Connect with us

ದೇಶ

ಟಾಟಾ ನೆಕ್ಸಾನ್ ಇವಿ ಫೇಸ್​ಲಿಫ್ಟ್ ಭಾರತದಲ್ಲಿ ಬಿಡುಗಡೆ

Published

on

ಟಾಟಾ ನೆಕ್ಸಾನ್ ಇವಿ ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ

ಬೆಂಗಳೂರು: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 14.74 ಲಕ್ಷ ರೂಪಾಯಿಗಳ ಈ ಪರಿಚಯಾತ್ಮಕ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ಬುಕ್ಕಿಂಗ್ ಆದ ಬಳಿಕ ಬೆಲೆಯೇ ಏರಿಕೆಯಾಗಲಿದೆ ಎಂಬ ಸೂಚನೆಯನ್ನು ಕಂಪನಿ ನೀಡಿದೆ. ಹೊಸ ವಿನ್ಯಾಸ, ಹಲವಾರು ಹೊಸ ಫೀಚರ್ಗಳೊಂದಿಗೆ ಹೊಸ ನೆಕ್ಸಾನ್ ಇವಿ ಫೇಸ್ಲಿಫ್ಟ್ ಬಂದಿದೆ.
ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯ ಜನಪ್ರಿಯ ಕಾಂಪ್ಯಾಕ್ಟ್ ಎಸ್ ಯುವಿ . ಇದರ ಎಲೆಕ್ಟ್ರಿಕ್ ರೂಪಾಂತರವು ನವೀಕರಿಸಿದ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್ ಸೇರಿದಂತೆ ಹಲವು ಹೊಸತನಗಳೊಂದಿಗೆ ಬಂದಿದೆ.ಈ ಎಲೆಕ್ಟ್ರಿಕ್ ಎಸ್ ಯುವಿಯು ಹೊಸ ಬಾಹ್ಯ ವಿನ್ಯಾಸ, ನವೀಕರಿಸಿದ ಒಳಾಂಗಣ ಮತ್ತು ಹೊಸ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಪೂರ್ತಿ ಮೇಕ್ ಓವರ್ ಗೆ ಒಳಗಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಇವಿಯ 53,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಮಾಡಿದೆ. ಹೀಗಾಗಿ ಫೇಸ್ ಲಿಫ್ಟ್ ಮೂಲಕ ಯಶಸ್ಸನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.
2023ರ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ತನ್ನ ಆಂತರಿಕ ದಹನಕಾರಿ ಎಂಜಿನ್ (ಐಸಿಇ ಎಂಜಿನ್) ಪ್ರತಿರೂಪದೊಂದಿಗೆ ಪಾದಾರ್ಪಣೆ ಮಾಡಿದೆ. ಪೆಟ್ರೋಲ್ ಕಾರು ಬೆಲೆ 8.10 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಐಸಿಇ ಚಾಲಿತ ನೆಕ್ಸಾನ್ ಫೇಸ್ ಲಿಫ್ಟ್ ನಂತೆಯೇ, ಇವಿ ರೂಪಾಂತರವು ಟಾಟಾದ ಕರ್ವ್ ಪರಿಕಲ್ಪನೆಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ. ಆದಾಗ್ಯೂ, ವಿಭಿನ್ನ ಏರ್ ಡ್ಯಾಮ್ ಮತ್ತು ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಸೇರಿದಂತೆ ವಿಶಿಷ್ಟ ವೈಶಿಷ್ಟ್ಯಗಳಿವೆ. ಇದು ಏಳು ವಿಭಿನ್ನ ಪೇಂಟ್ ಆಯ್ಕೆಯನ್ನು ನೀಡುತ್ತದೆ: ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಇಂಟೆನ್ಸಿ ಟೀಲ್, ಫ್ಲೇಮ್ ರೆಡ್, ಡೇಟೋನಾ ಗ್ರೇ, ಫಿಯರ್ಲೆಸ್ ಪರ್ಪಲ್ ಮತ್ತು ಕ್ರಿಯೇಟಿವ್ ಓಷನ್ ಎಂಬ ಬಣ್ಣಗಳಿವೆ.
ನೆಕ್ಸಾನ್ ಇವಿ ಫೇಸ್ ಲಿಫ್ಟ್ ನ ಕ್ಯಾಬಿನ್ ನಲ್ಲಿ, ಹೊಸ ಫೀಚರ್ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಎರಡು ದೊಡ್ಡ ಟಚ್ಸ್ಕ್ರಿನ್ ಸಿಸ್ಟಮ್ಗಳಿವೆ. 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದರಲ್ಲಿದೆ. ಇದು ಕ್ಯಾಬಿನ್ ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತದೆ.
ಹೊಸ ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್ ಶಿಫ್ಟರ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನಾಲಿಟಿ, ಎತ್ತರ-ಸರಿಹೊಂದಿಸಬಹುದಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಏರ್ ಪ್ಯೂರಿಫೈಯರ್, ಸಬ್ ವೂಫರ್ ಹೊಂದಿರುವ ಜೆಬಿಎಲ್ ಆಡಿಯೊ ಸಿಸ್ಟಮ್ ಮತ್ತು ಸನ್ ರೂಫ್ ನೀಡಲಾಗಿದೆ.
ಸುರಕ್ಷತಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ 2023 ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಈಗ ಆರು ಏರ್ ಬ್ಯಾಗ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಆರೋಹಣ ಮತ್ತು ಇಳಿಯುವಿಕೆ ನಿಯಂತ್ರಣ, ಜೊತೆಗೆ ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.
ಪವರ್ ಟ್ರೇನ್ ಗೆ ಹೋಗುವುದಾದರೆ, ಎಲೆಕ್ಟ್ರಿಕ್ ಎಸ್ ಯುವಿ ಈಗ ಹೊಸ ಜೆನ್ 2 ಮೋಟರ್ ಹೊಂದಿದೆ, ಇದು ಅದರ ಹಿಂದಿನದಕ್ಕಿಂತ 20 ಕೆ.ಜಿ ಹಗುರವಾಗಿದೆ. ಈ ನವೀಕರಿಸಿದ ಎಲೆಕ್ಟ್ರಿಕ್ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 465 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್ನಲ್ಲಿ ಇವಿ 143 ಬಿಹೆಚ್ ಪಿ ಗರಿಷ್ಠ ಶಕ್ತಿ ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಔಟ್ ಪುಟ್ ಸಣ್ಣ ಹೆಚ್ಚಳವನ್ನು ಕಂಡಿದೆ. ಅದೇ ರೀತಿ ಹೊಸ ಮಾಡೆಲ್ನಲ್ಲಿ ಟಾರ್ಕ್ ಸ್ವಲ್ಪ ಕಡಿಮೆ ಮಾಡಲಾಗಿದೆ. ಇದು ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಸಿಟಿ, ಇಕೋ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಚಾಲನಾ ಮೋಡ್ ಗಳನ್ನು ನೀಡಲಾಗಿದೆ.

ದೇಶ

ಮಮತಾ ಬ್ಯಾನರ್ಜಿ ಮತ್ತೆ ಸಿಎಂ ಆಗ್ತಾರಾ? ಸಮೀಕ್ಷೆ ಹೇಳೋದು ಏನು?

Published

on

By

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ದಿನೇ ದಿನೇ ಜೋರಾಗುತ್ತಿದ್ದು, ಪೂರ್ವ ಸಮೀಕ್ಷೆಗಳು ರಾಜಕೀಯ ಹೋರಾಟ ತೀವ್ರವಾಗಿರುವುದನ್ನು ಸೂಚಿಸುತ್ತಿವೆ. ಏಪ್ರಿಲ್ 23 ಮತ್ತು 29 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಹೊರಬಿದ್ದ ಅಭಿಪ್ರಾಯ ಸಮೀಕ್ಷೆಗಳು ಕುತೂಹಲ ಹೆಚ್ಚಿಸಿವೆ.

ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, ಆಡಳಿತಾರೂಢ All India Trinamool Congress (ಟಿಎಂಸಿ) 140 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮತ್ತೊಂದೆಡೆ Bharatiya Janata Party (ಬಿಜೆಪಿ) 130 ರಿಂದ 150 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇತರ ಪಕ್ಷಗಳು 8 ರಿಂದ 16 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.

ಮತಶೇಕಡಾವಾರಿಯಾಗಿ ನೋಡಿದರೆ, ಟಿಎಂಸಿ ಶೇ.43 ಮತ್ತು ಬಿಜೆಪಿ ಶೇ.41 ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಉತ್ತರ ಬಂಗಾಳದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಹುದು ಎಂದು ಹೇಳಲಾಗಿದ್ದು, ದಕ್ಷಿಣ ಬಂಗಾಳದಲ್ಲಿ ಟಿಎಂಸಿ ಬಲಿಷ್ಠವಾಗಿದೆ.

ಇನ್ನೊಂದೆಡೆ, ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯ ಪ್ರಕಾರ, Mamata Banerjee ನೇತೃತ್ವದ ಟಿಎಂಸಿ ಸ್ಪಷ್ಟ ಬಹುಮತದೊಂದಿಗೆ 155–165 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ 110–115 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಅಂದಾಜಿಸಲಾಗಿದೆ.

294 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದ್ದು, ಈ ಸಂಖ್ಯೆಯನ್ನು ಟಿಎಂಸಿ ಸುಲಭವಾಗಿ ದಾಟುವ ಸಾಧ್ಯತೆ ಇದೆ. ಆದರೆ ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಠಿಣ ಪೈಪೋಟಿ ಕಾಣಿಸಬಹುದು.

ಒಟ್ಟಾರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರೀ ಟಕ್ಕರ್ ನಿರೀಕ್ಷೆಯಿದ್ದು, ಅಂತಿಮ ಫಲಿತಾಂಶ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವ ಸಾಧ್ಯತೆ ಇದೆ.

Continue Reading

ದೇಶ

ಪಾಕ್‌ನಲ್ಲಿ ಎಮರ್ಜೆನ್ಸಿ ಸ್ಥಿತಿ: ರಾತ್ರಿ 8ಕ್ಕೆ ಮಾರುಕಟ್ಟೆ ಬಂದ್!

Published

on

By

ಕರಾಚಿ: ಮಧ್ಯಪ್ರಾಚ್ಯದ ಉದ್ವಿಗ್ನತೆಯ ಪರಿಣಾಮವಾಗಿ ಪಾಕಿಸ್ತಾನ ಗಂಭೀರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈಗಾಗಲೇ ಹಿಟ್ಟು, ನೀರು ಮತ್ತು ವಿದ್ಯುತ್ ಕೊರತೆಯಿಂದ ಬಳಲುತ್ತಿರುವ Pakistan ಇದೀಗ ತೈಲ ಕೊರತೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ಇಂಧನ ಬಿಕ್ಕಟ್ಟನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಏಪ್ರಿಲ್ 7ರಿಂದ ರಾತ್ರಿ 8 ಗಂಟೆಯೊಳಗೆ ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮುಚ್ಚುವಂತೆ ಆದೇಶಿಸಿದೆ. ಗ್ಯಾಸ್ ಮತ್ತು ತೈಲ ಬಳಕೆಯನ್ನು ಕಡಿತಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದರ ಮಧ್ಯೆ ಪೆಟ್ರೋಲ್ ಬೆಲೆಗಳು ಭಾರೀ ಏರಿಕೆ ಕಂಡಿದ್ದು, ಲೀಟರ್‌ಗೆ ₹458ರವರೆಗೆ ಏರಿಕೆಯಾಗಿತ್ತು. ಜನರ ಆಕ್ರೋಶದ ನಂತರ ಅದು ₹378ಕ್ಕೆ ಇಳಿದರೂ, ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿಲ್ಲ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ.

ಈ ಬಿಕ್ಕಟ್ಟಿಗೆ Iran–United States ನಡುವಿನ ಉದ್ವಿಗ್ನತೆ ಹಾಗೂ Strait of Hormuz ನಲ್ಲಿ ಉಂಟಾದ ಅಡಚಣೆ ಪ್ರಮುಖ ಕಾರಣ ಎಂದು ಪಾಕ್ ಸರ್ಕಾರ ಹೇಳಿಕೊಂಡಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪರಿಸ್ಥಿತಿ ಹದಗೆಟ್ಟಿದೆ.

ಆಹಾರ ಪದಾರ್ಥಗಳಾದ ಹಿಟ್ಟು, ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆಯ ಬೆಲೆಗಳೂ ಗಗನಕ್ಕೇರಿದ್ದು, ಜನಜೀವನ ಕಷ್ಟಕರವಾಗಿದೆ. ಜೊತೆಗೆ, ಸಾಲದ ಹೊರೆ ಹೆಚ್ಚುತ್ತಿದ್ದು, International Monetary Fund ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿ ಒತ್ತಡವೂ ಹೆಚ್ಚಾಗಿದೆ.

ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ಕಾಲದಂತೆ ನಿರ್ಬಂಧಗಳನ್ನು ಜಾರಿಗೆ ತರಲು ಪಾಕ್ ಸರ್ಕಾರ ಮುಂದಾಗಿದೆ. ಒಟ್ಟಿನಲ್ಲಿ, ಪಾಕಿಸ್ತಾನದ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ದೇಶವನ್ನು ಗಂಭೀರ ಸಂಕಷ್ಟದ ದಿಕ್ಕಿನಲ್ಲಿ ತಳ್ಳುತ್ತಿದೆ.

Continue Reading

ದೇಶ

“ಮೋದಿ ಸರ್ಕಾರ ವೈಫಲ್ಯ” – ಕಾಂಗ್ರೆಸ್ ಜಂಟಿ ಆರೋಪ

Published

on

By

ಬೆಂಗಳೂರು/ನವದೆಹಲಿ: ಎಲ್‌ಪಿಜಿ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ Siddaramaiah, ಉಪಮುಖ್ಯಮಂತ್ರಿ D. K. Shivakumar ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ Randeep Singh Surjewala ಜಂಟಿಯಾಗಿ ಪ್ರಧಾನಿ Narendra Modi ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿ ಕಿಡಿಕಾರಿದ್ದಾರೆ.

ಜಂಟಿ ಹೇಳಿಕೆಯಲ್ಲಿ, ಎಲ್‌ಪಿಜಿ ಕೊರತೆ, ಆಟೋ ಗ್ಯಾಸ್ ಅಭಾವ ಹಾಗೂ ತೈಲ ಬೆಲೆ ಏರಿಕೆಯಿಂದಾಗಿ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಆಟೋ ಚಾಲಕರ ಜೀವನೋಪಾಯ ಕುಸಿದಿದೆ ಎಂದು ಆರೋಪಿಸಲಾಗಿದೆ. “ಇದು ಕೇವಲ ನೀತಿ ವೈಫಲ್ಯವಲ್ಲ, ಕೇಂದ್ರ ಸರ್ಕಾರದ ಆಡಳಿತಾತ್ಮಕ ಅಸಮರ್ಥತೆ ಮತ್ತು ಉದಾಸೀನತೆಗೆ ಸಾಕ್ಷಿ” ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 2026ರಲ್ಲಿ ಲೀಟರ್‌ಗೆ ₹58–61 ಇದ್ದ ಆಟೋ ಗ್ಯಾಸ್ ಬೆಲೆ ಈಗ ₹105–120ಕ್ಕೆ ಏರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕೆಲ ಖಾಸಗಿ ಬಂಕ್‌ಗಳಲ್ಲಿ ₹135ರವರೆಗೂ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ನಗರದಲ್ಲಿ ಸುಮಾರು 80% ಗ್ಯಾಸ್ ಕೇಂದ್ರಗಳು ಕಾರ್ಯನಿರ್ವಹಣೆ ನಿಲ್ಲಿಸಿರುವುದರಿಂದ ಪೂರೈಕೆ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹200 ಏರಿಕೆಯಾಗಿದ್ದು ₹2,000 ಮೀರಿದೆ. ಇದರಿಂದ ಸಣ್ಣ ಹೋಟೆಲ್‌ಗಳು, ವ್ಯಾಪಾರಿಗಳು ಮತ್ತು ಗಿಗ್ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಳಸಂತೆಯ ಹಾವಳಿ ಹೆಚ್ಚುತ್ತಿರುವುದನ್ನೂ ಕಾಂಗ್ರೆಸ್ ಉಲ್ಲೇಖಿಸಿದೆ.

“ಪ್ರತಿ ಖಾಲಿ ಸಿಲಿಂಡರ್ ಒಂದು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ ಕಾಂಗ್ರೆಸ್, ಉಪಚುನಾವಣೆಗೂ ಮುನ್ನ ಬಿಜೆಪಿ ಉತ್ತರ ನೀಡಬೇಕು ಎಂದು ಪ್ರಶ್ನಿಸಿದೆ.

Continue Reading

Trending