Connect with us

ರಾಜ್ಯ

ಜೀವ ಕಳೆದುಕೊಂಡ ಐಎಎಸ್ ಆಕಾಂಕ್ಷಿ ಜೀವಿತಾ!

ಧಾರವಾಡ: ರಾಜ್ಯಾದ್ಯಂತ ಸರಣಿ ಹೃದಯಾಘಾತ ಪ್ರಕರಣಗಳು ಜನತೆಯನ್ನು ಭೀತಿಗೆ ತಳ್ಳುತ್ತಿದೆ, ಮಂಗಳವಾರ ಯುಪಿಎಸ್‍ಸಿಗೆ ತಯಾರಿ ನಡೆಸುತ್ತಿದ್ದ 26 ವರ್ಷದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ,
ಧಾರವಾಡ ನಗರದ ಪುರೋಹಿತ್ ನಗರದಲ್ಲಿ 26 ವರ್ಷದ ಜೀವಿತಾ ಕುಸಗೂರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಮಂಗಳವಾರ ಬೆಳಗ್ಗೆ ಜೀವಿತಾ ತಲೆ ಸುತ್ತು ಬರುತ್ತಿರುವುದಾಗಿ ಹೇಳಿ ಸುಸ್ತಾಗಿ ಕುಳಿತಿದ್ದರು, ತಕ್ಷಣ ಕುಟುಂಬಸ್ಧರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಜೀವಿತಾ ಪ್ರಜ್ಞಾಹೀನ ಸ್ಧಿತಿಯಲ್ಲಿದ್ದು, ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ, ಆಸ್ಟತ್ರೆಯಲ್ಲಿ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ,

ದೇಶ

ಬೇಸಿಗೆಗೆ ಮುನ್ನ ಬೆಂಗಳೂರು ಜಲಮಂಡಳಿ ಎಚ್ಚರಿಕೆ: ಕಾವೇರಿ ನೀರಿಗೆ ಪರ್ಯಾಯ ಯೋಜನೆ

ಬೆಂಗಳೂರು: ಶಿವರಾತ್ರಿ ಮುಗಿಯುತ್ತಿದ್ದಂತೆ ನಗರದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಮಾರ್ಚ್‌ನಿಂದ ಅಧಿಕೃತವಾಗಿ ಬೇಸಿಗೆ (Summer) ಆರಂಭವಾಗಲಿದ್ದು, ನೀರಿನ ಅಭಾವದ ಆತಂಕ ಸಹಜ. ಆದರೆ ಈ ಬಾರಿ ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ (Drinking Water) ಕೊರತೆ ಆಗದಂತೆ ಬೆಂಗಳೂರು ಜಲಮಂಡಳಿ (Bengaluru Water Board) ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

54 ಟಿಎಂಸಿ ನೀರು ಲಭ್ಯ

ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 54 ಟಿಎಂಸಿ ನೀರು ಲಭ್ಯವಿದ್ದು, ಜುಲೈವರೆಗೆ ಬೆಂಗಳೂರಿಗೆ ಅಗತ್ಯವಿರುವ 14 ಟಿಎಂಸಿ ನೀರು ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಯಾಂಕರ್ ವ್ಯವಸ್ಥೆ ಸಿದ್ಧ

ನೀರಿನ ಕೊರತೆ ಕಾಣಿಸಬಹುದಾದ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಜಲಮಂಡಳಿ ಯೋಜನೆ ರೂಪಿಸಿದೆ. ಬೋರ್‌ವೆಲ್‌ ನೀರು ಬೇಸಿಗೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ, ಕಳೆದ ವರ್ಷದಿಂದಲೇ ಬೋರ್‌ವೆಲ್ ನಿರ್ವಹಣೆಯನ್ನು ಜಲಮಂಡಳಿ ವಹಿಸಿಕೊಂಡಿದೆ. ಅಂತರ್ಜಲ ಕುಸಿತ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ನೀರು ವ್ಯರ್ಥ ಮಾಡಿದ್ರೆ ದಂಡ

ಕಾವೇರಿ ನೀರನ್ನು ಬೈಕ್, ಕಾರು ತೊಳೆಯಲು ಬಳಸುವುದು ಅಥವಾ ಅನಗತ್ಯವಾಗಿ ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಜಲಮಂಡಳಿ ಸಿದ್ಧವಾಗಿದೆ. ವೀಕ್ಷಕರು ಹಾಗೂ ಬ್ಲೂಫೋರ್ಸ್ ತಂಡಗಳು ಪರಿಶೀಲನೆ ನಡೆಸಲಿದ್ದು, ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ.

ಜನರು ನೀರನ್ನು ಜಾಗರೂಕತೆಯಿಂದ ಬಳಕೆ ಮಾಡಿದರೆ ಬೇಸಿಗೆಯಲ್ಲಿ ಜಲಕ್ಷಾಮ ಸಮಸ್ಯೆ ತಗ್ಗಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Continue Reading

ಬೆಂಗಳೂರು

BENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ

ಬೆಂಗಳೂರು: ವಸಂತಪುರದಲ್ಲಿ ಅನಾದಿಕಾಲದಿಂದ ನೆಲಸಿರುವ ಸ್ವಯಂವ್ಯಕ್ತ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ಮಹೋತ್ಸವ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು. ಕಳೆದ ಒಂಬತ್ತು ದಿನಗಳಿಂದ ನಡೆದ ಶ್ರೀಸ್ವಾಮಿಯ ಬ್ರಹ್ಮ ರಥೋತ್ಸವವು ವೈಭವಯುತವಾಗಿ ಸಾಗಿದ್ದು, ಅದರ ಅಂತಿಮ ಘಟ್ಟವಾಗಿ ಸ್ವಾಮಿಗೆ ವಿಶ್ರಾಂತಿ ನೀಡುವ ಶಯನೋತ್ಸವ ಸುಗಂಧ ಪರಿಮಳಯುಕ್ತ ಮಂಟಪದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಈ ಶಯನೋತ್ಸವವನ್ನು ತಲಘಟ್ಟಪುರದ ಮಾಜಿ ಶ್ಯಾನಭೋಗ ಟಿ.ವಿ. ನಾರಾಯಣಮೂರ್ತಿ ಅವರ ಕುಟುಂಬವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ತ.ನಾ. ಶಾಂತಕುಮಾರ್ ಅವರ ನೇತೃತ್ವದಲ್ಲಿ ಕುಟುಂಬ ಸದಸ್ಯರೊಂದಿಗೆ ಉತ್ಸವ ಜರುಗಿತು. ಪ್ರಧಾನ ಅರ್ಚಕ ರಘುರಾಮ್ ಭಟ್ ಅವರು ಸಕಲ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು.

ಉತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿದರು. ಭಕ್ತರ ಜಯಘೋಷಗಳಿಂದ ದೇವಾಲಯ ಪ್ರದೇಶ ಭಕ್ತಿಮಯ ವಾತಾವರಣಕ್ಕೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಅಕ್ಷಯ ವಿಪ್ರ ಮಹಾಸಭಾದ ಕಾರ್ಯದರ್ಶಿ ಎನ್.ಎಸ್. ಸುಧೀಂದ್ರ ರಾವ್, ಕಿರಣ್ ಕುಮಾರ್, ಎಸ್. ರಾಮರಾವ್, ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

ದೇಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೆ ಆರಂಭ: ಭಕ್ತಸಾಗರ ಹರಿದುಬರುತ್ತಿದ್ದು, ಭದ್ರತೆಗೆ ಕಠಿಣ ಕ್ರಮ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಫೆಬ್ರವರಿ 14ರಿಂದ ಆರಂಭವಾಗುತ್ತಿದ್ದು, ಲಕ್ಷಾಂತರ ಭಕ್ತರು ಕ್ಷೇತ್ರದತ್ತ ಹರಿದುಬರುತ್ತಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಭಾಗಗಳಿಂದ ಸಹಸ್ರಾರು ಮಂದಿ ಪಾದಯಾತ್ರೆ ಮೂಲಕ ಕಾವೇರಿ ನದಿ ದಾಟಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಪಾದಯಾತ್ರಿಕರಿಗೆ ಯಾವುದೇ ತೊಂದರೆ ಆಗದಂತೆ ಚಾಮರಾಜನಗರ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬಸವನಕಡದಲ್ಲಿ ಪೊಲೀಸ್, ಅರಣ್ಯ ಇಲಾಖೆ, ಎಸ್‌ಡಿಆರ್‌ಎಫ್, ಕಂದಾಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೊಕ್ಕಾಂ ಹೂಡಿ ಭಕ್ತರಿಗೆ ಸಹಕಾರ ನೀಡುತ್ತಿದ್ದಾರೆ. ಕಾವೇರಿ ನದಿ ದಾಟಿದ ಬಳಿಕ ಮೈಕ್ ಮೂಲಕ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಚಿನ್ನಾಭರಣಗಳ ಬಗ್ಗೆ ಎಚ್ಚರಿಕೆ, ರಸ್ತೆ ಬದಿಯಲ್ಲಿ ಸಾಲಾಗಿ ಸಾಗುವಂತೆ ಸೂಚನೆ, ಅರಣ್ಯ ಪ್ರದೇಶದಲ್ಲಿ ಮೊಬೈಲ್ ಬಳಕೆ ತಪ್ಪಿಸುವಂತೆ ಮನವಿ ಮಾಡಲಾಗಿದೆ.

ಶಾಗ್ಯ, ಬಂಡಳ್ಳಿ, ಎಲ್ಲೆಮಾಳ, ಕೌದಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆ ಪ್ರಯುಕ್ತ ಫೆ.13 ಬೆಳಗ್ಗೆ 6ರಿಂದ ಫೆ.18 ಸಂಜೆ 6ರವರೆಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ನಿರ್ಬಂಧ ವಿಧಿಸಿದ್ದಾರೆ.

ಇತ್ತೀಚೆಗೆ ತಾಳುಬೆಟ್ಟ ಮಾರ್ಗದಲ್ಲಿ ಚಿರತೆ ದಾಳಿ ನಡೆದಿದ್ದರೂ, ಭಕ್ತರ ಸಂಖ್ಯೆಯಲ್ಲಿ ಯಾವುದೇ ಕಡಿಮೆಯಾಗಿಲ್ಲ. ಶಾಸಕ ಎಂ.ಆರ್. ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ.

ಜಾತ್ರೆ ಸುಗಮ ಹಾಗೂ ಸುರಕ್ಷಿತವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಭಕ್ತರಲ್ಲಿ ಭದ್ರತಾ ಜಾಗೃತಿ ಮೂಡಿಸಲಾಗುತ್ತಿದೆ.

Continue Reading

Trending