Connect with us

ಕ್ರೀಡೆ

50ಕ್ಕೆಶ್ರೀಲಂಕಾಆಲ್‌ಔಟ್‌  6 ವಿಕೆಟ್‌ ಕಿತ್ತುದಾಖಲೆಬರೆದಮೊಹಮ್ಮದ್‌ ಸಿರಾಜ್

Published

on

50ಕ್ಕೆ ಶ್ರೀಲಂಕಾ ಆಲ್ಔಟ್ 6 ವಿಕೆಟ್ ಕಿತ್ತು ದಾಖಲೆ ಬರೆದ ಮೊಹಮ್ಮದ್ ಸಿರಾಜ್
50ಕ್ಕೆ ಶ್ರೀಲಂಕಾ ಆಲ್ಔಟ್ 6 ವಿಕೆಟ್ ಕಿತ್ತು ದಾಖಲೆ ಬರೆದ ಮೊಹಮ್ಮದ್ ಸಿರಾಜ್

ಶ್ರೀಲಂಕಾ : ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ನೂತನ ಇತಿಹಾಸ ಬರೆದಿದ್ದಾರೆ. ಹೈದರಾಬಾದ್ ಮೂಲದ 29 ವರ್ಷದ ಬಲಗೈ ವೇಗಿ, ಏಷ್ಯಾ ಕಪ್ 2023 ಟೂರ್ನಿಯಲ್ಲಿ ತಮ್ಮ ಒಡಿಐ ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಹೊರತಂದರು. ಎಸೆದ 7 ಓವರ್ಗಳಲ್ಲಿ ಒಂದು ಮೇಡಿನ್ ಒಳಗೊಂಡಂತೆ 21ಕ್ಕೆ 6 ವಿಕೆಟ್ ಪಡೆದು ಅಬ್ಬರಿಸಿದರು. ಪರಿಣಾಮ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಶ್ರೀಲಂಕಾ ತಂಡ 50 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆಯಿತು.
ಸಿರಾಜ್, ತಮ್ಮ ಈ ಪ್ರಚಂಡ ಬೌಲಿಂಗ್ ಪ್ರದರ್ಶನದ ಮೂಲಕ ಯಾವುದೇ ಪ್ರಧಾನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಪರ 5 ವಿಕೆಟ್ ಸಾಧನೆ ಮೆರೆದ ಮೊತ್ತ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಇದು ಸಿರಾಜ್ ಒಡಿಐ ವೃತ್ತಿಬದುಕಿನ ಮೊತ್ತ ಮೊದಲ 5 ವಿಕೆಟ್ ಸಾಧನೆ ಕೂಡ ಆಗಿದೆ. 1993ರ ಸಿಎಬಿ ಜುಬ್ಲೀ ಟೂರ್ನಿಯ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ಎದುರು ಅನಿಲ್ ಕುಂಬ್ಳೆ 6 ವಿಕೆಟ್ ಪಡೆದದ್ದು, ಈ ಹಿಂದಿನ ಸಾಧನೆ ಆಗಿತ್ತು.
ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ (23ಕ್ಕೆ 1) ಜೊತೆಗೂಡಿ ಬೌಲಿಂಗ್ ದಾಳಿ ಆರಂಭಿಸಿದ ಸಿರಾಜ್ ತಮ್ಮ ಮೊದಲ 2 ಓವರ್ಗಳಲ್ಲೇ ಐದು ವಿಕೆಟ್ಗಳ ಸಾಧನೆ ಮೆರೆದಿದ್ದರು. ಆಗ ಶ್ರೀಲಂಕಾ ತಂಡ 12ಕ್ಕೆ 6 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಸಿರಾಜ್, ಇದೇ ವೇಳೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಭಾರತದ ಪರ 50 ವಿಕೆಟ್ ಪಡೆದ 4ನೇ ಬೌಲರ್ ಎಂಬ ಸಾಧನೆ ಮೆರೆದರು. ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ (ಸೆ.17) ನಡೆದ ಫೈನಲ್ ಪಂದ್ಯದಲ್ಲಿ ಸಿರಾಜ್ 3 ಓವರ್ಗಳಲ್ಲಿ 5ಕ್ಕೆ 5 ವಿಕೆಟ್ ಪಡೆದಿದ್ದರು.
ಮೊಹಮ್ಮದ್ ಸಿರಾಜ್, ತಾವು ಎಸೆದ ಎರಡನೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆಯ ಅವಕಾಶ ಕೈತಪ್ಪಿದರೂ ಆ ಓವರ್ನಲ್ಲಿ 4 ವಿಕೆಟ್ ಕಿತ್ತು ಮಿಂಚಿದರು. ಪಂದ್ಯದ ಮೊದಲ ಓವರ್ನಲ್ಲೇ ಓಪನರ್ ಕುಶಲ್ ಪೆರೆರಾ (0) ಅವರನ್ನು ಬುಮ್ರಾ ಔಟ್ ಮಾಡಿದ ಬೆನ್ನಲ್ಲೇ ಶ್ರೀಲಂಕಾ ತಂಡದ ಪೆವಿಲಿಯನ್ ಪರೇಡ್ ಶುರುವಾಗಿತ್ತು. ಬುಮ್ರಾ ಮತ್ತು ಸಿರಾಜ್ ಬಳಿಕ ದಾಳಿಗಿಳಿದ ಹಾರ್ದಿಕ್ ಪಾಂಡ್ಯ 3ಕ್ಕೆ 3 ವಿಕೆಟ್ ಪಡೆದು ಶ್ರೀಲಂಕಾ ತಂಡವನ್ನು 50 ರನ್ಗಳಿಗೆ ಆಲ್ಔಟ್ ಮಾಡಲು ಬಲವಾದರು. ಇದು ಒಡಿಐ ಇತಿಹಾಸದಲ್ಲಿ ಶ್ರೀಲಂಕಾ ತಂಡ ಭಾರತದ ಎದುರು ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿ

ಕ್ರೀಡೆ

ಗ್ಯಾಸ್‌ಗಾಗಿ ಜನ ಸಾಲು, ಟಿಕೆಟ್‌ಗಾಗಿ ಪಿಎ ಸಾಲು: ಶಾಸಕರಿಗೆ ಟೀಕೆ!

Published

on

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆ, ಜನಪ್ರತಿನಿಧಿಗಳ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಆಟೋ ಚಾಲಕರು ಗ್ಯಾಸ್‌ಗಾಗಿ ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವಾಗ, ಇನ್ನೊಂದು ಕಡೆ ಶಾಸಕರು IPL 2026 ಟಿಕೆಟ್ ಪಡೆಯಲು ತಮ್ಮ ಪಿಎಗಳನ್ನು ಕ್ಯೂನಲ್ಲಿ ನಿಲ್ಲಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಹಿತಿಯ ಪ್ರಕಾರ, ಸರ್ಕಾರ ಮತ್ತು Karnataka State Cricket Association (KSCA) ನಡುವೆ ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಒಪ್ಪಂದವಾಗಿದೆ. ಇದರ ಹಿನ್ನೆಲೆಯಲ್ಲಿ, Royal Challengers Bengaluru ಮತ್ತು Chennai Super Kings ನಡುವಿನ ಪಂದ್ಯಕ್ಕೆ ಟಿಕೆಟ್ ಪಡೆಯಲು ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಗಮನ ಸೆಳೆದಿವೆ.

ಸ್ಪೀಕರ್ ಕಚೇರಿಯಲ್ಲೇ ಟಿಕೆಟ್ ವಿತರಣೆ ನಡೆಯುತ್ತಿರುವುದರಿಂದ, ಶಾಸಕರ ಸೂಚನೆ ಮೇರೆಗೆ ಪಿಎಗಳು ಟಿಕೆಟ್ ಪಡೆಯಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾಸ್ ಕೊರತೆ, ದೈನಂದಿನ ಸಮಸ್ಯೆಗಳ ನಡುವೆ ಈ ರೀತಿಯ ಘಟನೆಗಳು ಸಾರ್ವಜನಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.

ರಾಜಕೀಯ ವಲಯದಲ್ಲಿಯೂ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Continue Reading

ಅಪರಾಧ

ಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!

Published

on

ಬೆಂಗಳೂರು, ಏಪ್ರಿಲ್ 04: ನಗರದಲ್ಲಿ IPL 2026 ಟಿಕೆಟ್ ಕ್ರೇಜ್ ಜೋರಾಗಿರುವ ನಡುವೆ ಆನ್‌ಲೈನ್ ಮೋಸದ ಪ್ರಕರಣವೂ ಬೆಳಕಿಗೆ ಬಂದಿದೆ. ಅನಧಿಕೃತ ಪ್ಲಾಟ್‌ಫಾರ್ಮ್ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದ ಟೆಕ್ಕಿ ಒಬ್ಬರು ₹1.46 ಲಕ್ಷ ಕಳೆದುಕೊಂಡಿರುವ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

Bengaluruನ ಬಿ. ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ, Instagramನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದಾರೆ. ಆತ ತನ್ನನ್ನು M. Chinnaswamy Stadium ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡು ನಂಬಿಕೆ ಮೂಡಿಸಿದ್ದಾನೆ.

ಮೊದಲಿಗೆ ಎರಡು ಟಿಕೆಟ್‌ಗಳಿಗೆ ₹3,700 ಕೇಳಿದ ಆರೋಪಿಯು, ಬಳಿಕ ಭದ್ರತಾ ಠೇವಣಿ, ಐಡಿ ಕಾರ್ಡ್ ಮತ್ತು ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದಾನೆ.

ಆತನ ಮಾತು ನಂಬಿದ ಟೆಕ್ಕಿ, ತನ್ನ ಹಾಗೂ ತಾಯಿಯ ಖಾತೆಯಿಂದ ಯುಪಿಐ ಮೂಲಕ ಒಟ್ಟು ₹1.46 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ಆರೋಪಿಯು ಟಿಕೆಟ್ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾನೆ.

ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಐಪಿಎಲ್ ಟಿಕೆಟ್ ಖರೀದಿಸುವಾಗ ಅಧಿಕೃತ ವೆಬ್‌ಸೈಟ್ ಅಥವಾ ಮಾನ್ಯ ಮಾರಾಟಗಾರರ ಮೂಲಕವೇ ಖರೀದಿಸಲು ಸಲಹೆ ನೀಡಿದ್ದಾರೆ. ಅನಧಿಕೃತ ಲಿಂಕ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹಾರ ಮಾಡುವುದರಿಂದ ಇಂತಹ ಮೋಸಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

Continue Reading

ಕ್ರೀಡೆ

“ಆ ಮಾತುಗಳು ನನ್ನದಲ್ಲ”: ಯುವಿ ಸ್ಪಷ್ಟನೆ, ಧೋನಿ-ಕಪಿಲ್‌ಗೆ ಕ್ಷಮೆ

Published

on

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ Yuvraj Singh ಅವರು ವಿಶ್ವಕಪ್ ವಿಜೇತ ನಾಯಕರುಗಳಾದ Mahendra Singh Dhoni ಮತ್ತು Kapil Dev ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯುವರಾಜ್, ತಮ್ಮ ತಂದೆ Yograj Singh ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕ್ಷಮೆಯಾಚನೆ ಮಾಡಿದ್ದಾರೆ. “ನನ್ನ ತಂದೆಯ ಮಾತುಗಳಿಗಾಗಿ ನಾನು ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಆ ಮಾತುಗಳು ನನ್ನವು ಅಲ್ಲ ಎಂಬುದು ನಿಮಗೆ ತಿಳಿದಿದೆ. ನೀವು ಇಬ್ಬರೂ ಭಾರತಕ್ಕೆ ನೀಡಿದ ಕೊಡುಗೆ ಅಪಾರ” ಎಂದು ಯುವರಾಜ್ ಹೇಳಿದ್ದಾರೆ.

ಈ ಹಿಂದೆ ಯೋಗರಾಜ್ ಸಿಂಗ್ ಹಲವಾರು ಬಾರಿ ಧೋನಿ ಮತ್ತು ಕಪಿಲ್ ದೇವ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ವಿಶೇಷವಾಗಿ, ಯುವರಾಜ್ ಅವರ ವೃತ್ತಿಜೀವನದ ಸಂಕಷ್ಟದ ಸಂದರ್ಭದಲ್ಲಿ ಕೆಲವು ಆಟಗಾರರು ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದ್ದರು. 2011ರ ವಿಶ್ವಕಪ್ ವೇಳೆ ತಂಡದ ಆಯ್ಕೆ ವಿಚಾರದಲ್ಲಿ ಧೋನಿ ವಿರುದ್ಧವೂ ಯೋಗರಾಜ್ ಟೀಕಿಸಿದ್ದರು.

ಇದೇ ವೇಳೆ, 1983ರ ವಿಶ್ವಕಪ್ ಸಮಯದಲ್ಲಿ ಕಪಿಲ್ ದೇವ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲಾ ಹೇಳಿಕೆಗಳಿಂದ ಕ್ರಿಕೆಟ್ ವಲಯದಲ್ಲಿ ವಿವಾದ ಉಂಟಾಗಿತ್ತು.

ಈಗ ಯುವರಾಜ್ ಸಿಂಗ್ ಸ್ವತಃ ಮುಂದಾಗಿ ಕ್ಷಮೆ ಕೇಳಿರುವುದು ವಿವಾದಕ್ಕೆ ತೆರೆ ಬೀಳುವ ಸೂಚನೆ ನೀಡಿದೆ. ಕ್ರೀಡಾ ವಲಯದಲ್ಲಿ ಪರಸ್ಪರ ಗೌರವ ಮುಖ್ಯ ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

Continue Reading

Trending