ದೇಶ

ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ ಏರಿಕೆ 700 ಸಂಪರ್ಕಿತರ ಹುಡುಕಾಟದಲ್ಲಿ ಆರೋಗ್ಯ ಇಲಾಖೆ

ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ ಏರಿಕೆ 700 ಸಂಪರ್ಕಿತರ ಹುಡುಕಾಟದಲ್ಲಿ ಆರೋಗ್ಯ ಇಲಾಖೆ

ಕೇರಳ: ಕೇರಳದಲ್ಲಿ ಮತ್ತೆ ನಿಫಾ ಸೋಂಕು ಹೆಚ್ಚಾಗುತ್ತಿದೆ, ಕೋಝಕ್ಕೋಡ್‍ನ ಖಾಸಗಿ ಆಸ್ಪತ್ರೆ ಸಬ್ಬಂದಿ ಸೋಂಕಿಗೆ ಗುರಿಯಾಗಿದ್ದು ಒಟ್ಟೂ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ, ಜೊತೆಗೆ ಸೋಂಕಿತರ ಸಂಪರ್ಕಕ್ಕೆ ಬಂದ ಸುಮಾರು 700 ಜನರನ್ನು ಆರೋಗ್ಯ ಇಲಾಖೆ ಟ್ರ್ಯಾಕ್ ಮಾಡುತ್ತಿದೆ,
9 ವರ್ಷದ ಬಾಲಕ ನಿಫಾ ಸೋಂಕಿನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಸರ್ಕಾರ ಬಾಲಕನನ್ನ ಉಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ, ಪ್ರಾಯೋಗಿಕವಾಗಿ ಸಾಬಿತಾಗದ ಏಕೈಕ ಆಂಟಿವೈರಲ್ ಚಿಕಿತ್ಸೆಯನ್ನು ನೀಡಲು ಸರ್ಕಾರ ಅದೇಶ ನೀಡಿದೆ, ನಿಫಾ ಸೋಂಕಿಗೆ ಇರುವ ಏಕಮಾತ್ರ ಆಂಟಿವೈರಲ್ ಎಂದು ಹೇಳಲಾಗಿದೆ,
ಕೇರಳದಲ್ಲಿ ಸರ್ಕಾರ ನಿಫಾ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು 19 ಕಮಿಟಿಗಳನ್ನು ಮಾಡಲಾಗಿದ್ದು ಟೆಲಿಮೆಡಿಸಿನ್ ಸೌಲಭ್ಯವನ್ನು ಸಿದ್ಧಪಡಿಸಿದೆ, ನಿಫಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ರೂಟ್ ಮ್ಯಾಪ್‍ನ್ನು ಪ್ರಕಟಿಸಲಾಗಿದ್ದು ಅವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ್ದಾರೆ.

Trending

Exit mobile version