Connect with us

ರಾಜಕೀಯ

Breaking ಬೆಂಗಳೂರು ನಗರ ವಿವಿಗೆ ಡಾ.ಮನಮೋಹನ್ ಸಿಂಗ್ ಹೆಸರು! ಸಂಪುಟ ಅಸ್ತು

Published

on

ಬೆಂಗಳೂರು: ಭಾರೀ ವಿರೋಧದ ನಡುವೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ಮಾಡಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಗಿದೆ,
ವಿಶೇವಂದರೆ ವಿಶ್ವವಿದ್ಯಾಲಯದ ಹೆಸರು ಮರುನಾಮಕರಣ ಮಾಡಲೆಂದೇ ವಿಧೇಯಕ ತರಲು ರಾಜ್ಯ ಸರ್ಕಾರ ಮುಂದಾಗಿದೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ, 2025 ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ,
ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು, ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯಾನ್ನಾಗಿಸುವ ಉದ್ದೇಶದಿಂದ ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್.ಸಿ. ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಗುವುದು ಎಂದು ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು,
ಮನಮೋಹನ್ ಸಿಂಗ್ ಎರಡು ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ, ದೇಶದ ಆರ್ಥಿಕತೆಗೆ ಸಾಕಷ್ಟು, ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ, ಭಾರತದ ಆಧುನಿಕ ಆರ್ಥಿಕತೆಯ ರೂವಾರಿ ಎಂದೇ ಹೆಸರಾದವರು ಮನಮೋಹನ್ ಸಿಂಗ್, ಇವರ ಗೌರವಾರ್ಥವಾಗಿ ಬೆಂಗಳೂರು ವಿವಿಗೆ ಇವರ ಹೆಸರನ್ನು ಇಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು,

ದೇಶ

ಕಾರ್ಮಿಕರ ಕೂಗು: ನೋಯ್ಡಾ ಪ್ರತಿಭಟನೆಗೆ ರಾಹುಲ್ ಗಾಂಧಿ ಬೆಂಬಲ

Published

on

ನವದೆಹಲಿ/ನೋಯ್ಡಾ: ಕಾರ್ಮಿಕರ ವೇತನ ಮತ್ತು ಜೀವನ ವೆಚ್ಚದ ನಡುವೆ ಹೆಚ್ಚುತ್ತಿರುವ ಅಸಮಾನತೆ ಕುರಿತು ಕಾಂಗ್ರೆಸ್ ನಾಯಕ Rahul Gandhi ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. Noida ನಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಅವರು, ಇದು “ಕಾರ್ಮಿಕರ ಕೊನೆಯ ಕೂಗು” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ದೇಶದ ಅಭಿವೃದ್ಧಿಯ ನಿಜ ಸ್ಥಿತಿ ಕಾರ್ಮಿಕರ ಜೀವನದಲ್ಲಿ ಪ್ರತಿಬಿಂಬಿಸುತ್ತಿದೆ ಎಂದು ಆರೋಪಿಸಿದರು. ಅವರ ಪ್ರಕಾರ, ನೋಯ್ಡಾದಲ್ಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಮಾಸಿಕ ₹12,000 ಸಂಬಳ ಪಡೆಯುತ್ತಿದ್ದರೂ, ಮನೆ ಬಾಡಿಗೆ ₹4,000ರಿಂದ ₹7,000ರವರೆಗೆ ಏರಿಕೆಯಾಗಿದೆ. ವರ್ಷಕ್ಕೆ ₹300 ಸಂಬಳ ಹೆಚ್ಚಳವಾಗುವಷ್ಟರಲ್ಲಿ ಬಾಡಿಗೆ ₹500 ಹೆಚ್ಚಾಗುತ್ತಿರುವುದರಿಂದ ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದರು.

ಒಬ್ಬ ಮಹಿಳಾ ಕಾರ್ಮಿಕೆಯ ಮಾತು ಉಲ್ಲೇಖಿಸಿ, “ಗ್ಯಾಸ್ ಬೆಲೆ ಏರುತ್ತದೆ, ಆದರೆ ನಮ್ಮ ಸಂಬಳ ಏರಲ್ಲ” ಎಂಬುದು ನೆಲದ ನಿಜ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು. ಹಣದುಬ್ಬರ ಕಾರ್ಮಿಕರ ಬದುಕನ್ನು ಕಟ್ಟಿ ಹಾಕುತ್ತಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಧನ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾದ ಯುದ್ಧ ಹಾಗೂ ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯ ಕಾರಣವಾಗಿದೆ ಎಂದು ಅವರು ಹೇಳಿದ್ದು, ಇದರ ಹೊರೆ ಸಾಮಾನ್ಯ ಕಾರ್ಮಿಕರ ಮೇಲೇ ಬೀಳುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕ ಸಂಹಿತೆಗಳ ವಿಷಯದಲ್ಲೂ ಅವರು ಟೀಕೆ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ 2025ರ ನವೆಂಬರ್‌ನಿಂದ ಯಾವುದೇ ಸಮಾಲೋಚನೆ ಇಲ್ಲದೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು. ಕೆಲಸದ ಅವಧಿಯನ್ನು 12 ಗಂಟೆಗಳವರೆಗೆ ಹೆಚ್ಚಿಸಿರುವುದನ್ನು ವಿರೋಧಿಸಿ, “12 ಗಂಟೆ ಕೆಲಸ ಮಾಡುವ ಕಾರ್ಮಿಕನಿಗೆ ₹20,000 ಸಂಬಳ ಕೇಳುವುದು ದುರಾಸೆಯಲ್ಲ, ಅದು ಅವನ ಹಕ್ಕು” ಎಂದು ಹೇಳಿದರು.

ಈ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದ ಬಳಿಕ, ಕಾರ್ಮಿಕರ ಸಮಸ್ಯೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ಶಾಸಕರಿಗೆ ಡಿಕೆಶಿ ಎಚ್ಚರಿಕೆ – ಮಾಧ್ಯಮ ಎದುರು ಜಾಗ್ರತೆ ಇರಲಿ

Published

on

ಬೆಂಗಳೂರು: ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾದ ತೀರ್ಮಾನಗಳ ಹಿಂದೆ ಸಂಪೂರ್ಣ ಮಾಹಿತಿ ಸಂಗ್ರಹವೇ ಕಾರಣ ಎಂದು ಉಪ ಮುಖ್ಯಮಂತ್ರಿ D. K. Shivakumar ತಿಳಿಸಿದ್ದಾರೆ. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ Naseer Ahmed ಅವರನ್ನು ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು.

ಸದಾಶಿವನಗರದ ನಿವಾಸ ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯನ್ನು ಹಿಂದೆ ಸರಿಸಲು ಪಕ್ಷ ನಜೀರ್ ಅವರಿಗೆ ಜವಾಬ್ದಾರಿ ನೀಡಿತ್ತು. ಆದರೆ ಅವರು ಆ ಕಾರ್ಯದಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರವಾದ ವರದಿ ಬರಬೇಕಿದೆ” ಎಂದು ಹೇಳಿದರು.

ಪಕ್ಷದಲ್ಲಿ ಶಿಸ್ತು ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ ಅವರು, “ಯಾವುದೇ ಪಕ್ಷವಾಗಿರಲಿ, ಶಿಸ್ತು ಇಲ್ಲದೆ ಸಂಘಟನೆ ಬಲವಾಗುವುದಿಲ್ಲ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ನಂತರವೂ ನಿರಂತರ ಸಂಪರ್ಕದಲ್ಲಿದ್ದೇವೆ. ನಾಯಕರು ನೀಡಿದ ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿ ತೀರ್ಮಾನ ಕೈಗೊಂಡಿದ್ದಾರೆ” ಎಂದರು.

ಜಮೀರ್ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ, “ಈ ಕುರಿತು ನನಗೆ ಮಾಹಿತಿ ಇಲ್ಲ” ಎಂದು ಹೇಳಿದರು.

ಶಾಸಕರಿಗೆ ಸಂದೇಶ ನೀಡಿದ ಶಿವಕುಮಾರ್, “ದೆಹಲಿ ಭೇಟಿ ನೀಡಿ ಮಂತ್ರಿ ಸ್ಥಾನ ಕೇಳುವುದು ತಪ್ಪಲ್ಲ. ಆದರೆ ಪಕ್ಷದ ನಿಯಮಗಳನ್ನು ಪಾಲಿಸುವುದು ಮುಖ್ಯ. ಎಲ್ಲರೂ ನಮ್ಮ ಸಹೋದ್ಯೋಗಿಗಳೇ ಆಗಿದ್ದಾರೆ. ಹೀಗಾಗಿ ಶಿಸ್ತನ್ನು ಕಾಪಾಡಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು” ಎಂದು ಸಲಹೆ ನೀಡಿದರು.

ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಶಿಸ್ತು ಮತ್ತು ಸಂಘಟನಾ ನಿಯಂತ್ರಣದ ಮಹತ್ವವನ್ನು ಮತ್ತೆ ಒತ್ತಿ ಹೇಳುವಂತಾಗಿದೆ.

Continue Reading

ದೇಶ

Latest News : “ಗೆಲ್ಲಿಸದಿದ್ರೆ ರಾಜೀನಾಮೆ!” – ಜಮೀರ್ ಅಹ್ಮದ್ ಸ್ಫೋಟಕ ಹೇಳಿಕೆ

Published

on

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ರಂದೀಪ್ ಸುರ್ಜೇವಾಲಾ ಅವರ ಎದುರಲ್ಲೇ 7 ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವಂತೆ ಕೇಳಿದ್ದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

“ನಾನು ಓಪನ್ ಆಗಿ ಸಭೆಯಲ್ಲಿ ಹೇಳಿದ್ದೆ. ಜಬ್ಬಾರ್‌ಗೆ ಟಿಕೆಟ್ ಕೇಳಿಲ್ಲ. ಅವರು ಈಗಾಗಲೇ ಎಂಎಲ್‌ಸಿ ಆಗಿರುವುದರಿಂದ ಬೇರೆ ಮುಸ್ಲಿಂ ನಾಯಕರಿಗೆ ಅವಕಾಶ ಕೊಡಬೇಕು ಎಂದಿದ್ದೆ. ನನ್ನ ಜವಾಬ್ದಾರಿಯಲ್ಲಿ ಗೆಲ್ಲಿಸಿಕೊಡುತ್ತೇನೆ, ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ,” ಎಂದು ಜಮೀರ್ ಸ್ಪಷ್ಟಪಡಿಸಿದರು.

ಟಿಕೆಟ್ ನೀಡದಿರುವುದರಿಂದ ಆರಂಭದಲ್ಲಿ ಅಸಮಾಧಾನ ಇದ್ದುದನ್ನು ಒಪ್ಪಿಕೊಂಡ ಅವರು, ಬಳಿಕ ಪರಿಸ್ಥಿತಿ ಸರಿಹೋಗಿದೆ ಎಂದರು. ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಅಲ್ಪಸಂಖ್ಯಾತ ಘಟಕದ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಮೀರ್, “ಸ್ಥಳೀಯ ಮಟ್ಟದಲ್ಲಿ ಅಸಮಾಧಾನ ಇದ್ದರೂ ಈಗ ಪರಿಸ್ಥಿತಿ ಸುಧಾರಿಸಿದೆ” ಎಂದರು.

ಕಾಂಗ್ರೆಸ್ ಶಾಸಕರ ದೆಹಲಿ ಭೇಟಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಪ್ರತಿ ನಾಯಕನಿಗೂ ಮಂತ್ರಿಯಾಗುವ ಆಸೆ ಸಹಜ. ನನಗೂ ಇದೆ. ಆದರೆ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ,” ಎಂದು ಹೇಳಿದರು.

ಇದಲ್ಲದೆ, ಕೇರಳದಲ್ಲಿ ಸ್ಟಾರ್ ಪ್ರಚಾರಕರಾಗಿ ಜವಾಬ್ದಾರಿ ನೀಡಲಾಗಿತ್ತು ಎಂದು ಹೇಳಿದ ಅವರು, ಸಿಎಂ ಸೂಚನೆ ಮೇರೆಗೆ ಪ್ರಚಾರದಲ್ಲಿ ಭಾಗವಹಿಸಿದ್ದೇನೆ ಎಂದರು.

Continue Reading

Trending