ಬೆಂಗಳೂರು

ಗೃಹಲಕ್ಷ್ಮೀ ಹಣ ಬಂದಿಲ್ವಾ ಈ ಸುದ್ದಿ ಓದಿ

ಗೃಹಲಕ್ಷ್ಮೀ ಹಣ ಬಂದಿಲ್ವಾ ಈ ಸುದ್ದಿ ಓದಿ

ಬೆಂಗಳೂರು: ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಜಾರಿ ಆಗಿ ಮನೆಯೊಡತಿಯರ ಖಾತೆಗೆ 2 ಸಾವಿರ ಹಣ ಕೊಡ ಜಮೆ ಆಗಿದ್ದು ಈಗಾಗಲೇ ಬ್ಯಾಂಕ್‍ನಿಂದ ದುಡ್ಡು ಡ್ರಾ ಮಾಡಿ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ, ಇನ್ನೂ ಹಲವು ನಾರಿಮಣಿಯರಿಗೆ ಗೃಹಲಕ್ಷ್ಮೀ ಯೋಜನೆ ಹಣ ಸಂದಾಯವಾಗಿಲ್ಲ, ಈ ಹಿನ್ನೆಲೆಯಲ್ಲಿ ಹಲವರಲ್ಲಿ ಗೊಂದಲ ಮೂಡಿವಿರುವ ಕಾರಣ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ,
ಈ ಗೊಂದಲಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು ಗೃಹಲಕ್ಷ್ಮೀ ಯೋಜನೆಯಲ್ಲಿ ಅರ್ಜಿ ಸ್ವೀಕರಾವಾಗಿ ಯಾರಿಗೆ ಈ ತಿಂಗಳ ಹಣ ಬಂದಿಲ್ಲವೋ ಅವರಿಗೆ ಎರಡು ತಿಂಗಳ ಹಣ ಒಟ್ಟಿಗೆ ಬರಲಿದೆ ಎಂದು ಹೇಳಿದೆ, ಈ ಯೋಜನೆಯ ಎರಡು ಸಾವಿರ ರೂಪಾಯಿ ಯಾರಿಗೆ ಕೈ ಸೇರಿಲ್ಲ ಅಂತವರಿಗೆ ಸಿದ್ದರಾಮಯ್ಯ ಅವರ ಸಿಹಿ ಸುದ್ದಿ ನೀಡಿದ್ದು ಮೊದಲನೇ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣವನ್ನು ನೀಡಲಿದೆ,
ರಾಜ್ಯ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಸಪ್ಟೆಂಬರ್ 15ರಿಂದ ಎರಡನೇ ಕಂತು ಬಿಡುಗಡೆ ಪ್ರಕ್ರಿಯೆ ಅರಂಭವಾಗಿದ್ದು, ಇನ್ನು ಕೇವಲ ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಪ್ರಕ್ರಿಯೆ ಅರಂಭವಾಗುತ್ತದೆ, ಹೀಗಾಗಿ ಹಣ ಬರದವರಿಗೆ ಒಟ್ಟೊಟ್ಟಿಗೆ 2 ತಿಂಗಳ ಹಣ ಸಿಗಲಿದ್ದು ಅವರ ಖಾತೆಗೆ ಒಂದೇ ಭಾರಿ 4,000 ರೂ ಜಮೆಯಾಗಲಿದೆ.

Trending

Exit mobile version