Blog

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗೌರಿ ಹಬ್ಬದ ಉಡುಗೊರೆ…

ಕಾಲಕಾಲಕ್ಕೆ ಮಹಿಳೆಯರ ಕೈ ಬಲಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಾ ಬಂದಿದೆ. ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶದ ಮಹಿಳೆಯರಿಗೆ ಸಾಕಷ್ಟು ಬಲ ನೀಡುವ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ, ಮಸೂದೆಯು ಸೆಪ್ಟೆಂಬರ್ 20ಕ್ಕೆ ಘೋಷಣೆ ಆಗುವ ಎಲ್ಲಾ ಸಾಧ್ಯತೆ ಇದೆ. ಮಹಿಳಾ ಸಂಸದರು ಲೋಕಸಭೆಯಲ್ಲಿ ಶೇಕಡಾ 15 ಕಿಂತ ಕಡಿಮೆ ಸ್ಥಾನ ಹೊಂದಿದ್ದಾರೆ,ಅನೇಕ ರಾಜ್ಯಗಳ ವಿಧಾನಸಭೆಯಲ್ಲಿ ಶೇಕಡ 10ಕ್ಕಿಂತ ಕಡಿಮೆ ಇದ್ದು, ಕಳೆದ 27 ವರ್ಷಗಳಿಂದಲೂ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ದೊಡ್ಡ ಚರ್ಚೆಯೆ ನಡೆಯುತ್ತಿದೆ. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಪೂರ್ಣಗೊಳಿಸಲು ಯಾವುದೇ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಈಗ ಮೋದಿ ನೇತೃತ್ವದ ಸರ್ಕಾರ ಮಹಿಳೆಯರಿಗೆ ಬಲ ತುಂಬಲು ಸಜ್ಜಾಗಿದೆ.
ಲೋಕಸಭೆ ಮತ್ತು ರಾಜ್ಯಸಭೆ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳ ಮೀಸಲಾತಿಗೆ ಸಾಕಷ್ಟು ಅಡ್ಡಿ ಆತಂಕಗಳು ಇವೆ. ಹೀಗಾಗಿ 2010 ರಲ್ಲಿ ಮಹಿಳಾ ಮೀಸಾಲಾತಿ ಮಸೂದೆ ಅಂಗೀಕರಿಸಿದ್ದರು ಲೋಕಸಭೆ ಈ ಮಸೂದೆಗೆ ಇನ್ನೂ ಅಂಗೀಕಾರ ನೀಡಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಒಟ್ಟಾಗಿ ಈ ಮಸೂದೆಯನ್ನು ಬೆಂಬಲಿಸಿದ್ದರು ಪ್ರಯೋಜನ ಆಗಲಿಲ್ಲ ಆದರೆ ಈ ಬಾರಿ ಸೆಪ್ಟೆಂಬರ್ 20ರಂದು ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುವ ನಿರೀಕ್ಷೆ ಹೆಚ್ಚಿದೆ. ಒಂದು ವೇಳೆ ಮಹಿಳಾ ಮೀಸಲಾತಿ ಮಂಡನೆ ಆಗಿದ್ದೆ ಆದರೆ ಭಾರತದ ಇತಿಹಾಸದಲ್ಲಿ ಹೊಸ ಮನ್ವಂತರ ಶುರುವಾಗುತ್ತದೆ.ಮಹಿಳೆಯರು ವಿಧಾನಸಭಾ ಸಂಸತ್ತಿಗೆ ಆಯ್ಕೆಯಾಗಲು ದಾರಿ ಸುಲಭವಾಗಿದೆ ಹೀಗಾಗಿ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 20ರಂದು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಿದೆ ಎನ್ನಲಾಗಿದೆ.. ಈ ಮಸೂದೆ ಮಂಡನೆ ಸಂಸತ್ ಅಧಿವೇಶನದಲ್ಲಿ ಪಾಸಾದರೆ ಮುಂಬರುವ ಲೋಕಸಭಾ ಚುನಾವಣೆಗೂ ಮೊದಲೇ ದೊಡ್ಡ ಕ್ರಾಂತಿ ಶುರುವಾಗಲಿದೆ.ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿ ಜಾರಿಗೆ ಬಂದರೆ ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಮೀಸಲಾತಿ ಸಿಗುತ್ತದೆ ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಅವಕಾಶ ಸಿಗಲಿದೆ ಹೀಗಾಗಿ ಲೋಕಸಭೆ ವಿಶೇಷ ಅಧಿವೇಶನ ಸಾಕಷ್ಟು ಗಮನ ಸೆಳೆಯುತ್ತಿದೆ…

Trending

Exit mobile version