮನೆಮದ್ದುಗಳು ಪರಿಣಾಮಕಾರಿಯಾಗಿವೆ:
1. ಬೆಳ್ಳುಳ್ಳಿ: ಬೆಳ್ಳುಳ್ಳಿಯು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕವಾಗಿದೆ. ದಿನಕ್ಕೆ 1-2 ಬೆಳ್ಳುಳ್ಳಿ ಎಸಳುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.
2. ಶುಂಠಿ: ಶುಂಠಿಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.
3. ಓಟ್ಸ್: ಓಟ್ಸ್‌ನಲ್ಲಿ ಒಳಗೊಂಡಿರುವ ಫೈಬರ್ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ದಿನನಿತ್ಯದ ಉಪಾಹಾರದಲ್ಲಿ ಓಟ್ಸ್ ಸೇವಿಸಿ.
4. ತುಳಸಿ: ತುಳಸಿ ಚಹಾವನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.
5. ಬಾದಾಮಿ: ದಿನಕ್ಕೆ ಕೆಲವು ಬಾದಾಮಿಗಳನ್ನು ಸೇವಿಸುವುದರಿಂದ HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು.

ಆರೋಗ್ಯಕರ ಆಹಾರ ಕ್ರಮ

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಆಹಾರ ಕ್ರಮವು ಕೀಲಿಯಾಗಿದೆ:
 ಕೊಬ್ಬಿನ ಆಹಾರವನ್ನು ತಪ್ಪಿಸಿ: ಟ್ರಾನ್ಸ್ ಫ್ಯಾಟ್, ತಿಂಡಿಗಳು, ಮತ್ತು ತೈಲಯುಕ್ತ ಆಹಾರವನ್ನು ಕಡಿಮೆ ಮಾಡಿ.
 ಫೈಬರ್ ಆಹಾರ: ಹಣ್ಣುಗಳು, ತರಕಾರಿಗಳು, ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿ.
 ಒಮೆಗಾ-3: ಮೀನು, ಚಿಯಾ ಬೀಜಗಳು, ಮತ್ತು ಅಗಸೆ ಬೀಜಗಳಂತಹ ಒಮೆಗಾ-3 ಆಹಾರಗಳು ಹೃದಯಕ್ಕೆ ಒಳ್ಳೆಯದು.
 ಗ್ರೀನ್ ಟೀ: ಗ್ರೀನ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕ.
 ನೀರಿನ ಸೇವನೆ: ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರನ್ನು ಕುಡಿಯಿರಿ.

ವ್ಯಾಯಾಮದ ಪ್ರಾಮುಖ್ಯತೆ

ದೈನಂದಿನ ವ್ಯಾಯಾಮವು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಅತ್ಯಗತ್ಯ. ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ಮಾಡಿ. ಇದರಲ್ಲಿ ತ್ವರಿತ ನಡಿಗೆ, ಈಜು, ಸೈಕ್ಲಿಂಗ್, ಅಥವಾ ಯೋಗವನ್ನು ಸೇರಿಸಬಹುದು. ವ್ಯಾಯಾಮವು HDL ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುವುದರ ಜೊತೆಗೆ ಒಟ್ಟಾರೆ ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಜೀವನಶೈಲಿಯ ಬದಲಾವಣೆಗಳು ಮುಖ್ಯ:
 ಧೂಮಪಾನ ತ್ಯಜಿಸಿ: ಧೂಮಪಾನವು HDL ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ.
 ತೂಕ ನಿಯಂತ್ರಣ: ದೇಹದ ತೂಕವನ್ನು ಸಮತೋಲನದಲ್ಲಿಡುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
 ಒತ್ತಡ ನಿರ್ವಹಣೆ: ಧ್ಯಾನ, ಯೋಗ, ಮತ್ತು ಶ್ವಾಸಕೋಶದ ವ್ಯಾಯಾಮಗಳು ಒತ್ತಡವನ್ನು ಕಡಿಮೆ ಮಾಡುತ್ತವೆ.
 ನಿಯಮಿತ ತಪಾಸಣೆ: ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿಯಲು ವೈದ್ಯರ ಬಳಿ ನಿಯಮಿತ ತಪಾಸಣೆ ಮಾಡಿಸಿ.

ಕೊಲೆಸ್ಟ್ರಾಲ್ ನಿಯಂತ್ರಣವು ಕೇವಲ ಔಷಧಿಗಳಿಗೆ ಸೀಮಿತವಲ್ಲ. ಸರಿಯಾದ ಆಹಾರ ಕ್ರಮ, ವ್ಯಾಯಾಮ, ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಬಹುದು. ಈ ಸರಳ ಮನೆಮದ್ದುಗಳನ್ನು ಅನುಸರಿಸಿ ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ.

Continue Reading

ಆರೋಗ್ಯ

 ಸರಕಾರ ಹೈ ಅಲರ್ಟ್‌, ಆಸ್ಪತ್ರೆಗಳಲ್ಲಿ ಕೋವಿಡ್‌ ಬೆಡ್‌ ಹೆಚ್ಚಳ, ಆರೋಗ್ಯ ಸಿಬ್ಬಂದಿ ರಜೆ ರದ್ದು

ಬೆಂಗಳೂರು: ಕೊರೊನಾ ವೈರಸ್‌ (Corona Virus) ಹೆಚ್ಚಳ ಹಿನ್ನೆಲೆ ಸರ್ಕಾರ (karnataka Government) ಹೈ ಅಲರ್ಟ್ ಆಗಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ (Covid 19 beds) ಮೀಸಲಿಡಲು ಸರ್ಕಾರ ಸೂಚನೆ ನೀಡಿದೆ. ಭಾರತಕ್ಕೆ ಕೊರೋನಾ ರೂಪಾಂತರ ಹೊಸ ತಳಿ ಕಾಲಿಟ್ಟಿದ್ದು, ಇದುವರೆಗೂ ಭಾರತದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ ಆಗಿವೆ. ಇದೀಗ ರಾಜ್ಯದಲ್ಲಿ ಇಂದು 80 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ. ಅಲ್ಲದೆ ಬೆಂಗಳೂರಿನಲ್ಲೇ ನಿನ್ನೆ 73 ಜನರಿಗೆ ಕೊರೊನಾ ಪಾಸಿಟಿವ್ (Covid positive) ವರದಿ ಬಂದಿದೆ.

ರಾಜ್ಯದಲ್ಲಿ ಕೋವಿಡ್ ಆಕ್ಟಿವ್ ಪ್ರಕರಣಗಳ ಸಂಖ್ಯೆ ಇದೀಗ 80ಕ್ಕೆ ಏರಿಕೆಯಾಗಿವೆ. ದಕ್ಷಿಣ ಕನ್ನಡ ವಿಜಯನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡು, ಮೈಸೂರು ಜಿಲ್ಲೆಯಲ್ಲಿ ಮೂವರಿಗೆ ಕೊರೋನಾ ಪಾಸಿಟಿಟೀವ್ ವರದಿ ಬಂದಿದ್ದು, ಆರೋಗ್ಯ ಇಲಾಖೆಯಿಂದ ಕೋವಿಡ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ.

ಕೋವಿಡ್ ಪಾಸಿಟಿವ್ ಸೋಂಕಿತರು ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಕೋವಿಡ್ ಟೆಸ್ಟಿಂಗ್ ಕೂಡ ಬೆಂಗಳೂರಿನಲ್ಲಿ ಹೆಚ್ಚಿಸಲಾಗಿದೆ. ಇಂದಿಗೆ ರಾಜ್ಯದಲ್ಲಿ ಒಟ್ಟು 80 ಕೋವಿಡ್ ಪಾಸಿಟಿವ್ ಸಕ್ರಿಯ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರಿನಲ್ಲೇ 73 ಪ್ರಕರಣಗಳಿವೆ. ಏಲ್ಲಿಯೂ ಕೋವಿಡ್ ನಿಂದಾಗಿ ಸಾವು ಸಂಭವಿಸಿಲ್ಲ. ಆರೋಗ್ಯ ಇಲಾಖೆ ಕೋವಿಡ್ ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಹತೋಟಿಗೆ ತರಲು ಕ್ರಮಗಳನ್ನ ಕೈಗೊಳ್ಳುತ್ತಿದೆ. ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲಿ ಎಂದು ನಾನು ಮನವಿ ಮಾಡುತ್ತೇನೆ” ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮೂಲಕ ಸೂಚನೆ ನೀಡಿದ್ದಾರೆ.

ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾದ ಬೆನ್ನಲ್ಲೇ, ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಸಂಬಂಧ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ನಿನ್ನೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದರು.‌

ಈಗಾಗಲೇ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿಯನ್ನ ಹೊರಡಿಸಿದೆ.‌ ಕೇಂದ್ರ ಸರ್ಕಾರದ ಜೊತೆ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಮಾನಿಟರ್ ಮಾಡುತ್ತಿದ್ದಾರೆ. ಮಕ್ಕಳಿಗೆ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಜ್ವರ, ಶೀತ ಕಂಡುಬಂದ ಮಕ್ಕಳನ್ನ ಶಾಲೆಗೆ ಕಳಿಸದಂತೆ ಪೊಷಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ ಶಾಲಾ ಆಡಳಿತ ಮಂಡಳಿಯವರು ಕೂಡಾ, ಜ್ವರ ಬಂದ ಮಕ್ಕಳಿಗೆ ರಜೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮುನ್ನೆಚ್ಚರಿಕೆ ದೃಷ್ಟಿಯಿಂದ ರೆಮ್ಡಿಸೀವರ್ ಇಂಜೆಕ್ಷನ್ ಅನ್ನು ಖರೀದಿಸಲು ಸೂಚನೆ ನೀಡಲಾಗಿದೆ. ಇದು ಕೋವಿಡ್ ಒಮೆಕ್ರಾನ್ ಜೆ.ಎನ್ 1 ತಳಿಯಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣಗಳನ್ನ ಹೊಂದಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡರು, ಗಂಭೀರವಾಗಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು

Continue Reading

ಆರೋಗ್ಯ

ಶಾಲಾಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ-ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಆದರೆ ಇದೀಗ ಮೇ.29 ರಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಯಾವುದೇ ರೀತಿಯ ಪ್ರತ್ಯೇಕ ಮಾರ್ಗಸೂಚಿಗಳಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು,
ಈ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೋವಿಡ್ ಸೋಂಕುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಮೇ.29 ರಂದು ಶಾಲಾ ಕಾಲೇಜುಗಳು ಆರಂಭವಾಗಲಿದೆ, ಅದರೆ ಸದ್ಯದ ಪರಿಸ್ಧಿತಿಗೆ ಯಾವುದೇ ಮಾರ್ಗಸೂಚಿ ನೀಡಿಲ್ಲ ಎಂದರು,
ಶಾಲೆಗಳಿಗೆ ಮಾರ್ಗಸೂಚಿ ನೀಡಿಲ್ಲ ಎಂದು ಸುಮ್ಮನಾಗಬಾರದು, ಬದಲಿಗೆ ಮುಂಜಾಗರೂಕ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರು ತಿಳಿಸಿದ್ದಾರೆ, ಜೊತೆಗೆ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಕೊಟ್ಟರೆ ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು,

Continue Reading

Trending